ಚಾರ್ಲಿ ನೋಡಲು ಕಾತುರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಕೊರೋನಾ ಕೊಡ್ತು ಶಾಕ್. ಆದರೇನು ಮಾಡೋದು ರಕ್ಷಿತ್ ಈ ಕಾರಣಕ್ಕಾದರೂ ವಿದೇಶಕ್ಕೆ ಹೋಗಲೇಬೇಕು.....
ಸ್ಯಾಂಡಲ್‌ವುಡ್ ಟ್ಯಾಲೆಂಟೆಡ್ ನಿರ್ದೇಶಕ ಹಾಗೂ ನಟ ರಕ್ಷಿತ್ ಶೆಟ್ಟಿ 'ಚಾರ್ಲಿ 777' ಸಿನಿಮಾ ಚಿತ್ರೀಕರಣದಲ್ಲಿ ಇಷ್ಟು ದಿನಗಳ ಕಾಲ ಬ್ಯುಸಿಯಾಗಿದ್ದರು ಆದರೆ ಮಹಾಮಾರಿ ಕೊರೋನಾ ವೈರಸ್ ಅಟ್ಟಹಾಸದಿಂದ ಚಿತ್ರೀಕರಿಸುವುದನ್ನು ರದ್ದು ಮಾಡಬೇಕಾದ ಪರಿಸ್ಥಿತಿ ಎದುರಾಯ್ತು. ಆದರೆ ಈಗ ಅನಿವಾರ್ಯವಾಗಿ ರಕ್ಷಿತ್ ಶೆಟ್ಟಿ ವಿದೇಶಕ್ಕೆ ಹೋಗಬೇಕಿದೆ.
ರಕ್ಷಿತ್ ಶೆಟ್ಟಿ ಮಾಡಿದ ಸೈಲೆಂಟ್ ಕೆಲಸವನ್ನು ಲೀಕ್ ಮಾಡಿದ ಪ್ರಥಮ್!
undefined
ಸ್ಯಾಂಡಲ್‌ವುಡ್ ನಿರೀಕ್ಷಿತ ಸಿನಿಮಾ 'ಚಾರ್ಲಿ 777' ದಿನೇ ದಿನೇ ಅಭಿಮಾನಿಗಳ ಕುತೂಹಲ ಹೆಚ್ಚಿಸುತ್ತಿದೆ. ಇದಕ್ಕೆ ಮುಖ್ಯವಾದ ಕಾರಣವೇ ಅಲ್ಲಿರುವ ನಾಯಿ ಹಾಗೂ ರಕ್ಷಿತ್ ಕಾಂಬಿನೇಷನ್. ಸಿನಿಮಾ ಬಹುತೇಹ ಸಿದ್ಧವಾಗಿದ್ದು ಮುಖ್ಯ ಭಾಗವೊಂದನ್ನು ಹಿಮಾಚಲ ಪ್ರದೇಶದಲ್ಲಿ ಚಿತ್ರೀಕರಿಸಬೇಕಾಗಿದ್ದು ಹೊರಡಲು ಸಿದ್ಧತೆ ಮಾಡಿಕೊಂಡಿದ್ದರು ಆದರೆ ಲಾಕ್‌ಡೌನ್ ಘೋಷಣೆ ಮಾಡಿದ ಕಾರಣ ಸಾಧ್ಯವಾಗಲಿಲ್ಲ.
ಆದರೀಗ ಲಾಕ್‌ಡೌನ್ ಫ್ರೀ ಮಾಡುವ ಸಮಯ ಸನಿಹವಾಗುತ್ತಿದೆ ಆದರೆ ಅಷ್ಟರಲ್ಲಿ ಹಿಮಾಚಲ ಪ್ರದೇಶದಲ್ಲಿ ಮಂಜು ಬೀಳುವುದು ಕಡಿಮೆ ಆಗುತ್ತಿದೆ ಈ ಕಾರಣ ವಿದೇಶಕ್ಕೆ ಹೋಗಿಯೇ ಚಿತ್ರೀಕರಿಸಬೇಕಾಗಿದೆ. ಅದು ನವೆಂಬರ್‌ನಲ್ಲಿ ಮಾತ್ರ ಸಾಧ್ಯವಾಗುತ್ತದೆ.
ಲಾಕ್‌ಡೌನ್ ಆದ್ಮೇಲೆ ಉಡುಪಿ:
ಕೊರೋನಾ ವೈರಸ್ ಲಾಕ್‌ಡೌನ್ ಪ್ರಾರಂಭದಿಂದಲ್ಲೂ ಬೆಂಗಳೂರಿನಲ್ಲಿ ಒಬ್ಬರೆ ಇರುವ ರಕ್ಷಿತ್ ಊರು, ಮನೆ, ಅಮ್ಮ , ಅಣ್ಣ ಹಾಗೂ ಅಣ್ಣನ ಮಕ್ಕಳನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಹೋದರೆ ಕ್ವಾರಂಟೈನ್ ಹಾಕಲಾಗುತ್ತದೆ ಎಂದು ತಡೆಯುತ್ತಿರುವೆ ಆದರೆ ಮನೆ ಸ್ವಲ್ಪ ರಿನೋವೇಶನ್ ಮಾಡಿಸುವುದು ಇದೆ. ಇದೆಲ್ಲಾ ಮುಗಿಯುವ ಹೊತ್ತಿಗೆ ಲಾಕ್‌ಡೌನ್ ಪ್ರೀ ಆಗುತ್ತದೆ ಎಂದು ತಮ್ಮ ಲಾಕ್‌ಡೌನ್ ದಿನಚರಿ ಬಗ್ಗೆ ಮಾತನಾಡಿದ್ದಾರೆ.
ಲಾಕ್ಡೌನ್ ಮುಗಿದಾಕ್ಷಣ ಉಡುಪಿಗೆ ರಕ್ಷಿತ್ ಪಯಣ, ಏಕೀ ತರಾತುರಿ?
'ಸಿಂಪಲ್ಲಾಗಿ ಒಂದು ಲವ್ ಸ್ಟೋರಿ' ಚಿತ್ರಕಥೆ ಬರೆಯುವಾಗ ಒಬ್ಬಂಟಿಯಾಗಿದ್ದ ರಕ್ಷಿತ್ ಅದಾದ ನಂತರ ತಂಡವಾಗಿ ಕೆಲಸ ಮಾಡುತ್ತಿದ್ದರು ಈಗ ಅದೇ ಪರಿಸ್ಥಿತಿ ಎದುರಾಗಿದ್ದು ಒಬ್ಬರೆ ಮನೆ ಕೆಲಸ ಮಾಡಿಕೊಂಡು 'ಪುಣ್ಯಕೋಟಿ' ಚಿತ್ರಕತೆ ರೆಡಿ ಮಾಡಿಕೊಳ್ಳುತ್ತಿದ್ದಾರೆ ಹಾಗೂ ಅನೇಕ ಸಿನಿಮಾಗಳನ್ನು ನೋಡುತ್ತಾ ಟೈಂ ಪಾಸ್ ಮಾಡುತ್ತಿದ್ದಾರೆ.