ಜಾತಿ ವ್ಯವಸ್ಥೆಯ ದರಿದ್ರ ಕಾಲವದು; ಅಂತರ್ಜಾತಿ ವಿವಾಹನಾ ಎಂದು ಪ್ರಶ್ನಿಸಿದ ಅಭಿಮಾನಿಗೆ ಜಗ್ಗೇಶ್ ಉತ್ತರ

By Shruiti G KrishnaFirst Published Oct 20, 2022, 11:04 AM IST
Highlights

ಸ್ಯಾಂಡಲ್ ವುಡ್ ನ ಹಿರಿಯ ನಟ ಜಗ್ಗೇಶ್ ಮತ್ತು ಪರಿಮಳಾ ಜಗ್ಗೇಶ್ ಅವರದ್ದು ಸುಂದರ ದಾಂಪತ್ಯ. ಜಗ್ಗೇಶ್ ಅವರದ್ದು ಅಂತರ್ಜಾತಿ ವಿವಾಹ. ಈ ಬಗ್ಗೆ ಅಭಿಮಾನಿ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ್ದಾರೆ. 

ಸ್ಯಾಂಡಲ್ ವುಡ್ ನ ಹಿರಿಯ ನಟ ಜಗ್ಗೇಶ್ ಮತ್ತು ಪರಿಮಳ ಜಗ್ಗೇಶ್ ಅವರದ್ದು ಸುಂದರ ದಾಂಪತ್ಯ. ಜಗ್ಗೇಶ್ ಮತ್ತು ಪರಿಮಳ ಹಸೆಮಣೆ ಏರಿ 38 ವರ್ಷಗಳೇ ಕಳೆದಿವೆ. ಇಬ್ಬರೂ ಪ್ರೀತಿಸಿ ಮನೆಯವರನ್ನು ಎದುರು ಹಾಕಿಕೊಂಡು ಮದುವೆಯಾದವರು. ಇಬ್ಬರ ಪ್ರೀತಿ ವಿಚಾರ ಸುಪ್ರಿಂ ಕೋರ್ಟ್ ಮೆಟ್ಟಿಲೇರಿತ್ತು. ಪ್ರೀತಿಯನ್ನು ಗೆದ್ದು ಮದುವೆಯಾದ ಜೋಡಿಗೆ ಜಾತಿ ವ್ಯವಸ್ಥೆ ಅಡ್ಡಿ ಬಂದಿತ್ತು. ಜಗ್ಗೇಶ್ ಮತ್ತು ಪರಿಮಳಾ ಜಗ್ಗೇಶ್ ಅವರದ್ದು ಅಂತರ್ಜಾತಿ ವಿವಾಹ. ಆ ಕಾಲದಲ್ಲಿಯೇ ಬೇರೆ ಜಾತಿ ಯುವತಿಯನ್ನು ಪ್ರೀತಿಸಿ ಮದುವೆಯಾದವರು ಜಗ್ಗೇಶ್. ಇಂದು ಸುಖ ಸಂಸಾರ ನಡೆಸುತ್ತಿದ್ದಾರೆ. 

ಸದ್ಯ ಜಗ್ಗೇಶ್ ವಿದೇಶದಲ್ಲಿದ್ದಾರೆ. ಪತ್ನಿ ಪರಿಮಳ ಜೊತೆ ವಿದೇಶಿ ಪ್ರವಾಸ ಎಂಜಾಯ್ ಮಾಡುತ್ತಿದ್ದಾರೆ. ಪತ್ನಿ ಜೊತೆ ಇರುವ ಫೋಟೋ ಶೇರ್ ಮಾಡಿರುವ ಜಗ್ಗೇಶ್‌ಗೆ ಅಭಿಮಾನಿಯೊಬ್ಬ ನಿಮ್ಮದು ಅಂತರ್ಜಾತಿ ವಿವಾಹನ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರ ನೀಡಿರುವ ಜಗ್ಗೇಶ್ ಜಾತಿ ವ್ಯವಸ್ಥೆಯ ದರಿದ್ರ ಕಾಲ ಅದು, ಆಗ ಮದುವೆಯಾದೆವು, ಕುಲದಿಂದ ಹೊರಹಾಕಿದರು ಎಂದು ಉತ್ತರಿಸಿದ್ದಾರೆ. ತಾನು ಒಕ್ಕಲಿಗ, ಪತ್ನಿ ತಮಿಳುನಾಡಿದ ಗೌಂಡರ್ ಎಂದು ಜಗ್ಗೇಶ್ ತನ್ನ ಜಾತಿಯನ್ನು ರಿವೀಲ್ ಮಾಡಿದ್ದಾರೆ.  

'ಹೌದು ಒಕ್ಕಲಿಗ, ಆಕೆ ತಮಿಳುನಾಡಿನ ಗೌಂಡರ್. ನಮ್ಮಿಬ್ಬರ ಮದುವೆ 1984ರಲ್ಲಿ ಆದದ್ದು. ಜಾತಿ ವ್ಯವಸ್ಥೆಯ ದರಿದ್ರ ಕಾಲ, ಅಂದು ನಮ್ಮನ್ನ ಕುಲದಿಂದ ಹೊರ ಹಾಕಿ ಊರು ಬಿಟ್ಟು ಓಡಿಸಿಬಿಟ್ಟರು. ತಿನ್ನಲು ಅನ್ನವಿಲ್ಲದೆ ಮಂತ್ರಾಲಯಕ್ಕೆ ಹೋಗಿ ರಾಯರ ಸೇವೆ ಮಾಡಿ ಮಠದಲ್ಲಿ ಒಂದು ಹೊತ್ತು ಊಟ ಮಾಡಿ 6 ತಿಂಗಳು ಬದುಕಿದೆವು. ಜಾತಿ ವ್ಯವಸ್ಥೆ ತೊಲಗಬೇಕು ದೇಶದಿಂದ ಅದೆ ನನ್ನ ಧ್ಯೇಯ. ಅದೆ ಕಾರಣ ತೋತಾಪುರಿ ಇಂದು ನಾನು ಇಷ್ಟಪಟ್ಟು ಮಾಡಿದ್ದು' ಎಂದು ಹೇಳಿದ್ದಾರೆ. 

ಕನ್ನಡ ಚಿತ್ರರಂಗಕ್ಕೆ ರಿಷಬ್ ಶೆಟ್ಟಿ ಅದ್ಭುತ ಕೊಡುಗೆ; ವಿದೇಶದಲ್ಲಿ 'ಕಾಂತಾರ' ನೋಡಿ ಹೊಗಳಿದ ಜಗ್ಗೇಶ್

ಕೋರ್ಟ್ ಮೆಟ್ಟಿಲೇರಿತ್ತು ಜಗ್ಗೇಶ್ ಮದುವೆ

ಜಗ್ಗೇಶ್ ಮದುವೆ ವಿಚಾರ ಸುಪ್ರೀಂ ಕೋರ್ಟ್ ವರೆಗೂ ಹೋಗಿತ್ತು. ಜಗ್ಗೇಶ್ ಲವ್ ಸ್ಟೋರಿ ಯಾವ ಸಿನಿಮಾಗೇನು ಕಮ್ಮಿ ಇಲ್ಲ. ಮಾರ್ಚ್ 22, 1984ರಲ್ಲಿ ಜಗ್ಗೇಶ್ ಗೆಳತಿ ಪರಿಮಳಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಪ್ರೀತಿಯನ್ನು ಮನೆಯವರು ಒಪ್ಪದ ಕಾರಣ, 22 ಮಾರ್ಚ್ 1984ರಲ್ಲಿ ಪೋಷಕರ ಕಣ್ತಪ್ಪಿಸಿ ಇಬ್ಬರು ರಿಜಿಸ್ಟರ್ ಮದುವೆ ಆದರು. ಪರಿಮಳಾ ಅವರು ಆಗ ಅಪ್ರಾಪ್ತ ವಯಸ್ಸಿನಲ್ಲಿದ್ದ ಕಾರಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಯ್ತು.

ಶೂದ್ರನಾದರೂ ನನ್ನನ್ನು ಬೃಂದಾವನದ ಮುಂದೆ ಕೂರಿಸ್ತಾರೆ: ಜಾತಿ ವ್ಯವಸ್ಥೆ ಬಗ್ಗೆ Jaggesh ಮಾತು

ಜಗ್ಗೇಶ್ ವಿರುದ್ದ ದಾಖಲಾಗಿತ್ತು ಕಿಡ್ನ್ಯಾಪ್ ಕೇಸ್

ಮನೆಯವರು ಒಪ್ಪದ ಕಾರಣ ಜಗ್ಗೇಶ್, ಪರಿಮಳಾ ಅವರನ್ನು ಮನೆಯಿಂದ ಕರೆದುಕೊಂಡು ಬಂದು ತಾಳಿ ಕಟ್ಟಿದರು. ಬಳಿಕ ಜಗ್ಗೇಶ್ ವಿರುದ್ಧ ಕಿಡ್ನ್ಯಾಪ್ ಕೇಸ್ ದಾಖಲಾಯ್ತು. ಈ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಅಂದು ಮಾನವೀಯತೆಯ ಆಧಾರದ ಮೇಲೆ, ಜಗ್ಗೇಶ್-ಪರಿಮಳ ಪ್ರೇಮಕ್ಕೆ ಬೆಲೆಕೊಟ್ಟ ಸುಪ್ರೀಂ ಕೋರ್ಟ್ ಸಂವಿಧಾನದ ವಿರುದ್ಧ ಹೋಗಿ ಪ್ರೇಮಿಗಳ ಪರ ತೀರ್ಪು ಕೊಟ್ಟಿತ್ತು. ಅಪಮಾನ, ಅವಮಾನ ಎದುರಿಸಿ ಹಸೆಮಣೆ ಏರಿದ್ದ ಈ ಜೋಡಿ ಇಂದು ಅನೇಕ ದಂಪತಿಗಳಿಗೆ ಮಾದರಿಯಾಗಿದೆ. ಸ್ಯಾಂಡಲ್ ವುಡ್ ನ ದೊಡ್ಡ ಕಲಾವಿದರಾಗಿ ಬೆಳೆದಿದ್ದಾರೆ. ರಾಜಕೀಯದಲ್ಲೂ ಸಕ್ರೀಯರಾಗಿದ್ದಾರೆ.

click me!