'ನನ್ನ ಪ್ರೀತಿಯ ರಾಮು' ಬೇರೆ ನಟರು ರಿಜೆಕ್ಟ್ ಮಾಡಿದ್ಯಾಕೆ? ದರ್ಶನ್ ಸೂಚಿಸಿದ್ದು ಪುನೀತ್ ಮ್ಯಾನೇಜರ್!

Published : Feb 13, 2025, 12:00 PM ISTUpdated : Feb 13, 2025, 12:52 PM IST
'ನನ್ನ ಪ್ರೀತಿಯ ರಾಮು' ಬೇರೆ ನಟರು ರಿಜೆಕ್ಟ್ ಮಾಡಿದ್ಯಾಕೆ? ದರ್ಶನ್ ಸೂಚಿಸಿದ್ದು ಪುನೀತ್ ಮ್ಯಾನೇಜರ್!

ಸಾರಾಂಶ

ದರ್ಶನ್ ಹುಟ್ಟುಹಬ್ಬದಂದು (ಫೆ.೧೬) ಅವರ 'ನನ್ನ ಪ್ರೀತಿಯ ರಾಮು' ಚಿತ್ರ ಮರುಬಿಡುಗಡೆಯಾಗುತ್ತಿದೆ. ಅನಾರೋಗ್ಯದಿಂದ ದರ್ಶನ್ ಹುಟ್ಟುಹಬ್ಬ ಆಚರಿಸುತ್ತಿಲ್ಲವಾದ್ದರಿಂದ ಅಭಿಮಾನಿಗಳಿಗಾಗಿ ಈ ಚಿತ್ರವನ್ನು ಮರುಬಿಡುಗಡೆ ಮಾಡಲಾಗುತ್ತಿದೆ. ೨೦೦೩ರಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಗೆಲುವು ಸಾಧಿಸಿರಲಿಲ್ಲ. ಆರಂಭದಲ್ಲಿ ಈ ಪಾತ್ರಕ್ಕೆ ದರ್ಶನ್ ಮೊದಲ ಆಯ್ಕೆಯಾಗಿರಲಿಲ್ಲ.

ದರ್ಶನ್ (Darshan) ನಟನೆಯಲ್ಲಿ 2003ರಲ್ಲಿ ತೆರೆಗೆ ಬಂದಿದ್ದ 'ನನ್ನ ಪ್ರೀತಿಯ ರಾಮು' ಚಿತ್ರವು (Nanna Preethiya Ramu) ಮರು ಬಿಡುಗಡೆ ಆಗುತ್ತಿದೆ.  ಈ ತಿಂಗಳು 16ರಂದು ನಟ ದರ್ಶನ್ ಹುಟ್ಟುಹಬ್ಬ. ಅಂದು ಈ ಚಿತ್ರವನ್ನು ರೀ-ರಿಲೀಸ್ ಮಾಡಲಿದ್ದಾರೆ. ಈ ಬಾರಿ ಅನಾರೋಗ್ಯದ ಹಿನ್ನೆಲೆಯಲ್ಲಿ ನಟ ದರ್ಶನ್‌ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಈ ಕಾರಣಕ್ಕೂ ಆಯ್ತು ಎಂಬಂತೆ, ನನ್ನ ಪ್ರೀತಿಯ ರಾಮು ಸಿನಿಮಾವನ್ನು ಮರುಬಿಡುಗಡೆ ಮಾಡಲಾಗುತ್ತಿದೆ. ದರ್ಶನ್‌ ಫ್ಯಾನ್ಸ್‌ ತಮ್ಮ ಬಾಸ್ ಹುಟ್ಟುಹಬ್ಬಕ್ಕೆ ಹೋಗಲು ಅಸಾಧ್ಯ. ಈ ಕಾರಣಕ್ಕೆ ಸಿನಿಮಾವನ್ನಾದ್ರೂ ನೋಡ್ಲಿ ಎಂಬುದು ಟೀಮ್ ಆಶಯ ಎನ್ನಲಾಗಿದೆ. 

ಹೌದು, ನಟ ದರ್ಶನ್ ಲೈಫ್ ಈಗ ಮೊದಲಿನಂತೆ ಇಲ್ಲ. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಆರೋಪಿಯಾಗಿ ಜೈಲು ಸೇರಿದ್ದ ನಟ ದರ್ಶನ್ ಈಗ ಜಾಮೀನು ಮೇಲೆ ಬಿಡುಗಡೆ ಆಗಿದ್ದಾರೆ. ಆದರೆ, ಅನಾರೋಗ್ಯದ ಹಿನ್ನೆಲೆಯಲ್ಲಿ ಅರ್ಧಕ್ಕೆ ನಿಂತುಹೋಗಿದ್ದ ಸಿನಿಮಾ ಶೂಟಿಂಗ್ ಸಹ ಮುಂದುವರೆಸಲಾಗುತ್ತಿಲ್ಲ. ನವಗ್ರಹದ ಬಳಿಕ ಇದೀಗ ಮತ್ತೊಂದು ಹಳೆಯ ಸಿನಿಮಾ ತೆರೆಗೆ ಬರುತ್ತಿದೆ. ನನ್ನ ಪ್ರೀತಿಯ ರಾಮು ಅಂದು, 2003ರಲ್ಲಿ ಬಾಕ್ಸ್‌ ಆಫೀಸ್‌ನಲ್ಲಿ ಗಳಿಕೆ ಮಾಡಿರಲಿಲ್ಲ. ಆದರೆ ದರ್ಶನ್ ನಟನೆ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗಿತ್ತು. 

ಮಲಯಾಳಂನ 'ವಸಂತಯುಂ ಲಕ್ಷ್ಮಿಯುಂ ಪಿನ್ನೆ ನೀಯುಂ' ಸಿನಿಮಾ ಕನ್ನಡವೂ ಸೇರದಂತೆ ತಮಿಳು ಹಾಗೂ ತೆಲುಗಿಗೆ ರೀಮೇಕ್ ಆಗಿತ್ತು. ಆದರೆ, ಮಿಕ್ಕೆಲ್ಲಾ ಭಾಷೆಗಳಿಗಿಂತ ಕನ್ನಡದಲ್ಲಿ ಈ ಚಿತ್ರವು ಚೆನ್ನಾಗಿ ಮೂಡಿ ಬಂದಿತ್ತು ಎನ್ನಲಾಗಿದೆ. ಆದರೆ, ಬಾಕ್ಸ್ ಆಫೀಸ್‌ನಲ್ಲಿ ಮಾತ್ರ ಗೆಲ್ಲದ ಕಾರಣಕ್ಕೆ ಮತ್ತೆ ದರ್ಶನ್ ಆಕ್ಷನ್ ಚಿತ್ರಗಳತ್ತ ಹೊರಳಿದ್ದರು. ಈ ಚಿತ್ರದ ಬಗೆಗಿನ ಸೀಕ್ರೆಟ್‌ ಒಂದನ್ನು ಚಿತ್ರದ ನಿರ್ದೇಶಕರಾದ 'ಸಂಜಯ್ ವಿಜಯ್' ಹೇಳಿಕೊಂಡಿದ್ದಾರೆ. ಅದು, ನನ್ನ ಪ್ರೀತಿಯ ರಾಮು ಚಿತ್ರಕ್ಕೆ ನಟ ದರ್ಶನ್ ಮೊದಲ ಆಯ್ಕೆ ಆಗಿರಲಿಲ್ಲ. 

ನಾನು ಸತ್ತಾಗ ಬೇರೆ ಯಾರು ಬರ್ತಾರೋ ಇಲ್ವೋ, ಆದ್ರೆ ಆತ ಮಾತ್ರ ಬಂದೇ ಬರ್ತಾನೆ: ವಿಷ್ಣುವರ್ಧನ್

ನಿರ್ದೇಶಕರಾದ ಸಂಜಯ್ ವಿಜಯ್ 'ನಾವು ರಾಮು ಪಾತ್ರಕ್ಕಾಗಿ ಕನ್ನಡದ ದೊಡ್ಡದೊಡ್ಡ ಸ್ಟಾರ್ ನಟರನ್ನು ಕೇಳಿದ್ದೆವು. ಆದರೆ, ಅವರೆಲ್ಲರೂ ಮಾಡಲ್ಲ ಅಂತ ಹೇಳಿದ ಮೇಲೆ ನಟ ದರ್ಶನ್ ಅವರನ್ನು ಸಂಪರ್ಕಿಸಿದ್ದೆವು. ಪುನೀತ್ ರಾಜ್‌ಕುಮಾರ್ ಮ್ಯಾನೇಜರ್ ರಾಜ್‌ಕುಮಾರ್ ಅವರು ನಮಗೆ ದರ್ಶನ್ ಹೆಸರು ಸಜೆಸ್ಟ್ ಮಾಡಿದ್ದಾರೆ. ಅದಕ್ಕೂ ಮೊದಲು ನಾವು ನಟ ಸುದೀಪ್ ಅವರನ್ನು ಭೇಟಿಯಾಗಿ ಆಯ್ಕೆ ಕೂಡ ಆಗಿತ್ತು. ಅಡ್ವಾನ್ಸ್‌ ಕೂಡ ಪಡೆದುಕೊಂಡಿದ್ದ ನಟ ಸುದೀಪ್ ಒಂದು ತಿಂಗಳ ಬಳಿಕ ಮಾಡೋಕೆ ಆಗಲ್ಲ ಅಂತ ಹೇಳಿ ಅಡ್ವಾನ್ಸ್ ವಾಪಸ್ ಕೊಟ್ಟಿದ್ದಾರೆ. 

ಬಳಿಕ ಶಿವರಾಜ್‌ಕುಮಾರ್ ಅವರಿಗೆ ಕಥೆ ಹೇಳಿ ಒಪ್ಪಿಸಿದ್ದೆವು. ಆದರೆ, ಅವರು ಕೂಡ ಯಾಕೋ ಮಾಡಲು ಮನಸ್ಸು ಮಾಡಲಿಲ್ಲ. ಕೆಲವರು ಜಗ್ಗೇಶ್ ಹೆಸರು ಸೂಚಿಸಿದ್ದರು. ಆದರೆ, ಅಂತಿಮವಾಗಿ ಈ ಪಾತ್ರ ಒಪ್ಪಿ ಮಾಡಿದ್ದು ನಟ ದರ್ಶನ್‌' ಎಂದು ಗುಟ್ಟು ಬಿಟ್ಟುಕೊಟ್ಟಿದ್ದಾರೆ. ನಟ ದರ್ಶನ್ ಈ ಪಾತ್ರಕ್ಕಾಗಿ ತುಂಬಾ ತಯಾರಿ ಮಾಡಿಕೊಂಡು ನಟಿಸಿದ್ದರು. ಕನ್ಣುಗುಡ್ಡೆಯ ಕಪ್ಪು ಭಾಗ ಕಾಣದಂತೆ ತಾವೇ ಟ್ರೈನ್ ಮಾಡಿಕೊಂಡಿದ್ದರು. ಆದರೆ, ಸಿನಿಮಾ ಗೆದ್ದಿರಲಿಲ್ಲ. ಈಗ ಮತ್ತೆ ರೀರಿಲೀಸ್ ಆಗ್ತಿದೆ, ಫಲಿತಾಂಶಕ್ಕೆ ಕಾದು ನೋಡಬೇಕಿದೆ. 

ಪ್ರೇಮಿಗಳ ದಿನದಂದು ಹವಾ ಎಬ್ಬಿಸಲು ಬರ್ತಿದೆ ಪ್ರಮೋದ್-ಪೃಥ್ವಿ ಅಂಬಾರ್ 'ಭುವನಂ ಗಗನಂ'..!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಬೆಂಗಳೂರಿನಲ್ಲಿ ಬಿಗ್ ಮ್ಯೂಸಿಕಲ್ ನೈಟ್; JAM JUNXION"ನಲ್ಲಿ ಚಂದನ್ ಶೆಟ್ಟಿ ಸೇರಿದಂತೆ ಪ್ರಸಿದ್ಧ ಬ್ಯಾಂಡ್ ಧಮಾಕಾ!
ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep