ಪ್ರಿಯಾಂಕ ಉಪೇಂದ್ರ ಜೊತೆ Cockroach ಸುಧೀರ್‌ 'ಉಗ್ರಾವತಾರ'!

Suvarna News   | Asianet News
Published : Oct 03, 2020, 03:38 PM IST
ಪ್ರಿಯಾಂಕ ಉಪೇಂದ್ರ ಜೊತೆ Cockroach ಸುಧೀರ್‌ 'ಉಗ್ರಾವತಾರ'!

ಸಾರಾಂಶ

ನಟಿ ಪ್ರಿಯಾಂಕ ಉಪೇಂದ್ರ ಅವರ ಮಹಿಳಾ ಪ್ರಧಾನ ಸಿನಿಮಾ ಚಿತ್ರೀಕರಣ ಆರಂಭಿಸಿದ್ದಾರೆ. ಚಿತ್ರೀಕರಣದ ವೇಳೆ ಟಗರು ಕಾಕ್ರೋಚ್ ಸುಧೀರ್‌ ಜೊತೆಗಿದ್ದ ಫೋಟೋ ಎಲ್ಲೆಡೆ ಹರಿದಾಡುತ್ತಿದೆ..  

ಲಾಕ್‌ಡೌನ್‌ನಲ್ಲಿ ಪತಿ, ಮಕ್ಕಳ ಜೊತೆ ಹೆಚ್ಚಿನ ಸಮಯ ಕಳೆಯುತ್ತಿದ್ದ ಪ್ರಿಯಾಂಕಾ ಈಗ ಬ್ಯಾಕ್‌ ಟು ವರ್ಕ್‌. ಮುನಿಕೃಷ್ಣಪ್ಪ ನಿರ್ಮಿಸುತ್ತಿರುವ ಮಹಿಳಾ ಪ್ರಧಾನ ಚಿತ್ರ 'ಉಗ್ರಾವತಾರ'ದಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಸ್ಕ್ರೀನ್‌ ಮೇಲೆ ಕಾಣೋದಕ್ಕಿಂತ ತದ್ವಿರುದ್ಧ ನನ್ನ ಉಪ್ಪಿ: ಪ್ರಿಯಾಂಕ ಉಪೇಂದ್ರ 
 
ಚಿತ್ರದಲ್ಲಿ ಪ್ರಿಯಾಂಕಾ ಜೊತೆ ಟಗರು ಖ್ಯಾತಿ Cockroach ಸುಧೀರ್‌ ಕೂಡ ಅಭಿನಯಿಸುತ್ತಿದ್ದಾರೆ. ಸಾಮಾಜಕ್ಕೆ ಒಂದೊಳ್ಳೆ ಮೆಸೇಜ್ ಸಾರುವ ಚಿತ್ರ ಇದಾಗಿದ್ದು, ಆ್ಯಕ್ಷನ್‌ ದೃಶ್ಯವನ್ನು ಅಶೋಕ್ ಮಾಸ್ಟರ್, ರವಿ ವರ್ಮ ಮತ್ತು ಮಾಸ್ ಮಾದ ಮಾಡಲಿದ್ದಾರೆ. 

ತಪ್ಪು ಮಾಡಿದವರಿಗೆ ಭಯ ಹುಟ್ಟಿಸಿ, ಪಾಠ ಕಲಿಸೋದು ಚಿತ್ರದ ಒನ್‌ ಲೈನ್. ಈಗಾಗಲೇ ಎರಡು ಶೆಡ್ಯೂಲ್‌ನಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ಶೇ. 50 ಶೂಟಿಂಗ್ ಮುಗಿದಿದೆ. ಬೆಂಗಳೂರು, ಹುಬ್ಬಳ್ಳಿ, ನೆಲಮಂಗಲ, ತೀರ್ಥಹಳ್ಳಿ ಹಾಗೂ ಸಕಲೇಶಪುರದ ಅದ್ಭುತ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದೆ.

ಡ್ರಗ್ಸ್ ಜಾಲದಲ್ಲಿ ನಟಿಯರು ಮಾತ್ರ ಇರುವುದೇ? ನಟರಿಲ್ಲವೇ?

ಚಿತ್ರಕ್ಕೆ ರಾಧಾಕೃಷ್ಣ ಬಸ್ರೂರ್ ಸಂಗೀತ ಸಂಯೋಜನೆ, ನಂದಕುಮಾರ್ ಅವರ ಕ್ಯಾಮೆರಾ ವರ್ಕ್‌ ಇರಲಿದೆ. ನಿರ್ದೇಶಕ ಗುರುಮೂರ್ತಿ ಈ ಹಿಂದೆ ಸೌಂದರ್ಯ ನಿಲಯ ಸಿನಿಮಾ ಮಾಡಿದ್ದರು. ಈಗ ಉಗ್ರವತಾರಕ್ಕೆ ಸಜ್ಜಾಗಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?