
ಸ್ಯಾಂಡಲ್‌ವುಡ್ ಹಾಗೂ ಕಿರುತೆರೆಯ ಕ್ಯೂಟ್ ಕಪಲ್ಸ್ ಎಂದೇ ಹೆಸರಾಗಿದ್ದ ಚಂದನ್ ಶೆಟ್ಟಿ ಹಾಗು ನಿವೇದಿತಾ ಗೌಡ ಅವರಿಬ್ಬರೂ ಸೋಷಿಯಲ್ ಮೀಡಿಯಾಗಳಲ್ಲಿ ಪರಸ್ಪರ ಅನ್‌ಫಾಲೋ (unfollow) ಮಾಡಿಕೊಂಡಿದ್ದಾರೆ. ಚಂದನ್ ಶೆಟ್ಟಿ, ನಿವೇದಿತಾ ಗೌಡ ಇಬ್ಬರೂ ಒಬ್ಬರಿಗೊಬ್ಬರು ಈ ಮೊದಲು ಸಜೆಸ್ಟ್ ಆಪ್ಶನ್‌ನಲ್ಲಿ ಇದ್ದರು. ಆದರೆ, ಈಗ ಕಾನೂನು ಪ್ರಕಾರ ಡಿವೋರ್ಸ್ ಪಡೆದಿರುವ ಅವರಿಬ್ಬರೂ ಅನ್‌ಫಾಲೋ ಆಗುವ ಮೂಲಕ ಅವರಿಬ್ಬರ ಜೋಡಿಯ ಫ್ಯಾನ್ಸ್‌ಗೆ ಶಾಕ್ ಕೊಟ್ಟಿದ್ದಾರೆ.
ಚಂದನ್ ಶೆಟ್ಟಿ ಹಾಗು ನಿವೇದಿತಾ ಗೌಡ ಅವರಿಬ್ಬರ ದಾಂಪತ್ಯದಲ್ಲಿ ಅದೇನಾಯಿತೋ ಏನೋ, ಅವರಿಬ್ಬರೂ ತಮ್ಮ ನಾಲ್ಕು ವರ್ಷಗಳ ದಾಂಪತ್ಯಕ್ಕೆ ಇತಿಶ್ರೀ ಹಾಡಿದ್ದಾರೆ. ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ (Chandan Shetty and Niveditha gowda) ಅವರ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ಪುರಸ್ಕರಿಸಿ ಚಂದನ್ ಶೆಟ್ಟಿ, ನಿವೇದಿತಾ ಗೌಡ ವಿಚ್ಛೇದನವನ್ನು ಮಂಜೂರು ಮಾಡಿ ಬೆಂಗಳೂರು ಕೌಟುಂಬಿಕ ನ್ಯಾಯಾಲಯ ಆದೇಶ ಹೊರಡಿಸಿದೆ.
ನಮ್ ರೋಲ್ ಮಾಡೆಲ್ ಚಂದನ್-ನಿವೇದಿತಾ ಟ್ರೆಂಡಿಂಗ್; ಯಾಕ್ ಹೀಗಂತಿದಾರೆ, ಇದೇನ್ ಹೊಸ ಕಥೆ?
ಈ ಮೂಲಕ ರ್‍ಯಾಪರ್ ಚಂದನ್ ಶೆಟ್ಟಿ- ನಿವೇದಿತಾ ಗೌಡ ಅವರ ನಾಲ್ಕು ವರ್ಷದ ದಾಂಪತ್ಯ ಅಂತ್ಯವಾಗಿದೆ. ಬಹಿರಂಗವಾಗಿ ಹೇಳಿಕೊಳ್ಳದ ಕೆಲವು ಕಾರಣಗಳಿಂದ ಒಟ್ಟಿಗೇ ಇರಲು ಇಚ್ಚಿಸದ ಈ ಜೋಡಿ, ಪ್ರತ್ಯೇಕವಾಗಿರಲು ಬಯಸಿದೆ. ಹೀಗಾಗಿ ವಿಚ್ಛೇದನ ಕೋರಿ ಬೆಂಗಳೂರಿನ ಶಾಂತಿನಗರದ ಫ್ಯಾಮಿಲಿ ಕೋರ್ಟ್ನಲ್ಲಿ ವಿಚ್ಛೇದನಕ್ಕೆ 06 ಜೂನ್ 2024ರಂದು ಅರ್ಜಿ ಸಲ್ಲಿಸಿತ್ತು. ಪರಸ್ಪರ ಒಪ್ಪಂದದ ಮೇರೆಗೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರಿಂದ, ಕೋರ್ಟ್, ವಿಚ್ಛೇದನ ಮಂಜೂರು ಮಾಡಿ ಆದೇಶ ಹೊರಡಿಸಿದೆ.
ಚಂದನ್ ಶೆಟ್ಟಿ, ನಿವೇದಿತಾ ಗೌಡ ವಿಚ್ಛೇದನಕ್ಕೆ ಇದೇ ಕಾರಣ; ಬೆಸ್ಟ್ ಕಾಮೆಂಟ್ ಇದಪ್ಪ ಅಂತಿದಾರೆ, ಹೌದಾ?
ಚಂದನ್ ಹಾಗೂ ನಿವೇದಿತಾ ವಿಚ್ಛೇದನ ಅರ್ಜಿ ಇಂದು (ಜೂನ್ 07) ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರಾದ ಕೆ. ಎಸ್. ಜ್ಯೋತಿ ಶ್ರೀ ಅವರ ಬೆಂಚ್ ಮುಂದೆ ಬಂದಿತ್ತು. ಆದ್ರೆ, ಅರ್ಜಿಯನ್ನು ವಿಚಾರಣೆ ಮಾಡುವ ಮೊದಲು ಕಾನೂನು ಪ್ರಕ್ರಿಯೆಯಂತೆ ಮಿಡಿಯೇಷನ್ ಪ್ರಕ್ರಿಯೆ ಮಾಡಬೇಕಾಗುತ್ತದೆ. ಅದರಂತೆ ಚಂದನ್ ಹಾಗೂ ನಿವೇದಿತಾ ಅವರಿಗೆ ಕೌಟುಂಬಿಕ ಕೋರ್ಟ್‌ನ ಮಿಡಿಯೇಷನ್ ಸೆಂಟರ್ನಲ್ಲಿ ಮಾತುಕತೆಗೆ ಅವಕಾಶ ನೀಡಲಾಯಿತು. ವಿಚ್ಛೇದನಕ್ಕೆ ಮೊದಲು ಈ ಸಂಧಾನ ಪ್ರಕ್ರಿಯೆ ನಡೆಯಲೇಬೇಕು. ಅಂತೆಯೇ ಸಂಧಾನಕಾರರು ಮಾತುಕತೆ ನಡೆಸಿದಾಗ ಇಬ್ಬರು ತಮ್ಮ ನಿರ್ಧಾರದಿಂದ ಹಿಂದೆ ಸರಿದಿಲ್ಲ. ಹೀಗಾಗಿ ಅಂತಿಮವಾಗಿ ಕೋರ್ಟ್, ವಿಚ್ಛೇದನ ನೀಡಿ ಆದೇಶಿಸಿದೆ.
ಚಂದನ್ ಶೆಟ್ಟಿ, ನಿವೇದಿತಾ ಗೌಡ ಸಡನ್ ವಿಚ್ಛೇದನಕ್ಕೆ ದಿಗ್ಭ್ರಮೆ; ಕಾನೂನು ಬದಲಾಯಿತೇ?
ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರಿಬ್ಬರ ವಿಚ್ಛೇದನ ಹಲವರ ಅಚ್ಚರಿಗೆ ಕಾರಣವಾಗಿದೆ. ಯಾಕಂದ್ರೆ ಯಾವುದೇ ದಂಪತಿ ವಿಚ್ಛೇದನ ಅರ್ಜಿ ಸಲ್ಲಿಸಿದ್ದರೆ ತಿಂಗಳಾನುಗಟ್ಟಲೇ, ವರ್ಷಗಟ್ಟಲೇ ವಿಚಾರಣೆ ಕೋರ್ಟ್ನಲ್ಲಿ ನಡೆಯುತ್ತೆ. ಆದರೆ, ಚಂದನ್ ಶೆಟ್ಟಿ ದಂಪತಿ ವಿಚ್ಛೇದನ ಮಾತ್ರ ಒಂದೇ ದಿನದಲ್ಲಿ ಆಗಿದೆ. ಕಾರಣ ಇವರಿಬ್ಬರು ನಗು ನಗುತ್ತಲೇ, ಒಪ್ಪಂದದ ಮೇಲೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಅಲ್ಲದೇ ಕೋರ್ಟ್ಗೆ ಹಾಜರಾದ ವೇಳೆ ಈ ಜೋಡಿ ಅಕ್ಕಪಕ್ಕದಲ್ಲೇ ಇತ್ತು. ಹೀಗಾಗಿ ಬೇಗನೇ ವಿಚ್ಛೇದನ ನೀಡಿ ಆದೇಶ ಹೊರಡಿಸಲಾಗಿದೆ.
ಅನಂತನ ಅವಾಂತರದಲ್ಲಿ 'ಅಂಜಲಿ'ಯಾದ ಶಾಂತ ಈಗ ತ್ರಿಬ್ಬಲ್ ರೈಡಿಂಗ್ ಮಾಡ್ತಿದಾರೆ!
ಚಂದನ್ ಹಾಗು ನಿವೇದಿತಾ ವಿಚ್ಛೇದನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವಿಭಿನ್ನ ಕಾಮೆಂಟ್‌ಗಳು ಹರಿದಾಡುತ್ತಿವೆ. ಸೋಷಿಯಲ್ ಮೀಡಿಯಾಗಳಲ್ಲಿ 'ಕ್ಯೂಟ್ ಕಪಲ್' ಎಂದೇ ಕರೆಯಿಸಿಕೊಂಡಿದ್ದ ಈ ಜೋಡಿ ಏಕಾಏಕಿ ಡಿವೋರ್ಸ್ ನಿರ್ಧಾರ ಕೈಗೊಂಡಿದ್ಯಾಕೆ? ಅದರ ಹಿಂದಿನ ಕಾರಣವೇನು? ಇವರಿಬ್ಬರಲ್ಲಿ ತಪ್ಪು ಯಾರದಿರಬಹುದು ಎಂಬೆಲ್ಲ ಚರ್ಚೆಗಳು ಆರಂಭವಾಗಿವೆ. ಈ ಇಬ್ಬರಲ್ಲಿ ಮೊದಲಿಗೆ ಡಿವೋರ್ಸ್ ಬಯಸಿದ್ದು ಯಾರು? ಹೀಗೇ ನಾನಾ ವಿಚಾರಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ಶುರುವಾಗಿವೆ. ಆದರೆ, ಈ ' ಚಂದನ್ ಹಾಗೂ ನಿವೇದಿತಾ ವಿಚ್ಛೇದನಕ್ಕೆ ಮದುವೆ ಕಾರಣ' ಎಂಬ ಕಾಮೆಂಟ್ ಸಖತ್ ವೈರಲ್ ಆಗುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.