
‘ನಾವು ರಾಜಕೀಯ ವ್ಯಕ್ತಿಗಳು ಸಿನಿಮಾದವ್ರಿಗಿಂತ ಚೆನ್ನಾಗಿ ಆ್ಯಕ್ಟ್ ಮಾಡ್ತೀವಿ. ಚುನಾವಣೆ ಬಂದ್ರೆ 20 ರಿಂದ 30 ಕೋಟಿ ಖರ್ಚು ಮಾಡ್ತೀವಿ. ಇಂಥಾ ಹತ್ತು್ತ ಸಿನಿಮಾ ಮಾಡೋ ತಾಕತ್ತು ನನಗಿದೆ. ಆದರೆ ಇದು ನನಗಿಷ್ಟಇಲ್ಲದ ಕೆಲಸ. ಹೀಗಾಗಿ ಇದ್ಕೆ ದುಡ್ಡು ಕೊಡಲ್ಲ. ಮಗ ಸಿನಿಮಾಕ್ಕೆ ಬರೋದು ನನಗೆ ಇಷ್ಟಇಲ್ಲ. ಆದ್ರೆ ಬಂದಿದ್ದಾನೆ. ಇವನಿಗೆ ಒಳ್ಳೆಯದಾಗದಿದ್ದರೂ ಪರ್ವಾಗಿಲ್ಲ, ಇವನನ್ನು ಹಾಕಿ ಸಿನಿಮಾ ಮಾಡೋಕೆ ಹೊರಟವರಿಗೆ ಕೆಟ್ಟದಾಗೋದು ಬೇಡ’.
- ಹೀಗೆ ತಮ್ಮದೇ ಸ್ಟೈಲ್‌ನಲ್ಲಿ ಮಗ, ಗತವೈಭವ ಚಿತ್ರದ ನಾಯಕ ದುಷ್ಯಂತ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದು ಅವರ ತಂದೆ, ಗುಬ್ಬಿ ಶಾಸಕ ಶ್ರೀನಿವಾಸ್. ಗತವೈಭವ ಚಿತ್ರದ ಹೀರೋ ಇಂಟ್ರೋಡಕ್ಷನ್ ಟೀಸರ್ ಅನಾವರಣ ಕಾರ್ಯಕ್ರಮ ಈ ಸನ್ನಿವೇಶಕ್ಕೆ ಸಾಕ್ಷಿಯಾಯ್ತು.
ಇದಕ್ಕೂ ಮುನ್ನ ಮಾತನಾಡಿದ ನಾಯಕ ದುಷ್ಯಂತ್, ‘ನಾನು ತುಮಕೂರಿನವನು. ವಿದೇಶದಲ್ಲಿ ಎಲ್‌ಎಲ್‌ಬಿ ಓದಿದ್ದೇನೆ. ಬಾಲ್ಯದಿಂದಲೂ ಆ್ಯಕ್ಟಿಂಗ್ ಅಂದರೆ ಇಷ್ಟ. ಸಿನಿಮಾಗೆ ಹೊಸತಾಗಿ ಬರುವವರನ್ನು ಹೆದರಿಸಿ ಓಡಿಸೋರೆ ಜಾಸ್ತಿ. ಆದ್ರೆ ನಮ್ಮ ಚಿತ್ರದ ಟೀಸರ್ ಮೊದಲು ನೋಡಿದ್ದು ಅಪ್ಪು ಅವರು. ನನ್ನಂಥ ಹೊಸಬನಿಗೂ ಚೆನ್ನಾಗಿ ಆ್ಯಕ್ಟ್ ಮಾಡ್ತೀಯಾ ಅಂದು ಬೆನ್ನು ತಟ್ಟಿದ್ರು. ನನ್ನ ತಂದೆಗೆ ಇದೆಲ್ಲ ಇಷ್ಟಇಲ್ಲ. ಅವರು ಇದಕ್ಕೆ ಹಣ ಹಾಕಿಲ್ಲ. ಕಳೆದೊಂದು ವರ್ಷದಿಂದ ನಾವೇ ಕ್ರೌಡ್ ಫಂಡಿಂಗ್ ಮಾಡ್ತಿದ್ದೀವಿ’ ಎಂದರು.
ಸಿಂಪಲ್ ಸುನಿ, ‘ಎಲ್ಲಾ ಹುಡುಗ್ರು ಪಕ್ಕದ್ಮನೆ ಹುಡುಗೀನ ಪಟಾಯಿಸಿದ್ರೆ, ನಮ್ ಹೀರೋ ಪಕ್ಕದ್ಮನೆ ಪ್ರೊಡ್ಯೂಸರನ್ನೇ ಪಟಾಯಿಸಿದ್ದಾರೆ. ಚಿತ್ರದಲ್ಲಿ ಹೀರೋ ವಿಎಫ್‌ಎಕ್ಸ್ ಆರ್ಟಿಸ್ಟ್. ಅವನ ಕಲ್ಪನಾ ಲೋಕದ ಮೇಲೆ ಸಿನಿಮಾವಿದೆ. ಇದ್ರಲ್ಲಿ ವಾಸ್ಕೋಡಗಾಮ, ಸಮುದ್ರ ಮಥನ ಇತ್ಯಾದಿ ಕತೆಗಳೆಲ್ಲ ಬರುತ್ತವೆ’ ಎಂದರು. ಐಟಿ ಹಿನ್ನೆಲೆಯ ದೀಪಕ್ ತಿಮ್ಮಪ್ಪ ಹಾಗೂ ಸಿಂಪಲ್ ಸುನಿ ಬಂಡವಾಳ ಹೂಡಿದ್ದಾರೆ. ಲಹರಿ ವೇಲು, ನಿರ್ಮಾಪಕರಾದ ಪುಷ್ಕರ್, ಸುಪ್ರೀತ್, ನಿರ್ದೇಶಕರಾದ ಮಹೇಶ್, ಪವನ್ ಒಡೆಯರ್ ಚಿತ್ರತಂಡಕ್ಕೆ ಶುಭ ಕೋರಿದರು.
ವಿಲಿಯಂ ಡೇವಿಡ್ ಛಾಯಾಗ್ರಹಣ, ಭರತ್ ಬಿಜೆ ಅವರ ಸಂಗೀತ, ನಿರ್ಮಲ್ ಕುಮಾರ್ ಅವರ ವಿಎಫ್‌ಎಕ್ಸ್ ಚಿತ್ರಕ್ಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.