
ಸರಿಗಮಪ ಖ್ಯಾತಿಯ ಗಾಯಕಿ ಸುಹಾನಾ ಸೈಯ್ಯದ್ ಮುಖ್ಯಪಾತ್ರದಲ್ಲಿ ನಟಿಸಿರುವ ‘ನಿರ್ಭಯಾ 2’ ಚಿತ್ರ ಮುಹೂರ್ತ ಮುಗಿಸಿ ಶೂಟಿಂಗ್ ತಯಾರಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ರಾಜು ಕುಣಿಗಲ್ ಚಿತ್ರದ ಬಗ್ಗೆ ಮಾತನಾಡಿದರು. ‘ಆಂಧ್ರ, ಮೈಸೂರಿನ ಅತ್ಯಾಚಾರ ಪ್ರಕರಣಗಳ ಜೊತೆಗೆ ದೆಹಲಿಯ ನಿರ್ಭಯಾ ಪ್ರಕರಣವನ್ನಿಟ್ಟು ಕಾಲ್ಪನಿಕವಾಗಿ ಈ ಚಿತ್ರದ ಕತೆ ಹಣೆಯಲಾಗಿದೆ. ಈ ಕ್ರೈಮ್‌ನ ಮೂಲ ಏನು, ಅದನ್ನು ಹೇಗೆ ಮಟ್ಟಹಾಕಬಹುದು ಅನ್ನೋದನ್ನು ಚಿತ್ರದಲ್ಲಿ ಕಮರ್ಷಿಯಲ್ಲಾಗಿ ಹೇಳಲಿದ್ದೇವೆ’ ಎಂದರು.
ಅರ್ಜುನ್ ಕೃಷ್ಣ, ಹರೀಶ್, ಕುಸುಮಾ ಮುಖ್ಯಪಾತ್ರದಲ್ಲಿದ್ದಾರೆ. ನಿರ್ಮಾಪಕ ಬಾಲಕೃಷ್ಣ ಕೆ ಆರ್, ಸಂಗೀತ ನಿರ್ದೇಶಕ ಆಕಾಶ ಪರ್ವ, ಸಿನಿಮಾಟೋಗ್ರಾಫರ್ ಗುಂಡ್ಲುಪೇಟೆ ಸುರೇಶ್ ಸುದ್ದಿಗೋಷ್ಠಿಯಲ್ಲಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.