ಎಲ್ಲರೂ ಬೆಚ್ಚಗಿದ್ದಾರೆ, ನನಗೆ ಮಾತ್ರ ಸೆಕ್ಸಿ ಬ್ಲೌಸ್ ಕೊಟ್ಟಿದ್ದಾರೆ: ನಟಿ Nimika Ratnakar

Suvarna News   | Asianet News
Published : Jan 13, 2022, 10:42 AM ISTUpdated : Jan 13, 2022, 11:39 AM IST
ಎಲ್ಲರೂ ಬೆಚ್ಚಗಿದ್ದಾರೆ, ನನಗೆ ಮಾತ್ರ ಸೆಕ್ಸಿ ಬ್ಲೌಸ್ ಕೊಟ್ಟಿದ್ದಾರೆ: ನಟಿ Nimika Ratnakar

ಸಾರಾಂಶ

ಕೊರೋನಾ ಭಯದಲ್ಲಿ ಸಿನಿಮಾ ಹೇಗೆ ರಿಲೀಸ್ ಆಗುತ್ತೆ ಎಂದು ಚಿಂತಿಸುತ್ತಿರುವ ನಟಿ ನಮಿತಾ, ತಮ್ಮ ಪಾತ್ರದ ಬಗ್ಗೆ ರಿವೀಲ್ ಮಾಡಿದ್ದಾರೆ.

ಧರ್ಮ ಕೀರ್ತಿರಾಜ್‌ (Dharma Keerthiraj) ಮತ್ತು ನಿಮಿಕಾ ರತ್ನಾಕರ್ (Nimika Ratnakar) ಜೋಡಿಯಾಗಿ ನಟಿಸಿರುವ ಸುಮನ್ (Suman) ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ಚಿತ್ರದಲ್ಲಿ ಜೈಲಿನ್ ಗಣಪತಿ, ಸ್ವಾತಿ ಜೈ ಜಗದೀಶ್ (Swathi Jai Jagadish), ರಜನಿ ಭಾರದ್ವಾಜ್, ಗೋವಿಂದೇ ಗೌಡ (GG) ಮುಂತಾದವರು ಕೂಡ ನಟಿಸಿದ್ದು, ತಮ್ಮ ತಮ್ಮ ಪಾತ್ರಗಳು ಎಷ್ಟು ವಿಭಿನ್ನವಾಗಿವೆ ಎಂದು ಹೇಳಿ ಕೊಂಡಿದ್ದಾರೆ. ಹಾಟ್ ಸೀರೆ ಲುಕ್‌ನಲ್ಲಿ ಕಾಣಿಸಿಕೊಂಡಿರುವ ನಿಮಿತಾ ಕೂಡ ಚಿತ್ರ ಹಾಗೂ ತಮ್ಮ ಪಾತ್ರದ ಬಗ್ಗೆ ಮಾತನಾಡಿದ್ದಾರೆ. 

'ನನಗೆ ತುಂಬಾ ಖುಷಿ ಅಗಿದೆ ಹಾಗೆ ತುಂಬಾ ಭಯನೂ ಆಗುತ್ತಿದೆ. ಎಕೆಂದರೆ ಎರಡು ವರ್ಷಗಳ ನಂತರ ಏನೋ ಒಂದು ಚಿತ್ರ ರಿಲೀಸ್ ಆಗುತ್ತಿದೆ. ಪುನಾ ಏನಾದರೂ ಕೋವಿಡ್‌ (Covid19) ನಿಯಮಗಳು ಬಂದು ಬಿಡುಗಡೆ ಪೋಸ್ಟ್‌‌ಪೋನ್ ಆಗುತ್ತಾ ಅಂತ ಆತಂಕ ಇದೆ. ಮೊದಲು ನಾನು ಪ್ರಕಾಶ್‌ ಸರ್‌ಗೆ ಧನ್ಯವಾದಗಳನ್ನು ಹೇಳಲು ಇಷ್ಟ ಪಡ್ತೀನಿ. ನನಗೆ ಇಂಥ ಒಳ್ಳೆಯ ಟೀಂನ ಪರಿಚಯ ಮಾಡಿಕೊಟ್ಟಿದ್ದಕ್ಕೆ. ರವಿ ಸಾಗರ್ (Ravi Sagar) ಸರ್‌ ಜೊತೆ ಕೆಲಸ ಮಾಡುವುದು ಒಂದೊಳ್ಳೆ ಅನುಭವ. ಏಕೆಂದರೆ ಸೆಟ್‌ನಲ್ಲಿ ಯಾವ ಪ್ರೆಶರ್‌ (Pressure) ಕೂಡ ಇರಲಿಲ್ಲ. ಜಾಲಿ ಅಗಿ ಕೆಲಸ ಮಾಡಿದ್ದೀವಿ,' ಎಂದು ನಿಮಿಕಾ ಮಾತನಾಡಿದ್ದಾರೆ. 

ದಾಂಪತ್ಯ ಜೀವನಕ್ಕೆ ಕಾಲಿಟ್ಟ ರತ್ನನ್ ಪ್ರಪಂಚ ನಟಿ Reba Monica John!

'ಬಿಂದಾಸ್ (Bindas) ಮತ್ತೆ ಗೂಗ್ಲಿ (Google) ಸಿನಿಮಾದಲ್ಲಿ ನಾನು ಮತ್ತೆ ಧರ್ಮ ಕ್ಯಾಮಿಯೋದಲ್ಲಿ ನಟಿಸಿದ್ದೀನಿ. ಅವರು ನನಗೆ ಒಳ್ಳೆಯ ಸ್ನೇಹಿತರು. ನಾನು ಒಂದು ಸಾಂಗ್ ಶೂಟ್‌ ಬಗ್ಗೆ ಹೇಳಬೇಕು. ನೀವು ಆ ವಿಡಿಯೋ ನೋಡಿದ್ದೀರಾ, ಅದು ಚಿಕ್ಕಮಗಳೂರಿನಲ್ಲಿ (Chikkamagaluru) ಚಿತ್ರೀಕರಣ ಮಾಡಿದ್ದು. ಧರ್ಮ ಅವರು ಬ್ಲೇಜರ್ (Blazer) ಹಾಕಿದ್ದಾರೆ. ಡೈರೆಕ್ಟರ್ ಅವ್ರು ಕಂಬ್ಳಿ ಎಲ್ಲಾ ಮುಚ್ಕೊಂಡು, ಕ್ಯಾಪೆಲ್ಲಾ ಹಾಕೊಂಡು ಕೂತ್ಕೊಂಡಿದ್ದಾರೆ. ನನಗೆ ಮಾತ್ರ ಒಂದು ತುಂಡು ಬಟ್ಟೆ ಮಾತ್ರ ಕೊಟ್ಟಿದ್ದಾರೆ. ಅದಕ್ಕೆ ಬ್ಯಾಕ್‌ ಲೆಸ್‌ ಬ್ಲೌಸ್‌ (Backless blouse). ಅದು ಒಳ್ಳೆಯ ಸೆಕ್ಸಿ ಸೀರೆ (Sexy Saree) .ಅಲ್ಲಿ ನಾನು ಗಡ ಗಡ ಅಂತ ನಡುಗ್ತಾ ಇದ್ದೆ. ಇದು ಅಮೇಜಿಂಗ್ ಅನುಭವ,' ಎಂದು ನಿಮಿತಾ ಹೇಳಿದ್ದಾರೆ.

'ಹಾಡುಗಳ ಬಗ್ಗೆ ಹೇಳಬೇಕಂದ್ರೆ ಅಮೇಜಿಂಗ್ ಆಗಿದೆ. ನನ್ನ ಮೂರು ಸಿನಿಮಾಗಳು ರಿಲೀಸ್‌ಗೆ ರೆಡಿಯಾಗಿವೆ. ಆದರೆ ಇವಾಗ ರಿಲೀಸ್ ಆಗಿರುವುದರಲ್ಲಿ ನನ್ನ ನೆಚ್ಚಿನ ಹಾಡು ಈ ಸಿನಿಮಾದಲ್ಲಿದೆ. ಝುಬಿನ್‌ ಅವರಿಗೆ ಧನ್ಯವಾದಗಳನ್ನು ಹೇಳಬೇಕು. ಮಾಸ್ಟರ್‌ಗೂ ಕೂಡ ಕೊನೆ ಕ್ಷಣದಲ್ಲಿ ಲಾಸ್ಟ್‌ ಸ್ಟೆಪ್ ಹೀಗೆ ಮಾಡು, ಹೀಗೆ ಇರಲಿ ಅಂತ ಬದಲಾಯಿಸಿ ಹೇಳಿಕೊಟ್ಟಿದ್ದೀರಿ. ನನಗೆ ರಜನಿ ಮತ್ತ ಝರೀನಾ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿಲ್ಲ,' ಎಂದಿದ್ದಾರೆ ನಿಮಿಕಾ.

Sushmita Sen Adopts Baby Boy: ಬಾಯ್‌ಫ್ರೆಂಡ್ ಜೊತೆ ಬ್ರೇಕಪ್ ಬೆನ್ನಲ್ಲೇ 3ನೇ ಮಗುವನ್ನು ದತ್ತು ಪಡೆದ ನಟಿ

'ಸುಮನ್‌ ಚಿತ್ರದಲ್ಲಿ ನಾನು ತುಂಬಾನೇ ಬಬ್ಲಿ ಗರ್ಲ್ (Bubby girl). ತುಂಬಾ ಪ್ರೀತಿ ಇರುವ ಕ್ಯಾರೆಕ್ಟರ್. ಒಂದು ಲವ್ ಸ್ಟೋರಿ (Love Story) ಮಾಡಬೇಕು ಅಂತ ಅಸೆ ಇತ್ತು. ತ್ರಿಶೂಲ್ ಇರಲಿ, ಅಬ್ಬರ ಇರಲಿ, ಎಲ್ಲಾ ಸಿನಿಮಾಗಳಲ್ಲಿಯೂ ನನಗೆ ಮಾಡ್ರನ್ ಕ್ಯಾರೆಕ್ಟರ್‌ ಕೊಟ್ಟಿದ್ದಾರೆ. ಈ ಸಿನಿಮಾದಲ್ಲಿ ನಾನು ಸಿಂಪಲ್ ಹುಡುಗಿ ಸೆಲ್ವಾರ್ (Selwar) ಮತ್ತು ಶಾಲ್ ಹಾಕಿಕೊಂಡಿರುವ ಈ ಕ್ಯಾರೆಕ್ಟರ್ ಮಾಡಬೇಕು ಅಂತ ಆಸೆ ಇತ್ತು. ಈ ಸಿನಿಮಾದ ನನಗೆಲ್ಲಾ ನೀನು ಹಾಡು ಚಿಕ್ಕಮಗಳೂರಿನಲ್ಲಿ ಚಿತ್ರೀಕರಣ ಮಾಡಿದ್ವಿ ಚಿತ್ರೀಕರಣ ಸೂಪರ್ ಆಗಿತ್ತು. ಸಿನಿಮಾ ಬಹುತೇಕ ಭಾಗ ಮೈಸೂರಿನಲ್ಲಿ ಚಿತ್ರೀಕರಣ ಆಗಿದೆ. ಈ ಹಾಡು ಹಿಟ್ ಆಗಬೇಕು ಮತ್ತು ಸಿನಿಮಾ ಇನ್ನೂ ಸೂಪರ್ ಹಿಟ್ ಆಗಬೇಕು,' ಎಂದು ನಿಮಿಕಾ ಹೇಳಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?