ಚಿತ್ರ ವಿಮರ್ಶೆ: ಸಲಗ

Kannadaprabha News   | Asianet News
Published : Oct 16, 2021, 09:35 AM IST
ಚಿತ್ರ ವಿಮರ್ಶೆ: ಸಲಗ

ಸಾರಾಂಶ

ತಮ್ಮ ಹೊಟ್ಟೆಯಲ್ಲಿ ಪಿಸ್ತೂಲುಗಳನ್ನು ಹೊತ್ತ ಎರಡು ದೊಡ್ಡ ಮೀನುಗಳು ಮಂಗಳೂರು ಬಂದರಿನಿಂದ ಬೆಂಗಳೂರು ಅಂಡರ್‌ವಲ್ಡ್‌ರ್‍ಗೆ ಬಂದ ಮೇಲೆ ಕೆಲವರ ತಲೆಗಳು ಉರುಳುತ್ತವೆ. ಮುಂದೆ ಮೀನು, ಮಚ್ಚು, ನೆತ್ತರು ಸೇರಿ ನೆತ್ತರಿನ ಕಾರಿಡಾರ್‌ ಕಟ್ಟುತ್ತವೆ

ಆರ್‌ ಕೇಶವಮೂರ್ತಿ

‘ಸಲಗ’ ನಡೆದಿದ್ದೇ ದಾರಿ, ಆಡಿದ್ದೇ ಆಟ ಎಂದುಕೊಳ್ಳುತ್ತಿರುವಾಗಲೇ ಒಬ್ಬ ಖಡಕ್‌ ಪೊಲೀಸ್‌ ಅಧಿಕಾರಿಯ ಪ್ರವೇಶ ಆಗುತ್ತದೆ. ಚಿಗುರು ಮೀಸೆ ಹುಡುಗರ ಕೈಯಲ್ಲಿ ಮಚ್ಚುಗಳು ಮತ್ತಷ್ಟುಝಳಪಿಸುತ್ತವೆ, ನೆತ್ತರು ಇನ್ನುಷ್ಟುಹೆಪ್ಪುಗಟ್ಟುತ್ತದೆ. ಇಲ್ಲಿ ಸಲಗ ಯಾರು, ಆ ಪೊಲೀಸ್‌ ಅಧಿಕಾರಿ ಏನು ಮಾಡುತ್ತಾರೆ, ಅಣ್ಣನ ಸಾವಿಗೆ ಪ್ರತಿಕಾರ ತೀರಿಸಿಕೊಳ್ಳುವ ಹುಡುಗನ ಕತೆ ಏನಾಗುತ್ತದೆ... ಎಂಬಿತ್ಯಾದಿ ರೆಗ್ಯುಲರ್‌ ಪ್ರಶ್ನೆಗಳ ನಡುವೆ ಒಂದಿಷ್ಟುಮನಸ್ಸಿಗೆ ಮುಟ್ಟುವ ತಿರುವುಗಳನ್ನೂ ಕೂಡ ಪ್ರೇಕ್ಷಕರ ಮುಂದಿಡುತ್ತದೆ ಈ ಚಿತ್ರ.

ವಲಸೆ, ರೌಡಿಸಂ, ರಾಜಕೀಯ ಪುಡಾರಿಕೆ, ಅಮಾಯಕ ಕುಟುಂಬ, ಹಾದಿ ತಪ್ಪುತ್ತಿರುವ ಹುಡುಗರು, ಪೊಲೀಸ್‌ ವ್ಯವಸ್ಥೆ ಹೀಗೆ ಎಲ್ಲವನ್ನೂ ಒಂದಕ್ಕೊಂದು ಗಂಟು ಹಾಕಿ ಒಂದೊಂದು ಸನ್ನಿವೇಶವನ್ನೂ ಒಂದು ಬ್ಲಾಕ್‌ನಲ್ಲಿ ಫಿಟ್‌ ಮಾಡಿ ಅದನ್ನು ಶ್ರದ್ಧೆಯಿಂದ ಚಿತ್ರೀಕರಣ ಮಾಡಿಕೊಂಡಿದ್ದಾರೆ ನಟ ವಿಜಯ್‌. ನಟನೆ, ನಿರ್ದೇಶನ ಎರಡಕ್ಕೂ ವಿಜಯ್‌ ಅವರೇ ಸಾರಥಿ ಆಗಿದ್ದರೂ ಅವರೇ ತೆರೆ ತುಂಬಾ ತುಂಬಿಕೊಂಡಿಲ್ಲ. ಹೀರೋ ಆದರೂ ಕತೆಗೆ ಅಗತ್ಯವಿದ್ದಷ್ಟುತಮ್ಮ ಪಾತ್ರವನ್ನು ಕಟ್ಟಿಕೊಂಡಿದ್ದಾರೆ ಎಂಬುದೇ ಈ ಚಿತ್ರದ ಪ್ಲಸ್‌ ಪಾಯಿಂಟ್‌. ಇವರ ಮೊದಲ ನಿರ್ದೇಶನಕ್ಕೆ ಸಾಥ್‌ ಕೊಟ್ಟಿರುವುದು ಮಾಸ್ತಿ ಅವರ ಸಂಭಾಷಣೆ, ದೀಪು ಎಸ್‌ ಕುಮಾರ್‌ ಅವರ ಸಂಕಲನ, ಶಿವಸೇನಾ ಅವರ ಕ್ಯಾಮೆರಾ ಹಾಗೂ ಚರಣ್‌ರಾಜ್‌ ಅವರ ಹಿನ್ನೆಲೆ ಸಂಗೀತ. ಕಮರ್ಷಿಯಲ್‌ ಚಿತ್ರವಾದರೂ ಅದಕ್ಕೆ ನೈಜತೆಯ ನೆರಳು ಇದ್ದರೆ ಹೇಗಿರುತ್ತದೆ ಎಂಬುದಕ್ಕೆ ‘ಸಲಗ’ ಮೇಕಿಂಗ್‌ ಅತ್ಯುತ್ತಮ ಉದಾಹರಣೆ.

ನನ್ನ ಲೈಫ್‌ ಡ್ರೈವ್‌ ಮಾಡುವ ಸಿನಿಮಾ ಸಲಗ : ದುನಿಯಾ ವಿಜಯ್‌

ತಾರಾಗಣ: ವಿಜಯ್‌, ಧನಂಜಯ್‌, ಸಂಜನಾ ಆನಂದ್‌, ಅಚ್ಯುತ್‌ ಕುಮಾರ್‌, ಭಾಸ್ಕರ್‌, ಕಾಕ್ರೋಚ್‌ ಸುಧೀರ್‌, ರಾಕ್‌ಲೈನ್‌ ಸುಧಾಕರ್‌, ಸಂಪತ್‌,

ನಿರ್ದೇಶನ: ದುನಿಯಾ ವಿಜಯ್‌

ರೇಟಿಂಗ್‌: 3

ಸಿನಿಮಾ ದುನಿಯಾದಲ್ಲಿ ತುಂಬಾ ಪಾಠಗಳನ್ನು ಕಲಿತಂತೆ ಕಾಣುವ ನಟ ವಿಜಯ್‌, ಆ ಎಲ್ಲವನ್ನು ಗಮನದಲ್ಲಿಟ್ಟುಕೊಂಡೇ ತಮ್ಮ ಮೊದಲ ಚಿತ್ರವನ್ನು ನಿರ್ದೇಶಿಸಿದ್ದಾರೆ. ನಟರಾಗಿ ಅವರ ಪಾತ್ರ ಚಿತ್ರಕಥೆಯನ್ನು ಮೀರಿ ನಡೆಯಲ್ಲ! ಉಳಿದಂತೆ ಚಿತ್ರದ ಬಹುತೇಕ ಪಾತ್ರಧಾರಿಗಳು ಪೊಲೀಸ್‌ ಇಲಾಖೆಯ ಎಫ್‌ಐಆರ್‌ನಿಂದ ನೇರವಾಗಿ ಎದ್ದು ಬಂದಂತೆ ಕಾಣುತ್ತಾರೆ. ಆದರೆ, ಮತ್ತೊಮ್ಮೆ ಕಾಕ್ರೋಚ್‌ ಸುಧೀ ಇಲ್ಲಿ ಮಿಂಚಿದ್ದಾರೆ. ಸಂಜನಾ ಆನಂದ್‌ ಕನ್ನಡಕ್ಕೆ ಸಿಕ್ಕ ಮತ್ತೊಬ್ಬ ಪ್ರತಿಭಾವಂತ ನಟಿ ಎನ್ನುವ ಮಾತು ಸಾಬೀತು ಮಾಡಿದ್ದಾರೆ. ‘ದುನಿಯಾ’, ‘ಕಡ್ಡಿಪುಡಿ’, ‘ಟಗರು’ ಚಿತ್ರಗಳಲ್ಲಿ ನಿರ್ದೇಶಕ ಸೂರಿ ಅವರು ಒಂದಿಷ್ಟುಹೊಸ ನೆಗೆಟೀವ್‌ ಪಾತ್ರಗಳನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದರು. ನಿರ್ದೇಶಕರಾಗಿ ವಿಜಯ್‌ ಕೂಡ ಆ ಕೆಲಸವನ್ನು ‘ಸಲಗ’ ಚಿತ್ರದಲ್ಲಿ ಮಾಡಿದ್ದಾರೆ. ಹಾದಿ ತಪ್ಪಿದ ಕ್ರಿಮಿನಲ್‌ ಹಿಂದೆ ಒಂದು ಕತೆ ಇದೆ, ಆ ಕತೆಗೆ ಯಾರೆಲ್ಲ ಹೊಣೆ ಎನ್ನುವ ಜತೆಗೆ ಹಾದಿ ತಪ್ಪದಂತೆ ಎಚ್ಚರ ವಹಿಸಬೇಕಿರುವುದು ಯಾರು ಎನ್ನುವ ಪ್ರಶ್ನೆಯನ್ನು ಈ ಚಿತ್ರ ಮುಂದಿಡುತ್ತದೆ.

"

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Mark Movie: ಡಿಸೆಂಬರ್‌ನಲ್ಲಿ ಏಕಕಾಲಕ್ಕೆ ಸ್ಟಾರ್‌ಗಳ ಸಿನಿಮಾ ರಿಲೀಸ್;‌ ಕಿಚ್ಚ ಸುದೀಪ್‌ ಏನಂದ್ರು?
ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!