ದಾಂಪತ್ಯ ಜೀವನಕ್ಕೆ ಕಾಲಿಟ್ಟ ರತ್ನನ್ ಪ್ರಪಂಚ ನಟಿ Reba Monica John!

Suvarna News   | Asianet News
Published : Jan 13, 2022, 10:32 AM IST
ದಾಂಪತ್ಯ ಜೀವನಕ್ಕೆ ಕಾಲಿಟ್ಟ ರತ್ನನ್ ಪ್ರಪಂಚ ನಟಿ Reba Monica John!

ಸಾರಾಂಶ

ಬಾಯ್‌ಫ್ರೆಂಡ್‌ ಜೋಮನ್ ಜೋಸೆಫ್‌ ಜೊತೆ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಯಾಂಡಲ್‌ವುಡ್‌ ನಟಿ...

2021ರಲ್ಲಿ ಭಾರತೀಯ ಸಿನಿ ಸೆಲೆಬ್ರಿಟಿಗಳಲ್ಲಿ ಶೇ.30 ಮಂದಿ ದಾಂಪತ್ಯ ಜೀವನಕ್ಕೆ (Marriage Phase) ಕಾಲಿಟ್ಟರು. ತಿಂಗಳಿಗೊಂದಾದರೂ ಮದುವೆ ಇರುತ್ತಿತ್ತು, ಕೆಲವರು ಅದ್ಧೂರಿ, ಐಷಾರಾಮಿ ಮದುವೆ ಮೊರೆ ಹೋದರೆ, ಇನ್ನೂ ಕೆಲವರು ತಮ್ಮ ಹುಟ್ಟೂರು ಅಥವಾ ಮನೆಯಲ್ಲಿ ಸರಳವಾಗಿ ಮದುವೆ ಆದರು. ಈ ವರ್ಷ ಮ್ಯಾರೇಜ್ ಫೇಸ್‌ ಎಂಟರ್‌ ಆಗಿರುವ ಎರಡನೇ ಸೆಲೆಬ್ರಿಟಿ ರೆಬಾ.

ರತ್ನನ್ ಪ್ರಪಂಚ (Ratnan Prapancha) ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ (Sandalwood) ಪಾದಾರ್ಪಣೆ ಮಾಡಿದ ನಟಿ ರೆಬಾ ಮೋನಿಕಾ ಜಾನ್ (Reba Monica John) ಇದೀಗ ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾ ಆಫರ್‌ಗಳನ್ನು ಒಪ್ಪಿಕೊಳ್ಳುತ್ತಿರುವ ಈ ಸುಂದರಿ ಇದೀಗ ಮದುವೆ ಮಾಡಿಕೊಂಡಿದ್ದಾರೆ, ಎಂದು ತಿಳಿಯುತ್ತಿದ್ದಂತೆ ಹುಡುಗರಿಗೆ ಹಾರ್ಟ್ ಬ್ರೇಕ್ (Heart Break) ಆಗಿದೆ. 

 

ಮದುವೆ ವಿಚಾರವನ್ನು ರೆಬಾ ಅವರೇ ಇನ್‌ಸ್ಟಾಗ್ರಾಂ (Instagram) ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ' ದಿನಾಂಕ 9/01/2022. 'Love bears all things, believes all things, hopes all things, endures all things. Love never ends' ಆ ದೇವರಲ್ಲಿ ನಾನು ಬೇಡಿಕೊಳ್ಳುವುದು ಒಂದೇ ನಾವು ಜೀವನ ಪೂರ್ತಿ ಹೀಗೆ ಕೈ ಹಿಡಿದುಕೊಂಡು ನಡೆಯಬೇಕು, ಒಳ್ಳೆಯ ಕ್ಷಣ, ಕೆಟ್ಟ ಸಮಯ, ಸಿರಿವಂತರಾದಾಗ, ಎಲ್ಲವನ್ನೂ ಕಳೆದುಕೊಂಡಾಗ, ಆರೋಗ್ಯದಲ್ಲಿ ಏರು ಪೇರಾದಾಗ ಏನೇ ಇರಲಿ ಸಮಯ ನಮ್ಮ ಪ್ರೀತಿ ಹೀಗೆ ಇರಲಿ,' ಎಂದು ರೆಬಾ ಬರೆದುಕೊಂಡಿದ್ದಾರೆ. 

'ನನ್ನ ಲವ್ ಆಫ್‌ ಮೈ ಲೈಫ್‌ ಜೊತೆ ಮದುವೆಯಾಗಿರುವೆ. ನಮ್ಮ ಜೀವನದ ಅದ್ಭುತ ಕ್ಷಣ ಇದಾಗಿದ್ದು, ನಾವಿಬ್ಬರೂ ಒಟ್ಟಿಗೆ ನಿಂತಿರುವುದು ನಂಬಬೇಕಾದ ವಿಚಾರ. ಈಗಲೂ ನನಗೆ ಇದು ಡ್ರೀಮ್ (Dream) ಅನಿಸುತ್ತಿದೆ. ಈ ಕನಸು ಎಂದೂ ಮುಗಿಯಬಾರದು. ನಾವು ಮೂರೂವರೆ ವರ್ಷಗಳಿಂದ ಜೊತೆಗಿದ್ದೇವೆ. ದೊಡ್ಡ ರೋಲರ್ ಕೋಸ್ಟರ್ ರೈಡ್ (Roller coaster ride) ನೋಡಿ ನಾವು ಮೆನ್ ಆ್ಯಂಡ್ ವೈಫ್ ಅಗಲು ನಿರ್ಧಾರ ಮಾಡಿದೆವು. ಇದಕ್ಕಿಂತ ಸುಂದರವಾದ ಪಾರ್ಟನರ್‌ನ ಕೇಳುವುದಕ್ಕೆ ಆಗೋಲ್ಲ. ನನ್ನ ಶ್ರಮ ಮತ್ತು ಪವರ್‌ನಲ್ಲಿ ನಿನಗೆ ಏನು ಮಾಡಬಹುದೋ ಅದನ್ನೆಲ್ಲಾ ನಮ್ಮನ್ನು ಸಾವು ದೂರ ಮಾಡುವವರೆಗೂ ನಾನು ನೆರವೇರಿಸುವೆ ಎಂದು ಪ್ರಾಮಿಸ್ (Promise) ನೀಡುವೆ,' ಎಂದು ರೆಬಾ ಪತಿ ಜೋಸೆಫ್ ಬರೆದುಕೊಂಡಿದ್ದಾರೆ. 

 

ಫೆಬ್ರವರಿ 4,2021ರಂದು ಇಬ್ಬರೂ ಅಧಿಕೃತವಾಗಿ ಯಸ್‌ ಎಂದು ಹೇಳಿದ್ದ ಬಗ್ಗೆ ಜೋಸೆಫರ್ ಬರೆದುಕೊಂಡಿದ್ದಾರೆ. 'We Said Yes.ಇದು ತುಂಬಾನೇ ಕ್ರೇಜಿ ಆಗಿ ನಡೆಯಿತು. ನಾವು ಸುಮಾರು 6 ತಿಂಗಳ ನಂತರ ದುಬೈನಲ್ಲಿ (Dubai) ಭೇಟಿ ಮಾಡಿದೆವು. ಪ್ರಯಾಣ ಮಾಡುವಾಗ ಅದೆಷ್ಟೋ ಕಷ್ಟಗಳನ್ನು ಎದುರಿಸಿದೆವು. ಇಬ್ಬರೂ ಆಸ್ಮಿಕವಾಗಿ ಒಂದೇ ದಿನ ಪ್ರಪೋಸ್ (Propose) ಮಾಡಿದೆವು. ನನ್ನ ಜೀವನದಲ್ಲಿ ಕ್ರೇಜಿ coincidence ಇದು, ಎಂದೂ ಮರೆಯುವುದಕ್ಕೆ ಸಾಧ್ಯವಿಲ್ಲ. ನಮ್ಮ ಜೀವನದ ಬೆಸ್ಟ್‌ ನೈಟ್‌ ಇದು,' ಎಂದು ಜೋಸೆಫ್‌ ಪ್ರಪೋಸ್ ಮಾಡಿದ ಫೋಟೋಗಳನ್ನು ಹಂಚಿಕೊಂಡಿದ್ದರು. 

'ರತ್ನನ್ ಪ್ರಪಂಚ' ಚಿತ್ರದಲ್ಲಿ ಬಿಗಿಲ್ ಚಿತ್ರದ ನಟಿ!

ಜೋಸೆಫ್‌ ಅವರ ಇನ್‌ಸ್ಟಾಗ್ರಾಂ ಖಾತೆ ಪಬ್ಲಿಕ್ ಆಗಿದ್ದು, ರೆಬಾ ಜೊತೆ ಅನೇಕ ಫೋಟೋಗಳನ್ನು ಹಂಚಿಕೊಂಡಿದ್ದಾರೆ.  

ತಮಿಳಿನಲ್ಲಿ ಎಫ್‌ಐಆರ್‌ (FIR) ಮತ್ತು ಅಕ್ಟೋವರ್ ಲೇಡಿಸ್‌ ನೈಟ್‌ (October 31st Ladies Night) ಸಿನಿಮಾ, ಕನ್ನಡದಲ್ಲಿ ಸಕಲಕಲಾ ವಲ್ಲಭ (Sakalakala Vallabha) ಸಿನಿಮಾ ಮಲಯಾಳಂನಲ್ಲಿ ರಜ್ನಿ (Rajni) ಮತ್ತು ಹೆಸರು ರಿವೀಲ್ ಆಗದ ಸಿನಿಮಾವೊಂದಕ್ಕೆ ಸಹಿ ಮಾಡಿದ್ದಾರೆ ರೆಬಾ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಟಾಕ್ಸಿಕ್ ಪೋಸ್ಟರ್ ರಿಲೀಸ್ ಮಾಡಿ ಕುತೂಹಲ ಹೆಚ್ಚಿಸಿದ ಯಶ್, ಸಿನಿಮಾ ಬಿಡುಗಡೆ ಕೌಂಟ್‌ಡೌನ್ ಶುರು
ಕನ್ನಡಿಗರ ಪ್ರೀತಿಯ ಪುಟ್ಟಿ ಯಾಕ್ ಹೀಗಾದ್ರು? Rukmini Vasanth ನ್ಯೂ ಲುಕ್ ವೈರಲ್