ವಿಶೇಷ ವಿಮಾನದಲ್ಲಿ ಭಾರತ ತಲುಪಿದ ಸ್ಯಾಂಡಲ್‌ವುಡ್ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಹಿರಿಯ ಪುತ್ರಿ. ಸಂಜೆ ಕಂಠೀರವ ಸ್ಟುಡಿಯೋಗೆ ಆಗಮಿಸಲಿದ್ದಾರೆ....
80-20ರ ದಶಕದ ಜನರಿಗೆ ಅತಿ ಹೆಚ್ಚು ಪ್ರೇರಣೆ ಅಗಿದ್ದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಇಂದು ಕನ್ನಡಿಗರನ್ನು ಅಗಲಿದ್ದಾರೆ. ನೋಡು ಇಷ್ಟು ಚಿಕ್ಕ ವಯಸ್ಸಿಗೇ ಎಷ್ಟು ಅದ್ಭುತವಾಗಿ ಮಾತನಾಡುತ್ತಾನೆ, ಎಷ್ಟು ಚೆಂದ ಅಭಿನಯಿಸುತ್ತಾನೆ. ಇಂತ ಮಗ ಇರಬೇಕು ಎಂದು ಒಮ್ಮೆಯಾದರೂ ಪೋಷಕರು ಅವರ ಮಕ್ಕಳಿಗೆ ಪುನೀತ್‌ರನ್ನು ತೋರಿಸಿ ಹೇಳಿರುತ್ತಾರೆ. ಚಿಕ್ಕ ವಯಸ್ಸಿಗೇ ರಾಷ್ಟ್ರ ಪ್ರಶಸ್ತಿ ಪಡೆದ ಅಪ್ಪುವನ್ನು ನೋಡಿ ಪುಟ್ಟ ಮಕ್ಕಳಿಂದ ಹಿಡಿದು ಹಿರಿಯರೂ ಕಣ್ಣಿರಿಟ್ಟಿದ್ದಾರೆ.
ಪುನೀತ್ ರಾಜ್‌ಕುಮಾರ್‌ಗೆ ಇಬ್ಬರು ಪುತ್ರಿಯರಿದ್ದಾರೆ. ಹಿರಿಯ ಪುತ್ರಿ ದೃತಿ ನ್ಯೂಯಾರ್ಕ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಕಿರಿಯ ಪುತ್ರಿ ಬೆಂಗಳೂರಿನಲ್ಲಿರುವ ಶಾಲೆಯಲ್ಲಿ ಓದುತ್ತಿದ್ದಾರೆ. ಕರ್ನಾಟಕ ಭವನದ ಅಧಿಕಾರಿಗಳು ದೃತಿಯ ವಲಸೆ ಪ್ರಕ್ರಿಯೆ ಬೇಗ ಬೇಗ ಮುಗಿಯುವಂತೆ ಸಹಕರಿಸಲಿದ್ದಾರೆ. ಇದಕ್ಕಾಗಿಯೇ ಕರ್ನಾಟಕ ಸರಕಾರ ವಿಶೇಷ ವ್ಯವಸ್ಥೆ ಮಾಡಿದೆ. ದೃತಿ ಅವರನ್ನು ಅಮೆರಿಕಾದಿಂದ ಈಗಾಗಲೇ ಮಧ್ಯಾಹ್ನ 1.30ಗೆ ಬಂದಿಳಿದಿದ್ದಾರೆ. ಏರ್ ಇಂಡಿಯಾ 102 ವಿಮಾನದಲ್ಲಿ ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ದೆಹಲಿಯಿಂದ ಏರ್ ಇಂಡಿಯಾ 502 ವಿಮಾನದ ಮೂಲಕ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಜೆ 4.15ಕ್ಕೆ ಆಗಮಿಸುವ ನಿರೀಕ್ಷೆ ಇದೆ. ಏರ್‌ಪೋರ್ಟ್‌ನಿಂದ ನೇರವಾಗಿ ಕಂಠೀರವ ಸ್ಟುಡಿಯೋಗೆ ಧ್ರುತಿ ತೆರಳುವ ಸಾಧ್ಯತೆ ಇದೆ. ಅಲ್ಲಿಯೇ ಡಾ.ರಾಜ್‌ಕುಮಾರ್ ಸಮಾಧಿ ಪಕ್ಕದಲ್ಲಿಯೇ ಪುನೀತ್ ಅವರ ಅಂತ್ಯ ಸಂಸ್ಕಾರಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ದೃತಿ ಆಗಮಿಸಿದ ನಂತರ ಪುನೀತ್ ರಾಜ್‌ಕುಮಾರ್ ಅವರ ಪಾರ್ಥಿವ ಶರೀರವನ್ನು ಮೆರವಣಿಗೆ ಮೂಲಕ ಕಂಠೀರವ ಸ್ಟುಡಿಯೋಗೆ ತೆಗೆದುಕೊಂಡು ಹೋಗಲಾಗುತ್ತದೆ. ರಾಘವೇಂದ್ರ ರಾಜ್‌ಕುಮಾರ್ ಪುತ್ರ ವಿನಯ್ ರಾಜ್‌ಕುಮಾರ್ ಅಂತಿಮ ಕಾರ್ಯಗಳನ್ನು ನೆರವೇರಿಸಲಿದ್ದಾರೆ. ಯಾವುದೇ ತೊಂದರೆ ಆಗದಂತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಸಕ ಸರ್ಕಾರಿ ಗೌರವಗಳೊಂದಿಗೆ ಕರುನಾಡಿನ ಪ್ರೀತಿಯ ಅಪ್ಪುವಿಗೆ ಅಂತಿವ ವಿದಾಯ ಹೇಳಲಾಗುವುದು.
ಪುನೀತ್‌ಗೆ ಮರಣೋತ್ತರ ರಾಜ್ಯೋತ್ಸವ ಪ್ರಶಸ್ತಿ ನೀಡುವಂತೆ ಜಗ್ಗೇಶ್ ಆಗ್ರಹಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದ ಪುನೀತ್ ರಾಜ್‌ಕುಮಾರ್ ಅವರು ತಮ್ಮ ಸ್ವಂತ ಮಕ್ಕಳಂತೆ ಅದೆಷ್ಟೋ ಹೆಣ್ಣು ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ ನೀಡುತ್ತಿದ್ದರು. ಹಣ ಕೊಟ್ಟ ನಾನು ವಿದೇಶಕ್ಕೆ ಕಳುಹಿಸುವುದಿಲ್ಲ, ನೀನು ಶ್ರಮ ಪಟ್ಟು ಓದಿ ಮೆರಿಟ್ ಬಂದರೆ ಮಾತ್ರ ಕಳುಹಿಸುವೆ ಎಂದು ಹಿರಿಯ ಪುತ್ರಿ ದೃತಿಗೂ ಹೇಳಿದ್ದರಂತೆ. ವಿದೇಶದಲ್ಲಿ ವಿದ್ಯಾಭ್ಯಾಸ ನಡೆಸಲು ಅಗತ್ಯ ಅಂಕಗಳನ್ನು ಪಡೆದ ನಂತರವೇ ಪುನೀತ್ ಮಗಳು ಹೆಚ್ಚಿನ ವಿದ್ಯಾಭ್ಯಾಸಕ್ಕೆ ವಿದೇಶಕ್ಕೆ ಮರಳಿದ್ದರಂತೆ.
ಅಕ್ಟೋಬರ್ 29ರಂದು ಕನ್ನಡದ ಕುವರ ಪುನೀತ್ ರಾಜ್‌ಕುಮಾರ್ ಜಿಮ್‍ನಲ್ಲಿ ವರ್ಕ್ ಔಟ್ ಮಾಡಿದ್ದಾರೆ. ಎಂದಿನಂತೆಯೇ ವಾಕಿಂಗ್ ಮಾಡಿದ್ದಾರೆ. ಆದರೆ, ಸುಸ್ತು ಎಂಬ ಕಾರಣಕ್ಕೆ ತಮ್ಮ ಕುಟುಂಬ ವೈದ್ಯರನ್ನು ಪತ್ನಿ ಅಶ್ವನಿಯೊಂದಿಗೆ ತೆರಳಿ ಸಂಪರ್ಕಿಸಿದ್ದಾರೆ. ವೈದ್ಯರು ತಕ್ಷಣವೇ ಅವರಿಗೆ ಅಗತ್ಯವಿರೋ ಚಿಕಿತ್ಸೆ ನೀಡಿದ್ದಾರೆ. ಇಸಿಜಿಯಲ್ಲಿ ಹೃದಯದ ಸ್ಟ್ರೈನ್ ಕಂಡಿದ್ದರಿಂದ ವಿಕ್ರಮ್ ಆಸ್ಪತ್ರೆಗೆ ತೆರಳಲು ಸೂಚಿಸಿದ್ದಾರೆ. ಆದರೆ, ಅಲ್ಲಿ ನೀಡಿದ ಯಾವುದೇ ಚಿಕಿತ್ಸೆಗೆ ಪುನೀತ್ ಪ್ರತಿಕ್ರಿಯೆ ತೋರಲಿಲ್ಲ. ಕೊನೆಯುಸಿರೆಳೆದ ಯುವರತ್ನ ಕಣ್ಣುಗಳನ್ನು ಡಾ.ಭುಜಂಗ ಶೆಟ್ಟಿ ನೇತೃತ್ವದ ತಂಡ ಬಂದು, ಸಂಗ್ರಹಿಸಿದೆ. ಈ ಶಾಕಿಂಗ್ ನ್ಯೂಸ್‌ನಿಂದ ಪೂರ್ತಿ ಕರುನಾಡೇ ದುಃಖದಲ್ಲಿ ಮುಳುಗಿದ್ದು, ಪ್ರತಿಯೊಬ್ಬರಿಗೂ ಹೇಳಿಕೊಳ್ಳಲಾಗದ ಸಂಕಟವನ್ನು ಅನುಭವಿಸುತ್ತಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ.