ಕಾಮಿಡಿ ಸ್ಟಾರ್ ಕೋಮಲ್ ಕಮ್ ಬ್ಯಾಕ್ ಆಗಿದ್ದಾರೆ | ಕೆಂಪೇಗೌಡ-2 ಚಿತ್ರದ ಮೂಲಕ ತೆರೆ ಮೇಲೆ ಬರಲಿದ್ದಾರೆ ಕೋಮಲ್ | ನಾಳೆ ಟ್ರೇಲರ್ ರಿಲೀಸ್ ಆಗಲಿದೆ.
ಬೆಂಗಳೂರು (ಏ. 13): ಹಾಸ್ಯ ನಟ ಕೋಮಲ್ ಇತ್ತೀಚಿಗೆ ಎಲ್ಲಿಯೂ ಕಾಣಿಸಿಕೊಳ್ಳುತ್ತಿರಲಿಲ್ಲ. ಇತ್ತೀಚಿನ ಚಿತ್ರಗಳಲ್ಲಿ ಕೋಮಲ್ ಕಾಮಿಡಿಯನ್ನು ಪ್ರೇಕ್ಷಕರು ಮಿಸ್ ಮಾಡಿಕೊಳ್ಳುತ್ತಿದ್ದರು. ಎಲ್ಲಿ ಹೋದರು ಎಂದು ಹುಡುಕುತ್ತಿದ್ದವರಿಗೆ ಉತ್ತರ ಕೊಡಲು ಕೋಮಲ್ ಕಮ್ ಬ್ಯಾಕ್ ಆಗುತ್ತಿದ್ದಾರೆ. ಕೋಮಲ್ ಕಮ್ ಬ್ಯಾಕ್ ಗೆ ಅಣ್ಣ ಜಗ್ಗೇಶ್ ವಿಶ್ ಮಾಡಿದ್ದಾರೆ.
ನಾಳೆ ಭಾನುವಾರ 14th 9am ..
ಸ್ವಮೇಕ್ ಚಿತ್ರ..ಕೋಮಲ್ 2ವರ್ಷದ ಶ್ರಮ ಅತಿಶೀಘ್ರದಲ್ಲಿ ನಿಮ್ಮ ಮುಂದೆ ಅನಾವರಣ..
ಒಬ್ಬ ಅಣ್ಣನಾಗಿ ಈ ಚಿತ್ರನೋಡಿ ಹೃದಯ ಉಬ್ಬಿತು..
ಹರಸಿ ಹಾರೈಸಿದರೆ ಸ್ವಾಭಿಮಾನದಿಂದ ಕನ್ನಡಿಗರು ಇಂದಿನ ಯುವಪೀಳಿಗೆಯನ್ನ ರಾಷ್ಟ್ರ ತಿರುಗಿನೋಡುವ ಕೃತಿ ನೀಡುತ್ತಾರೆ..ಶುಭಮಸ್ತು pic.twitter.com/CMCuT3Xwqq
ಸ್ಯಾಂಟೋರಿನಿಯಲ್ಲಿ ಸುಧಾರಾಣಿ ಹಾಲಿಡೇ ಮಜಾ; ಇಲ್ಲಿವೆ ಫೋಟೋಗಳು!
ಕೋಮಲ್ ನಟನೆಯ ಕೆಂಪೇಗೌಡ-2 ಸಿನಿಮಾದ ಟ್ರೇಲರ್ ನಾಳೆ ರಿಲಿಸಾಗಲಿದೆ. ಬೆಳಿಗ್ಗೆ 9 ಗಂಟೆಗೆ ಯೂಟ್ಯೂಬ್ ನಲ್ಲಿ ಟ್ರೇಲರ್ ರಿಲೀಸ್ ಆಗುತ್ತಿದೆ. ಈ ಮೂಲಕ ಕೋಮಲ್ ಮತ್ತೆ ತೆರೆ ಮೇಲೆ ಬರಲಿದ್ದಾರೆ.
ಅಭಿಮಾನಿಗಳಿಗೆ ಖುಷ್ ಖಬರ್ ಕೊಟ್ಟ ಪ್ರಭಾಸ್; ಏನದು ವಿಚಾರ?
ಕೆಂಪೇಗೌಡ-2 ಚಿತ್ರವನ್ನು ಶಂಕರ್ ಗೌಡ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದಲ್ಲಿ ಕೋಮಲ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.