ಸ್ಯಾಂಡಲ್‌ವುಡ್‌ ನಲ್ಲಿ ಮತ್ತೆ ಆರಂಭವಾಗುತ್ತಾ ಮೀಟೂ ಅಭಿಯಾನ, ಸರ್ಕಾರಕ್ಕೆ ಸುದೀಪ್,ರಮ್ಯಾ ಸೇರಿ 153 ಮಂದಿ ಪತ್ರ!

By Gowthami K  |  First Published Sep 4, 2024, 4:03 PM IST

ನ್ಯಾ। ಹೇಮಾ ಸಮಿತಿ ವರದಿಯ ನಂತರ, ಕನ್ನಡ ಚಿತ್ರರಂಗದಲ್ಲೂ ಲೈಂಗಿಕ ಕಿರುಕುಳದ ಬಗ್ಗೆ ಚರ್ಚೆಗಳು ಮತ್ತೆ ಪ್ರಾರಂಭವಾಗಿವೆ. ಚೇತನ್ ಅಹಿಂಸಾ ನೇತೃತ್ವದಲ್ಲಿ 153 ನಟ ನಟಿಯರು ಸರ್ಕಾರಕ್ಕೆ ಪತ್ರ ಬರೆದು, ಮಲಯಾಳಂ ಚಿತ್ರರಂಗದ ಮಾದರಿಯಲ್ಲಿ ಕನ್ನಡ ಚಿತ್ರರಂಗದಲ್ಲೂ ಸಮಿತಿ ರಚನೆಗೆ ಒತ್ತಾಯಿಸಿದ್ದಾರೆ.


ಬೆಂಗಳೂರು (ಸೆ.4): ಕೇರಳದ ಮಲಯಾಳಂ ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ, ಸಲಿಂಗಕಾಮ ವಿಚಾರ ನಡೆದಿದೆ ಎಂದು  ನ್ಯಾ। ಹೇಮಾ ಸಮಿತಿ  ವರದಿ ಕೊಟ್ಟ ಬೆನ್ನಲ್ಲೇ , ಅನೇಕ ದಿಗ್ಗಜ ನಟರ ಹೆಸರು ಬೆಳಕಿಗೆ ಬರುತ್ತಿದೆ. ಮಲಯಾಳಂ ಸಿನಿರಂಗದಲ್ಲಿ ಸಾಲು ಸಾಲು ಲೈಂಗಿಕ ಹಗರಣ ಆರೋಪ ಕೇಳಿ ಬರುತ್ತಿದೆ. ಇದರ  ನಡುವೆಯೇ ಎಲ್ಲಾ ಚಿತ್ರ ಎಚ್ಚೆತ್ತುಕೊಂಡು ಕಮಿಟಿ ರಚನೆ ಮಾಡಬೇಕು ಎಂದು ಪಟ್ಟು ಹಿಡಿದಿದೆ.

ಕೆಲ ದಿನಗಳ ಹಿಂದಷ್ಟೇ ಲೈಂಗಿಕ ಕಿರುಕುಳದ ಬಗ್ಗೆ ಮಾತನಾಡಿದ ತೆಲುಗಿನ ನಟಿ ಸಮಂತಾ ತೆಲುಗು ಚಿತ್ರರಂಗದಲ್ಲೂ ಮಹಿಳೆಯ ಮೇಲಿನ ಲೈಂಗಿಕ ಕಿರುಕುಳ ಹಾಗೂ ಇತರೆ ಸಮಸ್ಯೆಗಳನ್ನು ಅಧ್ಯಯನ ಆಗಬೇಕೆಂದು ಒತ್ತಾಯಿಸಿದ್ದರು. ಇದಕ್ಕೆ ಹಲವರು ದನಿಗೂಡಿಸಿದ್ದರು.

Latest Videos

undefined

IVF ಬಿಟ್ಟು ಸರೋಗಸಿಯಿಂದ ಮಗು ಪಡೆದಿದ್ಯಾಕೆಂದು ಬಹಿರಂಗಪಡಿಸಿದ ನಟಿ ಪ್ರೀತಿ ಜಿಂಟಾ

ಇದರ ಬೆನ್ನಲ್ಲೇ ಸ್ಯಾಂಡಲ್‌ ವುಡ್‌ ಕೂಡ ಈಗ ಎಚ್ಚೆತ್ತುಕೊಂಡಿದೆ. ಕನ್ನಡ ಚಿತ್ರರಂಗದ ಹಲವು ನಟಿಯರು ಕನ್ನಡದಲ್ಲೂ ಇದೇ ರೀತಿಯ ಕಮಿಟಿ ರಚಿಸಿ ಎಂದು ಸರ್ಕಾರಕ್ಕೆ  ಒತ್ತಾಯಿಸಿದ್ದಾರೆ. ಈ ಬಗ್ಗೆ ಪತ್ರ ಬರೆದಿದ್ದು, ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ನೇತೃತ್ವದಲ್ಲಿ 153 ಮಂದಿ ಈ ಪತ್ರಕ್ಕೆ ಸಹಿ ಹಾಕಿದ್ದಾರೆ.

ಸ್ಯಾಂಡಲ್‌ವುಡ್‌ ನಲ್ಲಿ ಮೀ ಟೂ ಅಭಿಯಾನವಾದಾಗ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುವ ಮಹಿಳೆಯರ ಸಮಸ್ಯೆಗಳಿಗಾಗಿ ಈ ಹಿಂದೆ ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಇಕ್ವಾಲಿಟಿ (FIRE) ರಚಿಸಲಾಗಿತ್ತು. ಇದರಲ್ಲಿ ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ, ನಿರ್ದೇಶಕಿ ಕವಿತಾ ಲಂಕೇಶ್  ಸೇರಿ ಹಲವರು ಇದ್ದಾರೆ.  2017ರಲ್ಲಿ ಇದನ್ನು ಹುಟ್ಟುಹಾಕಲಾಯ್ತು. ಇದೀಗ ಮತ್ತೆ ಈ ಕಮಿಟಿ ಲೈಂಗಿಕ ಕಿರುಕುಳದ ವಿರುದ್ಧ ನಿಂತಿದೆ.

ಇದೀಗ ಕನ್ನಡ ಚಲನಚಿತ್ರೋದ್ಯಮದಲ್ಲಿ ಮಹಿಳೆಯರು ಎದುರಿಸುತ್ತಿರುವ ಲೈಂಗಿಕ ಕಿರುಕುಳ ಸೇರಿದಂತೆ ಸಮಸ್ಯೆಗಳನ್ನು ಅಧ್ಯಯನ ಮಾಡಿ ವರದಿ ಮಾಡಲು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿಯನ್ನು ರಚಿಸುವಂತೆ ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಇಕ್ವಾಲಿಟಿ (ಫೈರ್)  ಒತ್ತಾಯಿಸಿದೆ. ಜೊತೆಗೆ ಮಹಿಳೆಯರು ಕನ್ನಡ ಚಿತ್ರರಂಗದಲ್ಲಿ ಆರೋಗ್ಯಕರವಾಗಿ ಹಾಗೂ ಸಮಾನವಾಗಿ ಕೆಲಸ ಮಾಡುವಂತೆ ನಿಯಮಗಳನ್ನು ತರುವಂತೆ  ಒತ್ತಾಯಿಸಿದೆ.

ಹಂಸಲೇಖ ಇದ್ರೆ ಶೋ ನೋಡಲ್ಲ, ಸರಿಗಮಪ ಬಹಿಷ್ಕಾರಕ್ಕೆ ಸೋಷಿಯಲ್‌ ಮೀಡಿಯಾದಲ್ಲಿ ಕರೆ!

ಲಿಂಗ ನ್ಯಾಯವನ್ನು ಪ್ರತಿಪಾದಿಸುವ ಕನ್ನಡ ಚಲನಚಿತ್ರೋದ್ಯಮದ ಮತ್ತು ವಿವಿಧ ಕ್ಷೇತ್ರಗಳ 153 ವ್ಯಕ್ತಿಗಳು ಈ ಅರ್ಜಿಗೆ ಸಹಿ ಹಾಕಿದ್ದಾರೆ.   FIRE ಅಧ್ಯಕ್ಷೆ ನಿರ್ದೇಶಕಿ ಕವಿತಾ ಲಂಕೇಶ್, ಕಾರ್ಯದರ್ಶಿ ಚೇತನ್ ಅಹಿಂಸಾ, ನಟಿಯರಾದ ರಮ್ಯಾ, ಶ್ರುತಿ ಹರಿಹರನ್, ಆಶಿಕಾ ರಂಗನಾಥ್, ಐಂದ್ರಿತಾ ರೇ, ಅಮೃತಾ ಅಯ್ಯಂಗಾರ್, ಪೂಜಾ ಗಾಂಧಿ, ಚೈತ್ರಾ ಜೆ ಆಚಾರ್, ಧನ್ಯಾ ರಾಮ್‌ಕುಮಾರ್, ಸಂಯುಕ್ತ ಹೆಗಡೆ, ಶ್ರದ್ಧಾ ಶ್ರೀನಾಥ್, ಕಿಶೋರ್, ನಿಶ್ವಿಕಾ ನಾಯ್ಡು, ಸಂಗೀತಾ ಭಟ್ , ನೀತು ಶೆಟ್ಟಿ, ಮಾನ್ವಿತಾ, ಸಾನ್ವಿ ಶ್ರೀವಾಸ್ತವ್,  ವಿನಯ್ ರಾಜ್‌ಕುಮಾರ್, ನಟ ಸುದೀಪ್‌, ಕಿಶೋರ್, ದಿಗಂತ್, ನಿರ್ದೇಶಕ ಪವನ್ ಒಡೆಯರ್‌ ಸೇರಿದಂತೆ ಕಿರುತೆರೆ ನಟ ನಟಿಯರು ಸೇರೊ ಒಟ್ಟು  153 ಮಂದಿ ಮನವಿ ಪತ್ರಕ್ಕೆ  ಸಹಿ ಹಾಕಿದ್ದಾರೆ.

2018ರಲ್ಲಿ ಕನ್ನಡ ಚಿತ್ರರಂಗ ಮಾತ್ರವಲ್ಲದೆ ಭಾರತಾದ್ಯಾಂತ ಚಿತ್ರ ರಂಗದಲ್ಲಿ MeToo ಅಭಿಯಾನ ದೊಡ್ಡ ಮಟ್ಟದಲ್ಲಿ ಸುದ್ದಿಯಾಯ್ತು. ಬಾಲಿವುಡ್ ನಲ್ಲಿ ನಟಿ ತನುಶ್ರೀ ದತ್ತ ಮಾಡಿದ ಆರೋಪ ಅಂದು ಅಭಿಯಾನಕ್ಕೆ ನಾಂದಿ ಹಾಡಿತು.

ತನುಶ್ರೀ ದತ್ತಾ 2018ರಲ್ಲಿ ನಟ ನಾನಾ ಪಾಟೇಕರ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಬಳಿಕ ಅದು ‘ಮೀಟೂ’ ಅಭಿಯಾನಕ್ಕೆ ನಾಂದಿಯಾಗಿತ್ತು. ಆದರೆ, ನಾನಾ ಪಾಟೇಕರ್ ತನುಶ್ರೀ ಅವರ ಆರೋಪಗಳನ್ನು ನಿರಾಕರಿಸಿದ್ದರು. ಕನ್ನಡದಲ್ಲಿ ಆಗ ಶ್ರುತಿ ಹರಿಹರನ್ ಸೇರಿ ಅನೇಕ ನಟಿಯರು ಮಿ ಟೂ ಬಗ್ಗೆ ದನಿ ಎತ್ತಿದರು.

click me!