ಕನ್ನಡದ ಕ್ಯಾಂಡಿಕ್ರಶ್ ಸಿನೆಮಾಗೆ ಡಬಲ್ ಶಾಕ್, ಚಂದನ್ ಶೆಟ್ಟಿ ಫೋನ್ ಸ್ವಿಚ್ ಆಫ್!

By Suvarna News  |  First Published Jun 8, 2024, 3:18 PM IST

ದೂರವಾಗಿರುವ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ನಟನೆಯ ಕ್ಯಾಂಡಿ ಕ್ರಶ್ ಚಿತ್ರ ತಂಡಕ್ಕೆ ಈಗ ಡಬಲ್ ಶಾಕ್‌ ಆಗಿದೆ. ಒಂದೆಡೆ ನೋಟೀಸ್ ಬಂದಿದ್ದರೆ ಮತ್ತೊಂದೆಡೆ ಚಂದನ್ ಮೊಬೈಲ್ ಸ್ವಿಚ್‌ ಆಫ್ ಆಗಿದೆ.


ಸ್ಯಾಂಡಲ್‌ವುಡ್‌ನಲ್ಲೀಗ ಕಿರುತೆಯ ಜನಪ್ರಿಯ ಜೋಡಿ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡರ ವಿಚ್ಚೇದನದ್ದೇ ಸುದ್ದಿ, ಇದಕ್ಕೆ ಕಾರಣ ಏನೆಂದು ಅಭಿಮಾನಿಗಳು ಹುಡುಕುತ್ತಲೇ ಇದ್ದಾರೆ. ಆದರೆ ಈಗ ವಿಷ್ಯ ಅದಲ್ಲ ಬೇರೆಯಾದ ಚಂದನ್‌ ಮತ್ತು ನಿವೇದಿತಾ ಬಗ್ಗೆ ಮತ್ತೊಂದು ಸುದ್ದಿ ಇದೆ.

ಒಮ್ಮತದಿಂದ ಬೇರೆಯಾಗಿರುವ ಚಂದನ್ ಮತ್ತು ನಿವೇದಿತಾ ಕ್ಯಾಂಡಿ ಕ್ರಶ್ ಅನ್ನುವ ಸಿನೆಮಾದಲ್ಲಿ ಹಿರೋ-ಹೀರೋಯಿನ್‌ ಆಗಿ ಒಟ್ಟಿಗೆ ನಟಿಸುತ್ತಿದ್ದಾರೆ. ಪುನೀತ್ ಅವರ ಕಥೆ ಚಿತ್ರಕಥೆ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಕ್ಯಾಂಡಿ ಕ್ರಷ್‌ ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದ್ದು, ಇನ್ನು 8 ದಿನಗಳ ಚಿತ್ರೀಕರಣ ಬಾಕಿ ಇದೆಯಂತೆ. ಆದರೆ ಈಗ ಚಿತ್ರತಂಡಕ್ಕೆ ಇವರಿಬ್ಬರ ವಿಚ್ಚೇದನ ಶಾಕಿಂಗ್ ಸಮಾಚಾರದ ಜೊತೆಗೆ ಮತ್ತೊಂದು ಸಂಕಷ್ಟ ಕೂಡ ಎದುರಾಗಿದೆ. ಎರೆಡೆರಡು ವಿಚಾರವನ್ನು ಸಂಬಾಳಿಸುವುದು ಹೇಗೆಂದೇ ಚಿಂತೆಯಾಗಿದೆ.

Tap to resize

Latest Videos

ಚಂದನ್ ಶೆಟ್ಟಿ-ನಿವೇದಿತಾ ಗೌಡ ವಿಚ್ಚೇದನದ ಬಗ್ಗೆ ಚಂದನ್‌ ಆಪ್ತ ನಿರ್ಮಾಪಕ ನವರಸನ್ ಹೇಳಿಕೆ, ಇದು ನಿಜಾನಾ?

ಕ್ಯಾಂಡಿ ಕ್ರಶ್ ಚಿತ್ರತಂಡಕ್ಕೆ ಈಗ ಟೈಟಲ್‌ ಬದಲಾಯಿಸುವಂತೆ ಅಧಿಕೃತ ಗೇಮಿಂಗ್ ಆಪ್‌ ಕ್ಯಾಂಡಿ ಕ್ರಶ್ ನಿಂದ ನೋಟೀಸ್‌ ನೀಡಲಾಗಿದೆ. ಕ್ಯಾಂಡಿ ಕ್ರಶ್ ಎಂಬ ಹೆಸರು ಚಿತ್ರಕ್ಕೆ ಇಡದಂತೆ ಕ್ಯಾಂಡಿ ಕ್ರಶ್  ಗೇಮಿಂಗ್ ಆಪ್ ನಿಂದ ನೋಟಿಸ್‌ ಬಂದಿದ್ದು, ಚಿತ್ರಕ್ಕೆ ಹೆಸರು ಬದಲಾವಣೆ ಮಾಡಲು ಈ ನೋಟಿಸ್ ನೀಡಲಾಗಿದೆ. ಹೀಗಾಗಿ ಚಿತ್ರದ ಹೆಸರು ಬದಲಾವಣೆ ಮಾಡಬೇಕಿದೆ ಎಂದು ಚಿತ್ರ ನಿರ್ದೇಶಕ ಪುನೀತ್ ಸುವರ್ಣನ್ಯೂಸ್ ಗೆ ಮಾಹಿತಿ ನೀಡಿದ್ದಾರೆ.

ಕ್ಯಾಂಡಿ ಕ್ರಶ್ ಚಿತ್ರದ ಒಟ್ಟು 8 ದಿನಗಳ ಚಿತ್ರೀಕರಣ ಬಾಕಿ ಇದ್ದು, ಇದರಲ್ಲಿ 4 ದಿನ ಚಂದನ್-ನಿವೇದಿತಾ ರೋಮ್ಯಾಂಟಿಕ್ ಸೀನ್ ನಡೆಯಲಿದೆಯಂತೆ. ಈ ತಿಂಗಳ 14ರಿಂದ ಶೂಟಿಂಗ್ ನಡೆಸಲು ದಿನ ನಿಗದಿ ಮಾಡಿರುವುದರಿಂದ  ಚಿತ್ರತಂಡಕ್ಕೆ ಈಗ ಬೇರೆಯಾಗಿರುವ ಚಂದನ್ ಮತ್ತು ನಿವೇದಿತಾ ಮತ್ತೆ ಒಟ್ಟಿಗೆ ನಟಿಸುತ್ತಾರೋ ಇಲ್ಲವೂ ಎಂಬ ತಲೆ ಬಿಸಿ ಆರಂಭವಾಗಿದೆ. 

ಈ ಸಂಬಂಧ ನಿನ್ನೆ ವಿಚ್ಚೇದನದ ಬಳಿಕ ಖುದ್ದು ನಿವೇದಿತಾ ಗೌಡ ಅವರು ನಿರ್ದೇಶಕರಿಗೆ ಕರೆ ಮಾಡಿ ಚಿತ್ರದ ಶೂಟಿಂಗ್ ಗೆ ಯಾವುದೇ ಅಡೆತಡೆ ಆಗುವುದಿಲ್ಲ. ಬಾಕಿ ಉಳಿದಿರುವ ಸೀನ್ ಮುಗಿಸಿಕೊಡುತ್ತೇವೆಂದು ನಿರ್ದೇಶಕರಿಗೆ ಮಾತು ಕೊಟ್ಟಿದ್ದಾರಂತೆ. ಆದರೆ ಚಂದನ್‌ ಗೆ ಕಾಲ್ ಮಾಡಿದರೆ ಅವರ ಫೋನ್ ಸ್ವಿಚ್ ಆಫ್ ಆಗಿದೆ ಎಂದು ಚಿತ್ರತಂಡದಿಂದ ಸುವರ್ಣನ್ಯೂಸ್‌ಗೆ ಮಾಹಿತಿ ಲಭ್ಯವಾಗಿದೆ.

ಚಂದನ್ -ನಿವೇದಿತಾ ವಿಚ್ಛೇದನ: ಮಗು ಮಾಡಿಕೊಳ್ಳೋ ವಿಚಾರಕ್ಕೆ ಇಬ್ಬರ ಮಧ್ಯೆ ಮೂಡಿತಾ ಬಿರುಕು?

ಇನ್ನು ಇವರಿಬ್ಬರೂ ಕೂಡ ಶೂಟಿಂಗ್ ಸೆಟ್‌ ನಲ್ಲಿ  ತುಂಬಾ ಆತ್ಮೀರಾಗಿರುತ್ತಿದ್ದರಂತೆ, ಒಬ್ಬರಿಗೊಬ್ಬರು ಪರಸ್ಪರ ಅನ್ಯೋನ್ಯವಾಗಿ ಶೂಟಿಂಗ್‌ ನಲ್ಲಿ ಭಾಗಿಯಾಗುತ್ತಿದ್ದರು. ಸಿನೆಮಾ ತಂಡದ ಜೊತೆಗೆ ಕೂಡ ತುಂಬಾ ಆತ್ಮೀಯರಾಗಿದ್ದರು ಆದರೆ ಈ ಸುದ್ದಿ ಶಾಕಿಂಗ್ ಎಂದು ಚಿತ್ರತಂಡ ಹೇಳಿದೆ.

ಇತ್ತೀಚೆಗೆ ಕ್ಯಾಂಡಿ ಕ್ರಶ್ ಚಿತ್ರದ ರೋಮ್ಯಾಂಟಿಕ್  ಹಾಡಿನ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆದಿತ್ತು. ಈ ವೇಳೆ ಅವರ ಡ್ಯಾನ್ಸ್ ವಿಡಿಯೋ ವೈರಲ್ ಆಗಿತ್ತು. 

ಇನ್ನು ನಿನ್ನೆ ವಿಚ್ಚೇದನ ಪಡೆದುಕೊಂಡ ಬಳಿಕ ಕೋರ್ಟ್ ಆವರಣದಿಂದ ಪರಸ್ಪರ ಕೈ ಹಿಡಿದುಕೊಂಡೇ ಹೊರ ಬಂದಿದ್ದ ಚಂದನ್ ಮತ್ತು ನಿವೇದಿತಾ ಅವರ ವಿಡಿಯೋ ವೈರಲ್ ಆಗಿದೆ. ವಿಚ್ಚೇದನ ಪಡೆದ ಬಳಿಕ ನಿವೇದಿತಾರನ್ನು ಅವರ ತಾಯಿ ಮನೆ ಮೈಸೂರಿಗೆ ಸ್ವತಃ  ಚಂದನ್‌ ಕರೆದುಕೊಂಡು ಹೋಗಿದ್ದು, ಚಂದನ್‌ ಮರಳಿ ಮೈಸೂರಿನಿಂದ ಬೆಂಗಳೂರಿಗೆ ಬಂದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. 

click me!