
ಸ್ಯಾಂಡಲ್‌ವುಡ್ ಯುವನಟ ಚಿರಂಜೀವಿ ಸರ್ಜಾ ಎಲ್ಲರನ್ನೂ ಅಗಲಿ ತಿಂಗಳು ಕಳೆದಿದೆ. ಸರ್ಜಾ ಕುಟುಂಬದವರು, ಸ್ನೇಹಿತರು ಮತ್ತು ಸುಂದರ್ ರಾಜ್ ಕುಟುಂಬದವರು ಇಂದು ಕನಕಪುರದ ನೆಲಗುಳೆಯಲ್ಲಿರುವ ಧ್ರುವ ಸರ್ಜಾ ಬೃಂದಾವನ ಫಾರ್ಮ್ ಹೌಸ್‌ನಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಇತ್ತೀಚೆಗೆ ಚಿರು ಆಪ್ತ ಗೆಳೆಯ ಟಿಎಸ್ ನಾಗಾಭರಣ ಅವರ ಪುತ್ರ ಪನ್ನಗಾಭರಣ ಮನೆಯಲ್ಲಿ ಗೆಳೆಯ ಚಿರು ಫೋಟೋ ಮುಂದೆ ಆತನ ಅಚ್ಚು ಮೆಚ್ಚಿನ ವಸ್ತುಗಳನಿಟ್ಟು ಸ್ಮರಿಸಿದ್ದರು. ಈ ಸಂದರ್ಭದಲ್ಲಿ ಸೆರೆ ಹಿಡಿದ ಫೋಟೋವನ್ನು ಮೇಘನಾ ರಾಜ್ ಶೇರ್ ಮಾಡಿ, ಭಾವುಕರಾಗಿದ್ದಾರೆ.
'ನನ್ನ ಪ್ರೀತಿಯ ಚಿರು. ಚಿರು ಅಂದ್ರೆ ಒಂದು ದೊಡ್ಡ ಸಂಭ್ರಮ. ಇದಕ್ಕಿಂತ ಮತ್ತೊಂದು ರೀತಿಯಲ್ಲಿ ನಿನ್ನನ್ನು ಇಷ್ಟ ಪಡಲು ಸಾಧ್ಯವೇ ಇಲ್ಲ. ಚಿರು, ನಾನು ನಗುತ್ತಲೇ ಇರುವುದಕ್ಕೆ ನೀನೇ ಕಾರಣ, ನೀನು ಕೊಟ್ಟಿರುವ ಈ ಸುಮುಧುರ ಸಂಬಂಧ. ನಮ್ಮ ಈ ಕುಟುಂಬ. ನಾವುಗಳು ಮಾತ್ರ ಏನೇ ಆದರೂ ಸದಾ ಒಂದಾಗಿರುತ್ತೇವೆ. ಪ್ರತಿ ದಿನವೂ ನೀನು ಬಯಸಿದ ಹಾಗೆ ಇರುತ್ತೇವೆ. ಸದಾ ನಗುತ್ತಾ, ತಮಾಷೆ ಮಾಡುತ್ತಾ, ಗೇಲಿ ಮಾಡುತ್ತಾ, ಪ್ರೀತಿಸುತ್ತಾ.....We love you baby ma' ಎಂದು ಬರೆದುಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.