ಎರಡು ವರ್ಷ ಕಳೆದರೂ ಚಿತ್ರೀಕರಣಕ್ಕೆ ಹೋಗಿರುವ ಎಂದೆನಿಸುತ್ತಿದೆ; ಚಿರು ನೆನೆದು ಪನ್ನಗಾ ಭಾವುಕ

Published : Jun 07, 2022, 10:38 AM IST
ಎರಡು ವರ್ಷ ಕಳೆದರೂ ಚಿತ್ರೀಕರಣಕ್ಕೆ ಹೋಗಿರುವ ಎಂದೆನಿಸುತ್ತಿದೆ; ಚಿರು ನೆನೆದು ಪನ್ನಗಾ ಭಾವುಕ

ಸಾರಾಂಶ

ಚಿರು ಅಗಲಿ ಎರಡು ವರ್ಷ. ಸ್ನೇಹಿತನ ಜೊತೆ ಸೆಲ್ಫಿ ಹಂಚಿಕೊಂಡು ಗೆಳೆಯ ಪನ್ನಗಾ ಭಾವುಕ ಪೋಸ್ಟ್‌  

ಕನ್ನಡ ಚಿತ್ರರಂಗದ ಫಾರ್‌ಎವರ್ ಚಾರ್ಮಿಂಗ್ ಆಂಡ್ ಡೇರಿಂಗ್ ನಟ ಚಿರಂಜೀವಿ ಸರ್ಜಾ (Chiranjeevi Sarja) ಅಗಲಿ ಇಂದಿಗೆ ಎರಡು ವರ್ಷ ಕಳೆದಿದೆ. ಹೀಗಾಗಿ ಧ್ರುವ ಸರ್ಜಾ (Dhruva Sarja) ಫಾರ್ಮ್‌ಹೌನ್‌ನಲ್ಲಿ ಇಂದು ವಿಶೇಷವಾದ ಪೂಜೆ ಸಲ್ಲಿಸಲಾಗುತ್ತಿದೆ. ನೆಚ್ಚಿನ ನಟನನ್ನು ನೆನಪಿಸಿಕೊಳ್ಳಬೇಕು ಎಂದು ಸಣ್ಣ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಚಿರು ಸ್ನೇಹಿತರು ಮತ್ತು ಕುಟುಂಬಸ್ಥರು ಭಾಗಿಯಾಗಲಿದ್ದಾರೆ. 

ಪನ್ನಗಾ ಭರಣ: 

ಚಿರಂಜೀವಿ ಆಪ್ತ ಸ್ನೇಹಿತ ನಿರ್ದೇಶಕ ಪನ್ನಗಾಭರಣ (Pannaga Bharana)  ತಮ್ಮ ನಿವಾಸದಲ್ಲಿ ಚಿರು ಫೋಟೋ ಇಟ್ಟು ದಿನವೂ ವಿಶೇಷ ಪೂಜೆ ಸಲ್ಲಿಸುತ್ತಾರೆ. ಚಿರುಗೆ ಮೊದಲು ಪೂಜೆ ಸಲ್ಲಿಸಿದ ನಂತರವೇ ಮುಂದಿನ ಕಾರ್ಯಕ್ರಮ ಶುರು ಮಾಡುವುದು. ಇಂದು ಚಿರು ನೆನಪಿನಲ್ಲಿ ಪನ್ನಗಾ ಸೆಲ್ಫಿ ಹಂಚಿಕೊಂಡಿದ್ದಾರೆ.

'ಎರಡು ವರ್ಷ ಕಳೆದಿದೆ ಗೆಳೆಯ..ನೀವು ಇಲ್ಲೆ ಎಲ್ಲೋ ಚಿತ್ರೀಕರಣಕ್ಕೆ ಹೋಗಿರುವೆ ಎಂದೆನಿಸುತ್ತಿದೆ. ನೀನು ಸದಾ ನಮ್ಮ ಹೃದಯದಲ್ಲಿ ಇರುವೆ. ನಮ್ಮ ಪಾರ್ಥಣೆಯಲ್ಲಿ ನೀನು ಇರುವೆ. ನಾವು ಮಾಡುವ ಕೆಲಸದಲ್ಲಿ ನೀನು ಇರುವೆ. ನಮ್ಮ ಕೊನೆ ಉಸಿರು ಇರುವವರೆಗೂ ನೀನು ಇರುವೆ ಚಿರು'ಎಂದು ಪನ್ನಗಾ ಬರೆದುಕೊಂಡಿದ್ದಾರೆ.

Sarja ಹಳೆ ಫೋಟೋ:

ಚಿರು ಮತ್ತು ಮೇಘನಾ ರಾಜ್ (Meghana Raj) ಆಪ್ತ ಗೆಳೆಯ ಪನ್ನಗಾ ಭರಣ (Pannaga Bharana) ಇನ್‌ಸ್ಟಾಗ್ರಾಂ ಖಾತೆಯಲ್ಲಿ ಚಿರು ಜೊತೆಗಿರುವ ಹಳೆ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಪನ್ನಗಾ ಮತ್ತು ಚಿರು ಒಬ್ಬರಿಗೊಬ್ಬರು ಕೇಕ್ (Cake) ತಿನ್ನಿಸಿಕೊಂಡು ಫೋಟೋಗೆ ಸ್ಮೈಲ್ ಮಾಡುತ್ತಿದ್ದಾರೆ. ಇಬ್ಬರೂ ಒಂದೇ ರೀತಿ, ಒಂದೇ ಬಣ್ಣದ ಶರ್ಟ್ ಧರಿಸಿದ್ದಾರೆ. ಈ ಫೋಟೋದಲ್ಲಿ ಚಿರು ಆಪ್ತ ಗೆಳೆಯರ ಜೊತೆ ಸಹೋದರ ಧ್ರುವ ಸರ್ಜಾ (Dhruva Sarja) ಮತ್ತು ಡ್ಯಾನ್ಸ್ ಮಾಸ್ಟರ್ ಇಮ್ರಾನ್ ಸರ್ದಾರಿಯಾ (Imran Sardhariya) ಇದ್ದಾರೆ. ಒಂದು ಫೋಟೋದಲ್ಲಿ ಪನ್ನಗಾ ಅಸೀಟು (ಅಕ್ಕಿ ಅಥವಾ ಗೋಧಿ ಪೌಡರ್) ಹಿಡಿದುಕೊಂಡು ನಿಂತಿದ್ದಾರೆ. ಬಹುಶಃ ಇದನ್ನು ಒಬ್ಬರ ಮೇಲೆ ಮತ್ತೊಬ್ಬರು ಸುರಿದುಕೊಂಡಿದ್ದಾರೆ ಅನಿಸುತ್ತದೆ. 

ಚಿರಂಜೀವಿ ಸರ್ಜಾ ಇರುವ ಡಿಸೈನರ್‌ ಜಾಕೆಟ್‌:

ಸೈಮಾ ಅವಾರ್ಡ್ 2021 ಕಾರ್ಯಕ್ರಮದಲ್ಲಿ ಪನ್ನಗಾಭರಣ ಬೆಸ್ಟ್‌ ಡೈರೆಕ್ಟರ್ ಆಫ್ 2020 ಪ್ರಶಸ್ತಿ ಗೆದ್ದಿದ್ದಾರೆ. ವೇದಿಕೆ ಮೇಲೆ ಪ್ರಶಸ್ತಿ ಪಡೆದ ಪನ್ನಗಾ ಅವರ ಬಗ್ಗೆ ನೆಟ್ಟಿಗರಿಗೆ ಗಮನ ಸೆಳೆದದ್ದು ಅವರ ಬ್ಲಾಕ್ ಬ್ಲೇಝರ್.  ಆ ಬ್ಲೇಝರ್‌ನ ಕಾಲರ್‌ ಬಿಳಿ ಬಣ್ಣವಿದ್ದು, ಚಿರು ಮುಖವನ್ನು ಪ್ರಿಂಟ್‌ ಮಾಡಿಸಲಾಗಿದೆ. 'ನನ್ನ ಲಕ್ಕಿ ಚಾರ್ಮ್‌ ಸ್ನೇಹಿತನನ್ನು ಧರಿಸಿರುವೆ,' ಎಂದು ಬರೆದು ಕೊಂಡಿದ್ದಾರೆ. ಈ ಡಿಸೈನರ್ ಉಡುಪಿನ ಬಗ್ಗೆ ಅನೇಕರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. 'ಚಿರುಗೆ ಖಂಡಿತ ಇಷ್ಟವಾಗುತ್ತದೆ. ಇದು ಹೇಗಿದೆ ಅಂದ್ರೆ ಮಚ್ಚ ನಾನ ಇದ್ದೀನಿ ಬಿಡೋ ಅನ್ನುವ ಹಾಗೆ,' ಎಂದು ಮೇಘನಾ ರಾಜ್‌ ಕಾಮೆಂಟ್ ಮಾಡಿದ್ದಾರೆ. ಮತ್ತೊಂದು ವಿಶೇಷತೆ ಏನೆಂದರೆ ಈ ಉಡುಪನ್ನು ಪನ್ನಗಾ ಅವರ ಪತ್ನಿ ನಿಖಿತಾ ಅವರೇ ಡಿಸೈನ್ ಮಾಡಿರುವುದು. ನಿಖಿತಾ ವೃತ್ತಿಯಲ್ಲಿ ಫ್ಯಾಷನ್ ಡಿಸೈನರ್ ಆಗಿದ್ದು, ಅನೇಕ ಸೆಲೆಬ್ರಿಟಿಗಳಿಗೆ ವಸ್ತ್ರ ವಿನ್ಯಾಸ ಮಾಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬಿದ್ದುಬಿದ್ದೂ ನಗುವಂತೆ 'ಆಭಾಸ' ಸೃಷ್ಟಿಸಿದ ತೆಲುಗು ಸಿನಿಮಾದಿಂದ ಕನ್ನಡಕ್ಕೆ 'ಡಬ್' ಆಗಿರೋ ಹಾಡು; ಏನ್ ಗುರೂ ಇದೂ..!?
ಕುಟುಂಬವೇ ಹೆಮ್ಮೆಪಡುವಂತೆ ಮಾಡಿದ Kiccha Sudeep ಮಗಳು ಸಾನ್ವಿ! ಇದಪ್ಪಾ..ಸಾಧನೆ ಅಂದ್ರೆ..!