
ಕನ್ನಡ ಸಿನಿಮಾಗಳಲ್ಲಿ ಕೆಲವು ಸೂಪರ್ ಹಿಟ್ ಸಿನಿಮಾಗಳ ಬಗ್ಗೆ ನಿಮಗೆ ಗೊತ್ತಿಲ್ಲದ ರಹಸ್ಯಗಳಿವೆ. ನೀವು ಈ ಸೀಕ್ರೆಟ್ ಎಲ್ಲಾನೂ ತಿಳ್ಕೊಂಡಿರಿ.. ಆದ್ರೆ, ಎಲ್ಲರಿಗೂ ಹೇಳೋದಕ್ಕೆ ಹೋಗ್ಬೇಡಿ! ಯಾಕಂದ್ರೆ, ಎಲ್ಲರಿಗೂ ಅವರದೇ ಆದ ಫ್ಯಾನ್ಸ್ ಬಳಗ ಇದೆ. ಆದ್ರೆ, ನಿಮ್ಗೆ ಈ ರಹಸ್ಯಗಳೆಲ್ಲಾ ಗೊತ್ತಿರ್ಲಿ.. ನಮ್ಮ ಕನ್ನಡದ ಸ್ಟಾರ್ ನಟರು ಕೆಲವು ಸೂಪರ್ ಹಿಟ್ ಸಿನಿಮಾಗಳನ್ನು ತಪ್ಪಿಸಿಕೊಂಡಿದಾರೆ, ಕೆಲವರು ಆ ಬಗ್ಗೆ ಆಮೇಲೆ ಚಿಂತೆ ಮಾಡಿರಲೂಬಹುದು..
ಹಾಗಿದ್ರೆ ಯಾರು ಯಾವ್ ಸಿನಿಮಾಗಳನ್ನು ಮಿಸ್ ಮಾಡ್ಕೊಂಡಿದಾರೆ.. ಮಿಸ್ ಮಾಡ್ದೇ ನೋಡಿ.. ಶಿವರಾಜ್‌ಕುಮಾರ್ (Shivarajkumar) ಅವ್ರು ಹುಚ್ಚ (Huchcha) ಸಿನಿಮಾ ಮಿಸ್ ಮಾಡ್ಕೊಂಡಿದಾರೆ, ಅದು ಕಿಚ್ಚ ಸುದೀಪ್ (Kichcha Sudeep) ಬದಲು ಮೊದಲು ಹೋಗಿದ್ದು ಶಿವಣ್ಣ ಅವರಿಗೆ. ಆದ್ರೆ ಅವ್ರು ಅದನ್ನ ರಿಜೆಕ್ಟ್ ಮಾಡಿದ ಮೇಲೆ ಆಯ್ಕೆ ಆಗಿದ್ದು ಸುದೀಪ್. ಹುಚ್ಚ ಚಿತ್ರ ಸೂಪರ್ ಹಿಟ್ ಆಗಿ ಸುದೀಪ್ ಅವರಿಗೆ ಸ್ಟಾರ್ ವ್ಯಾಲ್ಯೂ ತಂದುಕೊಟ್ಟಿದ್ದು ಈಗ ಇತಿಹಾಸ.
29 ವರ್ಷಗಳ ಬಳಿಕ ನಟ ಶಿವಣ್ಣ ಯಾಣಕ್ಕೆ ಭೇಟಿ: 'ನಮ್ಮೂರ ಮಂದಾರ ಹೂವೇ' ಪಾರ್ಟ್ 2 ಬರುತ್ತಾ?
ಇನ್ನು 'ಡೆಡ್ಲಿ ಸೋಮ' ಸಿನಿಮಾ (Deadly Soma) ಮೊದಲು ಬಂದಿದ್ದು ಕಿಚ್ಚ ಸುದೀಪ್ ಅವರಿಗೆ. ಆದ್ರೆ ಅವರು ಯಾಕೋ ಅದನ್ನು ರಿಜೆಕ್ಟ್ ಮಾಡಿದ ಮೇಲೆ ಅದು ಆದಿತ್ಯ ಪಾಲಾಯ್ತು. ಸೂಪರ್ ಹಿಟ್ ಸಿನಿಮಾ 'ವಿಷ್ಣುವರ್ಧನ' ಮೊದಲು ಹೋಗಿದ್ದು ನಟ ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ಅವರಿಗೆ. ಆದರೆ, ಗಣೇಶ್ ಅದನ್ನು ಮಾಡಲು ಸಾಧ್ಯವಾಗದೇ ಅದು ಕಿಚ್ಚ ಸುದೀಪ್ ಅವರ ಪಾಲಾಯ್ತು. ಈ ಬಗ್ಗೆ ಸಾಕಷ್ಟು ಸುದ್ದಿ ಆಗಿದೆ.
ಇನ್ನು, ಸೂಪರ್ ಹಿಟ್ ದಾಖಲಿಸಿರುವ 'ರಂಗಿ ತರಂಗ' ಮೊದಲು ಹೋಗಿದ್ದು ರಕ್ಷಿತ್ ಶೆಟ್ಟಿ (Rakshith Shetty) ಅವರಿಗೆ. ಆದರೆ, ಅವರು ಆಗಲ್ಲ ಅಂದ ಬಳಿಕ ಅದು ನಿರೂಪ್ ಭಂಡಾರಿ ಪಾಲಾಯ್ತು! ರಂಗಿ ತರಂಗ (Rangi Taranga) ಸೂಪರ್ ಹಿಟ್ ಆಗಿದ್ದಷ್ಟೇ ಅಲ್ಲ, ಅನೂಪ್ ಭಂಡಾರಿ ಎಂಬ ನಿರ್ದೇಶಕ ಹಾಗೂ ನಿರೂಪ್ ಭಂಡಾರಿ ಎಂಬ ನಟ ಆ ಮೂಲಕ ಕನ್ನಡ ಸಿನಿರಂಗಕ್ಕೆ ಕಾಲಿಟ್ಟರು. ಇನ್ನು 'ಮುಂಗಾರು ಮಳೆ' ಚಿತ್ರವು ಮೊದಲು ಹೋಗಿದ್ದು ಪವರ್ ಸ್ಟಾರ್ ಪುನೀತ್ (Puneeth Rajkumar) ಬಳಿಗೆ. ಆದರೆ, ಅವರು ಅದನ್ನು ಒಪ್ಪದಿದ್ದಾಗ ಮಾಡಿದ್ದು ಗಣೇಶ್.
ಇಂದು ವೈರಲ್ ಆಗ್ತಿದೆ ನಟ ವಿಷ್ಣುವರ್ಧನ್ ಅಂದು 'ಅವರೆಲ್ಲರ' ಬಗ್ಗೆ ಹೇಳಿದ್ದ ಮಾತು, ಯಾಕೋ...!?
ಯೋಗರಾಜ್ ಭಟ್ (Yogaraj Bhat) ನಿರ್ದೇಶನದ ಮುಂಗಾರು ಮಳೆ (Mungaru Male) ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಹಾಗೂ ಈ ದಾಖಲೆ ಸೃಷ್ಟಿಸಿದ ಸಿನಿಮಾ. ಬೆಂಗಳೂರಿನ ಸಾಗರ್ ಥಿಯೇಟರ್‌ನಲ್ಲಿ ಬರೋಬ್ಬರಿ ಒಂದು ವರ್ಷ ಓಡಿದೆ ಈ ಮುಂಗಾರು ಮಳೆ. ನಟ ಗಣೇಶ್ ಹಾಗೂ ನಟಿ ಪೂಜಾ ಗಾಂಧಿ ಸ್ಟಾರ್ ನಟ-ನಟಿಯರಾದ್ರು. ಜೊತೆಗೆ, ಯೋಗರಾಜ್ ಭಟ್ ಅವ್ರು ಸ್ಟಾರ್ ನಿರ್ದೇಶಕರಾದ್ರು. ಈಗಲೂ ಮುಂಗಾರು ಮಳೆಯನ್ನು ಜನರು ಮರೆತಿಲ್ಲ. ಆದ್ರೆ, ಅಪ್ಪುಗೆ ಇದು ಮಿಸ್ ಆಯ್ತು!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.