Breaking News: ಅನಾರೋಗ್ಯ, ಆಸ್ಪತ್ರೆಗೆ ದಾಖಲಾದ ರಚಿತಾ ಡಿಸ್ಚಾರ್ಜ್

Suvarna News   | Asianet News
Published : Dec 28, 2021, 01:21 PM ISTUpdated : Dec 28, 2021, 01:53 PM IST
Breaking News: ಅನಾರೋಗ್ಯ, ಆಸ್ಪತ್ರೆಗೆ ದಾಖಲಾದ ರಚಿತಾ ಡಿಸ್ಚಾರ್ಜ್

ಸಾರಾಂಶ

ಶೀತ ಜ್ವರ ಹೆಚ್ಚಾದ ಕಾರಣ ಆಸ್ಪತ್ರೆಗೆ ದಾಖಲಾದ ನಟಿ ರಚಿತಾ ರಾಮ್. ವಿವಿಧ ಪ್ರಮೋಷನ, ಹಾಡು ರಿಲೀಸ್ ಮತ್ತು ಲವ್ ಯು ರಚ್ಚು ಚಿತ್ರದ ಪ್ರಮೋಷನ್ ನಲ್ಲಿ ಭಾಗಿಯಾಗಿದ್ದು ಡಿಂಪಲ್ ಕ್ವೀನ್

ಬೆಂಗಳೂರು (ಡಿ.28): ಚಿತ್ರದ ಶೂಟಿಂಗ್, ಪ್ರಮೋಷನ್ ಅಂತ ಸಿಕ್ಕಾಪಟ್ಟೆ ಬ್ಯೂಸಿಯಾಗಿರುವ ನಟಿ ರಚಿತಾ ರಾಮ್ (Rachita Ram) ಆಯಾಸಕ್ಕೆ ಒಳಗಾಗಿ, ಆಸ್ಪತ್ರೆಗೆ ದಾಖಲಾಗಿದ್ದರು. ಈಗ ಡಿಸ್ಚಾರ್ಚ್‌ ಆಗಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ಸ್ಯಾಂಡಲ್‌ವುಡ್‌ ಡಿಂಪಲ್ ಕ್ವೀನ್ ರಚಿತಾ ರಾಮ್ ಸದ್ಯ ಅತಿ ಹೆಚ್ಚು ಡಿಮ್ಯಾಂಡ್‌ನಲ್ಲಿರುವ ನಟಿ. ಕೈ ತುಂಬಾ ಸಿನಿಮಾ ಇಟ್ಕೊಂಡು ಪ್ರಚಾರ (Promotion) ಮತ್ತು ಶೂಟಿಂಗ್ (Shooting) ಅಂತ ಬ್ಯೂಸಿಯಾಗಿರುವ ನಟಿಗೆ ಹೆಚ್ಚಿದ ಒತ್ತಡದಿಂದ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದೆ. ಹೀಗಾಗಿ ಮನೆ ಬಳಿ ಇರುವ ಆಸ್ಪತ್ರೆಗೆ (Hospital) ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. 

ಕಿತ್ತಾಟದ ಮಧ್ಯೆಯೂ ಹೊರ ಬಂತು Love You Racchu ಸಾಂಗ್!

ಕೆಲವು ದಿನಗಳ ಹಿಂದೆ ಲವ್ ಯು ರಚ್ಚು (Love You Racchu) ಸಿನಿಮಾದ ಸುದ್ದಿಗೋಷ್ಠಿ ಇತ್ತು. ಮಂಗಳೂರು (Mangalore) ಪ್ರವಾಸದಲ್ಲಿದ್ದ ರಚ್ಚು ಬೆಂಗಳೂರಿಗೆ (Bengaluru) ಆಗಮಿಸಿ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದ್ದರು. ನಿರ್ಮಾಪಕರಿಗೆ ಸಿನಿಮಾದಿಂದ ಯಾವ ತೊಂದರೆಯೂ ಆಗಬಾರದು ಎನ್ನುವ ಕಾರಣಕ್ಕೆ ಒತ್ತಡ ಆದರೂ ಟ್ರಾವೆಲ್ (Travel) ಮಾಡಿ ಬಂದಿದ್ದರು. ಹೀಗಾಗಿ ಒತ್ತಡ, ಟ್ರಾವೆಲ್‌ ಮತ್ತು ವೆದರ್ ಚೇಂಜ್‌ನಿಂದ (Climate change) ಶೀತ ಮತ್ತು ಜ್ವರ (Fever) ಹೆಚ್ಚಾಗಿದೆ. ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿ ಔಷಧಿ ನೀಡಿದ್ದಾರೆ, ಕೆಲವು ದಿನಗಳ ಕಾಲ ವಿಶ್ರಾಂತಿ (rest) ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದಾರೆ. 

ರಚಿತಾ ರಾಮ್ ಆರೋಗ್ಯದ ಬಗ್ಗೆ ತಿಳಿದು ಬರುತ್ತಿದ್ದಂತೆ, ಅಭಿಮಾನಿಗಳು (fans) ಆತಂಕಕ್ಕೆ ಒಳಗಾಗಿದ್ದಾರೆ. ಸೋಷಿಯಲ್ ಮೀಡಿಯಾ (Social Media) ಹಾಗೂ ಅವರ ಪರ್ಸನಲ್ ನಂಬರ್ (Personal Number) ಪಡೆದುಕೊಂಡು ವಿಚಾರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಹಲವು ವರ್ಷಗಳ ನಂತರ ಸಹೋದರಿ ನಿತ್ಯಾ ರಾಮ್ (Nithya Ram) ಮತ್ತು ಭಾವ ಚೇತನ್ ಬೆಂಗಳೂರಿಗೆ ಬಂದಿದ್ದಾರೆ. ಎಷ್ಟೇ ಬ್ಯುಸಿ ಇದ್ದರೂ ಅವರಿಗೆಂದು ಟೈಮ್ ಮಾಡಿಕೊಳ್ಳುತ್ತಿದ್ದ ರಚ್ಚು ಈಗ ಮನೆಯಲ್ಲಿಯೇ ವಿಶ್ರಾಂತಿ ಪಡೆಯುವೆ ಎಂದಿರಂತೆ. 

ರಮೇಶ್ ಅರವಿಂದ್ (Ramesh Aravind) ಅವರ ಜೊತೆ '100' ಸಿನಿಮಾ, ರಾಣಾ (Rana) ಜೊತೆ 'ಏಕ್ ಲವ್ ಯಾ', ಅಜಯ್ ರಾವ್ ಜೊತೆ 'ಲವ್ ಯು ರಚ್ಚು', ಧನಂಜಯ್ (Dhananjay) ಜೊತೆ 'ಮಾನ್ಸೂನ್ ರಾಗ', ತೆಲುಗು ಚಿರಂಜೀವಿ (Mega star Chiranjeevi) ಅಲಿಯಾ ಜೊತೆ 'ಸೂಪರ್ ಮಚ್ಚಿ', ಪ್ರಜ್ವಲ್ ದೇವರಾಜ್‌ (PRajwal Devaraj) ಜೊತೆ 'ಮಾರ್ಟಿನ್' ಸಿನಿಮಾ, ಸೋಲೋ ಪಾತ್ರದಲ್ಲಿ 'ಲಿಲ್ಲಿ', ಧ್ರುವ ಸರ್ಜಾ (Dhruva Sarja) ಜೊತೆ 'ಮಾರ್ಟಿನ್', 'ಏಪ್ರಿಲ್' ಸಿನಿಮಾ, ಅಭಿಷೇಕ್ ಅಂಬರೀಶ್ (Abhishek Ambareesh) ಜೊತೆ 'ಬ್ಯಾಡ್ ಮ್ಯಾನರ್ಸ್', 'ಶಬರೀ ಸರ್ಚಿಂಗ್ ಫಾರ್ ರಾವಣ', ಡಾರ್ಲಿಂಗ್ ಕೃಷ್ಣ (Darling Krishna) ಜೊತೆ 'ಲವ್ ಮಿ ಆರ್ ಹೇಟ್ ಮಿ', ರವಿ ಬೋಪ್ಪಣ, ಕ್ರಾಂತಿ, ಪಂಕಜ ಕಸ್ತೂರಿ, ಗರಡಿ...ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

Angry Rachita Ram: ನಮ್ಮ ಕನ್ನಡ ಭಾಷೆ ಸಿನಿಮಾ ನೋಡಿ, ಪುಷ್ಪಗೆ ಟಾಂಗ್‌ ಕೊಟ್ಟ ರಚ್ಚು!

ಸದ್ಯಕ್ಕೆ ಲವ್ ಯು ರಚ್ಚು ಸಿನಿಮಾ ಡಿಸೆಂಬರ್ 31ರಂದು ಬಿಡುಗಡೆ ಆಗುತ್ತಿದೆ, 2022ರಲ್ಲಿ ಏಕ್ ಲವ್ ಯಾ (Ek love ya) ಸಿನಿಮಾ ರಿಲೀಸ್ ಆಗಲಿದೆ. ಅತಿ ಹೆಚ್ಚು ಸಂಭಾವನೆ ಪಡೆದುಕೊಂಡು ಲಕ್ಕಿ ನಟಿಯಾಗಿರುವ ರಚಿತಾ ರಾಮ್ ಮೇಲೆ ಕಣ್ಣು ಬಿದ್ದಿದೆ, ದೃಷ್ಟಿಯಾಗಿದೆ ಅನಿಸುತ್ತದೆ, ಎನ್ನುತ್ತಿದ್ದಾರೆ ಅಭಿಮಾನಿಗಳು. ಅವರು ಆದಷ್ಟು ಬೇಗ ಗುಣಮುಖರಾಗಿ ಬರಲಿ.  2022ನ ಆರೋಗ್ಯವಾಗಿ ಇನ್ನೂ ಹೆಚ್ಚಿನ ಹುಮ್ಮಸಿನಲ್ಲಿ ಶುರು ಮಾಡಲಿ ಎಂದು ಪ್ರಾರ್ಥಿಸೋಣ.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?