
ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಪ್ರಿಯರ ನೆಚ್ಚಿನ ಹೀರೋ. ಈಗ ಬಹುಭಾಷಾ ನಟಿ ಪ್ರಣಿತಾ ಅವರು ದರ್ಶನ್ ಅವರನ್ನು ಹೊಗಳಿದ್ದಾರೆ. ದರ್ಶನ್ ಚಿನ್ನದ ಮನಸಿನವರು ಎಂದು ಟ್ವಿಟರ್‌ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಟ್ವಿಟರ್, ಫೇಸ್‌ಬುಕ್‌ಗಳಲ್ಲಿ #Ask ಟ್ರೆಂಡ್ ಆಗುತ್ತಿದೆ. ಈ ಸಂದರ್ಭ ನಟಿ ಪ್ರಣಿತಾ ಸುಭಾಷ್ ಅವರೂ #AskPranitha ಮೂಲಕ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಈ ಸಂದರ್ಭ ಮಹೇಶ್ ಎಂಬ ಅಭಿಮಾನಿಯೊಬ್ಬರು ಡಿ ಬಾಸ್ ಬಗ್ಗೆ ಒಂದು ಮಾತು ಹೇಳಿ ಎಂದು ಪ್ರಶ್ನಿಸಿದ್ದಾರೆ.
ಈ ಸಂದರ್ಭ ಅಭಿಮಾನಿ ಪ್ರಶ್ನೆಗೆ ಉತ್ತರಿಸಿದ ಪ್ರಣಿತಾ, ದರ್ಶನ್ ಸರ್ ನನ್ನ ಮೊದಲ ಹಿರೋ. ಹಾಗಾಗಿ ನಾನು ಅವರನ್ನು ತುಂಬಾ ಗೌರವಿಸುತ್ತೇನೆ. ಕೊರೋನಾ ಸಂಕಷ್ಟದ ಸಮಯದಲ್ಲಿ ಅವರು ಜನರಿಗೆ ನೆರವಾದರು ಎಂದು ಕೇಳಲ್ಪಟ್ಟೆ. ಅವರದು ನಿಜಕ್ಕೂ ಚಿನ್ನದಂತ ಮನಸು ಎಂದು ಅವರು ಟ್ವೀಟ್ ಮಾಡಿದ್ದಾರೆ.
ಅಪ್ಪು ಸರ್ ಬಗ್ಗೆ ಒಂದು ವರ್ಡ್ ಹೇಳಿ ಎಂದು ಅಭಿಮಾನಿಗೆ ಉತ್ತರಿಸಿದ ನಟಿ, He’s truly the s/o ಬಂಗಾರದ ಮನುಷ್ಯ ಎಂದು ಟ್ವೀಟ್ ಮಾಡಿದ್ದಾರೆ. ನಿಮ್ಮ ಪೇರೆಂಟ್ಸ್ ಸ್ಟ್ರಿಕ್ಟ್ ಇದ್ದಾರಾ ಎಂದು ಕೇಳಿದ ಅಭಿಮಾನಿಗೆ ಈಗಲೂ ಹಾಗೆಯೇ ಎಂದು ಹಾಸ್ಯವಾಗಿ ಉತ್ತರಿಸಿದ್ದಾರೆ ಪ್ರಣಿತಾ. ನಟ ಸುಶಾಂತ್ ಕುರಿತ ಪ್ರಶ್ನೆಗೆ ಅವರೊಬ್ಬ ಅದ್ಭುತ ನಟ ಎಂದು ಉತ್ತರಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.