ಮೊದಲ ಕ್ರಶ್, ಲವ್ ಬಗ್ಗೆ ಗುಟ್ಟು ಬಿಚ್ಚಿಟ್ಟ ಮೇಘನಾ ಗಾಂವ್ಕರ್!

Published : Mar 27, 2022, 02:49 PM IST
ಮೊದಲ ಕ್ರಶ್, ಲವ್ ಬಗ್ಗೆ ಗುಟ್ಟು ಬಿಚ್ಚಿಟ್ಟ ಮೇಘನಾ ಗಾಂವ್ಕರ್!

ಸಾರಾಂಶ

ಅಭಿಮಾನಿಗಳು ಕೇಳಿದ ಪ್ರತಿಯೊಂದು ಪ್ರಶ್ನೆಗೂ ಉತ್ತರಿಸಿದ ನಟಿ ಮೇಘನಾ. ಬ್ಯೂಟಿ ಕೇರ್‌, ಲೈಫ್‌ಸ್ಟೈಲ್‌ ಸಂಪೂರ್ಣ ಮಾಹಿತಿ.....

2010ರಲ್ಲಿ ನಮ್ ಏರಿಯಾದಲ್ಲಿ ಒಂದು ದಿನ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಮೇಘನಾ ಗಾಂವ್ಕರ್ (Meghana Gaonkar) ತುಂಬಾನೇ ಸಿಂಪಲ್ ಮತ್ತು ಹಂಬಲ್. ಫಿಟ್ನೆಸ್‌, ಬುಕ್, ಟೀ ಕಲೆಕ್ಷನ್ (Tea Collections) ಅಂತ ಸಿಂಪಲ್ ಲೈಫ್‌ ನಡೆಸುವ ನಟಿ ಕೆಲವು ತಿಂಗಳುಗಳ ಹಿಂದೆ ಯೂಟ್ಯೂಬ್‌ ಲೋಕಕ್ಕೆ (Youtube Channel) ಕಾಲಿಟ್ಟರು. ತಮ್ಮ ದಿನ ಹೇಗಿರುತ್ತದೆ, ವರ್ಕೌಟ್ (Workout), ಕಾರನಲ್ಲಿ ಏನಿದು, ಬ್ಯಾಗಲ್ಲಿ ಏನಿರುತ್ತೆ...ಹೀಗೆ ಒಂದೊಂದೆ ರಿವೀಲ್ ಮಾಡಿದ್ದಾರೆ. ಮೇಘನಾ ಅಪ್ಲೋಡ್ ಮಾಡುವ ವಿಡಿಯೋಗೆ ನೆಟ್ಟಿಗರು ಕಾಮೆಂಟ್ ಮಾಡುತ್ತಾರೆ ಪ್ರತಿಯೊಬ್ಬರಿಗೂ ಉತ್ತರ ಕೊಡಲು ಆಗುವುದಿಲ್ಲವೆಂದು Q&A ಎಂದು ವಿಡಿಯೋ ಹಂಚಿಕೊಂಡು ಅದರಲ್ಲಿ ಕ್ಲಾರಿಟಿ ಕೊಟ್ಟಿದ್ದಾರೆ. 

ಸ್ಕೂಲ್‌ನ ಮೊದಲ ಕ್ರಶ್‌ ಯಾರು?
ನನಗೆ ಅಷ್ಟು ಸುಲಭವಾಗಿ ಒಬ್ಬರ ಮೇಲೆ ಕ್ರಶ್ (Crush) ಅಗುವುದಿಲ್ಲ ಅದೆಲ್ಲಾ ಅಪರೂಪ. ಒಬ್ಬರು ಹೇಳಬೇಕು ಅಂದ್ರೆ ಅದು ಶಾರುಖ್ ಖಾನ್ (Shah Rukh Khan) ಏಕೆಂದರೆ 90ರ ದಶಕದಲ್ಲಿ ಅವರ ಸಿನಿಮಾಗಳು ಹೆಚ್ಚಿಗೆ ಬರುತ್ತಿತ್ತು. ನನ್ನೊಬ್ಬಳಿಗೆ ಕ್ರಶ್ ಅಲ್ಲ ಏಕೆಂದರೆ ಇಡೀ ದೇಶವೇ ಅವರನ್ನು ಪ್ರೀತಿಸುತ್ತಿದೆ.

ನೀವು ಯಾರಿಗಾದರೂ ಪ್ರಪೋಸ್ ಮಾಡಿದ್ದೀರಾ?
ನಾನು ಇದುವರೆಗೂ ಯಾರಿಗೂ ಪ್ರಪೋಸ್ (Propose) ಮಾಡಿಲ್ಲ ಯಾಕೆ ಗೊತ್ತಿಲ್ಲ. ನನಗೆ ಪ್ರಪೋಸ್ ಮಾಡುವುದಕ್ಕೆ ಇಷ್ಟವಿಲ್ಲ ಮಾಡಿಸಿಕೊಳ್ಳುವುದಕ್ಕೆ ಇಷ್ಟ. ಈ ಪ್ರಪೋಸ್ ಮಾಡುವ ಕಾನ್ಸೆಪ್ಟ್‌ ನನಗೆ ಇಷ್ಟವಾಗುವುದಿಲ್ಲ.

ನಿಮ್ಮ ನೆಚ್ಚಿನ cuisine ಮತ್ತು ಟ್ರ್ಯಾವೆಲ್ ಡೆಸ್ಟಿನೇಷನ್?
ನನಗೆ ಇಟಾಲಿಯನ್ (Italian food) ಆಹಾರ ಇಷ್ಟ ಏಕೆಂದರೆ ನನಗೆ ಪಿಜಾ (Pizza) ಅಂದ್ರೆ ಪ್ರಾಣ. ಇಟಲಿ ಪ್ರವಾಸ ಹೋದಾಗ ನಾನು ತುಂಬಾ ಪಿಜಾ ತಿಂದಿದ್ದೀನಿ. ತಿಂಡಿ, ಮಧ್ಯಾಹ್ನ ಊಟ ರಾತ್ರಿ ಊಟ ಮೂರು ಹೊತ್ತು ಪಿಜಾ ತಿಂದಿದ್ದೀನಿ. ಅದು ಬಿಟ್ಟರೆ ಸೌತ್‌ ಇಂಡಿಯನ್ ಆಹಾರ, ಅನ್ನ ರಸಂ ಮತ್ತು ಅಮ್ಮ ಮಾಡುವ ಪಲ್ಯ ಇಷ್ಟ. 

ನಿಮ್ಮ ಚೀಟ್‌ ಡೇ (Cheat Day) ದಿನ ಏನು ತಿನ್ನಲು ಇಷ್ಟ ಪಡುತ್ತೀರಾ?
ನಾನು ಪದೇ ಪದೇ ಹೇಳುತ್ತಿರುವ ಹಾಗೆ ಪಿಜಾ

ಬ್ಯೂಟಿ ಸೀಕ್ರೆಟ್‌ ರಿವೀಲ್ ಮಾಡಿದ ನಟಿ Meghana Gaonkar; ಸರಳ ಟಿಪ್ಸ್‌ ಇದು!

ಮದುವೆ ಯಾವಾಗ?
ಯಾಕೆ ಎಲ್ಲರೂ ಒಂದೇ ಪ್ರಶ್ನೆ ಕೇಳುತ್ತಾರೆ? ಮದುವೆ ಅಷ್ಟೋಂದು ಮುಖ್ಯ ನಾ? ನನಗೆ ಹಾಗೆ ಅನಿಸುತ್ತಿಲ್ಲ. ಈಗ ನಾನು ನಡೆಸುಕೊಂಡು ಬದುಕುತ್ತಿರುವ ಜೀವನ ನನಗೆ ತುಂಬಾನೇ ಇಷ್ಟ. ಖುಷಿಯಾಗಿರುವೆ. ಟೈಂ ಬಂದಾಗ ಮದ್ವೇ ಆಗೇ ಆಗುತ್ತೆ. 

ನಿಮ್ಮ ಪರ್ಸನಾಲಿಟಿನ (Personality) ಜನರು ಇಷ್ಟ ಪಡುತ್ತಾರೆ, ಫಿಟ್ನೆಸ್‌ ಮತ್ತು ಲೈಫ್‌ಸ್ಟೈಲ್‌ ಬಗ್ಗೆ?
ನಾನು ಕಲಾವಿದೆ ಆಗಬೇಕೆಂದು ಕನಸು ಕಂಡವಳು. ಆ ಜೀವನ ಬದುಕುತ್ತಿರುವೆ ಜೊತೆಗೆ ಒಳ್ಳೆಯ ಆರೋಗ್ಯ ಮತ್ತು ಸಿಂಪಲ್ ಲೈಫ್ ಇಷ್ಟ. ನಮ್ಮ ಮನಸ್ಸಿಗೆ ಏನು ಬೇಕು ಎಂದು ನಾವು ಆಯ್ಕೆ ಮಾಡಿಕೊಳ್ಳುವುದರ ಮೇಲೆ ಹೋಗುತ್ತದೆ ನಮ್ಮ ಲೈಫ್‌ಸ್ಟೈಲ್. ಹೆಣ್ಣು ಮಗಳಾಗಿ ನಮಗೆ ಸೇವಿಂಗ್ಸ್‌ ಮತ್ತು ಹಣನ ಹೇಗೆ ಹ್ಯಾಂಡಲ್‌ ಮಾಡಬೇಕು ಎಂದು ಗೊತ್ತಿರಬೇಕು. ಎಷ್ಟು ಸೇವ್ ಮಾಡಬೇಕು ಎಷ್ಟು ಖರ್ಚು ಮಾಡಬೇಕು ಎಂದು ನಾವು ಮೊದಲು ತಿಳಿದುಕೊಂಡಿರಬೇಕು. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?