
ನ್ಯಾಷನಲ್ ಸ್ವಿಮ್ಮರ್: ನಾನು ಈಜು ಪಟು. ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದೆ. ಅದೇ ಕ್ಷೇತ್ರದಲ್ಲಿ ಇದ್ದಿದ್ದರೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಹೆಸರು ಮಾಡುತ್ತಿದ್ದೆ. ಅಂದರೆ ನನಗೆ ಚಿಕ್ಕಂದಿನಿಂದಲೂ ಸಿನಿಮಾ ಎಂದರೆ ಆಕರ್ಷಣೆ.
ಹೀಗಾಗಿ ನಟಿಯಾಗಬೇಕೆಂಬ ನಿಟ್ಟಿನಲ್ಲಿ ಡಿಗ್ರಿ ಮುಗಿದ ಮೇಲೆ ಮುಂಬೈನಲ್ಲೇ ನಟನೆಯಲ್ಲಿ ಡಿಪ್ಲೊಮಾ ಕೋರ್ಸ್ ಮಾಡಿದೆ.
'ಮಾಲ್ಗುಡಿ ಡೇಸ್' ಚಿತ್ರದಲ್ಲಿ ಸ್ಕೂಲ್ ಹುಡುಗನಾದ ವಿಜಯ್ ರಾಘವೇಂದ್ರ!
ರಂಗಭೂಮಿ ಟು ಕಿರುತೆರೆ: ನಟನೆಯಲ್ಲಿ ತರಬೇತಿ ಮಾಡಿ ಕೊಂಡ ಮೇಲೆ ಹಿಂದಿ ರಂಗ ಭೂಮಿ ಯಲ್ಲಿ ತೊಡಗಿಸಿಕೊಂಡೆ. ಬೆಂಗಳೂರಿನಲ್ಲಿ ಇಂಗ್ಲಿಷ್ ಥಿಯೇ ಟರ್‌ನಲ್ಲಿ ಗುರುತಿಸಿಕೊಂಡೆ. ನಂತರ ‘ಹರಹರ ಮಹದೇವ’ ಧಾರಾ ವಾಹಿಯಲ್ಲಿ ಶೂರ್ಪನಖಿ ಪಾತ್ರ ಮಾಡಿದೆ.
ನಾತಿಚರಾಮಿ ಹಸಿನಾ: ನಿರ್ದೇಶಕ ಮಂಸೋರೆ ಅವರ ‘ನಾತಿಚರಾಮಿ’ ಚಿತ್ರದಲ್ಲಿ ಹಸೀನಾ ಎನ್ನುವ ಪುಟ್ಟ ಪಾತ್ರ ಮಾಡಿದೆ. ಈ ಸಿನಿಮಾ ಮಾಡುವಾಗಲೇ ‘ಮಾಲ್ಗುಡಿ ಡೇಸ್’ಗೆ ಆಯ್ಕೆಯಾದೆ. ಐಟಿ ಹುಡುಗಿ ಪಾತ್ರ: ‘ಮಾಲ್ಗುಡಿ ಡೇಸ್’ನಲ್ಲಿ ಐಟಿ ಹುಡುಗಿ ಪಾತ್ರ ನನ್ನದು. ಈ ಜನರೇಷನ್ ಹುಡುಗಿಯರನ್ನು ನೆನಪಿಸುವ, ಹೆಣ್ಣು ಮಕ್ಕಳಿಗೆ ಆಗುವ ತೊಂದರೆಗಳನ್ನು ಮೆಟ್ಟಿ ನಿಲ್ಲುವ ಪಾತ್ರ ನನ್ನದು. ವಿಜಯ್ ರಾಘವೇಂದ್ರ
ಅವರು ಹೇಗೆ ಕನೆಕ್ಟ್ ಆಗುತ್ತಾರೆ ಎಂಬುದನ್ನು ನೀವು ಸಿನಿಮಾದಲ್ಲಿ ನೋಡಬೇಕು. ಯಂಗ್ ಟೀಮು, ಪ್ರಬುದ್ಧ ಕತೆ: ಮಾಲ್ಗುಡಿ ಡೇಸ್ ಚಿತ್ರದ್ದು ಆಪ್ತವಾದ ಕತೆ. ಈ ಚಿತ್ರದಲ್ಲಿ ವಿಜಯ್ ರಾಘವೇಂದ್ರ ಪಾತ್ರ ತುಂಬಾ
ವಿಶೇಷತೆಯಿಂದ ಕೂಡಿದೆ. ನಿರ್ದೇಶಕ ಕಿಶೋರ್ ಮೂಡುಬಿದ್ರೆ ಯುವ ತಂಡದಿಂದ ಪ್ರಬುದ್ಧ ಕತೆಯನ್ನು ಮಾಡಿದ್ದಾರೆ.
ಫೆ. 7 ಕ್ಕೆ ಮಾಲ್ಗುಡಿ ಡೇಸ್ ತೆರೆಗೆ; ಕುತೂಹಲ ಮೂಡಿಸಿದೆ ವಿಜಿ ಹೊಸ ಗೆಟಪ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.