
ಅತ್ಯಂತ ಸರಳ, ಶಾಸ್ತ್ರೋಕ್ತವಾಗಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ನಟ ಗೌರಿಶಂಕರ್ ಹಾಗೂ ಅರುಣಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೊರೋನಾ ಕಾರಣದಿಂದಾಗಿ ಸರಳ ಮದುವೆಗೆ ಸೈ ಎಂದ ನವ ಜೋಡಿಗೆ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಶುಭ ಹಾರೈಸುತ್ತಿದ್ದಾರೆ.
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಲಕ್ಷ್ಮಿ ಬಾರಮ್ಮ ಚಂದನ್; ಸಂಭ್ರಮದ ಫೊಟೋಗಳು!
ಗುರು ಹಿರಿಯರು ನಿಶ್ಚಯಿಸಿರುವ ಮದುವೆ ಇದಾಗಿದ್ದು, ವಧು ಅರುಣಾ ಮೂಲತಃ ಶಿವಮೊಗ್ಗದವರಾಗಿದ್ದು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅರುಣಾ ಫ್ಯಾಷನ್ ಡಿಸೈನರ್ ಪದವೀಧರೆ ಹಾಗೂ ಯೋಗ ಮತ್ತು ಹೋಮ್ ರೆಮಿಡೀಸ್ ಎಕ್ಸ್‌ಪರ್ಟ್.
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಮದುವೆಯಾದ ನಂತರ ಅದೇ ದಿನ ಸಂಜೆ ವಧುವನ್ನು ತೀರ್ಥಹಳ್ಳಿ ತಾಲೂಕು ಶಂಕರ ಹಳ್ಳಿಯ ಸ್ವಗೃಹದಲ್ಲಿ ಮನೆ ತುಂಬಿಸಿಕೊಳ್ಳುವ ಶಾಸ್ತ್ರವೂ ಮಾಡಲಾಗಿತ್ತು. ಕೊರೋನಾದಿಂದ ಮದುವೆಯಲ್ಲಿ 20 ಜನರು ಮಾತ್ರ ಭಾಗಿಯಾಗಿದ್ದರು ಎನ್ನಲಾಗಿದೆ.
ನೇಹಾ ಕಕ್ಕರ್ ಧರಿಸಿದ ಡ್ರೀಮ್ ವೆಡ್ಡಿಂಗ್ ಲೆಹಂಗಾ ಖರೀದಿಸಿದ್ದಲ್ಲ, ಗಿಫ್ಟ್ ಸಿಕ್ಕಿದ್ದು: ಕೊಟ್ಟೋರ್ಯಾರು ಗೊತ್ತಾ
ನಿರ್ದೇಶಕ ಹಾಗೂ ನಟನಾಗಿ ಗುರುತಿಸಿಕೊಂಡಿರುವ ಗೌರಿಶಂಕರ್ ಹಾಗೂ ಅರುಣಾ ಅವರಿಗೆ ಶುಭವಾಗಲಿ ಎಂದು ಆಶೀಸೋಣ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.