
2020ರಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ ಸಿನಿಮಾಗಳೆಂದರೆ ಲವ್ ಮಾಕ್ಟೇಲ್ ಹಾಗೂ ದಿಯಾ. ಈ ಎರಡೂ ಚಿತ್ರಗಳಲ್ಲಿ ತುಂಬಾನೇ ಕಾಮನ್ ಅಗಿದ್ದು ಆದಿ ಎನ್ನುವ ಹೆಸರು ಹಾಗೂ ಎರಡೂ ಸಿನಿಮಾಗಳಲ್ಲಿಯೂ ತಮ್ಮ ಪ್ರೀತಿ ಪಡೆದುಕೊಳ್ಳದೇ ಇರುವುದು. ಸಿನಿಮಾ ಏನೋ ಸೂಪರ್. ಆದರೆ ಎಂಡಿಂಗ್ ಮಾತ್ರ ಸ್ವಲ್ಪ ಕಣ್ಣೀರು ತರಿಸಿತ್ತು. ಚಿತ್ರಮಂದಿರಗಳಲ್ಲಿ ಹೇಳಿ ಕೊಳ್ಳುವಂಥ ಕಲೆಕ್ಷನ್ ಮಾಡಿಕೊಳ್ಳುವಲ್ಲಿ ಈ ಎರಡೂ ಚಿತ್ರಗಳೂ ವಿಫಲವಾದರೂ, ಒಟಿಟಿ ಫ್ಲ್ಯಾಟ್‌ಫಾರ್ಮ್‌ನಲ್ಲಿ ದಾಖಲೆ ಸೃಷ್ಟಿಸಿದ್ದು ಸುಳ್ಳಲ್ಲ. ಅದೂ ಲೌಕ್‌ಡೌನ್ ಆದ ನಂತರ ಮನೆಯಲ್ಲಿಯೇ ಕೂತು ಈ ಎರಡೂ ಚಿತ್ರಗಳನ್ನು ಸಿನಿಪ್ರೇಮಿಗಳು ಸಾಕಷ್ಟು ಎಂಜಾಯ್ ಮಾಡಿದ್ದಾರೆ.
ಡಾರ್ಲಿಂಗ್ ಬರ್ತಡೇ; ಡಿಫರೆಂಟ್ ಆಗಿ ಸ್ಕೂಟರ್ ಸವಾರಿ ಮಾಡುತ್ತಾ ಶುಭ ಕೋರಿದ ನಿಧಿಮಾ!
ದಿಯಾ ಖುಷಿಗೆ ಲವ್ ಮಾಕ್ಟೇಲ್ ಆದಿ ಸಿಗಬೇಕಿತ್ತು. ಲವ್ ಮಾಕ್ಟೇಲ್ ನಿಧಿಗೆ ದಿಯಾ ಆದಿ ಸಿಗಬೇಕಿತ್ತು ಅಂತ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಸಿಕ್ಕಾಪಟ್ಟೆ ಕಾಮೆಂಟ್ ಹಾಗೂ ಟ್ರೋಲ್ಸ್ ಕ್ರಿಯೇಟ್ ಮಾಡುತ್ತಿದ್ದರು. ಅಭಿಮಾನಿಗಳು ಕೂಡ ನಿರ್ದೇಶಕ ಹಾಗೂ ನಿರ್ಮಾಪಕರಿಗೆ ಈ ಅಭಿಮಾನಿಗಳ ಮನದಾಳದ ಆಸೆ ಏನೆಂಬುದನ್ನು ಕೇಳಿಸಿತ್ತು ಅನ್ಸುತ್ತೆ. ಅದಕ್ಕೆ ಈಗ ಅದೇ ಜೋಡಿಯನ್ನು ಒಟ್ಟಾಗಿ ತೆರೆ ಮೇಲೆ ತರಲು ಸನ್ನದ್ಧರಾಗಿದ್ದಾರೆ.
ಶುಗರ್‌ಲೆಸ್ ಚಿತ್ರದಲ್ಲಿ ಪೃಥ್ವಿ ಅಂಬಾರ್
ಕೆಲವು ದಿನಗಳ ಹಿಂದೆ ದಿಯಾ ಚಿತ್ರದ ನಟ ಪೃಥ್ವಿ ಹೊಸ ಚಿತ್ರಕ್ಕೆ ಸಹಿ ಮಾಡಿರುವುದನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು. ನಾಯಕಿಯ ಮುಖವನ್ನು ಬ್ಲರ್ ಮಾಡಿ ಯಾರು ಗೆಸ್ ಮಾಡಿ ಎಂದು ಪ್ರಶ್ನಿಸಿದ್ದರು. ಅನೇಕರು ಮಿಲನಾ ನಾಗರಾಜ್, ರಶ್ಮಿಕಾ ಮಂದಣ್ಣ, ಅನ್ವಿತಾ ಸಾಗರ್ ಹಾಗೂ ನಿಧಿ ಸುಬ್ಬಯ್ಯ ಎಂದು ಕಾಮೆಂಟ್ ಮಾಡಿದ್ದರು.
ಆದರೆ ಇಂದು ಪೃಥ್ವಿ ನಾಯಕಿಯ ಹೆಸರು ಹಾಗೂ ಫೋಟೋವನ್ನು ರಿವೀಲ್ ಮಾಡಿದ್ದಾರೆ. ನೀವೆಲ್ಲರೂ ಗೆಸ್ ಮಾಡುತ್ತಿದ್ದ ನಾಯಕಿ ಎಂದು ಮಿಲನಾ ನಾಗರಾಜ್ ಹೆಸರು ಹೇಳಿದ್ದಾರೆ. ನವೀನ್ ದ್ವಾರಕನಾಥ್ ನಿರ್ದೇಶನ ಹಾಗೂ ನವೀನ್ ರಾವ್ ನಿರ್ಮಾಣದಲ್ಲಿ ಮೂಡಿ ಬರಲಿರುವ ಈ ಚಿತ್ರಕ್ಕೆ ಯಾವ ರೀತಿಯ ಎಂಡಿಂಗ್ ಇರುತ್ತದೋ ಎಂದು ಕಾದು ನೋಡಬೇಕಿದೆ. ಈ ಚಿತ್ರವಾದರೂ ಸುಖಾಂತ್ಯವಾದರೆ ಚೆನ್ನಾಗಿರುತ್ತೆ ಅಲ್ಲವೇ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.