ಬೀದಿ ನಾಯಿಗಳಿಗೆ ನೆರವಾದ ಕನ್ನಡ ನಟಿ; ನೆಟ್ಟಿಗರು ಫುಲ್‌ ಫಿದಾ!

Suvarna News   | Asianet News
Published : Mar 29, 2020, 12:31 PM IST
ಬೀದಿ ನಾಯಿಗಳಿಗೆ ನೆರವಾದ ಕನ್ನಡ ನಟಿ; ನೆಟ್ಟಿಗರು ಫುಲ್‌ ಫಿದಾ!

ಸಾರಾಂಶ

ಮಾಹಾಮಾರಿ ಕೊರೋನಾ ವೈರಸ್‌ ಮೂರನೇ ಹಂತ ತಲುಪುತ್ತಿದ್ದಂತೆ, ಭಾರತ ಸರ್ಕಾರ ಲಾಕ್‌ಡೌನ್‌ ಘೋಷಣೆ ಮಾಡಿದೆ. ಇದರ ಪರಿಣಾಮ ಹೋಟೆಲ್‌ಗಳು ಬಂದ್, ಜನರೆಲ್ಲರೂ ಮಾಯ. ಈ ಹಿನ್ನೆಲೆಯಲ್ಲಿ ಆಹಾರವಿಲ್ಲದ ಬೀದಿ ನಾಯಿಗಳು ನರಳಬಾರದೆಂದು ಐಂದ್ರಿತಾ ಜನರಲ್ಲಿ ಸಹಾಯ ಮಾಡಲು ಮನವಿ ಮಾಡಿಕೊಂಡಿದ್ದಾರೆ.

ಸ್ಯಾಂಡಲ್‌ವುಡ್‌ ಮುದ್ದು ಮುಖದ ಚೆಲುವ ಐಂದ್ರಿತಾ ರೇ ಬೀದಿ ಶ್ವಾನಗಳಿಗೆ ಆಹಾರ ಹಾಕಿ ಎಂದು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.  ಕೊರೋನಾ ವೈರಸ್‌ ಮಾಡುತ್ತಿರುವ ರಂಪಾಟಕ್ಕೆ ಅದೆಷ್ಟು ಮಂದಿಯ ಹೊಟ್ಟೆ ಮೇಲೆ ತಣ್ಣೀರ ಬಟ್ಟೆ ಹಾಕಿದಂತಾಗುತ್ತಿದೆ. ಇದು ಜನರಿಗೆ ಮಾತ್ರವಲ್ಲ ಬೀದಿ ಪ್ರಾಣಿಗಳ ಮೇಲೂ ಭೀಕರ ಪರಿಣಾಮ ಬೀರಿದೆ.

ಈಗ ಆಗಲೇ ಸಾಕಷ್ಟು NGOಗಳು, ಸಾಕು ನಾಯಿ ಪ್ರೇಮಿಗಳು ಕೈ ಜೋಡಿಸಿ, ತಮ್ಮ ನಿವಾಸದ ಸುತ್ತಲಿರುವ ನಾಯಿಗಳಿಗೆ ಆಹಾರ ಹಾಗೂ ನೀರು ನೀಡುತ್ತಿದ್ದಾರೆ.  ಈಗ ಅದೇ ಸಹಾಯವನ್ನು ನಟಿ ಐಂದ್ರಿತಾ ಮಾಡುತ್ತಿರುವುದು ನೆಟ್ಟಿಗರಿಗೆ ಮಾರ್ಗದರ್ಶನವಾಗಿದೆ.

ತುಸು ಸಿಲ್ಲಿ ಕೆಲಸ ಮಾಡೋಣ..ಐಂದ್ರಿತಾ ಬಹಿರಂಗ ಆಹ್ವಾನ!

'ನಮ್ಮ ಸುತ್ತಲಿರುವ ನಾಲ್ಕು ಕಾಲಿನ  ಗೆಳೆಯರನ್ನು ನಾವು ಮರೆಯುವುದು ಬೇಡ. ದಿನೇ ದಿನೇ ಬೇಸಿಗೆಯ ತಾಪ ಹೆಚ್ಚಾಗುತ್ತಿದೆ. ಇದೇ ಸಮಯಕ್ಕೆ ಲಾಕ್‌ಡೌನ್‌ ಆಗಿರುವ ಪರಿಣಾಮ ಅವುಗಳಿಗೆ ಆಹಾರ ಮತ್ತು ನೀರು ಸಿಗದಂತಾಗಿದೆ.  ನೀವು ತರಕಾರಿ ತರಲು ಮಾರುಕಟ್ಟೆಗೆ ಹೋದರೆ ದಯವಿಟ್ಟು ಇವುಗಳಿಗೆ ಏನಾದರೊ ನೀಡಿ' ಎಂದು ಐಂದ್ರಿತಾ ಮನವಿ ಮಾಡಿ ಕೊಂಡಿದ್ದಾರೆ. 

 

ಸಾಕು ಪ್ರಾಣಿಗಳಿಂದ ರೋಗ ಹರಡುತ್ತದೆ ಎಂಬ ತಪ್ಪು ತಿಳುವಳಕೆಯಿಂದ ಸಾಕಿದ ನಾಯಿಯನ್ನು ಕೆಲವರು ಬೀದಿಗೆ ಬಿಡುತ್ತಿದ್ದಾರೆ. ದಯವಿಟ್ಟು ಹೀಗೆ ಮಾಡ ಬೇಡಿ ಎಂದು ಪ್ರಾಣಿ ದಯಾ ಸಂಘ ಮನವಿ ಮಾಡಿ ಕೊಂಡಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?