
ನಟ ದರ್ಶನ್ ಅವರಿಗೆ ಕಾಡು, ವನ್ಯಜೀವಿಗಳು, ಪಕ್ಷಿಗಳು ಎಂದರೆ ಬಲು ಇಷ್ಟ. ಕರ್ನಾಟಕ ಅರಣ್ಯ ಇಲಾಖೆಯ ರಾಯಬಾರಿ ಆಗಿ, ಆಯ್ಕೆಯಾದ ಮೇಲಂತೂ ಮತ್ತಷ್ಟು ಕಾಡು ಸುತ್ತಿ ಪ್ರಾಣಿ ಜಗತ್ತನ್ನು ಹತ್ತಿರದಿಂದ ಕಂಡಿದ್ದಾರೆ. ವರ್ಲ್ಡ್ ವೈಲ್ಡ್‌ಲೈಫ್ ಡೇ (ಮಾ.3) ಅಂಗವಾಗಿ ತಾವು ತೆಗೆದ ಫೋಟೋಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡು, ವನ್ಯಜೀವಿಗಳನ್ನು ಉಳಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
ದರ್ಶನ್ ಮೈಸೂರಿನ ಮನೆ ಕಟ್ಟಿಸೋಕೆ ಹಣ್ಣ ಕೊಟ್ಟಿದ್ದೇ ಉತ್ತರ ಕರ್ನಾಟಕದ ಜನರಂತೆ!
‘ಎಲ್ಲರೂ ವನ್ಯಜೀವಿಗಳನ್ನು ಉಳಿಸೋಣ. ಈ ಜಗತ್ತನ್ನು ಉಳಿಸಲು ವನ್ಯಜೀವಿಗಳನ್ನು ಉಳಿಸಿ. ಅವು ನಿಮಗೆ ಕಾಳಜಿ ತೋರುತ್ತವೆ. ಅಪರಿಚಿತರಾಗಬೇಡಿ. ಪ್ರಾಣಿಗಳನ್ನು ಉಳಿಸಿ. ಏಕೆಂದರೆ ಅವು ಈ ಪ್ರಪಂಚದ ಒಂದು ಭಾಗ. ವನ್ಯಜೀವಿಗಳಿಗಾಗಿ ನಿಲ್ಲುವ ಸಮಯ,’ಎಂದು ಬರೆದಿದ್ದಾರೆ.
ಈ ಹಿಂದೆ ಸೆರೆ ಹಿಡಿದ ಫೋಟೋಗಳನ್ನು ದರ್ಶನ್ ಮಾರಾಟಕ್ಕಿಟ್ಟಿದ್ದರು, ಅದರಿಂದ ಬರುವ ಹಣವನ್ನು ವನ್ಯ ಜೀವಿಗಳ ಆರೈಕೆಗೆ ನೀಡುವುದಾಗಿ ತಿಳಿಸಿದ್ದರು. ಚಿಕ್ಕಣ್ಣ ಫೋಟೋ ಖರೀದಿಸಿದ ವಿಚಾರವನ್ನು ಕೂಡ ಹಂಚಿಕೊಂಡಿದ್ದರು. ಸೌತ್ ಆಫ್ರಿಕಾ ಹಾಗೂ ದುಬೈನ ಕೆಲವೊಂದು ಭಾಗದಲ್ಲಿ ವನ್ಯ ಜೀವಿಗಳನ್ನು ಸಾಕಲು ಸರ್ಕಾರ ಅನುಮತಿ ನೀಡುತ್ತದೆ. ಸಿಂಹ ಸಾಕಬೇಕು ಎಂಬುದು ದರ್ಶನ್ ಬಹಳ ದಿನಗಳ ಆಸೆ ಅಂತೆ. ಬಿಡುವಿದ್ದಾಗಲೆಲ್ಲಾ ವೈಲ್ಡ್ ಲೈಫ್ ವಿಡಿಯೋಗಳನ್ನು ವೀಕ್ಷಿಸಿ ಮಾಹಿತಿ ಪಡೆದುಕೊಳ್ಳುತ್ತಾರಂತೆ. ಈ ವಿಚಾರದ ಬಗ್ಗೆ ರಾಬರ್ಟ್ ಪ್ರಚಾರದಲ್ಲಿ ಹೇಳಿ ಕೊಂಡಿದ್ದರು.
ಜಗಪತಿ ಬಾಬು ಜೊತೆ ತೆಲುಗಲ್ಲಿ ಮಾತನಾಡಿದ ದರ್ಶನ್; ಹೇಗಿತ್ತು ಕಾರ್ಯಕ್ರಮ!
ಈ ಮಧ್ಯೆ ದರ್ಶನ್‌ಗೆ ಕೃಷಿ ಮೇಲೂ ಎಲ್ಲಿಲ್ಲದ ವ್ಯಾಮೋಹ. ಮಣ್ಣನ್ನು ಆಪ್ತವಾಗಿ ಪ್ರೀತಿಸುತ್ತಾರೆ ಚಾಲೆಂಜಿಂಗ್ ಸ್ಟಾರ್. ಈ ಬೆನ್ನಲ್ಲೇ ಕರ್ನಾಟಕ ಸರಕಾರದ ಕೃಷಿ ಇಲಾಖೆ ರಾಯಭಾರಿಯಾಗಿಯೂ ಮಾರ್ಚ್ 5ರಂದು ಅಧಿಕಾರ ಸ್ವೀಕರಿಸಲಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.