ಇಂದು ಯಲ್ಲೋ ಬೋರ್ಡ್ ಸಿನಿಮಾ ಬಿಡುಗಡೆ. ವೈರಲ್ ಆಯ್ತು ಕಿಚ್ಚ ಬಿಡುಗಡೆ ಮಾಡಿದ ಟೀಸರ್...
ಟ್ಯಾಕ್ಸಿ ಚಾಲಕನ ಕುರಿತಾದ ಕತೆಯೇ ‘ಯಲ್ಲೋ ಬೋರ್ಡ್’. ಪ್ರದೀಪ್ ನಟಿಸಿರುವ ಈ ಚಿತ್ರದ ಪ್ರಿ ರಿಲೀಸ್ ಈವೆಂಟ್ ಇತ್ತೀಚೆಗೆ ಅದ್ದೂರಿಯಾಗಿ ನಡೆಯಿತು. ಟ್ಯಾಕ್ಸಿ ಚಾಲಕರ ಸಮ್ಮುಖದಲ್ಲಿ ನಡೆದ ಈ ಸಮಾರಂಭದಲ್ಲಿ ನಟ ಸುದೀಪ್, ಐಎಎಸ್ ಶಿವರಾಮ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ತ್ರಿಲೋಕ್ ರೆಡ್ಡಿ ನಿರ್ದೇಶನ ಮಾಡಿರುವ ಈ ಚಿತ್ರವನ್ನು ನವೀನ್ ಗೌಡ ನಿರ್ಮಿಸಿದ್ದಾರೆ. ಅಹಲ್ಯಾ ಸುರೇಶ್, ಸ್ನೇಹಾ ನಾಯಕಿಯರಾಗಿ ನಟಿಸಿದ್ದಾರೆ. ಚಿತ್ರವು ಇಂದು(ಮಾ.4) ಅದ್ದೂರಿಯಾಗಿ ತೆರೆ ಮೇಲೆ ಬರುತ್ತಿದೆ.
ನನ್ನ ಪ್ರತಿ ಹೆಜ್ಜೆಯಲ್ಲೂ ಸುದೀಪ್ ಅಣ್ಣ ಇರ್ತಾರೆ, ಅವರೇ ನನ್ನ ಗಾಡ್‌ಫಾದರ್: ನಟ ಪ್ರದೀಪ್‘ಪ್ರದೀಪ್ ನಮ್ಮ ಮನೆಯ ಮಗ. ಯಲ್ಲೋ ಬೋರ್ಡ್ ಚಿತ್ರವನ್ನು ನಾನು ನೋಡಿದ್ದೇನೆ. ತುಂಬಾ ಚೆನ್ನಾಗಿ ಸಿನಿಮಾ ಮಾಡಿದ್ದಾರೆ. ಒಳ್ಳೆಯ ಸಂದೇಶ ಇದೆ. ಕ್ಯಾಬ್ ಚಾಲಕರಿಗೆ ಗೌರವ ಕೊಡುವ ಕತೆ ಇದೆ. ಹೀಗಾಗಿ ಇದು ಪ್ರತಿಯೊಬ್ಬರ ನೆಚ್ಚಿನ ಸಿನಿಮಾ ಆಗಲಿದೆ’ ಎಂದು ಸುದೀಪ್ ಹೇಳಿದರು.
ಪ್ರದೀಪ್ ಇಲ್ಲಿ ಟ್ಯಾಕ್ಸಿ ಚಾಲಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗೆ ಭೇಟಿ ಕೊಟ್ಟು ಟ್ಯಾಕ್ಸಿ ಚಾಲಕರ ಜತೆ ಮಾತುಕತೆ ಮಾಡಿರುವ ಪ್ರದೀಪ್, ಕ್ಯಾಬ್ ಚಾಲಕರನ್ನು ಪ್ರತಿನಿಧಿಸುವ ಪಾತ್ರ ಮಾಡಿರುವುದನ್ನು ಹೇಳಿಕೊಂಡರು.
ಈ ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಒಂದು ರಾರಯಪ್ ಸಾಂಗ್ ಹಾಡಿದ್ದಾರೆ. ‘ಆಟೋರಾಜ ಎಂದ ಕೂಡಲೇ ಶಂಕರ್‌ನಾಗ್ ನೆನಪಾಗುವಂತೆ, ಯಲ್ಲೋ ಬೋರ್ಡ್ ಎಂದಾಕ್ಷಣ ಪ್ರದೀಪ್ ಅವರು ನೆನಪಾಗುತ್ತಾರೆ. ಆ ಮಟ್ಟಿಗೆ ಸಿನಿಮಾ ಚೆನ್ನಾಗಿದೆ. ಟ್ಯಾಕ್ಸಿಗಳಿಗೆ ನಮ್ಮ ಸಿನಿಮಾ ಬ್ರಾಂಡ್ ಇದ್ದಂತೆ. ಟೀಸರ್ ಹಾಗೂ ಟ್ರೇಲರ್‌ನಂತೆಯೇ ಚಿತ್ರ ಕೂಡ ದೊಡ್ಡ ಮಟ್ಟದಲ್ಲಿ ಹಿಟ್ ಆಗಲಿದೆ’ ಎನ್ನುವ ಭರವಸೆ ನಿರ್ದೇಶಕ ತ್ರಿಲೋಕ್ ರೆಡ್ಡಿ ಅವರದ್ದು.