ಕನ್ನಡದ ನಿರ್ಮಾಪಕ ಸೌಂದರ್ಯ ಜಗದೀಶ್ ಆತ್ಮಹತ್ಯೆ!

By Suvarna News  |  First Published Apr 14, 2024, 11:57 AM IST

ಕನ್ನಡ ಚಲನಚಿತ್ರ ನಿರ್ಮಾಪಕ   ಸೌಂದರ್ಯ ಜಗದೀಶ್ (Soundarya Jagadeesh)  ಅವರು  ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


ಬೆಂಗಳೂರು (ಏ.14): ಕನ್ನಡ ಚಲನಚಿತ್ರ ನಿರ್ಮಾಪಕ   ಸೌಂದರ್ಯ ಜಗದೀಶ್ (Soundarya Jagadeesh)  ಅವರು  ಆತ್ಮಹತ್ಯೆ  ಮಾಡಿಕೊಂಡಿದ್ದಾರೆ. ಬೆಂಗಳೂರಿನ ಮಹಾಲಕ್ಷ್ಮೀ ಲೇ ಔಟ್‌ನಲ್ಲಿರುವ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಣಕಾಸಿನ ವಿಚಾರದಲ್ಲಿ ಈ ಸಾವಾಗಿದೆ ಎಂದು ಹೇಳಲಾಗುತ್ತಿದೆ. ಸದ್ಯ ರಾಜಾಜಿನಗರದ ಸುಗುಣ ಆಸ್ಪತ್ರೆಯಲ್ಲಿ ಮೃತದೇಹವನ್ನು ಇಡಲಾಗಿದೆ.

ಬೆಳಿಗ್ಗೆ 9 ಗಂಟೆ ಸುಮಾರಿಗೆ ನಿವಾಸದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಕೂಡಲೇ ಕುಟುಂಬಸ್ಥರು ಸುಗಣ ಆಸ್ಪತ್ರೆಗೆ ದಾಖಲು ಮಾಡಲು ಮುಂದಾದರು. ಆದರೆ ಆಸ್ಪತ್ರೆಗೆ ತರುವಷ್ಟರಲ್ಲೇ ಸೌಂದರ್ಯ ಜಗದೀಶ್  ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು.

Tap to resize

Latest Videos

undefined

ವೃತ್ತಿಜೀವನದ ಉತ್ತುಂಗದಲ್ಲಿ ನಟನೆ ತೊರೆದ ಮಹಾನಟಿ ರಾಮಕೃಷ್ಣ ಮಿಷನ್ ಸೇರಿ, 36 ವರ್ಷ ಕಣ್ಮರೆ

ಚಿತ್ರ ನಿರ್ಮಾಣದ ಜೊತೆಗೆ ಉದ್ಯಮಿ, ಬಿಲ್ಡರ್‌ ಕೂಡ ಆಗಿರುವ ಸೌಂದರ್ಯ ಜಗದೀಶ್  ಸುದೀಪ್ ನಟನೆಯ ಮಸ್ತ್ ಮಜಾ ಮಾಡಿ, ಅಪ್ಪು ಮತ್ತು ಪಪ್ಪು,  ರಾಮ್‌ಲೀಲಾ, ಸ್ನೇಹಿತರು ಮುಂತಾದ ಜನಪ್ರಿಯ ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ. ಹಲವು ಸಿನಿಮಾ ಗಳನ್ನ ವಿತರಣೆ ಕೂಡ ಮಾಡಿದ್ದಾರೆ. ಇತ್ತೀಚೆಗೆ ಅವರ ಮಗಳ ಮದುವೆಯನ್ನು ನೆರವೇರಿಸಿದ್ದರು.

ಸೌಂದರ್ಯ ಜಗದೀಶ್ ಬೆಂಗಳೂರಿನಲ್ಲಿ ಬೇರೆ ಬೇರೆ ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದರು. ಇತ್ತೀಚೆಗೆ ರಾಜಾಜಿನಗದ ಐದನೇ ಬ್ಲಾಕ್ ಹಾಗು ಆರನೇ ಬ್ಲಾಕ್ ನಲ್ಲಿರೋ ಎರಡು ಮನೆ ಸೀಸ್ ಆಗಿತ್ತು.  ಆತ್ಮಹತ್ಯೆಗೆ ನಿಖರವಾದ ಕಾರಣ ಇನ್ನು ತಿಳಿದು ಬಂದಿಲ್ಲ. ಆದರೆ ಹಣಕಾಸಿನ ವಿಚಾರ ಎಂದು ಹೇಳಲಾಗುತ್ತಿದೆ.

ಇತ್ತೀಚೆಗೆ ಇವರ ಒಡೆತನದ ಜೆಟ್ಲಾಗ್​ (jetlag pub) ನಲ್ಲಿ ತಡರಾತ್ರಿ ಕಾಟೇರ ಸಿನಿಮಾ ಸಕ್ಸಸ್ ಪಾರ್ಟಿ ಪ್ರಕರಣ ದೊಡ್ಡ ಮಟ್ಟದ ಸುದ್ದಿಯಾಗಿತ್ತು. ಈ ವಿವಾದದ ಬಳಿಕ ಜೆಟ್ಲಾಗ್ ರಸ್ಟೋ ಬಾರ್‌ ಲೈಸನ್ಸ್ 25 ದಿನಗಳ ರದ್ದು ಮಾಡಲಾಗಿತ್ತು. ಪತ್ನಿ ರೇಖಾ ಜಗದೀಶ್ ಈ ಬಾರ್‌ನ ಸಂಸ್ಥಾಪಕರು ಮತ್ತು ಡೈರೆಕ್ಟರ್ ಆಗಿದ್ದಾರೆ. ಅವರ ಮೇಲೂ ಪ್ರಕರಣ ದಾಖಲಾಗಿತ್ತು.

ಮೃತ ಸೌಂದರ್ಯ ಜಗದೀಶ್ ಅವರು ಪತ್ನಿ ರೇಖಾ ಜಗದೀಶ್ (Rekha Jagadeesh) ಮಗ ನಟ ಸ್ನೇಹಿತ್, ಓರ್ವ ಪುತ್ರಿ ಸೇರಿ ಅಪಾರ ಬಂಧು ಬಳಗದವರನ್ನು, ಚಿತ್ರರಂಗದ ಸ್ನೇಹಿತರನ್ನು ಅಗಲಿದ್ದಾರೆ. ಸೌಂದರ್ಯ ಜಗದೀಶ್ ನಿವಾಸದ ಬಳಿ ನೀರವ ಮೌನ ಆವರಿಸಿದೆ.

click me!