Samyuktha Hegde: ಅಗ್ನಿ ಶ್ರೀಧರ್‌ ಕತೆಯ 'ಕ್ರೀಂ' ಚಿತ್ರಕ್ಕೆ ಕಿರಿಕ್ ಪಾರ್ಟಿ ಸುಂದರಿ ನಾಯಕಿ

By Kannadaprabha News  |  First Published Jan 13, 2022, 10:11 AM IST

ಕಿರಿಕ್‌ ಪಾರ್ಟಿ ಖ್ಯಾತಿಯ ಸಂಯುಕ್ತ ಹೆಗ್ಡೆ ‘ಕ್ರೀಂ’ ಎನ್ನುವ ಚಿತ್ರದಲ್ಲಿ ಪ್ರಧಾನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅಭಿಷೇಕ್‌ ಬಸಂತ್‌ ನಿರ್ದೇಶನ ಮಾಡುತ್ತಿರುವ ಈ ಚಿತ್ರಕ್ಕೆ ಹಿರಿಯ ಪತ್ರಕರ್ತ ಅಗ್ನಿ ಶ್ರೀಧರ್‌ ಕತೆ ಬರೆದಿದ್ದಾರೆ. ಡಿ.ಕೆ. ದೇವೇಂದ್ರ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.


ಕಿರಿಕ್‌ ಪಾರ್ಟಿ (Kirik Party) ಖ್ಯಾತಿಯ ಸಂಯುಕ್ತ ಹೆಗ್ಡೆ (Samyuktha Hegde) ‘ಕ್ರೀಂ’ (Cream) ಎನ್ನುವ ಚಿತ್ರದಲ್ಲಿ ಪ್ರಧಾನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅಭಿಷೇಕ್‌ ಬಸಂತ್‌ (Abishek Basant) ನಿರ್ದೇಶನ ಮಾಡುತ್ತಿರುವ ಈ ಚಿತ್ರಕ್ಕೆ ಹಿರಿಯ ಪತ್ರಕರ್ತ ಅಗ್ನಿ ಶ್ರೀಧರ್‌ (Agni Sridhar) ಕತೆ ಬರೆದಿದ್ದಾರೆ. ಡಿ.ಕೆ. ದೇವೇಂದ್ರ (D.K.Devendra) ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ವಿಶಿಷ್ಟವಾಗಿ ಮೂಡಿ ಬಂದಿರುವ ಚಿತ್ರದ ಟೈಟಲ್‌ ಪೋಸ್ಟರ್‌ (Title Poster) ನೋಡಿದಾಗ ಇದು ಕ್ರೈಮ್‌ ಕತೆನಾ ಎನ್ನುವ ಗುಮಾನಿ ಮೂಡುತ್ತದೆ. ಚಿತ್ರತಂಡವೇ ಶೀಘ್ರ ಚಿತ್ರದ ಎಲ್ಲಾ ಮಾಹಿತಿಯನ್ನು ತಿಳಿಸಲಿದೆ.

ಶ್ರೇಯಸ್ (Shreyas) ನಟನೆಯ ‘ರಾಣ’ ಚಿತ್ರಕ್ಕೆ ನಟಿ ಸಂಯುಕ್ತ ಹೆಗ್ಡೆ(Samyuktha Hegde) ಜತೆಯಾಗುತ್ತಿದ್ದಾರೆ. ನಟಿ ಸ್ಪೆಷಲ್ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಇದೊಂದು ವಿಶೇಷ ಹಾಡಾಗಿದ್ದು, ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಕಲಾ ನಿರ್ದೇಶಕ ಶಿವು (Shivu) ಅವರ ಸಾಥ್ಯದಲ್ಲಿ ಕಲರ್‌ಫುಲ್ ಸೆಟ್ ಹಾಕಿ ಚಿತ್ರೀಕರಿಸಲಾಗಿದೆ. ಶಿವು ಭೇರ್ಗಿ (Shivu Bhergi) ಈ ಹಾಡನ್ನು ಬರೆದಿದ್ದು, ಚಂದನ್ ಶೆಟ್ಟಿ (Chandan Shetty) ಸಂಗೀತ ನೀಡಿದ್ದಾರೆ.

Tap to resize

Latest Videos

ನಂದಕಿಶೋರ್ (Nanda Kishor) ನಿರ್ದೇಶನದ ಈ ಚಿತ್ರವನ್ನು ಗುಜ್ಜಲ್ ಪುರುಷೋತ್ತಮ್ ನಿರ್ಮಿಸುತ್ತಿದ್ದಾರೆ. ಶೇಖರ್ ಚಂದ್ರು ಛಾಯಾಗ್ರಹಣ ಚಿತ್ರಕ್ಕಿದೆ. ಪ್ರಶಾಂತ್ ರಾಜಪ್ಪ ಸಂಭಾಷಣೆ ಬರೆದಿದ್ದಾರೆ. ಚಿತ್ರದ ನಾಯಕಿಯರಾಗಿ ರಜನಿ ಭಾರದ್ವಾಜ್ (Rajani Bharadwaj) ಹಾಗೂ ರೀಷ್ಮ ನಾಣಯ್ಯ (Reeshma Nanaiah) ಇದ್ದಾರೆ. ಒಟ್ಟಿನಲ್ಲಿ ತುಂಬಾ ದಿನಗಳ ನಂತರ ಸಂಯುಕ್ತ ಹೆಗ್ಡೆ ಅವರು ಕನ್ನಡ ಚಿತ್ರದ ಸ್ಕ್ರೀನ್‌ಗೆ ಹಾಡಿನ ಮೂಲಕ ಎಂಟ್ರಿ ಆಗಿದ್ದಾರೆ.

Muttiah Muralitharan Biopic: 800 ಚಿತ್ರದಲ್ಲಿ ಸ್ಲಂಡಾಗ್‌ ಮಿಲೇನಿಯರ್‌ ಖ್ಯಾತಿಯ ದೇವ್‌ ಪಟೇಲ್‌

ಸಂಯುಕ್ತಾ ಸೋಷಿಯಲ್ ಮೀಡಿಯಾದಲ್ಲಿ (Social Media) ಆಗಾಗ ಬೋಲ್ಡ್‌ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ ಎಂದು ಎಲ್ಲರಿಗೂ ಗೊತ್ತಿದೆ. ಆದರೆ ಈ ಸಲ ಅದರ ಹಿಂದಿರುವ ಶ್ರಮದ ಬಗ್ಗೆ ಬರೆದುಕೊಂಡಿದ್ದಾರೆ. ಪದೇ ಪದೇ ದೇಹದ ಬಗ್ಗೆ ಕಾಮೆಂಟ್ ಮಾಡುವವರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಸಂಯುಕ್ತಾ ಮಾತುಗಳು: 'ವಿಭಿನ್ನ ದೇಹದ ಆಕಾರ ಹೊಂದಿರುವ ಸ್ನೇಹಿತರೇ ಹಾಯ್...ನಾನು ತೆಳ್ಳಗಾಗಲು ಎಷ್ಟು ಅದೃಷ್ಟಶಾಲಿ ಎಂದು ನಿರಂತರವಾಗಿ ಒಪ್ಪಿಕೊಂಡಿದ್ದಕ್ಕಾಗಿ ಧನ್ಯವಾದಗಳು. ನನ್ನ ದೇಹದ ಕಾಳಜಿಯನ್ನು ಪರಿಗಣಿಸದಿದ್ದಕ್ಕಾಗಿ ಧನ್ಯವಾದಗಳು. ನಾನು ಫಿಟ್ ಆಗಿರುವುದಕ್ಕೆ ಹಾಕಿರುವ ಪರಿಶ್ರಮವನ್ನು ನಿರ್ಲಕ್ಷಿಸಿ, ದೇಹ ಹೀಗಿರುವುದಕ್ಕೆ ನೀನು Blessed ಎಂದವರಿಗೆ ಧನ್ಯವಾದಗಳು. 



ನನ್ನ ದೇಹ 45 ಕೆಜಿಯಿಂದ 50 ಕೆಜಿ ಹೆಚ್ಚಾಗಿದೆ ಈ ನನ್ನ ಟ್ರಾನ್ಸ್‌ಫಾರ್ಮೇಷನ್‌ನ  ಪ್ರಶಂಸಿಸಿದ್ದಕ್ಕಾಗಿ ಧನ್ಯವಾದಗಳು. ನೀನು ಏನು ಬೇಕಿದ್ದರೂ ತಿನ್ನಬಹುದು, ದಪ್ಪ ಆಗುವುದಿಲ್ಲ ಎಂದು ಕೊಂಕು ಹೇಳಿಕೆ ನೀಡುವವರಿಗೆ ಧನ್ಯವಾದಗಳು. ಸಣ್ಣಗಿರುವವರು ಫಿಟ್ ಆಗಿರಬೇಕು ಎನ್ನುವ ನನ್ನ ನಂಬಿಕೆಗೆ, ಇಲ್ಲ ದಪ್ಪಗಾಗಿ ಫಿಟ್ ಆಗಬೇಕು, ಎಂದು ಬದಲಾಯಿಸಿದವರಿಗೆ ಧನ್ಯವಾದಗಳು. ಇಂತಿ ನಿಮ್ಮ Skinny ಸ್ನೇಹಿತೆ,' ಎಂದು ಬರೆದುಕೊಂಡಿದ್ದರು.

Ratnan Prapancha: OTTಯಲ್ಲಿ ತಮಿಳು ಸೂರ್ಯನನ್ನು ಮೀರಿಸಿದ ಡಾಲಿ ಧನಂಜಯ

ಇನ್ನು, ಕನ್ನಡದ ಕಿರಿಕ್ ಪಾರ್ಟಿ, ಕಾಲೇಜ್ ಕುಮಾರ (College Kumara) ಸಿನಿಮಾದಲ್ಲಿ ಕಾಣಿಸಿಕೊಂಡ ನಂತರ ಸಂಯುಕ್ತಾ ತೆಲುಗು ಕಿರಿಕ್ ಪಾರ್ಟಿ ಮತ್ತು ತಮಿಳಿನಲ್ಲಿ ವಾಚ್‌ಮ್ಯಾನ್ (Watchman) ಸಿನಿಮಾದಲ್ಲಿ ನಟಿಸುವ ಮೂಲಕ ಪರಭಾಷೆಗೆ ಎಂಟ್ರಿ ಕೊಟ್ಟರು. ಆನಂತರ ಕಿವುಡು ಹುಡುಗಿ ಪಾತ್ರದ ಮೂಲಕ ಮತ್ತೆ ಕನ್ನಡದ 'ಒಮ್ಮೆ ನಿಶಬ್ಧ ಒಮ್ಮೆ ಯುದ್ಧ' ಸಿನಿಮಾದಲ್ಲಿ ನಟಿಸಿದ್ದರು. ತಮಿಳಿನ ಕೋಮಲಿ ಮತ್ತು ಪಪ್ಪಿ ಸಿನಿಮಾ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದ್ದಂತೆ, ಕನ್ನಡ ತುರ್ತು ನಿರ್ಗಮನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

click me!