ರೇವತಿ ಬರ್ತಡೇ; ಪತ್ನಿಯನ್ನು 'ಚಿನ್ನ' ಎಂದು ನಾಚಿ ನೀರಾದ ಯುವರಾಜ!

Suvarna News   | Asianet News
Published : Jun 21, 2020, 02:13 PM ISTUpdated : Jun 21, 2020, 03:05 PM IST
ರೇವತಿ ಬರ್ತಡೇ; ಪತ್ನಿಯನ್ನು 'ಚಿನ್ನ' ಎಂದು ನಾಚಿ ನೀರಾದ  ಯುವರಾಜ!

ಸಾರಾಂಶ

 ನಟ ನಿಖಿಲ್ ಕುಮಾರಸ್ವಾಮಿ ಪತ್ನಿ ರೇವತಿ ಹುಟ್ಟು ಹಬ್ಬವನ್ನು ಆಚರಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋ ಶೇರ್ ಮಾಡಿಕೊಂಡಿದ್ದು ಸಕತ್  ವೈರಲ್ ಆಗುತ್ತಿದೆ... 

ಸ್ಯಾಂಡಲ್‌ವುಡ್‌ ಯುವರಾಜ ನಿಖಿಲ್ ಕುಮಾರಸ್ವಾಮಿ ಪತ್ನಿ ರೇವತಿ ಹುಟ್ಟು ಹಬ್ಬನ್ನು ಆಚರಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ನಿಖಿಲ್ ಪತ್ನಿ ಕೇಕ್ ಕಟ್ ಮಾಡುತ್ತಿರುವ ಫೋಟೋವನ್ನು ಶೇರ್ ಮಾಡಿದ್ದಾರೆ.

ನಿಖಿಲ್‌ ಕುಮಾರಸ್ವಾಮಿ ಪತ್ನಿ ಜತೆ ಅಪ್ಲೋಡ್‌ ಮಾಡೋ ಫೋಟೋಸ್ ವೈರಲ್ ಆಗೋದೇಕೆ?

'ಜಾಗ್ವಾರ್' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದ ನಿಖಿಲ್ ಕುಮಾರ್ ಏಪ್ರಿಲ್ 16ರಂದು ರಾಮನಗರದ ಫಾರ್ಮ್‌ಹೌಸ್‌ನಲ್ಲಿ ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಲಾಕ್‌ಡೌನ್‌ ಇದ್ದ ಕಾರಣ ನಿಖಿಲ್ ಹಾಗೂ ರೇವತಿ ಯಾವುದೇ ಪ್ರವಾಸಕ್ಕೆ ತರಳದೆ ಸಂಕಷ್ಟದಲ್ಲಿದ್ದ ಜನರಿಗೆ ಸಹಾಯ ಮಾಡುತ್ತ ಸಮಯ ಕಳೆದಿದ್ದಾರೆ. 

ನಿಖಿಲ್‌ -ರೇವತಿ ಐಷಾರಾಮಿ ಟ್ರಿಪ್‌; ಅಲ್ಲೋಗೋದು ಬಿಟ್ಟು ಇಲ್ಲಿದ್ದಾರೆ? 

ಬರ್ತಡೇ ವಿಶ್:

'ಹುಟ್ಟು ಹಬ್ಬದ ಶುಭಾಶಯಗಳು ಚಿನ್ನ' ಎಂದು ಬರೆದುಕೊಂಡಿದ್ದಾರೆ ನಿಖಿಲ್. ವಿಶೇಷವೇನೆಂದರೆ  ದಂಪತಿಗಳಿಬ್ಬರೂ ಒಂದೇ ಬಣ್ಣದ ಡ್ರೆಸ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ರೇವತಿ ಮ್ಯಾಂಗೋ ಚೀಸ್‌ ಕೇಕ್‌ ಕತ್ತರಿಸುತ್ತಿದ್ದಾರೆ. ನಿಖಿಲ್ ಫೋಟೋ ಶೇರ್ ಮಾಡಿದ ಕೆಲವೇ ನಿಮಿಷಗಳಲ್ಲಿ ಸಾವಿರಕ್ಕೂ ಹೆಚ್ಚು ಲೈಕ್ ಹಾಗೂ ಕಾಮೆಂಟ್ ಪಡೆದುಕೊಂಡಿದೆ.

 

ರೇವತಿಗೂ ಫ್ಯಾನ್ಸ್:

ರೇವತಿಗೂ ಅಭಿಮಾನಿಗಳು ಫಿದಾ ಆಗಿದ್ದಾರೆ. ನಿಖಿಲ್ ರೇವತಿ ಮದುವೆ ನಿಶ್ಚಯವಾದ ದಿನದಿಂದಲೇ ಇವರಿಬ್ಬರ ಹೆಸರಿನಲ್ಲಿ ಫ್ಯಾನ್‌ ಫೇಜ್‌ ಓಪನ್ ಮಾಡಲಾಗಿದೆ. ರೇವತಿ ಡ್ರೆಸಿಂಗ್ ಸೆನ್ಸ್‌ಗೆ ಜನರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

 

ಇತ್ತೀಚಿಗೆ ಬಿಡದಿ ಫಾರ್ಮ್‌ಹೌಸ್‌ನಲ್ಲಿ ಪತ್ನಿ ಜತೆ ಸಮಯ ಕಳೆಯುತ್ತಿದ್ದ ಮಧುರ ಕ್ಷಣಗಳ ಫೋಟೋ ಶೇರ್ ಮಾಡಿದ್ದರು.ಅದರಲ್ಲೂ ಇಬ್ಬರು 'ಮಳೆಯಲಿ  ಜೊತೆಯಲಿ ' ಸ್ಟೈಲ್‌ನಲ್ಲಿ ಕೊಡೆ ಹಿಡಿದು ಫೋಟೋಗೆ ಕೊಟ್ಟ ಪೋಸ್‌ ನೆಟ್ಟಿಗರ ಗಮನ ಸೆಳೆದಿದೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಟಾಕ್ಸಿಕ್ ಪೋಸ್ಟರ್ ರಿಲೀಸ್ ಮಾಡಿ ಕುತೂಹಲ ಹೆಚ್ಚಿಸಿದ ಯಶ್, ಸಿನಿಮಾ ಬಿಡುಗಡೆ ಕೌಂಟ್‌ಡೌನ್ ಶುರು
ಕನ್ನಡಿಗರ ಪ್ರೀತಿಯ ಪುಟ್ಟಿ ಯಾಕ್ ಹೀಗಾದ್ರು? Rukmini Vasanth ನ್ಯೂ ಲುಕ್ ವೈರಲ್