ಚಂದನ್ ಶೆಟ್ಟಿ ಹಾಗೂ ನಿವೇದಿತಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ ವೀಡಿಯೋದಲ್ಲಿನ ಡೈಲಾಗ್ ಒಂದು ಈಗ ಸಖತ್ ಸದ್ದು ಮಾಡುತ್ತಿದೆ. ಆ ವೀಡಿಯೋದಲ್ಲಿ ನಿವೇದಿತಾ ಗೌಡ ಅವರು ಚಂದನ್‌ಗೆ 'ಕುಕೀ..
ಚಂದನವನದ ನಟ ಹಾಗು ರ್‍ಯಾಪರ್ ಚಂದನ್ ಶೆಟ್ಟಿ (Chandan Shetty) ಹಾಗೂ ನಿವೇದಿತಾ ಗೌಡ (Niveditha Gowda) ವಿಚ್ಛೇದನ ಪಡೆದುಕೊಂಡಿದ್ದಾರೆ. ಇದು ಈಗ ಹಳೆಯ ಸುದ್ದಿ. ಈಗೇನಿದ್ದರೂ ಯಾಕೆ ಡಿವೋರ್ಸ್ ಆಯ್ತು ಎಂಬ ಚರ್ಚೆ. ಸೋಷಿಯಲ್ ಮೀಡಿಯಾಗಳಲ್ಲಿ ಕಾಮೆಂಟ್‌ಗಳದೇ ಕಾರುಬಾರು. ಚಂದನ್ ಹಾಗೂ ನಿವೇದಿತಾ ವಿಚ್ಛೇದನದ ಬಗ್ಗೆ ಸೋಷಿಯಲ್ ಮೀಡಿಯಾ ತುಂಬಾ ವಿವಿಧ ಬಗೆಯ ಕಾಮೆಂಟ್‌ಗಳು ಹರಿದಾಡತೊಡಗಿವೆ. ಆದರೆ ಯಾರೊಬ್ಬರೂ ಅವರಿಬ್ಬರ ಬದಲು ಕೆಟ್ಟದಾಗಿ ಕಾಮೆಂಟ್ ಮಾಡುತ್ತಿಲ್ಲ, ಬದಲಿಗೆ ವಿಚ್ಛೇದನದ ಬಗ್ಗೆ ಅಚ್ಚರಿ ಹಾಗೂ, ಡಿವೋರ್ಸ್ ಪಡೆದುಕೊಂಡ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಚಂದನ್ ಶೆಟ್ಟಿ ಹಾಗೂ ನಿವೇದಿತಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ ವೀಡಿಯೋದಲ್ಲಿನ ಡೈಲಾಗ್ ಒಂದು ಈಗ ಸಖತ್ ಸದ್ದು ಮಾಡುತ್ತಿದೆ. ಆ ವೀಡಿಯೋದಲ್ಲಿ ನಿವೇದಿತಾ ಗೌಡ ಅವರು ಚಂದನ್‌ಗೆ 'ಕುಕೀ..., ಮುಂದಿನ ಜನ್ಮದಲ್ಲೂ ನಾನೇ ನಿನ್ನ ಹೆಂಡ್ತಿಯಾಗ್ಬೇಕಾ?' ಎಂದು ಕೇಳ್ತಾರೆ. ಅದಕ್ಕೆ ಚಂದನ್ ಶೆಟ್ಟಿ 'ಹೌದು, ಒಂದೇ ಜನ್ಮ ಸಾಕಾಗಲ್ಲ ನಿಂಗೆ ಕಾಟ ಕೊಡೋಕೆ!' ಎಂದಿದ್ದರು. ವೀಡಿಯೋದ ಆ ಡೈಲಾಗ್ ಈಗ ಸಖತ್ ಟ್ರೆಂಡಿಂಗ್ ಆಗುತ್ತಿದೆ. ಅವರಿಬ್ಬರ ಫ್ಯೂಚರ್ ಪ್ಲಾನ್ ಏನೇನೋ ಇತ್ತು, ಆದರೆ ಎಲ್ಲವೂ ಯಾವುದೋ ಕಾರಣಕ್ಕೆ ಮುರಿದು ಬಿತ್ತು!
ಪರಸ್ಪರ unfollow ಮಾಡಿಕೊಂಡ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ!
ಪ್ರೇಮಿಗಳು ಸಾಮಾನ್ಯವಾಗಿ ಏಳೇಳು ಜನ್ಮದಲ್ಲೂ ನೀನೇ ನನ್ನ ಮನದರಸಿ, ಮನೆಯರಸಿ ಎನ್ನುತ್ತಲೇ ಇರುತ್ತಾರೆ. ಅದೇ ರೀತಿ ಕ್ಯೂಟ್ ಕಪಲ್ ಎನಿಸಿದ್ದ ಚಂದನ್ ಶೆಟ್ಟಿ ಹಾಗು ನಿವೇದಿತಾ ಗೌಡ ಅವರಿಬ್ಬರೂ ಎರಡು ಜನ್ಮಗಳ ಪ್ಲಾನ್ ಮಾಡಿದ್ದರು. ಆದರೆ, ವಿಧಿಯ ಕೈವಾಡ ಎಂಬಂತೆ, ನಾಲ್ಕೇ ವರ್ಷಕ್ಕೆ ಈ ಜೋಡಿಯ ಸರಸ-ಸಲ್ಲಾಪ, ದಾಂಪತ್ಯ ಎಲ್ಲವೂ ಮುಗಿದ ಹೋದ ಅಧ್ಯಾಯ.
ನಮ್ ರೋಲ್ ಮಾಡೆಲ್ ಚಂದನ್-ನಿವೇದಿತಾ ಟ್ರೆಂಡಿಂಗ್; ಯಾಕ್ ಹೀಗಂತಿದಾರೆ, ಇದೇನ್ ಹೊಸ ಕಥೆ?
ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರಿಬ್ಬರ (Chandan Shetty and Niveditha gowda) ವಿಚ್ಛೇದನ ಹಲವರ ಅಚ್ಚರಿಗೆ ಕಾರಣವಾಗಿದೆ. ಯಾಕಂದ್ರೆ ಯಾವುದೇ ದಂಪತಿ ವಿಚ್ಛೇದನ ಅರ್ಜಿ ಸಲ್ಲಿಸಿದ್ದರೆ ತಿಂಗಳಾನುಗಟ್ಟಲೇ, ವರ್ಷಗಟ್ಟಲೇ ವಿಚಾರಣೆ ಕೋರ್ಟ್‌ನಲ್ಲಿ ನಡೆಯುತ್ತೆ. ಆದರೆ, ಚಂದನ್ ಶೆಟ್ಟಿ ದಂಪತಿ ವಿಚ್ಛೇದನ ಮಾತ್ರ ಒಂದೇ ದಿನದಲ್ಲಿ ಆಗಿದೆ. ಕಾರಣ ಇವರಿಬ್ಬರು ನಗು ನಗುತ್ತಲೇ, ಒಪ್ಪಂದದ ಮೇಲೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಅಲ್ಲದೇ ಕೋರ್ಟ್‌ಗೆ ಹಾಜರಾದ ವೇಳೆ ಈ ಜೋಡಿ ಅಕ್ಕಪಕ್ಕದಲ್ಲೇ ಇತ್ತು. ಹೀಗಾಗಿ ಬೇಗನೇ ವಿಚ್ಛೇದನ ನೀಡಿ ಆದೇಶ ಹೊರಡಿಸಲಾಗಿದೆ.
ಚಂದನ್ ಶೆಟ್ಟಿ, ನಿವೇದಿತಾ ಗೌಡ ವಿಚ್ಛೇದನಕ್ಕೆ ಇದೇ ಕಾರಣ; ಬೆಸ್ಟ್ ಕಾಮೆಂಟ್ ಇದಪ್ಪ ಅಂತಿದಾರೆ, ಹೌದಾ?
ಮನಸ್ತಾಪ, ಮುಖ ನೋಡಲೂ ಬಯಸದೇ, ಕೋರ್ಟ್‌ನಲ್ಲಿ ಕೂಡ ಜಗಳವಾಡದೇ ಈ ಇಬ್ಬರೂ ಬೇರೆಬೇರೆ ಆಗಿರುವುದನ್ನು ಹಲವರು ಸ್ವಾಗತಿಸಿದ್ದಾರೆ. ಸಾಮಾನ್ಯವಾಗಿ ಯಾವುದೇ ದಂಪತಿ, ಪರಸ್ಪರ ಮನಸ್ತಾಪ ಮೂಡಿದ ಮೇಲೆ ಒಬ್ಬರ ಮುಖವನ್ನು ಇನ್ನೊಬ್ಬರು ನೋಡಲು ಬಯಸುವುದಿಲ್ಲ. ಡಿವೋರ್ಸ್ ಅಪ್ಲೈ ಮಾಡುವಾಗಲೇ ಡಿವೋರ್ಸ್ ಆದವರಂತೆ ಬೇರೆಬೇರೆಯಾಗಿ ಬರುತ್ತಾರೆ. ಸಂಧಾನ ಪ್ರಕ್ರಿಯೆಯಲ್ಲೂ ಜೋರಾಗಿ ಕಿರುಚುತ್ತಾರೆ, ಕೂಗಾಡುತ್ತಾರೆ. ಡಿವೋರ್ಸ್ ಮಂಜೂರಾದ ಮೇಲಂತೂ ತಾಳಿ ಕಿತ್ತೆಸೆದು ಮುಖಕ್ಕೆ ಎಸೆಯುತ್ತಾರೆ, ಅಥವಾ ತಾಳಿ ಕಟ್ಟಿದವರು ಕಿತ್ತುಕೊಳ್ಳುತ್ತಾರೆ.
ಚಂದನ್ ಶೆಟ್ಟಿ, ನಿವೇದಿತಾ ಗೌಡ ಸಡನ್ ವಿಚ್ಛೇದನಕ್ಕೆ ದಿಗ್ಭ್ರಮೆ; ಕಾನೂನು ಬದಲಾಯಿತೇ?
ಆದರೆ, ಚಂದನ್ ಹಾಗು ನಿವೇದಿತಾ ಜೋಡಿ ಹಾಗಲ್ಲ. ನಗುನಗುತ್ತಲೇ ಈ ಇಬ್ಬರೂ ನಿನ್ನೆ ಶಾಂತಿನಗರದ ಫ್ಯಾಮಿಲಿ ಕೋರ್ಟ್‌ಗೆ ಡಿವೋರ್ಸ್ ಅಪ್ಲೈ ಮಾಡಿ, ಇಂದು ಅದು ಮಂಜೂರು ಆಗುತ್ತಿದ್ದಂತೆ ಖುಷಿಯಾಗಿ ಹಗ್ ಮಾಡಿಕೊಂಡು, ಶೇಕ್ ಹ್ಯಾಂಡ್ ಮಾಡುತ್ತಲೇ ಬೇರೆಬೇರೆ ಆಗಿರುವುದು ನಿಜಕ್ಕೂ ಆದರ್ಶ ಎನ್ನಲೇಬೇಕಾದ ನಡತೆ. ಅದನ್ನು ಗುರುತಿಸಿದ ಹಲವರು ಸೋಷಿಯಲ್ ಮೀಡಿಯಾಗಳಲ್ಲಿ ಅವರಿಬ್ಬರೂ ವಿಚ್ಛೇದನ ಪಡೆದುಕೊಂಡ ರೀತಿಯನ್ನು ಶ್ಲಾಘಿಸಿದ್ದಾರೆ. ಅವರಿಬ್ಬರೂ ನಮ್ಮ ರೋಲ್ ಮಾಡೆಲ್ ಎಂದು ಕೊಂಡಾಡಿದ್ದಾರೆ.
ಅನಂತನ ಅವಾಂತರದಲ್ಲಿ 'ಅಂಜಲಿ'ಯಾದ ಶಾಂತ ಈಗ ತ್ರಿಬ್ಬಲ್ ರೈಡಿಂಗ್ ಮಾಡ್ತಿದಾರೆ!
ಚಂದನ್ ಶೆಟ್ಟಿ ಹಾಗು ನಿವೇದಿತಾ ಗೌಡ ಅವರಿಬ್ಬರ ದಾಂಪತ್ಯದಲ್ಲಿ ಅದೇನಾಯಿತೋ ಏನೋ, ಅವರಿಬ್ಬರೂ ತಮ್ಮ ನಾಲ್ಕು ವರ್ಷಗಳ ದಾಂಪತ್ಯಕ್ಕೆ ಇತಿಶ್ರೀ ಹಾಡಿದ್ದಾರೆ. ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ಪುರಸ್ಕರಿಸಿ ಚಂದನ್ ಶೆಟ್ಟಿ, ನಿವೇದಿತಾ ಗೌಡ ವಿಚ್ಛೇದನವನ್ನು ಮಂಜೂರು ಮಾಡಿ ಬೆಂಗಳೂರು ಕೌಟುಂಬಿಕ ನ್ಯಾಯಾಲಯ ಆದೇಶ ಹೊರಡಿಸಿದೆ. ಈ ಮೂಲಕ ರ್‍ಯಾಪರ್ ಚಂದನ್ ಶೆಟ್ಟಿ- ನಿವೇದಿತಾ ಗೌಡ ಅವರ ನಾಲ್ಕು ವರ್ಷದ ದಾಂಪತ್ಯ ಅಂತ್ಯವಾಗಿದೆ.
ಪುರುಷೋತ್ತಮನ ಕಥೆ 'ಓಂ' ಆಯ್ತು, ಯಾರವರು? ಸುಧೀಂದ್ರ ಸ್ನೇಹಿತ ರೌಡಿ ಆಗಿದ್ರಾ?
ಬಹಿರಂಗವಾಗಿ ಹೇಳಿಕೊಳ್ಳದ ಕೆಲವು ಕಾರಣಗಳಿಂದ ಒಟ್ಟಿಗೇ ಇರಲು ಇಚ್ಚಿಸದ ಈ ಜೋಡಿ, ಪ್ರತ್ಯೇಕವಾಗಿರಲು ಬಯಸಿದೆ. ಹೀಗಾಗಿ ವಿಚ್ಛೇದನ ಕೋರಿ ಬೆಂಗಳೂರಿನ ಶಾಂತಿನಗರದ ಫ್ಯಾಮಿಲಿ ಕೋರ್ಟ್‌ನಲ್ಲಿ ವಿಚ್ಛೇದನಕ್ಕೆ 06 ಜೂನ್ 2024ರಂದು ಅರ್ಜಿ ಸಲ್ಲಿಸಿತ್ತು. ಪರಸ್ಪರ ಒಪ್ಪಂದದ ಮೇರೆಗೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರಿಂದ, ಕೋರ್ಟ್, ವಿಚ್ಛೇದನ ಮಂಜೂರು ಮಾಡಿ ಆದೇಶ ಹೊರಡಿಸಿದೆ. ಚಂದನ್ ಹಾಗೂ ನಿವೇದಿತಾ ವಿಚ್ಛೇದನ ಅರ್ಜಿ ಇಂದು (ಜೂನ್ 07) ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶರಾದ ಕೆ. ಎಸ್. ಜ್ಯೋತಿ ಶ್ರೀ ಅವರ ಬೆಂಚ್ ಮುಂದೆ ಬಂದಿತ್ತು.
ಈ ನಟಿ ಆ ನಟನ ಜೊತೆ ಏನ್ ಮಾಡ್ತಿದಾರೆ? ಯಾಕೆ ಅವರಿಬ್ರೂ ಒಟ್ಟಿಗಿದಾರೆ?
ಆದ್ರೆ, ಅರ್ಜಿಯನ್ನು ವಿಚಾರಣೆ ಮಾಡುವ ಮೊದಲು ಕಾನೂನು ಪ್ರಕ್ರಿಯೆಯಂತೆ ಮಿಡಿಯೇಷನ್ ಪ್ರಕ್ರಿಯೆ ಮಾಡಬೇಕಾಗುತ್ತದೆ. ಅದರಂತೆ ಚಂದನ್ ಹಾಗೂ ನಿವೇದಿತಾ ಅವರಿಗೆ ಕೌಟುಂಬಿಕ ಕೋರ್ಟ್‌ನ ಮಿಡಿಯೇಷನ್ ಸೆಂಟರ್ನಲ್ಲಿ ಮಾತುಕತೆಗೆ ಅವಕಾಶ ನೀಡಲಾಯಿತು. ವಿಚ್ಛೇದನಕ್ಕೆ ಮೊದಲು ಈ ಸಂಧಾನ ಪ್ರಕ್ರಿಯೆ ನಡೆಯಲೇಬೇಕು. ಅಂತೆಯೇ ಸಂಧಾನಕಾರರು ಮಾತುಕತೆ ನಡೆಸಿದಾಗ ಇಬ್ಬರು ತಮ್ಮ ನಿರ್ಧಾರದಿಂದ ಹಿಂದೆ ಸರಿದಿಲ್ಲ. ಹೀಗಾಗಿ ಅಂತಿಮವಾಗಿ ಕೋರ್ಟ್, ವಿಚ್ಛೇದನ ನೀಡಿ ಆದೇಶಿಸಿದೆ.