ಮಕ್ಕಳ ಆರೈಕೆಯಲ್ಲಿ ಬ್ಯುಸಿಯಾಗಿರುವ ಸ್ಟಾರ್ ನಟಿಯರು: ಸಿಂಪಲ್ ಮದರ್‌ಹುಡ್ ಟಿಪ್ಸ್‌!

By Vaishnavi ChandrashekarFirst Published Oct 20, 2022, 1:08 PM IST
Highlights

ಮದರ್‌ಹುಡ್ ಎಂಜಾಯ್ ಮಾಡುತ್ತಿರುವ ಕನ್ನಡ ಚಿತ್ರರಂಗದ ಸ್ಟಾರ್ ನಟಿಯರು . ಮಕ್ಕಳ ಜೊತೆ ದಿನ ಹೇಗೆ ಕಳೆಯುತ್ತಿದ್ದಾರೆ. 

ಕನ್ನಡ ಚಿತ್ರರಂಗದಲ್ಲಿ ಟಾಪ್ ನಟಿಯರು ಮದರ್‌ಹುಡ್ ಎಂಜಾಯ್ ಮಾಡುತ್ತಿದ್ದಾರೆ. ಸಿನಿ ಪ್ರಪಂಚದಿಂದ ದೂರ ಉಳಿದುಕೊಂಡು ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಅಗಿರುವ ನಟಿಯರು ಹೇಗೆ ಫೇಮ್, ನೇಮ್ ಆಂಡ್ ಫ್ಯಾಮಿಲಿನ ಮ್ಯಾನೇಜ್ ಮಾಡುತ್ತಿದ್ದಾರೆ ಎಂದು ಟೈಮ್ಸ್‌ ಆಫ್ ಇಂಡಿಯಾ ಸಂದರ್ಶದಲ್ಲಿ ಮಾತನಾಡಿದ್ದಾರೆ.

ಶ್ವೇತಾ ಶ್ರೀವಾಸ್ತವ್- ಅಶ್ಮಿತಾ:

Latest Videos

ತಾಯಿ ಆದ್ಮೇಲೆ ನಿನ್ನ ಪ್ರತಿಬಿಂಬವನ್ನು ನೀವು ನೋಡಿಕೊಳ್ಳುತ್ತೀರಿ. ನಿಮ್ಮ ಮಗುವಿನೊಂದಿಗಿನ ಸಂಬಂಧವು ಅಂತಿಮವಾಗಿ ನೀವು ಯಾರೆಂದು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಮಗಳು ಅಶ್ಮಿತಾ ನಿಜಕ್ಕೂ ನನಗೆ ಆಶೀರ್ವಾದ. ಆಕೆ ಸ್ವೀಟ್‌ಹಾರ್ಟ್‌ ಇಷ್ಟೊಂದು ಅರ್ಥ ಮಾಡಿಕೊಳ್ಳುವ ಮಗಳು ನನಗೆ ಸಿಕ್ಕಿರುವುದು ನನ್ನ ಅದೃಷ್ಟ. ಕೆಲವೊಂದು ಸಲ ನನ್ನ ಬೆಸ್ಟ್‌ ಫ್ರೆಂಡ್‌ ರೀತಿ ವರ್ತಿಸಿ ನನಗೆ ಸರ್ಪ್ರೈಸ್ ಮಾಡುತ್ತಾಳೆ.

ದಿಶಾ ಮದನ್- ವಿಹಾನ್ ಮತ್ತು ಅವಿರಾ:

ಮಕ್ಕಳಿಗೆ ನಾನು ಒಂದು ಹೆಜ್ಜೆ ಮುಂದೆ ನಡೆಯುವೆ. ಈ ಜರ್ನಿ ನನಗೆ ತುಂಬಾ ರಿವಾರ್ಡಿಂಗ್ ಆಗಿತ್ತು. ತಾಯಂದಿರ ಕೆಲಸ ಕೃತಜ್ಞತೆಯಿಲ್ಲದ ಕೆಲಸ. ದಿನ ಎದ್ದು ಮಕ್ಕಳ ಸುತ್ತ ಇರುವುದು ರಿವಾರ್ಡಿಂಗ್ ಅನಿಸುತ್ತದೆ. ವಿಹಾನ್ ಮತ್ತು ಅವಿರಾಗೆ ತುಂಬಾನೇ ತಾಳ್ಮೆ ಇದೆ ಯಾವುದಕ್ಕೂ ಕಿರಿಕಿರಿ ಮಾಡುವುದಿಲ್ಲ. ಆಹಾರ ಮತ್ತು ಪ್ರಯಾಣದ ವಿಚಾರದಲ್ಲಿ ಸಮಯ ಸಂದರ್ಭಕ್ಕೆ ಹೊಂದಿಕೊಳ್ಳುತ್ತಾರೆ.

ಪ್ರಣೀತಾ ಸುಭಾಷ್ -ಆರ್ನಾ

ಮಕ್ಕಳು ಜೊತೆಗಿದ್ದರೆ ದಿನವೂ ಒಂದೊಂದು ಮೈಲ್‌ಸ್ಟೋನ್. ಆರ್ನಾ ದಿನಕ್ಕೊಂದು ಹೊಸ ವಿಚಾರಗಳನ್ನು ತಿಳಿದುಕೊಳ್ಳುತ್ತಿದ್ದಾಳೆ ಕಲಿಯುತ್ತಿದ್ದಾಳೆ ಹಾಗೂ ವಿಭಿನ್ನವಾಗಿ ವರ್ತಿಸುತ್ತಾಳೆ. ಆಕೆ ಖುಷಿಯಾಗಿರಲಿ, ದುಖಃದಲ್ಲಿರಲಿ, ತುಂಟತನ ಮಾಡಲಿ ನಾನು ಪ್ರತಿಯೊಂದನ್ನು ಎಂಜಾಯ್ ಮಾಡುತ್ತಿರವೆ.

ಮುದ್ದು ಮಗಳ ಫೋಟೋ ಶೇರ್ ಮಾಡಿ ಹೆಸರು ರಿವೀಲ್ ಮಾಡಿದ ನಟಿ ಪ್ರಣಿತಾ

ಶ್ವೇತಾ ಚಂಗಪ್ಪ- ಜಿಯಾನ್

ತಾಯಿಯಾಗುವುದಕ್ಕೆ ಮೊದಲು ಮಾನಸಿಕ ಮತ್ತು ದೈಹಿಕ ಶಕ್ತಿ ಹೆಚ್ಚಿಗೆ ಬೇಕು. ವರ್ಣಿಸಲಾಗದ ಅನುಭವ. ನಾವು ಎಷ್ಟೇ ಸ್ಟ್ರಾಂಗ್ ಇದ್ದರೂ ಮಕ್ಕಳು ಅಳುವಾಗ ನಾವು ಅಳುತ್ತೀವಿ. ಜಿಯಾನ್ ತುಂಬಾನೇ ಆಕ್ಟಿವ್ ಕಿಡ್ ನನ್ನ ತೂಕ ಕಡಿಮೆ ಆಗುವುದಕ್ಕೆ ಅವರೇ ಪ್ರಮುಖ ಕಾರಣ. ನಾನು ಎಲ್ಲೆಡೆ ಅವನ ಜೊತೆಗಿರಬೇಕು ಎಂದು ಬಯಸುತ್ತಾನೆ. ಆತನಿಗೆ ಸಹಾ centre of attention ಬೇಕು.

ಅಮೂಲ್ಯ - ಅವಳಿ ಮಕ್ಕಳು:

ಪೇರೆಂಟಿಂಗ್ ತುಂಬಾನೇ ಡಿಫರೆಂಟ್ ಪ್ರಪಂಚ. ಸಣ್ಣ ಪುಟ್ಟ ವಿಚಾರಗಳಲ್ಲೂ ಸಂತೋಷ ತರುತ್ತಾರೆ. ಖಂಡಿತ ಒತ್ತಡ ಇದೆ ಆದರೆ ಪುಟ್ಟ ಬೆರಳುಗಳು ನಿಮ್ಮ ಕೈ ಹಿಡಿದುಕೊಂಡಾಗ ಅಥವಾ ನಿಮ್ಮನ್ನು ನೋಡಿದಾಗ ಎಲ್ಲರವೂ ಮರೆತು ಹೋಗುತ್ತದೆ. ಅವಳಿ ಮಕ್ಕಳು ಬೆಳಗ್ಗೆ ಎಷ್ಟು ಖುಷಿ ಕೊಡುತ್ತಾರೆ ಸಂಜೆ ಅಷ್ಟೇ ಕಾಟ ಕೊಡುತ್ತಾರೆ. ನನ್ನ ಮಕ್ಕಳು 28 ಸೆಕೆಂಡ್ ಅಂತರದಲ್ಲಿ ಹುಟ್ಟಿರುವುದು ಸಣ್ಣ ಮಗ ತುಂಟ ದೊಡ್ಡ ಮಗ ಸೈಲೆಂಟ್. ಹಿಂಸೆ ಆದರೆ ಮಾತ್ರ ಇಬ್ಬರೂ fuss ಮಾಡುವುದು.

ಮೇಘನಾ ರಾಜ್ -ರಾಯನ್:

ಮದರ್‌ವುಡ್‌ಗೆ ಎಷ್ಟೇ ತಯಾರಿ ಮಾಡಿಕೊಂಡರೂ ಸಾಲುವುದಿಲ್ಲ. ರಾಯನ್ ಹುಟ್ಟಿದ ಕ್ಷಣದಿಂದ ನನ್ನ ಜೀವನದಲ್ಲಿ ಅನೇಕ ಬದಲಾವಣೆಗಳು ಆಯ್ತು. ನನ್ನ ತಾಯಿತನದ ಜರ್ನಿ ಬೇಗ ಪಾಸ್ ಆಯ್ತು. ನಮ್ಮ ಪ್ರತಿಬಿಂಬವೇ ನಮ್ಮ ಮಕ್ಕಳು. ಮತ್ತು ಈಗ ಇಡೀ ದಿನ ನಾನು ಅವನೊಂದಿಗೆ ಅನೇಕ ಭಾವನೆಗಳ ಮೂಲಕ ಹೋಗುತ್ತೇನೆ ಬೆಳಗ್ಗೆ ಆತ ತುಂಬಾನೇ ತುಂಟ, ಮಧ್ಯಾಹ್ನ ಕ್ರ್ಯಾಂಕಿ ಆಗಿರುತ್ತಿದ್ದ  ನಿದ್ರೆಯಿಂದ ಎದ್ದಾಗ ತುಂಬಾನೇ ಕ್ಯೂಟ್ ಆಗಿರುತ್ತಾನೆ. ಆತ ನೆಮ್ಮದಿಯಾಗಿ ಮಲಗಿರುವುದನ್ನು ನೋಡಿ ಮನಸ್ಸಿಗೆ ಖುಷಿಯಾಗುತ್ತದೆ. ಈಗ ಆತನಿಗೆ ಎರಡು ವರ್ಷ ಅವನ ಮುಂಬರುವ ದಿನಗಳನ್ನು ನೋಡಲು ಕಾಯುತ್ತಿರುವೆ.

ವಿದೇಶಕ್ಕೆ ಹೋಗಿ ಚಿರು-ರಾಯನ್‌ ಎಂದು ಹಚ್ಚೆ ಹಾಕಿಸಿಕೊಂಡ ಮೇಘನಾ ರಾಜ್!

ಶ್ರುತಿ ಹರಿಹರನ್ - ಜಾನಕಿ:

ಪೋಷಕರಾಗಿರುವುದಕ್ಕಿಂತ ಮತ್ತೊಂದು ಖುಷಿ ನನಗಿಲ್ಲ ಆದರೆ ಮದರ್‌ವುಡ್‌ ಅಷ್ಟೇ ಚಾಲೆಂಜಿಂಗ್. ಒಬ್ಬ ವ್ಯಕ್ತಿ ಜವಾಬ್ದಾರಿಯನ್ನು ತೆಗೆದಿಕೊಳ್ಳುವುದು ಅಂದ್ರೆ ಕಲ್ಪನೆ ಮಾಡಿಕೊಳ್ಳುವುದಕ್ಕೂ ಅಗಲ್ಲ. ಜಾನಕಿ ತುಂಬಾನೇ ಸೆನ್ಸಿಟಿವ್, ಫುಲ್ ಆಫ್ ಜಾಯ್. ಸಣ್ಣ ಪುಟ್ಟ ವಿಚಾರಗಳಿಂದ ಖುಷಿ ಪಡುತ್ತಾಳೆ ಹಾಗೇ ಕ್ಯೂರಿಯಾಸಿಟಿ ಹೆಚ್ಚಿದೆ.

click me!