ಮಾತಿನ ಈಟಿಯ ಬೀಸಿ. ಲಾಟಿನು ಕಣ್ಣಲ್ಲೇ ಉರಿಸಿ. ಬೇಟೆಗೆ ಬಂದಳು ರೂಪಿಸಿ. ಈಕೆಯ ಕೈಯಿಂದ ಉಳಿಸಿ. ಎಂಬ ಸಾಲುಗಳೊಂದಿಗೆ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಸಖತ್ ಸಿನಿಮಾದ ಶುರುವಾಗಿದೆ ಮೆಲೋಡಿ ಸಾಂಗ್ ರಿಲೀಸ್ ಆಗಿದೆ.
ನಿರ್ದೇಶಕ ಸಿಂಪಲ್ ಸುನಿ (Simple Suni) ಮತ್ತು ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ಅಭಿನಯದ 'ಸಖತ್' (Sakath) ಸಿನಿಮಾ ಇದೇ ತಿಂಗಳ ನವೆಂಬರ್ 26ಕ್ಕೆ ಬಿಡುಗಡೆಯಾಗುತ್ತಿದ್ದು, ಇತ್ತೀಚೆಗೆ ಚಿತ್ರದ ಟೈಟಲ್ ಟ್ರ್ಯಾಕ್ ಬಿಡುಗಡೆಯಾಗಿತ್ತು. ರ್‍ಯಾಪ್ ಹಾಡಿಗೆ (Rap Song) ಗಣೇಶ್ ಗೋಲ್ಡನ್ ಸ್ಟೆಪ್ಸ್ ಹಾಕಿ ಸಿನಿಪ್ರಿಯರ ಮನಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಇದೀಗ ಚಿತ್ರದ ಮತ್ತೊಂದು ಹಾಡು ಬಿಡುಗಡೆಯಾಗಿದೆ. ಹೌದು! ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್‌ನಲ್ಲಿ 'ಶುರುವಾಗಿದೆ' (Shuruvaagide) ಮೆಲೋಡಿ ಸಾಂಗ್ ರಿಲೀಸ್ ಆಗಿದೆ.
ಮಾತಿನ ಈಟಿಯ ಬೀಸಿ. ಲಾಟಿನು ಕಣ್ಣಲ್ಲೇ ಉರಿಸಿ. ಬೇಟೆಗೆ ಬಂದಳು ರೂಪಿಸಿ. ಈಕೆಯ ಕೈಯಿಂದ ಉಳಿಸಿ. ಎಂಬ ಸಾಲುಗಳೊಂದಿಗೆ 'ಸಖತ್' ಸಿನಿಮಾದ 'ಶುರುವಾಗಿದೆ' ಹಾಡು ಬಿಡುಗಡೆಯಾಗಿದ್ದು, ಸಿನಿಮಂದಿಯ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತಿದೆ. ಹಾಡಿಗೆ ಅರ್ಜುನ್ ಲೂಯಿಸ್ (Arjun Luis) ಸಾಹಿತ್ಯ ಬರೆದಿದ್ದಾರೆ. ಜೂಡಾ ಸ್ಯಾಂಡಿ (Judah Sandhy) ಸಂಗೀತ ಸಂಯೋಜಿಸಿರುವ ಈ ಹಾಡಿಗೆ ದಕ್ಷಿಣ ಭಾರತದ ಹೆಸರಾಂತ ಗಾಯಕ ಸಿದ್ ಶ್ರೀರಾಂ (Sid Sriram) ಕಂಠದಲ್ಲಿ 'ಶುರುವಾಗಿದೆ' ಹಾಡು ಮೂಡಿಬಂದಿದೆ. ಮೋಹನ್ (Mohan) ಈ ಹಾಡಿಗೆ ಕೊರಿಯೋಗ್ರಾಫಿ ಮಾಡಿದ್ದು, ಗಣೇಶ್ ಹಾಗೂ ಸುರಭಿ ಕಲರ್‌ಫುಲ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ನವೆಂಬರ್ 26ಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ 'ಸಖತ್' ಸಿನಿಮಾ ರಿಲೀಸ್
ರೊಮ್ಯಾಂಟಿಕ್ ಕಾಮಿಡಿ ಕ್ರೈಂ ಥ್ರಿಲ್ಲರ್ ಕಥಾಹಂದರವನ್ನು ಹೊಂದಿರುವ ಈ ಚಿತ್ರ ಟಿ.ವಿ. ರಿಯಾಲಿಟಿ ಶೋ ಮತ್ತು ಕೋರ್ಟ್ ಕೇಸ್ ಸುತ್ತ ಸಾಗುತ್ತದೆ. ಚಿತ್ರದಲ್ಲಿ ಗಣೇಶ್ ರಿಯಾಲಿಟಿ ಶೋ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಹಾಡಿನ ಬಗ್ಗೆ ಸಿಂಪಲ್ ಸುನಿ ಇನ್‌ಸ್ಟಾಗ್ರಾಮ್‌ನಲ್ಲಿ (Instagram), 'ಕಚಗುಳಿ ಇಡಲಿ ಈ ಹಾಡಿನ ಗೆಜ್ಜೆ ಘಲ್ಲು, ಹರಡಲಿ ನಿಮ್ಮಲಿ 'ಸಖತ್' ಚಿತ್ರದ ಒಲವಗುಲ್ಲು' ಎಂದು ವಿಡಿಯೋ ಜೊತೆಗೆ ಪೋಸ್ಟನ್ನು ಹಂಚಿಕೊಂಡಿದ್ದಾರೆ. ಹಾಗೂ ಚಿತ್ರದ ಟೈಟಲ್ ಟ್ರ್ಯಾಕ್ ಹಾಡಿನ ಬಗ್ಗೆ 'ಹಾಡು ನೋಡಬೇಕು ನಮ್ಮ ಪ್ರಜೆಗಳು. ಇಲ್ಲಿ ನೀವೆ ನಮ್ಮ ನಿಜವಾದ ಬಂಧುಗಳು. ಈಗ ಬೀಳುತಾವೆ ಗೋಲ್ಡನ್ ಸ್ಟೆಪ್ಪುಗಳು. ಕೇಕೆ ಹಾಕುವಂತೆ ಕುಣಿಬೇಕು ನೀವುಗಳು' ಎಂಬ ಪೋಸ್ಟ್‌ನ್ನು ಇತ್ತೀಚೆಗೆ ಸುನಿ ಶೇರ್ ಮಾಡಿಕೊಂಡಿದ್ದರು.
'ಚಮಕ್' ಚಿತ್ರದ ಮೂಲಕ ಪ್ರೇಕ್ಷಕರಿಗೆ ಕಚಗುಳಿ ಕೊಟ್ಟಿದ್ದ ಗಣಿ-ಸುನಿ ಈ ಬಾರಿ 'ಸಖತ್' ಸಿನಿಮಾದ ಮೂಲಕ ಮತ್ತೆ ಒಂದಾಗಿದ್ದು, ಈಗಾಗಲೇ ಬಿಡುಗಡೆಯಾಗಿರುವ ಈ ಸಿನಿಮಾ ಟೀಸರ್‌ಗೆ (Teaser) ಅಭೂತ ಪೂರ್ವ ರೆಸ್ಪಾನ್ಸ್ ಸಿಕ್ಕಿದೆ. ಮೊದಲ ಬಾರಿಗೆ ಈ ಚಿತ್ರದಲ್ಲಿ ಕಣ್ಣು ಕಾಣದ ವ್ಯಕ್ತಿಯಾಗಿ ಗಣೇಶ್ ಕಾಣಿಸಿಕೊಂಡಿದ್ದಾರೆ. ಕಚಗುಳಿ ಇಡುವ ಡೈಲಾಗ್ಗಳು, ಭರ್ಜರಿ ಕಾಮಿಡಿ ಟೀಸರ್‌ನಲ್ಲಿತ್ತು. ಹಾಗೇ ಚಿತ್ರದ ಹಾಡುಗಳು ಕೂಡ ಎಲ್ಲರ ಗಮನ ಸೆಳೆಯುತ್ತಿವೆ. ಚಿತ್ರದಲ್ಲಿ ಗಣೇಶ್ ಜೊತೆ ನಿಶ್ವಿಕಾ ನಾಯ್ಡು (Nishwika Naidu), ಸುರಭಿ (Surabhi) ನಾಯಕಿಯರಾಗಿ ನಟಿಸಿದ್ದಾರೆ.
ಎರಡೂವರೆ ಗಂಟೆ ನಗಿಸುವ ಸಿನಿಮಾ ಸಖತ್: ಸಿಂಪಲ್ ಸುನಿ
ರಂಗಾಯಣ ರಘು (Rangayana Raghu), ಸಾಧು ಕೋಕಿಲ (Sadhu Kokila), ಗಿರಿ, ಧರ್ಮಣ್ಣ ಮುಂತಾದ ಕಲಾವಿದರ ತಾರಾಬಳಗ ಚಿತ್ರಕ್ಕಿದೆ. ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ಈ ಸಿನಿಮಾ ತಯಾರಾಗಿದ್ದು, ನಿಶಾ ವೆಂಕಟ್ ಕೋನಂಕಿ ಮತ್ತು ಸುಪ್ರಿತ್ ಬಂಡವಾಳ ಹಾಕಿದ್ದಾರೆ. ಜೂಡಾ ಸ್ಯಾಂಡಿ ಸಂಗೀತ, ಶಾಂತ್ ಕುಮಾರ್ ಸಂಕಲನ ಮತ್ತು ಸಂತೋಷ್ ರೈ ಪಾತಾಜೆ ಛಾಯಾಗ್ರಹಣ 'ಸಖತ್' ಸಿನಿಮಾಗಿದೆ. ಇನ್ನು ಈ ಚಿತ್ರದಲ್ಲಿ ಗಣೇಶ್ ಪುತ್ರ ವಿಹಾನ್ (Vihan) ನಟಿಸುತ್ತಿದ್ದು, ಚಿತ್ರದ ನಾಯಕ ಗಣೇಶ್ ಅವರ ಬಾಲ್ಯದ ದಿನಗಳ ಪಾತ್ರವನ್ನು ಬಾಲು ಪಾತ್ರದಲ್ಲಿ ವಿಹಾನ್ ಅಭಿನಯಿಸಿದ್ದಾರೆ, ಪಾತ್ರಕ್ಕೆ ತಾವೇ ಡಬ್ಬಿಂಗ್ (Dubbing) ಕೂಡ ಮಾಡಿದ್ದಾರೆ.