ಮರಣೋತ್ತರ ಪರೀಕ್ಷೆ ಬಳಿಕ ನಿರ್ಮಾಪಕ ಸೌಂದರ್ಯ ಜಗದೀಶ್‌ ಮೃತದೇಹ ಹಸ್ತಾಂತರ

By Suvarna News  |  First Published Apr 14, 2024, 2:03 PM IST

ಆತ್ಮಹತ್ಯೆಗೆ ಶರಣಾಗಿರುವ ಸ್ಯಾಂಡಲ್‌ವುಡ್‌ ನಿರ್ಮಾಪಕ ಸೌಂದರ್ಯ ಜಗದೀಶ್‌ ಅವರು ಮರಣೋತ್ತರ ಪರೀಕ್ಷೆ ನಡೆಯದಿದ್ದು.  ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತ ಮಾಡಲಾಗಿದೆ.


ಬೆಂಗಳೂರು (ಏ.14): ಆತ್ಮಹತ್ಯೆಗೆ ಶರಣಾಗಿರುವ ಸ್ಯಾಂಡಲ್‌ವುಡ್‌ ನಿರ್ಮಾಪಕ ಸೌಂದರ್ಯ ಜಗದೀಶ್‌ ಅವರು ಮರಣೋತ್ತರ ಪರೀಕ್ಷೆ  ಬಳಿಕ ಮೃತ ದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.    ಸುಗಣ ಆಸ್ಪತ್ರೆಯಿಂದ ಮೃತದೇಹವನ್ನು ಎಂಎಸ್ ರಾಮಯ್ಯ ಆಸ್ಪತ್ರೆಗೆ ರವಾನಿಸಲಾಗಿತ್ತು, ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರ ಮಾಡಲಾಗಿದೆ. 

ಕನ್ನಡದ ನಿರ್ಮಾಪಕ ಸೌಂದರ್ಯ ಜಗದೀಶ್ ಆತ್ಮಹತ್ಯೆ!

Tap to resize

Latest Videos

ಮುಂದಿನ ಕಾರ್ಯಕ್ರಮ ಮತ್ತು ಅಂತಿಮ ದರ್ಶಕ್ಕಾಗಿ ಸೌಂದರ್ಯ ಜಗದೀಶ್ ಮನೆ ಮಹಾಲಕ್ಷ್ಮಿ ಲೇಔಟ್ ನ ನಿವಾಸದಲ್ಲಿ ಮೃತದೇಹದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರಿನ ಬೇರೆ ಬೇರೆ ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದ ಸೌಂದರ್ಯ ಜಗದೀಶ್ ಆತ್ಮಹತ್ಯೆಗೆ ನಿಖರವಾದ ಕಾರಣ ಇನ್ನು ತಿಳಿದು ಬಂದಿಲ್ಲ.

ಬೆಳಿಗ್ಗೆ 10 ಗಂಟೆಗೆ ನಿವಾಸದಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ದು, ಕೂಡಲೇ ಕುಟುಂಬಸ್ಥರು ಸುಗಣ ಆಸ್ಪತ್ರೆಗೆ ದಾಖಲು ಮಾಡಲು ಮುಂದಾದರು. ಆದರೆ ಆಸ್ಪತ್ರೆಗೆ ತರುವಷ್ಟರಲ್ಲೇ ಸೌಂದರ್ಯ ಜಗದೀಶ್ ಸಾವನ್ನಪ್ಪಿದ್ದರು. ಸದ್ಯ ಮೃತ ದೇಹವನ್ನು ರಾಮಯ್ಯ ಆಸ್ಪತ್ರೆಯಲ್ಲಿ ಇಡಲಾಗಿದೆ.

ನಿರ್ಮಾಪಕ ಸೌಂದರ್ಯ ಜಗದೀಶ್ ಆತ್ಮಹತ್ಯೆ ಹಿನ್ನೆಲೆ ಅವರ ಸ್ನೇಹಿತ ಶ್ರೇಯಸ್ ಪ್ರತಿಕ್ರಿಯೆ ನೀಡಿ, ಆತ್ಮಹತ್ಯೆ ಮಾಡಿಕೊಂಡಿರೋದು ನಿಜ. ಆದ್ರೆ ಯಾವ ಕಾರಣಕ್ಕೆ ಅನ್ನೋದು ಗೊತ್ತಿಲ್ಲ. ಅವರು ಮನೆಯಲ್ಲೇ ಆತ್ಮಹತ್ಯೆ ಗೆ ಯತ್ನಿಸಿದ್ದಾರೆ. ಕೂಡಲೇ ಮಹಾಲಕ್ಷ್ಮಿ ಲೇಔಟ್ ನಿಂದ  ಆಸ್ಪತ್ರೆ ಗೆ ಕರೆತರಲಾಯ್ತು. ಅಷ್ಟರಲ್ಲೇ ಜೀವ ಹೋಗಿದೆ. ಆತ್ಮಹತ್ಯೆ ಗೆ ನಿಖರ ಕಾರಣ ತಿಳಿದಿಲ್ಲ. ದಯವಿಟ್ಟು ಅನ್ಯತಾ ಭಾವಿಸಬೇಡಿ. ಅನಾವಶ್ಯಕ ಸುದ್ದಿಗಳನ್ನ ಹಬ್ಬಿಸಬೇಡಿ. ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತೆ. ನಂತರ ಅಂತ್ಯ ಕ್ರಿಯೆ ಯಾವಾಗ ಎಲ್ಲಿ ಅಂತ ಕುಟುಂಬಸ್ಥರ ಜೊತೆ ಚರ್ಚಿಸಿ ತಿಳಿಸುತ್ತೇವೆ ಎಂದಿದ್ದಾರೆ.

click me!