ಈ ಲವ್ ಸ್ಟೋರಿಯಲ್ಲಿ ನಾನು ಕಾಲೇಜ್ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಬಹಳ ಸೈಲೆಂಟ್ ಆಗಿರುವ ಈ ಕಾಲದ ಹುಡುಗಿ ಪಾತ್ರ. ಪಾತ್ರಕ್ಕೆ ಭಿನ್ನ ಶೇಡ್‌ಗಳೇನಿಲ್ಲ. ನಾನು ಸ್ಟೋರಿ ಕೇಳಿ ಇಷ್ಟವಾಗಿ ಚಿತ್ರ ಒಪ್ಪಿಕೊಂಡೆ ಎಂದರು ನಟಿ ರಚನಾ ಇಂದರ್.
'ಲವ್ ಮಾಕ್ಟೇಲ್' ನಟಿ ರಚನಾ ಇಂದರ್ (Rachana Inder) ಹಾಗೂ 'ಇರುವುದೆಲ್ಲವ ಬಿಟ್ಟು' ಸಿನಿಮಾದ ಶ್ರೀ ಮಹದೇವ್ (Shri Mahadev) ನಟನೆಯ 'ಲೆಟ್ಸ್ ಬ್ರೇಕಪ್' (Lets Break Up) ಚಿತ್ರದ ಫಸ್ಟ್ ಲುಕ್ (First Look) ಅನ್ನು ಚಿತ್ರತಂಡ ರಿವೀಲ್ ಮಾಡಿದೆ. ಈ ಚಿತ್ರವನ್ನು ಸ್ವರೂಪ್ (Swaroop) ನಿರ್ದೇಶಿಸಿದ್ದಾರೆ. ಮಿರುನಳಿನಿ (Mirunalini) ನಿರ್ಮಾಪಕರು. ಇದೊಂದು ರೊಮ್ಯಾಂಟಿಕ್ ಡ್ರಾಮಾವಾಗಿದ್ದು, ಶೂಟಿಂಗ್ ಇನ್ನಷ್ಟೇ ಆರಂಭವಾಗಬೇಕಿದೆ. ಚಿತ್ರದ ಬಗ್ಗೆ ಮಾತನಾಡಿದ ನಾಯಕಿ ರಚನಾ, 'ಈ ಲವ್ ಸ್ಟೋರಿಯಲ್ಲಿ ನಾನು ಕಾಲೇಜ್ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಬಹಳ ಸೈಲೆಂಟ್ ಆಗಿರುವ ಈ ಕಾಲದ ಹುಡುಗಿ ಪಾತ್ರ. ಪಾತ್ರಕ್ಕೆ ಭಿನ್ನ ಶೇಡ್‌ಗಳೇನಿಲ್ಲ. ನಾನು ಸ್ಟೋರಿ ಕೇಳಿ ಇಷ್ಟವಾಗಿ ಚಿತ್ರ ಒಪ್ಪಿಕೊಂಡೆ ಎಂದರು.
'ಲೆಟ್ಸ್ ಬ್ರೇಕಪ್' ಒಂದು ಇಂಟೆನ್ಸ್ ಲವ್ ಸ್ಟೋರಿ. ಇಡೀ ಚಿತ್ರ ಲವ್ ಟ್ರ್ಯಾಕ್ ಬಿಟ್ಟು ಬೇರೆ ಎಲ್ಲೂ ಹೋಗುವುದಿಲ್ಲ. ನನಗೆ ಸಿನಿಮಾದಲ್ಲಿ ಎರಡು ಶೇಡ್ ಇದೆ. ಪ್ರೀತಿಯ ತೀವ್ರತೆ ಮತ್ತು ಅದರಿಂದ ಯುವ ಜೋಡಿ ಹೊರಬರುವಾಗಿನ ಕಷ್ಟಗಳು ಎಲ್ಲವೂ ಹೇಗಿರುತ್ತವೆ ಎಂಬುದನ್ನು ನಿರ್ದೇಶಕ ಸ್ವರೂಪ್ ಬಹಳ ಚೆನ್ನಾಗಿ ಬರೆದಿದ್ದಾರೆ. ನನಗಂತೂ ಬಹಳ ಒಳ್ಳೆಯ ಪಾತ್ರ ಸಿಕ್ಕಿದೆ ಎನ್ನಬಹುದು. ಹಿಂದೆಯೇ ಶೂಟಿಂಗ್ ಶುರು ಆಗಬೇಕಿತ್ತು. ಆದರೆ ಈ ಚಿತ್ರಕ್ಕೋಸ್ಕರ ನಾನು ಬಾಡಿ ಬಿಲ್ಡ್ ಮಾಡಬೇಕಿದ್ದ ಕಾರಣ ಸ್ವಲ್ಪ ವಿಳಂಬವಾಯ್ತು ಎಂದು ಶ್ರೀ ಮಹದೇವ್ ಹೇಳಿದರು.
ನವೆಂಬರ್‌ನಲ್ಲಿ 16 ಸಿನಿಮಾ ಬಿಡುಗಡೆ; 12ಕ್ಕೆ 6 ಚಿತ್ರಗಳು ರಿಲೀಸ್!
ಇದೊಂದು ಕಂಪ್ಲೀಟ್ ಲವ್ ಸ್ಟೋರಿ. ಈಗಿನ ಕಾಲದಲ್ಲಿ ಯುವ ಜನಾಂಗ ಎಷ್ಟು ವೇಗವಾಗಿ ಪ್ರೀತಿಯಲ್ಲಿ ಬೀಳುತ್ತಾರೆ, ನಂತರ ಎಷ್ಟು ವೇಗವಾಗಿ ಬ್ರೇಕಪ್ ಮಾಡಿಕೊಳ್ಳುತ್ತಾರೆ, ಅದರಿಂದ ಆಗುವ ತೊಂದರೆಗಳೇನು ಎಂಬುದೇ ಸಿನಿಮಾದ ಕಥೆ. ನಾಯಕ ಶ್ರೀಗೆ ಎಷ್ಟು ಮುಖ್ಯವಾದ ಪಾತ್ರ ಇದೆಯೋ ನಾಯಕಿಗೂ ಅಷ್ಟೇ ಮುಖ್ಯವಾದ ಪಾತ್ರವಿದೆ. ರಚನಾ ಮತ್ತು ಶ್ರೀ ನನ್ನ ಕಥೆಗೆ ಸೂಟ್ ಆಗುತ್ತಾರೆ ಎಂದು ನಿರ್ದೇಶಕ ಸ್ವರೂಪ್ ಹೇಳಿದ್ದಾರೆ. 'ಲೆಟ್ಸ್ ಬ್ರೇಕಪ್' ಒಂದು ಕಾಡುವಂತಹ ಪ್ರೇಮಕಥೆ. ನನಗೆ ಪರ್ಫಾರ್ಮೆನ್ಸ್ ಮಾಡಲು ಒಳ್ಳೆಯ ಪಾತ್ರವಿದು. ಪ್ರೀತಿಗಿರುವ ಶಕ್ತಿ ಎಂತಹದ್ದು ಎಂಬುದನ್ನು ಈ ಚಿತ್ರದಲ್ಲಿ ತೋರಿಸುವ ಪ್ರಯತ್ನವಾಗುತ್ತಿದೆ. ಹೊಸ ರೀತಿಯಲ್ಲಿ ನಾನು ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತೇನೆ ಎಂದು ನಟ ಶ್ರೀ ಮಹದೇವ್ ಹೇಳಿದ್ದಾರೆ.
'ಆರ್‌ಆರ್‌ಆರ್' ಚಿತ್ರದ ಹೊಸ ಹಾಡು ರಿಲೀಸ್: ರಾಮ್ ಚರಣ್, ಜ್ಯೂ.ಎನ್ಟಿಆರ್ ಜಬರ್ದಸ್ತ್ ಡ್ಯಾನ್ಸ್
'ಲೆಟ್ಸ್ ಬ್ರೇಕಪ್' ಚಿತ್ರಕ್ಕೆ ರಾಮಾ ರಾಮಾ ರೇ' ಖ್ಯಾತಿಯ ಲವಿತ್ ಸಿನಿಮಾಟೋಗ್ರಫಿ ಮಾಡುತ್ತಿದ್ದು, ವಿನೀತ್ ರಾಜ್ ಮೆನನ್ ಸಂಗೀತ ಸಂಯೋಜನೆಯಿದೆ. ಹರೀಶ್ ಕೊಮ್ಮೆ ಸಂಕಲನ, ಅರ್ಜುನ್ ರಾಜ್ ಸಾಹಸ ನಿರ್ದೇಶನ ಹಾಗೂ ನಂದಕುಮಾರ್ ನೃತ್ಯ ಸಂಯೋಜನೆ ಈ ಚಿತ್ರಕ್ಕಿದೆ. ಬೆಂಗಳೂರು ಮತ್ತು ಮಂಗಳೂರಿನಲ್ಲಿ ಚಿತ್ರದ ಚಿತ್ರೀಕರಣ ನಡೆಯಲಿದೆ. ಇನ್ನು ಶ್ರೀ ಮಹಾದೇವ್ ಹೊಂದಿಸಿ ಬರೆಯಿರಿ (Hondisi Bareyiri) ಮತ್ತು ಗಜಾನನ ಮತ್ತು ಗ್ಯಾಂಗ್ (Gajanana and Gang) ಎಂಬ ಚಿತ್ರದಲ್ಲೂ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.