ಇದನ್ನ ಕೇಳಿದ್ರೇ ದಂಗಾಗ್ತೀರ..! ದರ್ಶನ್ ಅಪ್ಪ ತೀರಿಕೊಂಡಾಗ ಟೈಗರ್ ಪ್ರಭಾಕರ್ ಬಂದು ಏನೋ ಅಂದಿದ್ರಂತೆ!

By Shriram Bhat  |  First Published Jul 14, 2024, 4:52 PM IST

ಮೈಸೂರಲ್ಲಿ ಎಲ್ಲೇ ಶೂಟಿಂಗ್ ಇದ್ರೂ ಅವ್ರು ನಮ್ಮನೆಗೆ ಬಂದು, ನಾವು ಮಲಗಿದ್ರೂ ನಮ್ಮೆಲ್ಲರನ್ನೂ ಮುದ್ದಾಡ್ಬಿಟ್ಟು ಹೋಗ್ತಿದ್ರು ಅಂತ ನಮ್ಮಮ್ಮ ಹೇಳ್ತಿದ್ರು.. ನಾವು ಕೇಳ್ತಿದ್ವಿ.. ನಿಜವಾಗಿ ಹೇಳ್ಬೇಕು ಅಂದ್ರೆ ನಾನು ಪ್ರಭಾಕರ್ ಸರ್‌ನ ನೋಡಿದ್ದು ಯಾವತ್ತು ಅಂದ್ರೆ ನಮ್ ತಂದೆ ತೀರಿಕೊಂಡ ದಿನ.. 


ಕನ್ನಡದ ಸ್ಟಾರ್ ನಟ ದರ್ಶನ್ ತಾವು ಚಿಕ್ಕವರಿದ್ದಾಗ ನಡೆದ ಘಟನೆ ಒಂದನ್ನು ಸಂದರ್ಶನದಲ್ಲಿ ಹಂಚಿಕೊಂಡಿದ್ದರು. ಅದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಹಾಗಿದ್ದರೆ ನಟ ದರ್ಶನ್ ಆ ವಿಡಿಯೋದಲ್ಲಿ ಅದೇನು ಹೇಳಿದ್ದರು, ನೋಡಿ.. 'ನಾವು ಆಗ ತುಂಬಾ ಚಿಕ್ಕವ್ರು ಆಕ್ಚ್ಯುಲೀ.. ನಮ್ಗೆ ಆಗ ಗೊತ್ತೂ ಆಗ್ತಾ ಇರ್ಲಿಲ್ಲ.. ನಮ್ಮನೆಲ್ಲಿ ನಮ್ ತಂದೆಗೆ ನಾವು ಮೂರೇ ಜನ ಮಕ್ಳು.. ಅವ್ರ ಮನೆಲ್ಲೂ ಅವ್ರ ತಂದೆಗೆ ಮೂರೇ ಜನ ಮಕ್ಳು.. ಬಟ್ ಒಂದು ಡಿಫ್ರೆನ್ಸ್ ಅಂದ್ರೆ, ನಮ್ಮನೆಲ್ಲಿ ಇಬ್ರು ಗಂಡು ಮಕ್ಳು, ಒಬ್ರು ಹೆಣ್ಣು, ನಮ್ ಅಕ್ಕ.. 

ಆದ್ರೆ ಅವ್ರ ಮನೆಲ್ಲಿ ಒಬ್ರೇ ಗಂಡು, ಇಬ್ರು ಹೆಣ್ಮಕ್ಳು ಇದಾರೆ.. ಅಷ್ಟೇ ವ್ಯತ್ಯಾಸ ಇದ್ದಿದ್ದು..ಮೈಸೂರಲ್ಲಿ ಎಲ್ಲೇ ಶೂಟಿಂಗ್ ಇದ್ರೂ ಅವ್ರು ನಮ್ಮನೆಗೆ ಬಂದು, ನಾವು ಮಲಗಿದ್ರೂ ನಮ್ಮೆಲ್ಲರನ್ನೂ ಮುದ್ದಾಡ್ಬಿಟ್ಟು ಹೋಗ್ತಿದ್ರು ಅಂತ ನಮ್ಮಮ್ಮ ಹೇಳ್ತಿದ್ರು, ನಾವು ಕೇಳ್ತಿದ್ವಿ.. ನಿಜವಾಗಿ ಹೇಳ್ಬೇಕು ಅಂದ್ರೆ ನಾನು ಪ್ರಭಾಕರ್ ಸರ್‌ನ ನೋಡಿದ್ದು ಯಾವತ್ತು ಅಂದ್ರೆ ನಮ್ ತಂದೆ ತೀರಿಕೊಂಡ ದಿನ.. ಅವ್ರು ಇಲ್ಲಿಂದ, ಅಂದ್ರೆ ಬೆಂಗಳೂರಿಂದ ಅಲ್ಲಿಗೆ ಅಂದ್ರೆ ಮೈಸೂರಿಗೆ ಬಂದಿದ್ದರು. ತುಂಬಾ ಜನ ಬಂದಿದ್ದರು, ಆಲ್‌ಮೋಸ್ಟ್‌ ಆಲ್‌ ಎಲ್ರೂ ಬಂದಿದ್ದರು.. 

Tap to resize

Latest Videos

ತಿಂಗಳ ಬಳಿಕ ಡಿವೋರ್ಸ್ ಸತ್ಯ ಸಂಗತಿ ಬಿಚ್ಚಿಟ್ಟ ಚಂದನ್‌ ಶೆಟ್ಟಿ, Loversಗೆ ಇದು ಹೊಸ ಲೆಸನ್ ಆಗಬಹುದೇ?

ಆದ್ರೆ ಪ್ರಭಾಕರ್ ಸರ್ ಮಾತ್ರ ತುಂಬಾ ಹೊತ್ತು ನಿಂತು, ಅಲ್ಲಿ ಅವ್ರು 'ಬಾಸ್ ಬಾಸ್..' ಅಂದಿದ್ದು ಇವತ್ತಿಗೂ ನನ್ನ ಕಿವಿಯಲ್ಲಿ ಘುಂ.. ಅಂತಿದೆ. ಆವತ್ತು ನಾವೆಲ್ಲಾ ನಮ್ಮ ಅಪ್ಪನ ಬಾಡಿ ಹೊತ್ತಕೊಂಡು ಹೋಗಿ ಎಲ್ಲಾ ಸಂಸ್ಕಾರ ಮಾಡೋ ತನ್ಕ ನಾನು ನೋಡಿದ ಹಾಗೆ ನಿಂತಿದ್ದು ಅವ್ರು ಒಬ್ರೇ.. ಅಂತಹ ಬಾಂಧವ್ಯ ನಮ್ಮ ತಂದೆ ಹಾಗು ಟೈಗರ್ ಪ್ರಭಾಕರ್ ಸರ್ ಮಧ್ಯೆ ಇದ್ದಿದ್ದು' ಎಂದಿದ್ದಾರೆ ನಟ ದರ್ಶನ್. ಈಗಲೂ ಅಷ್ಟೇ, ತೂಗುದೀಪ ಶ್ರೀನಿವಾಸ್ ಮಗ ದರ್ಶನ್ ಹಾಗೂ ಟೈಗರ್ ಪ್ರಭಾಕರ್ ಅವರ ಮಗ ವಿನೋದ್ ಪ್ರಭಾಕರ್ ಮಧ್ಯೆ ಒಳ್ಳೆಯ ಸ್ನೇಹವಿದೆ ಅಂತಿದಾರೆ ಅಪ್ತರು.

ನಟರಾದ ದರ್ಶನ್ ಹಾಗು ವಿನೋದ್ ಪ್ರಭಾಕರ್ ಮಧ್ಯೆ ಒಳ್ಳೆಯ ಫ್ರ್ರೆಂಡ್‌ಶಿಪ್ ಇದೆ ಅನ್ನೋದಕ್ಕೆ ಇತ್ತೀಚಿನ ಘಟನೆಯನ್ನು ಕೂಡ ಒಂದು ಸಾಕ್ಷಿಯನ್ನಾಗಿ ಹೇಳಬಹುದು. ಸದ್ಯ ನಟ ದರ್ಶನ್ ಅವರು ಚಿತ್ರದುರ್ಗದ ರೇಣುಕಾಸ್ವಾಮಿ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರಿರುವುದು ಬಹುತೇಕ ಎಲ್ಲರಿಗೂ ಗೊತ್ತಿದೆ. ನ್ಯಾಯಾಂಗ ಬಂಧನದಲ್ಲಿ ಪರಪ್ಪನ ಅಗ್ರಹಾರದ ಜೈಲಿನಲ್ಲಿ ಇರುವ ನಟ ದರ್ಶನ್ ಅವರನ್ನು ನೋಡಲು ಮೊದಲು ಹೋಗಿರುವ ವ್ಯಕ್ತಿಯೇ ಈ ನಟ ವಿನೋದ್ ಪ್ರಭಾಕರ್. 

ಏನಾಗ್ತಿದೆ ಶಿವಾ.. ಮೋಡ ಕವಿದ ವಾತಾವರಣ, ಪ್ರಿಯಾಂಕಾ-ನಿಕ್ ದಾಂಪತ್ಯಕ್ಕೆ ಬಿತ್ತಾ ಕಾಕದೃಷ್ಟಿ?

ಅಲ್ಲಿಗೆ, ವಿನೋದ್ ಪ್ರಭಾಕರ್ ಹಾಗು ದರ್ಶನ್ ಅವರಿಬ್ಬರ ಮಧ್ಯೆ ಇರುವ ಆತ್ಮೀಯತೆ ಮೋರಿ ಪಾಲಾಗಿಲ್ಲ. ಜೈಲಿನಲ್ಲಿ ಇರುವ ನಟ ದರ್ಶನ್ ಅವರನ್ನು ನೋಡಲು ಮಿಕ್ಕ ಆಪ್ತರು ಮೀನಮೇಷ ಏಣಿಸುತ್ತಿದ್ದರೆ ನಟ ವಿನೋದ್ ಪ್ರಭಾಕರ್ ಮಾತ್ರ 'ಲೋಕ ಏನು ಬೇಕಾದ್ರೂ ಅಂದುಕೊಳ್ಳಲಿ, ನನ್ನ ಸ್ನೇಹಿತನನ್ನು ನೋಡಲು ಹೋಗುವುದು ನನ್ನ ಕರ್ತವ್ಯ' ಎಂದು ಹೇಳುವಂತೆ ಹೋಗಿ ಭೇಟಿಯಾಗಿ ಬಂದಿದ್ದಾರೆ. ಅಥವಾ, ನಟ ದರ್ಶನ್ ಅವರೇ ವಿನೋದ್ ಪ್ರಭಾಕರ್ ಅವರನ್ನು ಸ್ವತಃ ಹೇಳಿ ಕರೆಸಿಕೊಂಡಿರಲೂಬಹುದು. 

ಅದು ಹೇಗೆ ಆಗಿದ್ದರೂ ಅವರಿಬ್ಬರೂ ಈಗಲೂ ಒಳ್ಳೆಯ ಸ್ನೇಹಿತರಾಗಿಯೇ ಇದ್ದಾರೆ ಎನ್ನಲಂತೂ ತೊಂದರೆ ಇಲ್ಲ. ಒಟ್ಟಿನಲ್ಲಿ, ನಟ ದರ್ಶನ್ ಕೊಲೆ ಕೇಸಿನ ಆರೋಪಿಗಳಲ್ಲೊಬ್ಬರಾಗಿ ಜೈಲು ಸೇರಿರುವಾಗ ಅವರು ಮಾತನಾಡಿರುವ ಹಲವು ವಿಡಿಯೋಗಳು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿವೆ. ಅದರಲ್ಲಿ ಈ ವಿಡಿಯೋ ಕೂಡ ಒಂದು..!. ನಟ ದರ್ಶನ್ ಅವರು ಬೇಲ್ ಪಡೆದು ಅಥವಾ ನಿರಪರಾಧಿಯಾಗಿ ಯಾವತ್ತು ಹೊರಬರುತ್ತಾರೋ ಎಂದು 'ಡಿ ಬಾಸ್' ಅಭಿಮಾನಿಗಳು ಕಾಯುತ್ತಿರುವುದಂತೂ ಸುಳ್ಳಲ್ಲ. 

click me!