Latest Videos

ನೀವು ಉದ್ದಾರ ಆಗಲ್ಲ, ಮದುವೆ ಆಗುತ್ತಾ ಅಂದಿದ್ರು; ರಾಘವೇಂದ್ರ ಹುಣಸೂರು ವಿರುದ್ಧ ರಿಷಿಕಾ ಶಾಕಿಂಗ್ ಹೇಳಿಕೆ

By Suvarna NewsFirst Published Apr 14, 2023, 11:00 AM IST
Highlights

ನೀವು ಉದ್ದಾರ ಆಗಲ್ಲ, ಮದುವೆ ಆಗುತ್ತಾ ಅಂತ ನನಗೆ  ಕೇಳಿದ್ದ ಎಂದು ರಾಘವೇಂದ್ರ ಹುಣಸೂರು ಬಗ್ಗೆ ನಟಿ ರಿಷಿಕಾ ಸಿಂಗ್ ಶಾಕಿಂಗ್ ಹೇಳಿಕೆ ನೀಡಿದ್ದಾರೆ. 

ಸ್ಯಾಂಡಲ್‌ವುಡ್ ನಟಿ, ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಪುತ್ರಿ ರಿಷಿಕಾ ಸಿಂಗ್ ಬಣ್ಣದ ಲೋಕಕ್ಕೆ ಮತ್ತೆ ಕಮ್ ಬ್ಯಾಕ್ ಮಾಡುವ ತಯಾರಿಯಲ್ಲಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಭೀಕರ ರಸ್ತೆ ಅಪಘಾತದಿಂದ ಬೆನ್ನು ಮೂಳೆ ಮುರಿದುಕೊಂಡಿದ್ದ ರಿಷಿಕಾ ಎದ್ದು ನಡೆಯುವ ಸ್ಥಿತಿಯಲ್ಲಿ ಇರಲಿಲ್ಲ. ಆದರೀಗ ಚೇತರಿಸಿಕೊಳ್ಳುತ್ತಿರುವ ರಿಷಿಕಾ ಬಹುತೇಕ ಗುಣಮುಖರಾಗಿದ್ದಾರೆ. ಮತ್ತೆ ಆಕ್ಟೀವ್ ಆಗಿದ್ದಾರೆ. ಮೊದಲಿನ ಹಾಗೆ ಬಣ್ಣದ ಲೋಕದಲ್ಲಿ ಸಕ್ರೀಯವಾಗುವ ಕನಸುಕಂಡಿದ್ದಾರೆ. ರಿಷಿಕಾ ಸದ್ಯ ಅನೇಕ ವಾಹಿನಿಗಳಿಗೆ ಸಂದರ್ಶನಗಳನ್ನು ನೀಡುತ್ತಿದ್ದಾರೆ. ಇತ್ತೀಚೆಗೆ ಸೈಕಲ್ ಗ್ಯಾಪ್ ಎನ್ನುವ ಯೂಟ್ಯೂಬ್ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ರಿಷಿಕಾ ಅನೇಕ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. ಮದುವೆ ಮುರಿದು ಬಿದ್ದ ಬಗ್ಗೆ, ಬಿಗ್ ಬಾಸ್ ಎಂಟ್ರಿ ಬಗ್ಗೆ ಮಾತನಾಡಿದ್ದಾರೆ. ಇದೇ ವೇಳೆ ಝೀ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣುಸೂರು ಬಗ್ಗೆ ಶಾಕಿಂಗ್ ಕೇಳಿಕೆ ನೀಡಿದ್ದಾರೆ. 

ಸಂದರ್ಶನದಲ್ಲಿ ಮಾತನಾಡಿದ ರಿಷಿಕಾ, 'ಬಿಗ್ ಬಾಸ್ ಗೆ ಕರೆ ಮಾಡಿದ್ದರು. ಆಗ ನಾನು ಮದುವೆ ಆಗೋಕೆ ನಿರ್ಧರಿಸಿದ್ದೆ. ಅದೇ ಸಮದಲ್ಲಿ ಬಿಗ್ ಬಾಸ್‌ಗೆ ಆಫರ್ ಬಂತು. ಆಗ ರಾಘವೇಂದ್ರ ಹುಣಸುರು ಅವರನ್ನು ಭೇಟಿಯಾದೆ. ಈಗ ಅವರಿಗೆ ಸಿಕ್ಕಾಪಟ್ಟೆ ಗಾಂಚಲಿ ಬಂದಿದೆ. ಉದ್ದಾರ ಅಂತು ಆಗಲ್ಲ. ಸದ್ಯದಲ್ಲೇ ನಾನು ನಿಮ್ಮನ್ನು ನೋಡ್ತೀರಿ. ಈಗ ಶತ್ರು ಹಾಗೆ ಆಡ್ತಿದ್ದೀರಾ. ಆದರೂ ಫ್ರೆಂಡ್ ಅನ್ಕೊಂತಿನಿ. ನಾವು ಕಾಫಿ ಡೇಯಲ್ಲಿ ಮೀಟ್ ಆದ್ವಿ' ಎಂದು ರಿಷಿಕಾ ಹೇಳಿದ್ದಾರೆ.  

'ಬಿಗ್ ಬಾಸ್‌ಗೆ ಆಫರ್ ಮಾಡಿದಾಗ  ನಾನು ಮದುವೆ ಫಿಕ್ಸ್ ಆಗಿದೆ ಅಂತ ಹೇಳಿದೆ. ಆಗ ಅವರು ತಕ್ಷಣ ಮದುವೆ ಆಗುತ್ತಾ ಅಂತ ಕೇಳಿದ್ರು. ಬೆಳಗ್ಗೆಯೇ ಏನು ಹಾಕಿದ್ಯಾ ಏನು ಅಂತ ಕೇಳಿದೆ ನಾನು. ಕುಡಿಯಲ್ಲ ಅಂತ ಗೊತ್ತು ತಾನೆ ಅಂತ ಹೇಳ್ದ. ಬಿಗ್ ಬಾಸ್‌ಗೆ ದೊಡ್ಡ ಮೊತ್ತದ ಹಣ ಆಫರ್ ಮಾಡಿದ್ರು. ಸ್ಪರ್ಧಿಯಾಗಿ ಹೋಗು. ವಿನ್ನಿಂಗ್ ಸ್ಪರ್ಧಿ ಆಗುವ ಎಲ್ಲಾ ಸಾಧ್ಯತೆ ಇದೆ, ನಾನು ಟ್ರೈನ್ ಮಾಡುತ್ತೀನಿ ಎಂದು ಹೇಳಿದ. ಆದರೆ ನಾನು ಮದುವೆ ಫಿಕ್ಸ್ ಆಗಿದೆ ಅಂತ ಹೇಳ್ದೆ. ಮತ್ತೆ ನೆಗೆಟಿವ್ ಆಗಿ ಪ್ರತಿಕ್ರಿಯೆ ನೀಡಿದ್ರು. ಮದುವೆ ಆಗುತ್ತಾ ಎಂದು ಕೇಳಿದ. ಆಗ ನನಗೆ ತುಂಬಾ ಭಯ ಆಯ್ತು. ಮದುವೆ ಆಗುತ್ತೀನಿ ಅಂತ ಹೇಳಿದಾಗ ನೆಗೆಟಿವ್ ಆಗಿ ಕಾಮೆಂಟ್ ಮಾಡಬಾರದು' ಎಂದು ರಿಷಿಕಾ ಹೇಳಿದ್ದಾರೆ. 

ಹೋಟೆಲ್‌ನಲ್ಲಿ ನಾನೇ ಬಿಲ್ ಕಟ್ಟುತ್ತಿದ್ದೆ; ಮದುವೆ ಮುರಿಯಲು ಕಾರಣ ಬಿಚ್ಚಿಟ್ಟ ರಿಷಿಕಾ ಸಿಂಗ್

ಮದುವೆ ಮುರಿದ ಬಗ್ಗೆ ರಿಷಿಕಾ ಮಾತು
 
'ಸಂದೀಪ್ ಜೊತೆ ಮದುವೆ ಫಿಕ್ಸ್ ಆಗಿತ್ತು. ಅವರು ಮೂಲತಃ ಕೇರಳದವರು. ನನ್ನ ಅಣ್ಣ ಮೂಲಕ ಪರಿಚಯ ಆಗಿದ್ದು. ಇಷ್ಟ ಆಯ್ತು ಮದುವೆ ಆಗುವ ನಿರ್ಧಾರ ಮಾಡಿದ್ವಿ ಆದರೆ ಆ ಸಮಯದಲ್ಲಿ ನನ್ನ ಕೆರಿಯರ್‌ ಚೆನ್ನಾಗಿದೆ ಎಂದು ಸಂದೀಪ್‌ಗೆ ಅನಿಸಿತ್ತು ಏಕೆಂದರೆ ನನ್ನ ಶೂಟಿಂಗ್ ಸೆಟ್‌ ಎಲ್ಲಾ ಭೇಟಿ ನೀಡುತ್ತಿದ್ದರು. ಬಣ್ಣದ ಪ್ರಪಂಚಕ್ಕೆ ಬ್ರೇಕ್ ಹಾಕಿ ಅವರನ್ನು ಆಯ್ಕೆ ಮಾಡಿಕೊಂಡೆ ಆದರೆ ಅವರ ಮನಸ್ಸು ತುಂಬಾ ದೊಡ್ಡದು ಹೀಗಾಗಿ ಅವರು ತಾಯಿ ಹೇಳಿದಂತೆ ಬೇಡ ಫ್ರೆಂಡ್ಸ್‌ ಆಗಿರಿ, ಕೆಲಸ ಮಾಡಿ ಎನ್ನುತ್ತಿದ್ದರು. ಮದ್ವೆ ಆಗಿದ್ರೆ ಇಷ್ಟರಲ್ಲಿ ಎರಡು ಮಕ್ಕಳು ಇರುತ್ತಿದ್ದರು. ನಟನೆ ಅನ್ನೋದು ದೇವರು ನಮಗೆ ಕೊಟ್ಟಿರುವ ಭಿಕ್ಷೆ' ಎಂದಿದ್ದಾರೆ. 

ಕುಡಿಯುವುದು ತಪ್ಪಲ್ಲ, ಬಾಟಲ್‌ ಓಪನ್ ಮಾಡಿಲ್ಲ ಅಂದ್ರೆ ಪಾರ್ಟಿನೇ ಅಲ್ಲ: ರಿಷಿಕಾ ಸಿಂಗ್

'ಮದುವೆ ಶಾಪಿಂಗ್ ಅಗಿತ್ತು, ಪತ್ರಿಕೆ ಕೂಡ ಪ್ರಿಂಟ್ ಆಗಿತ್ತು ಎಲ್ಲಾ ರೆಡಿಯಾಗಿತ್ತು ಆಗ ಮದುವೆ ಬೇಡ ಅನ್ನೋ ನಿರ್ಧಾರ ಮಾಡಿದೆವು. ಏಕೆಂದರೆ ನಾನು ಕ್ರ್ಯಾಕ್. ಪ್ರೀತಿಸುವವರು ಎಲ್ಲರೂ ಕ್ರ್ಯಾಕ್‌ಗಳೇ. ಬೇಗ ಮದುವೆ ಆಗುತ್ತೀದ್ದೀವಿ ಅನ್ನೋ ಭಾವನೆ ಇಬ್ಬರಿಗೂ ಬಂದಿತ್ತು. ನಾನು ತುಂಬಾ ಇಂಡಿಪೆಂಡೆಂಟ್ ಆಗಿದ್ದೆ. ಅವರ ತಾಯಿ ಕೂಡ ತುಂಬಾ ಇಂಡಿಪೆಂಡೆಂಟ್. ಹಾಗಾಗಿ ನನ್ನಲ್ಲಿ ಆ ಗುಣ ಇಷ್ಟ ಪಟ್ಟಿದ್ದರು. ಆದರೆ ಇಬ್ಬರೂ ಬ್ರೇಕಪ್ ಮಾಡಿಕೊಂಡೆವು' ಎಂದು ರಿಷಿಕಾ ತನ್ನ ಜೀವನದಲ್ಲಿ ನಡೆದ ಘಟನೆಯನ್ನು ಬಿಚ್ಚಿಟ್ಟಿದ್ದಾರೆ.  

click me!