Evergreen Kannada Movies: ಒಂದು ವರ್ಷಕ್ಕೂ ಅಧಿಕ ಕಾಲ ಥಿಯೇಟರ್‌ನಲ್ಲಿ ಓಡಿದ 10 ಕನ್ನಡ ಸಿನಿಮಾಗಳು

Published : Aug 21, 2025, 03:11 PM IST
Kannada movies in theaters for 365 days

ಸಾರಾಂಶ

Record breaking Kannada films: ಕನ್ನಡದಲ್ಲಿ ಕೆಲ ಸಿನಿಮಾಗಳು, ಒಂದರಿಂದ 2 ವರ್ಷಗಳ ಕಾಲ ಥಿಯೇಟರ್‌ನಲ್ಲಿ ಪ್ರದರ್ಶನಗೊಂಡಿದ್ದ ಕಾಲ ಕೂಡ ಇತ್ತು. ಆಗ ಸಿನಿಮಾಗಳು 100, 200 ದಿನಗಳವರೆಗೆ ಸಹಜವಾಗಿ ಓಡುತ್ತಿತ್ತು. 

ಥಿಯೇಟರ್‌ನಲ್ಲಿ ವರ್ಷಗಳಿಗೂ ಹೆಚ್ಚು ಕಾಲ ಪ್ರದರ್ಶನಗೊಂಡ ಸಿನಿಮಾಗಳಿವು! ( Record breaking Kannada films )

ಬಂಗಾರದ ಮನುಷ್ಯ – 2 ವರ್ಷಗಳು

ಡಾ. ರಾಜಕುಮಾರ್ ಅವರ ಬಂಗಾರದ ಮನುಷ್ಯ (1972) ಕನ್ನಡ ಚಿತ್ರರಂಗದ ಒಂದು ಐತಿಹಾಸಿಕ ಚಿತ್ರವಾಗಿದೆ. ಈ ಚಿತ್ರವು ಕರ್ನಾಟಕದಾದ್ಯಂತ 2 ವರ್ಷಗಳಿಗೂ ಅಧಿಕ ಕಾಲ ಥಿಯೇಟರ್‌ನಲ್ಲಿ ಓಡಿತ್ತು. ಈ ಸಿನಿಮಾವು ಗ್ರಾಮೀಣ ಜೀವನದ ಸಮಸ್ಯೆಗಳನ್ನು, ಸಾಮಾಜಿಕ ನ್ಯಾಯವನ್ನು ಕೇಂದ್ರೀಕರಿಸಿದ ಸಿನಿಮಾವಾಗಿದೆ. ಡಾ. ರಾಜಕುಮಾರ್ ಭಾವನಾತ್ಮಕ ನಟನೆಯಿಂದ ಜನರ ಮನಸ್ಸನ್ನು ಗೆದ್ದಿತು. ಈ ಸಿನಿಮಾವು ಕನ್ನಡ ಚಿತ್ರರಂಗದ ದೀರ್ಘಕಾಲಿಕ ಸಿನಿಮಾವಾಗಿ ದಾಖಲೆಯನ್ನು ಬರೆದಿದೆ.

 

ಶಂಕರ್ ಗುರು – 1.5 ವರ್ಷಗಳು

1978ರಲ್ಲಿ ಬಿಡುಗಡೆಯಾದ ಶಂಕರ್ ಗುರು ಕೂಡ ಡಾ. ರಾಜಕುಮಾರ್ ನಟನೆಯ ಮತ್ತೊಂದು ಶ್ರೇಷ್ಠ ಸಿನಿಮಾವಾಗಿದೆ. ಈ ಚಿತ್ರವು ಒಂದೂವರೆ ವರ್ಷಕ್ಕಿಂತಲೂ ಹೆಚ್ಚು ಕಾಲ ಥಿಯೇಟರ್‌ನಲ್ಲಿ ಓಡಿತ್ತು. ಈ ಸಿನಿಮಾವು ಕ್ರೈಮ್ ಥ್ರಿಲ್ಲರ್ ಶೈಲಿಯ ಕಥಾನಕವನ್ನು ಹೊಂದಿದ್ದು, ರಾಜಕುಮಾರ್ ಅವರ ದ್ವಿಪಾತ್ರಾಭಿನಯವು ಪ್ರೇಕ್ಷಕರ ಮನಸ್ಸು ಮುಟ್ಟಿತು ಈ ಸಿನಿಮಾದ ಸಂಗೀತ, ಕಥೆ ಇಂದಿಗೂ ಕನ್ನಡಿಗರ ಮನಸ್ಸಿನಲ್ಲಿ ಜೀವಂತವಾಗಿದೆ.

 

ನಂಜುಂಡಿ ಕಲ್ಯಾಣ – 1 ವರ್ಷ

1989ರಲ್ಲಿ ಬಿಡುಗಡೆಯಾದ ನಂಜುಂಡಿ ಕಲ್ಯಾಣ ಒಂದು ರೊಮ್ಯಾಂಟಿಕ್ ಕಾಮಿಡಿ ಸಿನಿಮಾವಾಗಿದೆ. ರಾಘವೇಂದ್ರ ರಾಜಕುಮಾರ್ ಹಾಗೂ ಮಾಲಾಶ್ರೀ ಕಾಂಬಿನೇಶನ್‌ನ ಸೂಪರ್‌ ಹಿಟ್‌ ಸಿನಿಮಾವಾಗಿದೆ. ಒಂದು ವರ್ಷಕ್ಕಿಂತಲೂ ಹೆಚ್ಚು ಕಾಲ ಥಿಯೇಟರ್‌ನಲ್ಲಿ ಯಶಸ್ವಿಯಾಗಿ ಓಡಿತು. ಈ ಚಿತ್ರದ ಕಾಮಿಡಿ, ರೊಮ್ಯಾನ್ಸ್, ಹಾಡು ಎಲ್ಲ ವಯಸ್ಸಿನವರನ್ನೂ ಸೆಳೆಯಿತು.

 

ಪ್ರೇಮಲೋಕ – 1 ವರ್ಷ

1987ರಲ್ಲಿ ಬಿಡುಗಡೆಯಾದ ಪ್ರೇಮಲೋಕ ಕನ್ನಡ ಚಿತ್ರರಂಗದ ಸೂಪರ್‌ ಹಿಟ್‌ ಸಿನಿಮಾವಾಗಿದೆ. ನಟ ವಿ ರವಿಚಂದ್ರನ್, ಜೂಹಿ ಚಾವ್ಲಾ ಜೋಡಿಯ ಈ ಸಿನಿಮಾವು ಕರ್ನಾಟಕದಾದ್ಯಂತ ಒಂದು ವರ್ಷಕ್ಕಿಂತಲೂ ಹೆಚ್ಚು ಕಾಲ ಥಿಯೇಟರ್‌ನಲ್ಲಿ ಪ್ರದರ್ಶನಗೊಂಡಿತು. ಈ ಸಿನಿಮಾದ ಹಾಡುಗಳು ಇಂದಿಗೂ ಕರ್ನಾಟಕದ ರಸ್ತೆಗಳಲ್ಲಿ ಕೇಳಿಬರುತ್ತವೆ. ಹಾಡುಗಳ ಜೊತೆಗೆ, ಚಿತ್ರದ ರೊಮ್ಯಾಂಟಿಕ್ ಕಥೆ, ಆಕ್ಷನ್‌, ಕಥೆ ನಿರೂಪಣೆ ಕೂಡ ಯುವಕರ ಮನಸ್ಸನ್ನು ಗೆದ್ದಿತು.

 

ಜನುಮದ ಜೋಡಿ – 1 ವರ್ಷ

1996ರಲ್ಲಿ ಬಿಡುಗಡೆಯಾದ ಜನುಮದ ಜೋಡಿ ಶಿವ ರಾಜಕುಮಾರ್, ಶಿಲ್ಪಾ ನಟನೆಯ ಸಿನಿಮಾ ಸೂಪರ್‌ ಹಿಟ್‌ ಆಗಿದೆ. ಈ ಸಿನಿಮಾವು ಕರ್ನಾಟಕದಾದ್ಯಂತ ಒಂದು ವರ್ಷಕ್ಕಿಂತಲೂ ಹೆಚ್ಚು ಕಾಲ ಥಿಯೇಟರ್‌ನಲ್ಲಿ ಯಶಸ್ವಿಯಾಗಿ ಓಡಿತು. ಈ ಸಿನಿಮಾದ ಭಾವನಾತ್ಮಕ ಕಥೆ, ಹಾಡುಗಳ ಬಗ್ಗೆ ಜನರು ಇಂದು ಕೂಡ ಮಾತನಾಡುತ್ತಾರೆ.

 

ಮುಂಗಾರು ಮಳೆ – 865 ದಿನಗಳು

2006ರಲ್ಲಿ ಬಿಡುಗಡೆಯಾದ ಮುಂಗಾರು ಮಳೆ ಸಿನಿಮಾವು ಕನ್ನಡ ಚಿತ್ರರಂಗದ ಗೋಲ್ಡನ್‌ ಸಿನಿಮಾ. ಭಾರತದ ಮಲ್ಟಿಪ್ಲೆಕ್ಸ್‌ನಲ್ಲಿ ದೀರ್ಘಕಾಲ ಓಡಿದ ಸಿನಿಮಾವಾಗಿ ದಾಖಲೆಯನ್ನು ಬರೆದಿದೆ. ಈ ಸಿನಿಮಾವು PVR ಥಿಯೇಟರ್‌ನಲ್ಲಿ 865 ದಿನಗಳ ಕಾಲ ಓಡಿತು. ಇದು ಭಾರತೀಯ ಚಿತ್ರರಂಗದ ಒಂದು ಅಪರೂಪದ ಸಾಧನೆಯಾಗಿದೆ. ಗಣೇಶ್, ಪೂಜಾ ಗಾಂಧಿ ಅವರ ಜೋಡಿಯ ಈ ರೊಮ್ಯಾಂಟಿಕ್ ಸಿನಿಮಾವು ತನ್ನ ಸುಂದರವಾದ ಸಂಗೀತ, ಕಥಾನಕದಿಂದ ಎಲ್ಲರನ್ನೂ ಆಕರ್ಷಿಸಿತು.

 

ಯಜಮಾನ – 1 ವರ್ಷ

2000ರಲ್ಲಿ ಬಿಡುಗಡೆಯಾದ ಯಜಮಾನ ಡಾ. ವಿಷ್ಣುವರ್ಧನ್ ಅವರ ಒಂದು ಇಂಡಸ್ಟ್ರಿ ಹಿಟ್ ಸಿನಿಮಾವಾಗಿದೆ. ಈ ಸಿನಿಮಾವು ಕರ್ನಾಟಕದಾದ್ಯಂತ ಒಂದು ವರ್ಷಕ್ಕಿಂತಲೂ ಹೆಚ್ಚು ಕಾಲ ಥಿಯೇಟರ್‌ನಲ್ಲಿ ಯಶಸ್ವಿಯಾಗಿ ಓಡಿತು. ಈ ಸಿನಿಮಾದ ಕುಟುಂಬ ಕಥಾನಕ, ಡಾ ವಿಷ್ಣುವರ್ಧನ್ ನಟನೆ ಎಲ್ಲರ ಮನಸ್ಸು ಗೆದ್ದಿತು.

 

ಆಪ್ತಮಿತ್ರ – 1 ವರ್ಷ

2004ರಲ್ಲಿ ಬಿಡುಗಡೆಯಾದ ಆಪ್ತಮಿತ್ರ ಸಿನಿಮಾ ಡಾ. ವಿಷ್ಣುವರ್ಧನ್ ಮತ್ತು ಸೌಂದರ್ಯ, ಪ್ರೇಮಾ, ರಮೇಶ್‌ ಅರವಿಂದ್‌ ಕಾಂಬಿನೇಶನ್‌ನಲ್ಲಿ ಮೂಡಿಬಂದ ಭಯಾನಕ ರೊಮ್ಯಾಂಟಿಕ್ ಸಿನಿಮಾವಾಗಿದೆ. ಈ ಸಿನಿಮಾವು ಕರ್ನಾಟಕದಾದ್ಯಂತ ಒಂದು ವರ್ಷಕ್ಕಿಂತಲೂ ಹೆಚ್ಚು ಕಾಲ ಥಿಯೇಟರ್‌ನಲ್ಲಿ ಓಡಿತ್ತು. ಈ ಸಿನಿಮಾವು ಮಲಯಾಳಂ ಚಿತ್ರ ಮಣಿಚಿತ್ರತಾಳುದ ರೀಮೇಕ್ ಆಗಿದ್ದು, ಕನ್ನಡದಲ್ಲಿ ಮಾತ್ರ ದೊಡ್ಡ ಯಶಸ್ಸನ್ನು ಕಂಡಿತು.

 

ಮಿಲನ – 1 ವರ್ಷ

2007ರಲ್ಲಿ ಬಿಡುಗಡೆಯಾದ ಮಿಲನ ಸಿನಿಮಾವು ಪುನೀತ್ ರಾಜಕುಮಾರ್ ನಟನೆಯ ಸೂಪರ್‌ ಹಿಟ್‌ ಸಿನಿಮಾ. ಈ ಚಿತ್ರವು ಕರ್ನಾಟಕದಾದ್ಯಂತ ಒಂದು ವರ್ಷಕ್ಕಿಂತಲೂ ಹೆಚ್ಚು ಕಾಲ ಥಿಯೇಟರ್‌ನಲ್ಲಿ ಓಡಿತ್ತು. ಈ ಚಿತ್ರದ ರೊಮ್ಯಾಂಟಿಕ್ ಕತೆ, ಹಾಡುಗಳು ಯುವಕರ ಮನಸ್ಸನ್ನು ಗೆದ್ದಿತು.

 

ಓಂ – 500ಕ್ಕಿಂತಲೂ ಹೆಚ್ಚು ಬಾರಿ ಮರು-ಬಿಡುಗಡೆ

1995ರಲ್ಲಿ ಬಿಡುಗಡೆಯಾದ ಓಂ ಸಿನಿಮಾವು ಶಿವ ರಾಜಕುಮಾರ್, ಪ್ರೇಮಾ ಕಾಂಬಿನೇಶನ್‌ನ ಸೂಪರ್‌ ಹಿಟ್‌ ಸಿನಿಮಾವಾಗಿದೆ. ಈ ಸಿನಿಮಾವು 500ಕ್ಕಿಂತಲೂ ಹೆಚ್ಚು ಬಾರಿ ರೀ ರಿಲೀಸ್‌ ಆಗಿದೆ. 100 ದಿನಗಳಿಗಿಂತಲೂ ಹೆಚ್ಚು ಕಾಲ ಈ ಸಿನಿಮಾವು ಥಿಯೇಟರ್‌ನಲ್ಲಿ ಓಡಿದೆ. ಈ ಚಿತ್ರದ ಕಥೆ, ಹಾಡು, ಕಲಾವಿದರ ನಟನೆ ಬಗ್ಗೆ ಜನರು ಇಂದಿಗೂ ಮಾತನಾಡುತ್ತಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ