
ಬೆಂಗಳೂರು (ಏ. 14): ಪುನೀತ್ ರಾಜ್ ಕುಮಾರ್ ನಿರ್ಮಾಣದ ಮೊದಲ ಚಿತ್ರ ’ಕವಲುದಾರಿ’ಗೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಚಿತ್ರತಂಡ ಫುಲ್ ಖುಷಿಯಲ್ಲಿದೆ.
ಈ ಕಾರಣಕ್ಕೆ ’ಕವಲುದಾರಿ’ ಅನಂತ್‌ನಾಗ್‌ಗೆ ಸ್ಪೆಷಲ್!
ಮಸಾಲೆ ದೋಸೆ, ಮೈಸೂರು ಪಾಕ್ ಸವಿಯುವ ಮೂಲಕ ತಮ್ಮ ಖುಷಿಯನ್ನು ಹಂಚಿಕೊಂಡಿದೆ ಚಿತ್ರತಂಡ. ಅನಂತ್ ನಾಗ್, ಪತ್ನಿ ಗಾಯತ್ರಿ, ನಿರ್ದೇಶಕ ಹೇಮಂತ್ ರಾವ್ ಈ ಖುಷಿಯ ಕ್ಷಣದಲ್ಲಿ ಭಾಗಿಯಾಗಿದ್ದಾರೆ.
ನಟ ರಿಷಿ ಟ್ವಿಟರ್ ನಲ್ಲಿ ಫೋಟೋ ಹಂಚಿಕೊಂಡಿದ್ದಾರೆ.
’ಕವಲುದಾರಿ ’ ಗೋಧಿಬಣ್ಣ ಸಾಧಾರಣ ಮೈಕಟ್ಟು ಚಿತ್ರವನ್ನು ನಿರ್ದೇಶಿಸಿದ ಹೇಮಂತ್‌ರಾವ್ ಅವರ ಎರಡನೆಯ ಸಿನಿಮಾ ಇದು.
ಅನಂತ್ ನಾಗ್ ಬಗ್ಗೆ ನೀವು ತಿಳಿಯಬೇಕಾದ ಇಂಟರೆಸ್ಟಿಂಗ್ ವಿಚಾರಗಳಿವು!
ಮಹಾನಗರದ ಪರಿಸರದಲ್ಲಿ ತಂದೆ-ಮಕ್ಕಳ ಸಂಬಂಧದ ಸೂಕ್ಷ್ಮಗಳನ್ನು ಮೊದಲ ಸಿನಿಮಾದಲ್ಲಿ ಅನ್ವೇಷಿಸಿದ ಹೇಮಂತ್, ಕವಲುದಾರಿ ಚಿತ್ರದಲ್ಲಿ ಮಹಾನಗರದ ಅಪರಾಧ ಜಗತ್ತಿನ ಒಳಸುಳಿಗಳ ಹುಡುಕಾಟಕ್ಕೆ ಕೈ ಹಾಕಿದ್ದಾರೆ. ಅದರಲ್ಲಿ ಯಶಸ್ವಿಯೂ ಆಗಿದ್ದಾರೆ. ಹೇಮಂತ್‌ರಾವ್ ಈ ಸಿನಿಮಾವನ್ನು ಸವಿವರವಾಗಿ ಕಟ್ಟಿಕೊಡುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.