ನವೆಂಬರ್ 26ಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ 'ಸಖತ್' ಸಿನಿಮಾ ರಿಲೀಸ್

By Suvarna News  |  First Published Nov 6, 2021, 7:34 PM IST

ಸಿಂಪಲ್ ಸುನಿ ನಿರ್ದೇಶನದ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಸಖತ್'  ಚಿತ್ರ ನವೆಂಬರ್ 26ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಮೊದಲ ಬಾರಿಗೆ ಈ ಚಿತ್ರದಲ್ಲಿ ಕಣ್ಣು ಕಾಣದ ವ್ಯಕ್ತಿಯಾಗಿ ಗಣೇಶ್​ ಕಾಣಿಸಿಕೊಂಡಿದ್ದಾರೆ.


ಸ್ಯಾಂಡಲ್‌ವುಡ್‌ನ ಪವರ್ ಸ್ಟಾರ್ ಪುನೀತ್​ ರಾಜ್​ಕುಮಾರ್ (Puneeth Rajkumar)​ ನಿಧನರಾಗಿದ್ದು, ಇಡೀ ಭಾರತ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಕೋಟ್ಯಂತರ ಅಭಿಮಾನಿಗಳನ್ನು ಅವರು ಅಗಲಿದ್ದಾರೆ. ಇವರ ನಿಧನಕ್ಕೆ ಅಭಿಮಾನಿಗಳೂ ಸೇರಿದಂತೆ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿ ಇಂದಿಗೂ ತಮ್ಮ ನೋವನ್ನು ಹೊರಹಾಕುತ್ತಿದ್ದಾರೆ. ಇದೀಗ ಸಿಂಪಲ್ ಸುನಿ (Simple Suni) ನಿರ್ದೇಶನದ ಇದೇ ತಿಂಗಳ 12ರಂದು ಬಿಡುಗಡೆಯಾಗಬೇಕಿದ್ದ ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ಅಭಿನಯದ 'ಸಖತ್' (Sakath) ಚಿತ್ರದ ರಿಲೀಸ್ ಮುಂದಕ್ಕೆ ಹೋಗಿದೆ. ಪುನೀತ್ ರಾಜ್‌ಕುಮಾರ್ ಅವರ ಅಗಲಿಕೆಯ ಹಿನ್ನೆಲೆಯಲ್ಲಿ ಚಿತ್ರತಂಡ ಈ ನಿರ್ಧಾರಕ್ಕೆ ಬಂದಿದೆ. ನವೆಂಬರ್ 26ಕ್ಕೆ 'ಸಖತ್' ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. 

ಪುನೀತ್ ಅಗಲಿಕೆಗೆ 'ಸಖತ್' ಸಿನಿಮಾದ ನಿರ್ದೇಶಕ ಸಿಂಪಲ್ ಸುನಿ, ದಯವಿಟ್ಟು ಯಾರು 'ಆ ಪಿಕ್' ಅನ್ನು ಶೇರ್ ಮಾಡಬೇಡಿ. ನಮ್ಮ ಕಣ್ಣಲ್ಲಿ 'ಅಪ್ಪು ಸರ್' ಸದಾ ಎಂದಿನಂತೆ ಹಸನ್ಮುಖರಾಗಿರಲಿ. 'ಜೊತೆಗಿರದ ಜೀವ ಎಂದಿಗೂ ಜೀವಂತ'. ಜೀವನದ ಅಘಾತಕಾರಿ ಸುದ್ದಿ ಇದು ಎಂದು ಬರೆದು ಸಾಮಾಜಿಕ ಜಾಲತಾಣದಲ್ಲಿ (Social Media) ಪುನೀತ್ ಫೋಟೋ ಹಂಚಿಕೊಂಡಿದ್ದರು. ಮತ್ತು ಅಪ್ಪು ನಿಧನಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಅವರು ಕೂಡಾ ಇನ್‌ಸ್ಟಾಗ್ರಾಮ್ (Instagram) ಖಾತೆಯಲ್ಲಿ 'ಅದ್ಭುತವಾದ ಆತ್ಮ, ಮಹಾನ್ ಮಾನವ, ಸ್ನೇಹಿತ, ಸಹೋದರ. ಇಷ್ಟು ಬೇಗ ನಮ್ಮನ್ನು ಅಗಲಿದ್ದಾರೆ, ಇನ್ನೂ ಈ ಆಘಾತವನ್ನು ನಂಬಲಾಗುತ್ತಿಲ್ಲ. ಕುಟುಂಬ ಮತ್ತು ಅಭಿಮಾನಿಗಳಿಗೆ ದೇವರು ಎಲ್ಲ ಶಕ್ತಿಯನ್ನು ನೀಡಲಿ. ಮಿಸ್ ಯು ಅಪ್ಪು ಸರ್' ಎಂದು ಪೋಸ್ಟ್ ಮಾಡಿದ್ದಾರೆ.

Tap to resize

Latest Videos

'ಅಪ್ಪು ನಿಮಗೆಂದೂ ಸಾವಿಲ್ಲ ನೀವಿಲ್ಲದೇ ಏನೇನೂ ಇಲ್ಲ': ಜೋಗಿ ಪ್ರೇಮ್

ಇತ್ತೀಚೆಗಷ್ಟೇ  'ಸಖತ್' ಚಿತ್ರದ 'ಸಖತ್ ಬಾಲು' ಟೀಸರ್ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿತ್ತು. ಮೊದಲ ಬಾರಿಗೆ ಈ ಚಿತ್ರದಲ್ಲಿ ಕಣ್ಣು ಕಾಣದ ವ್ಯಕ್ತಿಯಾಗಿ ಗಣೇಶ್​ ಕಾಣಿಸಿಕೊಂಡಿದ್ದರು. ಕಚಗುಳಿ ಇಡುವ ಡೈಲಾಗ್​ಗಳು, ಭರ್ಜರಿ ಕಾಮಿಡಿ ಟೀಸರ್‌ನಲ್ಲಿತ್ತು. ಚಿತ್ರದಲ್ಲಿ ಗಣೇಶ್​ ಜೊತೆ ನಿಶ್ವಿಕಾ ನಾಯ್ಡು (Nishwika Naidu), ಸುರಭಿ (Surabhi) ನಾಯಕಿಯರಾಗಿ ನಟಿಸಿದ್ದಾರೆ. ರಂಗಾಯಣ ರಘು (Rangayana Raghu), ಸಾಧು ಕೋಕಿಲ (Sadhu Kokila), ಗಿರಿ, ಧರ್ಮಣ್ಣ ಮುಂತಾದ ಕಲಾವಿದರ ತಾರಾಬಳಗ ಚಿತ್ರಕ್ಕಿದೆ. ಕೆವಿಎನ್​ ಪ್ರೊಡಕ್ಷನ್ಸ್​ ಬ್ಯಾನರ್​ನಲ್ಲಿ ಈ ಸಿನಿಮಾ ತಯಾರಾಗಿದ್ದು,​ ನಿಶಾ ವೆಂಕಟ್​ ಕೋನಂಕಿ ಮತ್ತು ಸುಪ್ರಿತ್​ ಬಂಡವಾಳ ಹಾಕಿದ್ದಾರೆ. ಜೂಡಾ ಸ್ಯಾಂಡಿ ಸಂಗೀತ, ಶಾಂತ್​ ಕುಮಾರ್​ ಸಂಕಲನ ಮತ್ತು ಸಂತೋಷ್​ ರೈ ಪಾತಾಜೆ ಛಾಯಾಗ್ರಹಣ 'ಸಖತ್'​ ಸಿನಿಮಾಗಿದೆ.

ಸಿಂಪಲ್ ಸುನಿ 'ಸಖತ್'ನಲ್ಲಿ ಕುರುಡನಾದ ಗಣೇಶ್

ಇನ್ನು ಈ ಚಿತ್ರದಲ್ಲಿ ಗಣೇಶ್ ಪುತ್ರ ವಿಹಾನ್ (Vihan) ನಟಿಸುತ್ತಿದ್ದು, ಚಿತ್ರದ ನಾಯಕ ಗಣೇಶ್ ಅವರ ಬಾಲ್ಯದ ದಿನಗಳ ಪಾತ್ರವನ್ನು ಬಾಲು ಪಾತ್ರದಲ್ಲಿ ವಿಹಾನ್ ಮಾಡುತ್ತಿದ್ದು, ಪಾತ್ರಕ್ಕೆ ತಾವೇ ಡಬ್ಬಿಂಗ್ (Dubbing) ಕೂಡ ಮಾಡಿದ್ದಾರೆ ಎಂದು ಗಣೇಶ್ ಈ ಹಿಂದೆ ಟ್ವೀಟ್‌ (Tweet) ಮಾಡಿದ್ದರು. ಬಾಲು & ಜ್ಯೂನಿಯರ್ ಬಾಲು (ವಿಹಾನ್) ನಿಂದ ಡಬ್ಬಿಂಗ್ ಮುಕ್ತಾಯ. ನಮ್ಮಿಬ್ಬರ ಮಾತಿನ ಪುಳಕ ಹಾಗೂ ಕಣ್ ಚಳಕ ನಿಮಗೆ ಮಕ್ಕಳ ದಿನಾಚರಣೆ (Childrens Day) ದಿನಾಂಕದ ಹತ್ತಿರ ಚಿತ್ರಮಂದಿರದಲ್ಲಿ ಕಾಣಸಿಗಲಿದೆ. ನಿಮ್ಮ ಹಾರೈಕೆಯಿರಲಿ ಎಂದು ನಟ ಗಣೇಶ್ ಹೇಳಿದ್ದರು.
 

click me!