ಸಲಗ ಗ್ಯಾಂಗ್‌ನಲ್ಲಿ ರಿಯಲ್‌ ಪೊಲೀಸ್‌ ಮಗ ಜೈಸೂರ್ಯ

Kannadaprabha News   | Asianet News
Published : Oct 09, 2020, 09:52 AM ISTUpdated : Oct 09, 2020, 09:54 AM IST
ಸಲಗ ಗ್ಯಾಂಗ್‌ನಲ್ಲಿ ರಿಯಲ್‌ ಪೊಲೀಸ್‌ ಮಗ ಜೈಸೂರ್ಯ

ಸಾರಾಂಶ

ಕಟ್ಟು ಮಸ್ತಾದ ದೇಹ, ಆಳೆತ್ತದ ಈ ಹುಡುಗನ ಹೆಸರು ಜೈಸೂರ್ಯ ಆರ್‌ ಆಜಾದ್‌. ದುನಿಯಾ ವಿಜಯ್‌ ನಟಿಸಿ, ನಿರ್ದೇಶಿಸಿರುವ ‘ಸಲಗ’ ಚಿತ್ರದ ಮೂಲಕ ಬಣ್ಣದ ಜಗತ್ತಿಗೆ ಕಾಲಿಟ್ಟಿದ್ದಾರೆ. ನಟನೆಯ ಕನಸುಗಳನ್ನು ಕಟ್ಟಿಕೊಂಡು ಚಿತ್ರರಂಗಕ್ಕೆ ಬಂದಿರುವ ಈ ಹೊಸ ಪ್ರತಿಭೆಯ ಪರಿಚಯದ ಮಾತುಗಳು ಇಲ್ಲಿದೆ.

- ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರು. ನಮ್ಮ ತಂದೆ ಎಲ್‌ ವೈ ರಾಜೇಶ್‌. ಆಗ್ನೇಯ ವಿಭಾಗದ ಸಿಇಎನ್‌ ಠಾಣೆಯ ಸಬ್‌ ಇನ್ಸ್‌ಪೆಕ್ಟರ್‌ ಆಗಿದ್ದಾರೆ. ಅಂದರೆ ಸೈಬರ್‌ ವಿಭಾಗ. ನಾನು ಬೆಂಗಳೂರಿನ ಕ್ರೈಸ್ಟ್‌ ಕಾಲೇಜಿನಲ್ಲಿ ಲಾ ಓದುತ್ತಿದ್ದೇನೆ. ಸಿನಿಮಾಗಳಲ್ಲಿ ನಟನಾಗಬೇಕೆಂಬುದು ನನ್ನ ಬಹುದಿನಗಳ ಆಸೆ.

'ಸಲಗ' ರೋಮ್ಯಾಂಟಿಕ್‌ ಸಾಂಗ್‌ ಮೆಚ್ಚಿಕೊಂಡ ಪವರ್ ಸ್ಟಾರ್! 

- ಶಾಲಾ- ಕಾಲೇಜುಗಳಲ್ಲಿ ನಡೆಯುತ್ತಿದ್ದ ಡ್ರಾಮಾಗಳಲ್ಲಿ ಪಾತ್ರ ಮಾಡುತ್ತಿದ್ದಾಗ ನಟನಾಗುವ ವಿಶ್ವಾಸ ಬಂತು. ಮಾಡೆಲಿಂಗ್‌ ಶೋಗಳಲ್ಲಿ ಕಾಣಿಸಿಕೊಂಡರೆ ಸಿನಿಮಾದವರ ಕಣ್ಣಿಗೆ ಕಾಣುತ್ತೇನೆ ಎನ್ನುವ ಯೋಚನೆ ಇತ್ತು. ಮಾಡೆಲಿಂಗ್‌ ಸೇರಿದೆ. ಮಿಸ್ಟರ್‌ ಕರ್ನಾಟಕ ಚಾರ್ಮಿಂಗ್‌ ಹಾಗೂ ಮಿಸ್ಟರ್‌ ಸೌತ್‌ ಇಂಡಿಯಾ ಆ್ಯಮ್‌ ಪವರ್‌ಫುಲ್‌ ಕರ್ನಾಟಕ 2020 ಟೈಟಲ್‌ ವಿನ್ನರ್‌ ಆದೆ. ನಟ ಜೆಕೆ ಅವರಿಂದ ಪ್ರಶಸ್ತಿ ಸ್ವೀಕರಿಸಿದೆ.

- ಮಾಡೆಲಿಂಗ್‌ ಹಾಗೂ ಡ್ಯಾನ್ಸ್‌ ವಿಡಿಯೋಗಳು ಸ್ನೇಹಿತರ ಮೂಲಕ ಚಿತ್ರರಂಗದವರಿಗೆ ಕಳುಹಿಸಿದ್ದೆ. ‘ಸಲಗ’ ಚಿತ್ರತಂಡದವರು ನನ್ನ ಫೋಟೋಗಳನ್ನು ನೋಡಿ ಆಡಿಷನ್‌ ಕರೆದರು. ಸೆಲೆಕ್ಟ್ ಆದೆ.

- ಸಲಗ ಚಿತ್ರದಲ್ಲಿ ಜೈಲಿನಿಂದ ಬಿಡುಗಡೆ ಆಗಿ ಬಂದು ಹೀರೋ ಗ್ಯಾಂಗ್‌ನಲ್ಲಿ ಸೇರಿಕೊಂಡು ನಾಯಕನನ್ನೇ ಮುಗಿಸುವ ಸಂಚು ರೂಪಿಸುವ ಪಾತ್ರ.

- ಪ್ರತಿ ದಿನ ಕ್ಯಾಮೆರಾ ಮುಂದೆ ನಿಂತಾಗ ಕುತೂಹಲ ಮತ್ತು ಖುಷಿ ಎರಡೂ ಆಗುತ್ತಿತ್ತು. ನಟ ವಿಜಯ್‌ ಅವರ ಸಹಕಾರ, ಚಿಕ್ಕ ಪಾತ್ರಕ್ಕೂ ಅವರು ಕೊಟ್ಟಪ್ರೋತ್ಸಾಹ ಹಾಗೂ ಬೆಂಬಲ ನೋಡಿ ಒಂದು ಒಳ್ಳೆಯ ತಂಡದ ಜತೆಗೆ ಚಿತ್ರರಂಗಕ್ಕೆ ಬರುತ್ತಿದ್ದೇನೆಂಬ ಹೆಮ್ಮೆ ಮೂಡಿಸಿತು.

"

- ನಮ್ಮ ತಂದೆ ಪೊಲೀಸ್‌ ಅಧಿಕಾರಿ, ಯಾರಾದರೂ ನಿರ್ಮಾಪಕರು ಸಿಗುತ್ತಾರೆ ಸುಲಭವಾಗಿ ಹೀರೋ ಆಗಿಬಿಡೋಣ ಎನ್ನುವ ಧಾವಂತ ಇಲ್ಲ ನನಗೆ. ಅಪ್ಪನ ಶಿಫಾರಸ್ಸಿಗಿಂತ ಪ್ರತಿಭೆಯಿಂದ ಗುರುತಿಸಿಕೊಳ್ಳಬೇಕು ಎನ್ನುವುದು ನನ್ನ ಗುರಿ. ನನಗೆ ಹೀರೋಗಿಂತ ಹೆಚ್ಚಾಗಿ ಪ್ರಕಾಶ್‌ ರೈ ಅವರಂತೆ ಕಲಾವಿದ ಆಗುವ ಆಸೆ.

- ನಾನು ಕತೆಗೆ ಸೂಕ್ತ ಅನಿಸಿ ಯಾರದರೂ ಹೀರೋ ಪಾತ್ರ ಕೊಟ್ಟರೆ ಖಂಡಿತ ಮಾಡುತ್ತೇನೆ. ಅದು ನಿರ್ದೇಶಕರು ಗುರುತಿಸಿ ಕೊಡುವ ಜವಾಬ್ದಾರಿ ಎಂಬುದು ನನ್ನ ಭಾವನೆ. ಅಲ್ಲಿಯವರೆಗೂ ನಾನು ಕಲಾವಿದನಾಗಿಯೇ ಸಿಕ್ಕ ಪಾತ್ರಗಳನ್ನು ಮಾಡುತ್ತೇನೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ
ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!