ಬಿಡುಗಡೆಗಿದ್ದ ತಾಂತ್ರಿಕ ದೋಷಗಳಿಗೆ ಮುಕ್ತಿ. ಗೊಂದಲಗಳಿಗೆ ಬ್ರೇಕ್, ದೊಡ್ಡ ಪರದೆ ಮೇಲೆ ಅಭಿನಯ ಚಕ್ರವರ್ತಿ. ಎಲ್ಲೆಡೆ ಹೌಸ್‌ಫುಲ್ ಪ್ರದರ್ಶನ...
2019ರ ಭರ್ಜರಿ ಪ್ರದರ್ಶನ ಕಂಡ ಪೈಲ್ವಾನ್ (Pilawn) ಚಿತ್ರದ ನಂತರ ಕಿಚ್ಚ ಸುದೀಪ್ (Kiccha Sudeep) ಅವರನ್ನು ಪರದೆ ಮೇಲೆ ಮಿಸ್ ಮಾಡಿಕೊಳ್ಳುತ್ತಿದ್ದ ಅಭಿಮಾನಿಗಳಿಗೆ ಕೋಟಿಗೊಬ್ಬ 3 (Kotigobba 3) ಸಿನಿಮಾ ದೊಡ್ಡ ಟ್ರೀಟ್ ಅಂತಾನೇ ಹೇಳಬಹುದು. ಪ್ರಚಾರದ ಕಡಿಮೆ ಇದ್ದರೂ, ಸಿನಿಮಾ ಸೂಪರ್ ಹಿಟ್ ಆಗುವುದರಲ್ಲಿ ಅನುಮಾವಿಲ್ಲ, ಏಕೆಂದರೆ ಅಭಿನಯ ಚಕ್ರವರ್ತಿ ಅಭಿಮಾನಿಗಳು ಅಷ್ಟಿದ್ದಾರೆ.
ಕರ್ನಾಟಕದಲ್ಲಿ ಸುಮಾರು 300 ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿರುವ ಕೋಟಿಗೊಬ್ಬ 3 ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಫಸ್ಟ್ ಡೇ, ಫ್ಯಾನ್ಸ್ ಶೋ ವೀಕ್ಷಿಸಿದ ಸಿನಿ ರಸಿಕರು ಸಿನಿಮಾ ಹೇಗಿತ್ತು ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದು ಕೊಳ್ಳುತ್ತಿದ್ದಾರೆ. ಹಬ್ಬದ ದಿನ ಬೆಳಂ ಬೆಳಗ್ಗೆ ಅಭಿಮಾನಿಗಳ ಸಾಗರ ಕಂಡು ಕಿಚ್ಚ ಸುದೀಪ್ ಸೋಷಿಯಲ್ ಮೀಡಿಯಾದಲ್ಲಿ ಸಂತಸ ವ್ಯಕ್ತ ಪಡಿಸಿದ್ದಾರೆ. ಈ ಪ್ರೀತಿ, ವಿಶ್ವಾಸಕ್ಕೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
'ಕೋಟಿಗೊಬ್ಬ ಚಿತ್ರಕ್ಕೆ ತೋರಿಸುತ್ತಿರುವ ಪ್ರೀತಿಗೆ ಧನ್ಯವಾದಗಳು. ಬೆಳಗಿನ ಜಾವದ ಶೋ ವಿಡಿಯೋ ಮತ್ತು ಫೋಟೋಗಳು ಅಪ್ಲೋಡ್ ಮಾಡುತ್ತಿರುವುದನ್ನು ನೋಡಿದ್ದೀನಿ. ಥಿಯೇಟರ್ ಮುಂದೆ ನಿಮ್ಮ ಉತ್ಸಾಹ ನೋಡಲು ತುಂಬಾನೇ ಖುಷಿ ಆಗುತ್ತಿದೆ. ನೀವೇಲ್ಲರೂ ನಮ್ಮೊಟ್ಟಿಗೆ ನಿಂತಿದ್ದಕ್ಕೆ ಧನ್ಯವಾದಗಳು. ಇದಕ್ಕೆ ಬೆಲೆ ಕಟ್ಟಲಾಗುವುದಿಲ್ಲ,' ಎಂದು ಸುದೀಪ್ ಟ್ಟೀಟ್ ಮಾಡಿದ್ದಾರೆ.
ಅಬ್ಬಬ್ಬಾ! ಕೋಟಿಗೊಬ್ಬ 3 ಚಿತ್ರದ ಬಗ್ಗೆ ನಿಮಗೆ ಗೊತ್ತಿರದ ಸತ್ಯ ಬಿಚ್ಚಿಟ್ಟ ಸುದೀಪ್ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ (Arjun Janya) ಹಾಡುಗಳ ಬಗ್ಗೆ ಅಭಿಮಾನಿಗಳು ಟ್ಟೀಟ್ ಮಾಡುತ್ತಿದ್ದಾರೆ. 'ನನ್ನ ಪ್ರೀತಿ ಹಾಗೂ ಶಕ್ತಿ ನಿಮಗೆ ಅರ್ಜುನ್ ಜನ್ಯಾ. ನನ್ನ ಇಷ್ಟು ವರ್ಷಗಳ ಜರ್ನಿಯಲ್ಲಿ ನೀವು ನನ್ನ ಗ್ರೇಟ್ ಸಪೋರ್ಟ್. ಇದೊಂದು ಸ್ವೀಟ್ ಜರ್ನಿ ಆಗಿದ್ದು, ನಿಮ್ಮ ಜೊತೆ ಹೀಗೆ ಈ ಜರ್ನಿ ಮುಂದುವರೆಸಿಕೊಂಡು ಹೋಗಲು ಇಷ್ಟ ಪಡುತ್ತೇನೆ. ನಿಮ್ಮ ರಿಮಾರ್ಕೇಬಲ್ ಸಂಗೀತ ನನ್ನನ್ನು ಪರದೆ ಮೇಲೆ ಮತ್ತೆ ಎತ್ತಿ ಹಿಡಿಯುತ್ತಿದೆ,' ಎಂದಿದ್ದಾರೆ ಕಿಚ್ಚ.
ಕೋಟಿಗೊಬ್ಬ 3 ಸಿನಿಮಾ ಆಯುಧ ಪೂಜೆ ದಿನ ಬಿಡುಗಡೆ ಆಗಬೇಕಿತ್ತು. ಆದರೆ ತಾಂತ್ರಿಕ ಸಮಸ್ಯೆಯಿಂದ ಇಂದು 300 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿದ್ದಾರೆ. ವಿತರಕರ ನಡುವ ಇದ್ದ ಗೊಂದಲದಿಂದ ಲೈಸನ್ಸ್ ಸಿಗದೇ, ಈ ಚಿತ್ರ ಎಲ್ಲಿಯೂ ಪ್ರದರ್ಶನ ಮಾಡಲು ಸಾಧ್ಯವಾಗಿರಲಿಲ್ಲ. ಆದರೆ ಇಡೀ ತಂಡದ ಸಹಾಯಕ್ಕೆ ಸುದೀಪ್ ನಿಂತು, ಅದ್ಧೂರಿ ಪ್ರದರ್ಶನಕ್ಕೆ ಚಾಲನೆ ನೀಡಿದ್ದಾರೆ.
Thank you all for the luv ....
Been seeing the videos uploaded from the early morn shows,,, its a bliss to see the excitement at the theaters.
You all have stood by us,, and it's priceless.
🤗🙏🏼❤ pic.twitter.com/a3tBWUXSeO