ಹುಟ್ಟುಕಿವುಡರಾಗಿದ್ದ ನಟ ಬಾಲಣ್ಣ ಬದುಕಿನಲ್ಲಿ ನಡೆದ ಘನಘೋರ ದುರಂತವೇನು?

By Shriram Bhat  |  First Published Sep 4, 2024, 6:16 PM IST

ನಟ ಬಾಲಕೃಷ್ಣ ಅವರು ಚಿಕ್ಕವರಿದ್ದಾಗ ತುಂಬಾ ನೋವಿನ ದಿನಗಳನ್ನು ನೋಡಿದ್ದಾರೆ. ಅವರ ತಂದೆ-ತಾಯಿ ಜೀವನೋಪಾಯಕ್ಕೆ ಕೂಲಿ ಕೆಲಸ ಮಾಡುತ್ತ ಇದ್ದರು. ಆಗ ಹೇಗೋ ಜೀವನ ತಕ್ಕಮಟ್ಟಿಗೆ ನಡೆಯುತ್ತ ಇರುತ್ತದೆ. ಆದರೆ, ಅದೇ ವೇಳೆ..


ಕನ್ನಡ ಚಿತ್ರರಂಗದಲ್ಲಿ ನಟ ಬಾಲಕೃಷ್ಣ (Actor Balakrishna) ಅವರಂಥ ಹಾಸ್ಯ ಕಲಾವಿದರು ಬಂದಿದ್ದು ಅತ್ಯಂತ ವಿರಳ ಎಂದೇ ಹೇಳಬೇಕು. ಚಿಕ್ಕ ವಯಸ್ಸಲ್ಲೇ ಅವರಿಗೆ ಸರಿಯಾಗಿ ಕಿವಿ ಕೇಳಿಸುತ್ತಿರಲಿಲ್ಲ. ಅದೇ ಕಾರಣವೇ ಅಲ್ಲದಿದ್ದರೂ ಅವರಿಗೆ ಶಾಲಾ ಶಿಕ್ಷಣದ ಬಗ್ಗೆಯೂ ಆಸಕ್ತಿ ಇರಲಿಲ್ಲ. ಬಾಲಕೃಷ್ಣ ಅವರು ಬಾಲ್ಯದಲ್ಲಿ ಇದ್ದಾಗ ಅವರ ಮನೆಯಲ್ಲಿ ಬಹಳ ಬಡತನವಿತ್ತು. ಅವರಿಗೆ ಹೊಟ್ಟೆ ತುಂಬಿಸಿಕಕೊಳ್ಳುವುದು ಕೂಡ ಕಷ್ಟವೇ ಆಗಿತ್ತು ಎನ್ನಲಾಗಿದೆ. 

ನಟ ಬಾಲಕೃಷ್ಣ ಅವರು ಚಿಕ್ಕವರಿದ್ದಾಗ ತುಂಬಾ ನೋವಿನ ದಿನಗಳನ್ನು ನೋಡಿದ್ದಾರೆ. ಅವರ ತಂದೆ-ತಾಯಿ ಜೀವನೋಪಾಯಕ್ಕೆ ಕೂಲಿ ಕೆಲಸ ಮಾಡುತ್ತ ಇದ್ದರು. ಆಗ ಹೇಗೋ ಜೀವನ ತಕ್ಕಮಟ್ಟಿಗೆ ನಡೆಯುತ್ತ ಇರುತ್ತದೆ. ಆದರೆ, ಅದೇ ವೇಳೆ ಅವರ ತಂದೆ ದೊಡ್ಡ ಖಾಯಿಲೆಗೆ ತುತ್ತಾಗುತ್ತಾರೆ. ಆಗ ಅವರಿದ್ದ ಅರಸೀಕೆರೆಯ ಆಸ್ಪತ್ರೆಗೆ ತೋರಿಸಿದಾಗ ಅಲ್ಲಿನ ವೈದ್ಯರು 'ಜೀವ ಉಳಿಬೇಕು ಅಂದ್ರೆ ನೀವು ತಕ್ಷಣ ಬೆಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಿ' ಎನ್ನುತ್ತಾರೆ. 

Latest Videos

undefined

ಎಣ್ಣೆ-ಸೀಗೆಕಾಯಿಯಂತಿದ್ದ ಹೀರೋಗಳು ಈಗ ಕುಚಿಕುಗಳಾದ್ರಾ? ಟಾಲಿವುಡ್ ಸ್ಟಾರ್ಸ್‌ ಮಧ್ಯೆ ಏನ್ ನಡಿತಿದೆ?

ಬಾಲಕೃಷ್ಣ ಅವರ ತಂದೆಯ ಚಿಕಿತ್ಸೆಗೆ ಬೇಕಾಗಿದ್ದು ನಾಲ್ಕು ರೂಪಾಯಿ. ಆದರೆ, ಬೆಂಗಳೂರಿಗೆ ಹೋಗಿ ಬರುವ ಖರ್ಚಿಗೂ ದುಡ್ಡು ಹೊಂದಿಸಬೇಕಲ್ಲ. ಹೀಗಾಗಿ ಅವರ ತಾಯಿ ಆರಸಿಕೆರೆಯ ಮಂಡಿ ವ್ಯಾಪಾರಿಯ ಪತ್ನಿ ಒಬ್ಬರಿಗೆ ಎಂಟು ರೂಪಾಯಿಗೆ ಮಗ ಬಾಲಕೃಷ್ಣ ಅವರನ್ನು ಮಾರಿದ್ದರಂತೆ. ಆದರೆ, ಬಳಿಕ ತಂದೆ ಚಿಕಿತ್ಸೆ ಪಡೆದು ಬುಕಿ ಬಂದಾರೇ ಎಂಬ ಬಗ್ಗೆ ಈಗ ಮಾಹಿತಿ ಇಲ್ಲ. 

ಆದರೆ, ಪೋಷಕರೇ ತಮ್ಮ ಕಷ್ಟಕ್ಕಾಗಿ ಬಾಲಕೃಷ್ಣ ಅವರನ್ನು ಮಾರಬೇಕಾಯಿತು. ಆದರೆ ಮಂಡಿ ವ್ಯಾಪಾರಿಯ ಮನೆಯಲ್ಲಿ ಬೆಳೆದ ಬಾಲಕೃಷ್ಣ ಅವರು ಮುಂದೊಂದು ದಿನ ಕನ್ನಡ ಚಿತ್ರರಂಗದ ಬಹುದೊಡ್ಡ ಹಾಸ್ಯ ಕಲಾವಿದರಾಗಿ ಬೆಳೆದರು. ಆದರೆ, ಆಗ ಮಾಧ್ಯಮಗಳು ಅಷ್ಟಾಗಿ ಇರದಿದ್ದ, ಹಾಗೂ ಸಾಮಾಜಿಕ ಜಾಲತಾಣಗಳು ಅಸ್ತಿತ್ವಕ್ಕೇ ಬರದಿದ್ದ ಕಾಲವಾದ್ದರಿಂದ ಅವರ ಬದುಕಿನ ಬವಣೆ ಹೊರಜಗತ್ತಿಗೆ ತಿಳಿಯಲಿಲ್ಲ. 

ನಿಮ್ಮಿಂದ ಲೈಫಲ್ಲಿ ತುಂಬಾ ಕಲಿಯುತ್ತಿದೀನಿ, ಥಾಂಕ್ ಯು ಬಾಸ್: ನಟಿ ತನಿಷಾ ಕುಪ್ಪಂಡ!

ಒಟ್ಟಿನಲ್ಲಿ, ಕನ್ನಡ ಚಿತ್ರರಂಗದಲ್ಲಿ ಮಿಂಚಿರುವ ಹಲವಾರು ಹಿರಿಯ ಕಲಾವಿದರ ಬದುಕಿನ ಬವಣೆ ಇತ್ತೀಚಿಗೆ ಮಾಧ್ಯಮಗಳು ಹಾಗು ಸಾಮಾಜಿಕ ಮಾಧ್ಯಮಗಳ ಮೂಲಕ ಹೊರಜಗತ್ತಿಗೆ ಬಹಿರಂಗ ಆಗುತ್ತಿವೆ. ಆದರೆ, ಅಂದು ಅವರು ಪಟ್ಟಿದ್ದ ಕಷ್ಟ, ಬದುಕಿದ್ದ ರೀತಿ ಇಂದು ನೋಡಿದರೆ ಎಂಥವರಿಗೂ ಕಣ್ಣಲ್ಲಿ ನೀರು ಬರುತ್ತದೆ. ನಟ ಬಾಲಕೃಷ್ಣ ಅವರ ಬದುಕಿನ ಕಥೆ ಕೂಡ ಇದಕ್ಕೆ ಹೊರತಾಗಿಲ್ಲ. 

click me!