ಎಸ್‌ ನಾರಾಯಣ್‌ ಪುತ್ರ ಪವನ್‌ ನಿರ್ದೇಶನದ ಸಿನಿಮಾ 'ನವಮಿ'

Kannadaprabha News   | Asianet News
Published : Oct 28, 2020, 09:31 AM ISTUpdated : Oct 28, 2020, 09:46 AM IST
ಎಸ್‌ ನಾರಾಯಣ್‌ ಪುತ್ರ ಪವನ್‌ ನಿರ್ದೇಶನದ ಸಿನಿಮಾ 'ನವಮಿ'

ಸಾರಾಂಶ

ನಿರ್ದೇಶಕ ಎಸ್‌ ನಾರಾಯಣ್‌ ಪುತ್ರ ಪವನ್‌ ನಿರ್ದೇಶನದ ಚಿತ್ರದ ಶೀರ್ಷಿಕೆ ಇತ್ತೀಚೆಗೆ ಅನಾವರಣಗೊಂಡಿತು. ‘ನವಮಿ 9.9.1999’ ಎಂಬುದು ಚಿತ್ರದ ಹೆಸರು.   

ಟೈಟಲ್‌ ಜತೆಗೆ ಚಿತ್ರದ ಫಸ್ಟ್‌ ಲುಕ್‌ ಕೂಡ ಬಿಡುಗಡೆ ಆಯ್ತು. ಪವನ್‌ ಮೊದಲ ನಿರ್ದೇಶನದ ಸಿನಿಮಾ ಇದು. ಆಯುಧ ಪೂಜೆಯ ಅಂಗವಾಗಿ ನಿರ್ದೇಶಕರಾದ ಎಸ್‌ ನಾರಾಯಣ್‌, ಶಶಾಂಕ್‌, ರವಿ ಶ್ರೀವತ್ಸ, ಸಿಂಪಲ ಸುನಿ, ಪವನ್‌ ಒಡೆಯರ್‌, ಎ ಪಿ ಅರ್ಜುನ್‌, ಚಂದ್ರಶೇಖರ್‌ ಬಂಡಿಯಪ್ಪ, ಕದರ್‌ ಕುಮಾರ್‌ ಹಾಗೂ ಅಭಿರಾಮ ಸೇರಿದಂತೆ ಒಂಭತ್ತು ಮಂದಿಯಿಂದ ಟೈಟಲ್‌ ಹಾಗೂ ಪೋಸ್ಟರ್‌ ಬಿಡುಗಡೆ ಮಾಡಿಸಿದ್ದಾರೆ.

ಎಸ್‌ ನಾರಾಯಣ್‌ ಪುತ್ರ ಪಂಕಜ್‌ ಆಯ್ತು, ಈಗ ಇನ್ನೊಬ್ಬ ಮಗ ನಟನಾಗಿ ಲಾಂಚ್! 

‘ಚಿರಾ ಮುತ್ತು ಚಿಸೌ ರತ್ನ’ ಎನ್ನುವ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸುತ್ತಿರುವ ಪವನ್‌, ತಮ್ಮ ನಟನೆಯ ಮೊದಲ ಸಿನಿಮಾ ತೆರೆ ಕಾಣುವ ಮೊದಲೇ ನಿರ್ದೇಶಕನ ಕ್ಯಾಪು ತೊಟ್ಟಿದ್ದಾರೆ. ನಟ ಯಶಸ್‌ ಅಭಿ ಚಿತ್ರದ ನಾಯಕ.

 

ನಂದಿನಿ ಗೌಡ ಚಿತ್ರದ ನಾಯಕಿ. ಯಶಸ್‌ ಅಭಿ ಹಾಗೂ ಕೃಷ್ಣ ಗುಡೆಮಾರನಹಳ್ಳಿ ಚಿತ್ರಕಥೆ, ಕತೆ ಬರೆದಿದ್ದಾರೆ. ಎಸ್‌ ನಾರಾಯಣ್‌, ಶಂಕರ್‌ ಅಶ್ವಥ್‌, ಓಂ ಪ್ರಕಾಶ್‌ ರಾವ್‌, ಹುಚ್ಚ ವೆಂಕಟ್‌, ಸಂದೀಪ್‌, ಅನುಶ್ರೀ, ಪವಿತ್ರ, ಕುರಿಬಾಂಡ್‌ ಸುನೀಲ…, ಅರುಣ ಬಾಲರಾಜ್‌ ತಾರಾಗಣವಿದೆ. ಪಿಕೆಎಚ್‌ ದಾಸ್‌ ಕ್ಯಾಮೆರಾ, ಧರ್ಮ ಸಂಗೀತ ಚಿತ್ರಕ್ಕಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಸುದೀಪ್​ಗೆ ಸ್ತ್ರೀದೋಷ ಇದೆಯಾ? ಬಹು ದೊಡ್ಡ ರಹಸ್ಯ ರಿವೀಲ್​ ಮಾಡಿದ ಕಿಚ್ಚ ಹೇಳಿದ್ದೇನು?
Karna Serial: ಸಂಜಯ್‌ ಕುತಂತ್ರಕ್ಕೆ ಬಲಿಯಾದ ನಿತ್ಯಾ: ಈಗ ಕರ್ಣನ ಜೊತೆ ಅಸಲಿ ಮದುವೆ ಆಗ್ಲೇಬೇಕು! ನಿಧಿ ಕಥೆ ಏನು?