ಎಲ್ಲಾ ಸಂಕಟಗಳಿಂದಲೂ ಪಾರು ಮಾಡುವುದು ಮೊದಲಿಗೆ ವೆಂಕಟರಮಣ, ಆಮೇಲೆ ಹಾಸ್ಯ. ಎಲ್ಲಿ ನಗು ಇರುತ್ತದೋ ಅಲ್ಲಿ ಕಷ್ಟಗಳು ಕಡಿಮೆಗಳು ಇರುತ್ತದೆ. ಹಾಗಾಗಿ ಕೋವಿಡ್ ಕಷ್ಟಗಳನ್ನೆಲ್ಲಾ ಮರೆಸಿ ನಗಿಸುವುದಕ್ಕೆಂದೇ ಒಂದು ಸಿನಿಮಾ ಬರುತ್ತಿದೆ. ಅದರ ಹೆಸರು ಗೋವಿಂದ ಗೋವಿಂದ. ಏಪ್ರಿಲ್ 16ರಂದು ಬಿಡುಗಡೆಯಾಗುತ್ತಿದೆ. ಸದ್ಯಕ್ಕೆ ಪುಷ್ಕರ್ ಫಿಲ್ಮ್$್ಸ ಯೂಟ್ಯೂಬ್ ಚಾನಲ್‌ನಲ್ಲಿ ಆಡಿಯೋ ರಿಲೀಸ್ ಆಗಿದೆ. ಕೇಳಿ ಖುಷಿ ಪಡಬಹುದು.
ಹಿರಿಯ ನಿರ್ಮಾಪಕರಾದ ಎಸ್. ಶೈಲೇಂದ್ರಬಾಬು, ರಾಷ್ಟ್ರಪ್ರಶಸ್ತಿ ವಿಜೇತ ಸಿನಿಮಾ ನಿರ್ಮಾಪಕ ರವಿ ಆರ್ ಗರಣಿ, ತುಮಕೂರಿನ ಸಿನಿಮಾ ವ್ಯಾಮೋಹಿ ಕಿಶೋರ್ ಎಂ ಕೆ ಮಧುಗಿರಿ ಸೇರಿಕೊಂಡು ನಿರ್ಮಾಣ ಮಾಡಿರುವ ಸಿನಿಮಾ ಇದು. ನಿರ್ದೇಶನದ ಜವಾಬ್ದಾರಿ ಹೊತ್ತಿರುವುದು ತಿಲಕ್.
ಆಡಿಯೋ ಬಿಡುಗಡೆ ಸಂದರ್ಭದಲ್ಲಿ ನಿರ್ದೇಶಕ ತಿಲಕ್, ‘ಇದು ನನ್ನ ಪ್ರಥಮ ಪ್ರಯತ್ನ. ಫ್ಯಾಮಿಲಿ ಸಿನೆಮಾ. ಶುದ್ಧ ಹಾಸ್ಯ ಇದೆ’ ಎಂದು ಹೇಳಿದರೆ ನಿರ್ಮಾಪಕ ರವಿ ಗರಣಿ, ‘ವಿಜಯ್ ಸೇತುಪತಿ ಜತೆಗೆ ತಮಿಳು ಸಿನಿಮಾ ಮಾಡುವ ಪ್ರಯತ್ನದಲ್ಲಿದ್ದೆ. ಅವರ ಕಾಲ್‌ಶೀಟ್ ತಪ್ಪಿತು. ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ಶುರುವಾದ ಈ ಸಿನಿಮಾ ಅತಿ ಸುಂದರವಾಗಿ ಮೂಡಿಬಂದಿದೆ’ ಎಂದರು. ಕಿಶೋರ್ ಎಂ ಕೆ ಮಧುಗಿರಿ, ‘ಥಿಯೇಟರ್ ಮೂಲದವನು. ಸಿನಿಮಾ ಪ್ರೀತಿಯಿಂದ ಸಿನಿಮಾ ಮಾಡಿದ್ದೇನೆ, ನೋಡಿ ಹರಸಿ’ ಎಂದು ಹೇಳಿದರು.
ರೈತರ ಪರ ದನಿಯೆತ್ತುವ ರಣಂ;ಚಿರಂಜೀವಿ ಸರ್ಜಾ ನಟನೆಯ ಚಿತ್ರ
ಚಿತ್ರದ ಹೀರೋ ಸುಮಂತ್ ಶೈಲೇಂದ್ರ, ‘ರವಿ ಗರಣಿ ಒತ್ತಾಯಕ್ಕೆ ನಾನು ಸಿನೆಮಾ ಒಪ್ಪಿಕೊಂಡ. ಆಮೇಲೆ ಭಾರಿ ಇಷ್ಟದಿಂದ ಸಿನಿಮಾ ಮಾಡಿದೆ’ ಎಂದರು. ಇನ್ನೊಬ್ಬ ಹೀರೋ ರೂಪೇಶ್ ಶೆಟ್ಟಿತುಳು ಸೂಪರ್‌ಸ್ಟಾರ್. ಅವರು ಚಿತ್ರತಂಡವನ್ನು, ಕೆಲಸ ತೆಗೆಸಿದ ರೀತಿಯನ್ನು ಮೆಚ್ಚಿಕೊಂಡರು. ನಾಯಕಿ ಕವಿತಾ ಗೌಡ, ‘ಟೆನ್ಶನ್ ಫ್ರೀ ಆಗಿ ಕೆಲಸ ಮಾಡಿದ ಸಿನಿಮಾ ಇದು’ ಎಂದರು. ಸಂಗೀತ ನಿರ್ದೇಶಕ ಹಿತನ್ ಹಾಸನ್ ಖುಷಿಯಾಗಿದ್ದರು. ‘ಹಾಡುಗಳು ಜನಮನ್ನಣೆ ಪಡೆದಿವೆ, ಅವಕಾಶ ಕೊಟ್ಟವರ ನಂಬಿಕೆ ಉಳಿಸಿದ ಸಮಾಧಾನ ಇದೆ’ ಎಂದರು. ಹಿನ್ನೆಲೆ ಸಂಗೀತ ನೀಡಿರುವ ರವಿವರ್ಮ, ‘ಸಂಗೀತ ನೀಡದೇ ಇದ್ದಾಗಲೂ ನಾನು ಈ ಸಿನಿಮಾ ನೋಡಿ ನಗುತ್ತಿದ್ದೆ, ಅಷ್ಟೊಂದು ಚೆನ್ನಾಗಿದೆ’ ಎಂದರು.
ನಿರ್ದೇಶಕ ಮಹೇಶ್ ಕುಮಾರ್‌ಗೆ ದುಬಾರಿ ಕಾರು ಗಿಫ್ಟ್ ಕೊಟ್ಟ ನಿರ್ಮಾಪಕ ಉಮಾಪತಿ!
ಆಡಿಯೋ ಬಿಡುಗಡೆಗೆ ಇಬ್ಬರು ಅತಿಥಿಗಳಿದ್ದರು. ಒಬ್ಬರು ಮಾಜಿ ಶಾಸಕ ಕೆಎಸ್ ರಾಜಣ್ಣ. ‘ಯುವ ಪ್ರತಿಭೆಗಳು ತಮ್ಮ ಪೂರ್ತಿ ಪ್ರತಿಭೆ ಧಾರೆ ಎರೆದು ಮಾಡಿರುವ ಈ ಸಿನಿಮಾ ಯಶಸ್ಸು ಕಾಣುವುದರಲ್ಲಿ ಸಂಶಯ ಇಲ್ಲ’ ಎಂದು ಹರಸಿದರು. ಮತ್ತೊಬ್ಬ ಅತಿಥಿ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಬಿಎಸ್ ಲಿಂಗದೇವರು, ‘ಇತ್ತೀಚಿನ ದಿನಗಳಲ್ಲಿ ಸಿನಿಮಾ ಬಿಡುಗಡೆ ಆಗಿ ಮೂರು ದಿನ ಆದ್ರೆ ಸಕ್ಸಸ್ ಅಂತಾರೆ. ಆದರೆ ಕೊರೋನಾ ನಂತರ ಶತದಿನ ಆಚರಿಸುವ, ಮನೆಮಂದಿ ಆಚೆ ಬಂದು ನೋಡುವ ಸಿನೆಮಾ ಇದಾಗಲಿದೆ’ ಎಂದು ಚಿತ್ರತಂಡದ ಉತ್ಸಾಹ ಹೆಚ್ಚಿಸಿದರು. ಚಿತ್ರದ ಛಾಯಾಗ್ರಾಹಕ ಕೆಎಸ್ ಚಂದ್ರಶೇಖರ್ ಎಲ್ಲಕ್ಕೂ ಮೌನ ಸಮ್ಮತಿ ನೀಡಿದರು