
ರಾಜಮೌಳಿ ನಿರ್ದೇಶನದ RRR ಸಿನಿಮಾ ವಿಶ್ವದಾದ್ಯಂತ ಬಿಡುಗಡೆಯಾಗಿ ಭರ್ಜರಿ ಓಪನಿಂಗ್ ಪಡೆದುಕೊಳ್ಳುತ್ತಿದೆ. ಮಾರ್ಚ್ 24ರ ಮಧ್ಯರಾತ್ರಿಯಿಂದಲೇ ಸಿನಿಮಾ ಎಲ್ಲೆಡೆ ಪ್ರದರ್ಶನವಾಗ್ತಿದ್ದು, ಮಲ್ಟಿ ಸ್ಟಾರರ್ ಚಿತ್ರಕ್ಕೆ ಪ್ರೇಕ್ಷಕರಿಂದ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಬಾಹುಬಲಿ ಸಿನಿಮಾದ ದಾಖಲೆಯನ್ನ ತಮ್ಮದೇ ಸಿನಿಮಾ ಮೂಲಕ ಮುರಿದಿದ್ದಾರೆ ನಿರ್ದೇಶಕ ರಾಜಮೌಳಿ (Director Rajamouli). ಇನ್ನು ಸಿನಿಮಾದ ಮೇಕಿಂಗ್ , ಗ್ರಾಫಿಕ್ಸ್ , ಕಥೆ ಪ್ರತಿಯೊಂot ವಿಚಾರದಲ್ಲಿಯೂ ರಾಜಮೌಳಿ ಯಶಸ್ಸು ಕಂಡಿದ್ದು ಥ್ರಿಬಲ್ ಆರ್ ಸಿನಿಮಾ ಪ್ರೇಕ್ಷಕರಿಗೆ ಹಬ್ಬವನ್ನುಂಟು ಮಾಡಿದೆ.
ತ್ರಿಬಲ್ ಆರ್ ಸಿನಿಮಾ ಐದು ಭಾಷೆಗಳಲ್ಲಿ ತೆರೆಗೆ ಬಂದಿದ್ದು, ವಿಶೇಷ ಅಂದ್ರೆ ಕನ್ನಡದ ಸಿನಿಮಾ ಅಭಿಮಾನಿಗಳಿಗೆ ರಾಜಮೌಳಿ ಆ್ಯಂಡ್ ಟೀಂ ಭರ್ಜರಿ ಎಂಟರ್ಟೈನ್ಮೆಂಟ್ ಕೊಟ್ಟಿದೆ. ಹೌದು ಈಗಾಗಾಲೇ ರಾಜ್ಯಾರದ್ಯಂತ RRR ಸಿನಿಮಾದ ಕನ್ನಡ ವರ್ಷನ್ ರಿಲೀಸ್ ಆಗಿದ್ದು, ಹೆಚ್ಚೆಚ್ಚು ಪ್ರೇಕ್ಷಕರು ಕನ್ನಡ ವರ್ಷನ್ ನೋಡಲು ನಿರ್ಧರಿಸಿದ್ದಾರೆ. ಕಾರಣ ಥ್ರಿಬಲ್ ಆರ್ ಚಿತ್ರದ ಕನ್ನಡ ವರ್ಷನ್ ಗೆ ರಾಮ್ ಚರಣ್ ಹಾಗೂ ಜ್ಯೂ ಎನ್ ಟಿ ಆರ್ ಅವ್ರೇ ಡಬ್ಬಿಂಗ್ ಮಾಡಿದ್ದಾರೆ. ಸಾಮಾನ್ಯವಾಗಿ ಅನ್ಯ ಭಾಷೆಯ ಸಿನಿಮಾಗಳಿಗೆ ಡಬ್ಬಿಂಗ್ ಆರ್ಟಿಸ್ಟ್‌ಗಳನ್ನು ಬಳಸಿಕೊಂಡು, ಡಬ್ ಮಾಡಿಸುತ್ತಾರೆ,. ಆದ್ರೆ ಈ ಭಾರಿ ರಾಜಮೌಳಿ ಚಿತ್ರದ ನಾಯಕರಿಂದಲೇ ಡಬ್ಬಿಂಗ್ (Dubbinng) ಮಾಡಿಸಿದ್ದಾರೆ. ಕನ್ನಡ ಸಿನಿಮಾ ಪ್ರೇಮಿಗಳ (Kannada Cine Lovers) ಮನ ಗೆದ್ದಿದ್ದಾರೆ.
NTR ಕನ್ನಡ ಪ್ರೇಮಕ್ಕೆ ಮನಸೋತ ಕನ್ನಡಿಗರು
ಮಾತೃಭಾಷೆ ಪ್ರತಿಯೊಬ್ಬರಲ್ಲಿಯೂ ಬೆರೆತು ಹೋಗಿರುತ್ತೆ ಅನ್ನೋದಕ್ಕೆ ಜ್ಯೂ ಎನ್‌ಟಿಆರ್ ಸಾಕ್ಷಿ. ತಾರಕ್ ಆಂಧ್ರದಲ್ಲಿ ಇದ್ದರೂ ಎಂದಿಗೂ ತಮ್ಮ ಮಾತೃ ಭಾಷೆ ಬಗ್ಗೆ ಹೇಳಿಕೊಳ್ಳಲು ಅಂಜಿಕೆ ಮಾಡಿಕೊಂಡಿಲ್ಲ. ಈ ಹಿಂದೆಯೂ ರಿಯಾಲಿಟಿ ಶೋಗಳಲ್ಲಿ 'ನನಗೆ ಕನ್ನಡ ಬರುತ್ತೆ' (I know Kannada) ನಮ್ಮ ತಾಯಿ (Mother) ಕನ್ನಡದವರು ಎಂದೆ ಹೆಮ್ಮೆಯಿಂದ ವೇದಿಕೆಯಲ್ಲಿ ಕನ್ನಡ ಮಾತನಾಡಿದ್ದರು. ಅದಾದ ನಂತರ RRR ಸಿನಿಮಾದ ಪ್ರಚಾರ ಕಾರ್ಯದಲ್ಲಿಯೂ ಕನ್ನಡದಲ್ಲಿಯೇ ಮಾತನಾಡಿದ್ದರು. ಇನ್ನು ಡಬ್ಬಿಂಗ್ ಸಮಯಲ್ಲಿ ತಮ್ಮ ತಾಯಿಯಿಂದ ಟಿಪ್ಸ್ ಕೂಡ ಪಡೆದುಕೊಂಡಿದ್ದರಂತೆ! ಜ್ಯೂ ಎನ್ ಟಿ ಆರ್ ಕನ್ನಡದಲ್ಲಿ ಡಬ್ಬಿಂಗ್ ಮಾಡುತ್ತೇನೆ ಎಂದಾಗ ತಾಯಿ ಶಾಲಿನಿ ಕನ್ನಡಿಗರು ತುಂಬಾ ಸ್ಟ್ರಾಂಗ್. ಭಾಷೆ ಬಗ್ಗೆ ಅಭಿಮಾನ, ಪ್ರೀತಿಯೊಂದಿಗೆ ಜ್ಞಾನ ಹೊಂದಿದ್ದಾರೆ. ತಪ್ಪು ಮಾಡಿದ್ರೆ ಕ್ಷಮಿಸೋದಿಲ್ಲ, ಹುಷಾರಾಗಿ ಡಬ್ಬಿಂಗ್ ಮಾಡು ಎಂದಿದ್ದರಂತೆ. ಅದಷ್ಟೇ ಅಲ್ಲದೆ ಒಂದಿಷ್ಟು ಪದಗಳ ಉಚ್ಛಾರವನ್ನೂ ಹೇಳಿ ಕೊಟ್ಟಿದ್ದರಂತೆ. ಆ ಸಲಹೆಗಳನ್ನ ಪಡೆದುಕೊಂಡಿದ್ದ ಜ್ಯೂ ಎನ್‌ಟಿ ಆರ್ ಅಚ್ಚುಕಟ್ಟಾಗಿ ಡಬ್ಬಿಂಗ್ ಮಾಡಿದ್ದಾರೆ. ಥ್ರಿಬ್ಬಲ್ ಆರ್ ಸಿನಿಮಾದಲ್ಲಿ ಜ್ಯೂ ಎನ್‌ಟಿ ಆರ್ ಡಬ್ಬಿಂಗ್ ಎಲ್ಲರ ಗಮನ ಸೆಳೆಯೋದ್ರ ಜೊತೆಗೆ ಕನ್ನಡಿಗರ ಹೃದಯ ಗೆದ್ದಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯ.
ಮೊದಲ ಪ್ರಯತ್ನದಲ್ಲೇ ಕನ್ನಡತನವನ್ನ ಉಳಿಸಿಕೊಂಡ ತಾರಕ್
ಜ್ಯೂ ಎನ್‌ಟಿ ಆರ್ ಕನ್ನಡದ ಸಿನಿಮಾರಂಗಲ್ಲಿ ಸಾಕಷ್ಟು ಸ್ನೇಹಿತರನ್ನ ಹೊಂದಿದ್ದಾರೆ. ಅದರಲ್ಲಿಯೂ ಪುನೀತ್ ಹಾಗೂ ಜ್ಯೂ ಎನ್‌ಟಿಆರ್ ಅವ್ರ ಸ್ನೇಹ ಎಲ್ಲರಿಗೂ ಗೊತ್ತಿರೋ ವಿಚಾರ ಈ ಹಿಂದೆ ಅಪ್ಪುಗಾಗಿ ಚಕ್ರವ್ಯೂಹ ಸಿನಿಮಾದಲ್ಲಿಯೂ ಗೆಳೆಯಾ ಗೆಳೆಯಾ ಹಾಡನ್ನ ಹಾಡಿದ್ರು. ಆಗ ಕನ್ನಡ ಅಷ್ಟು ಸ್ಪಷ್ಟವಾಗಿ ಹಾಡಿಲ್ಲ ಎಂದು ಮಾತು ಕೇಳಿಬಂದಿತ್ತು. ಆದ್ರೆ ಥ್ರಿಬಲ್ ಆರ್ ಸಿನಿಮಾ ನೋಡಿ ಬಂದವರು ಜ್ಯೂ ಎನ್‌ಟಿಆರ್ ಕನ್ನಡದ ಪ್ರೀತಿಗೆ ಮನಸೋತಿದ್ದಾರೆ. ಮೊದಲ ಪ್ರಯತ್ನದಲ್ಲಿಯೇ ಕನ್ನಡದ ತನವನ್ನ ಉಳಿಸಿಕೊಂಡ ಜ್ಯೂ ಎನ್‌ಟಿಆರ್ ಶ್ರದ್ಧೆಗೆ ಮೆಚ್ಚುಗೆ ಸಲ್ಲಿಸುತ್ತಿದ್ದಾರೆ. ಭಾವ ತುಂಬಿ ಕನ್ನಡ ಭಾಷೆ ಮಾತನಾಡಿರೋದಕ್ಕೆ ಧನ್ಯವಾದ ತಿಳಿಸಿದ್ದಾರೆ.
ಇವ್ರನ್ನ ನೋಡಿ ರಶ್ಮಿಕಾ ಬುದ್ದಿ ಕಲಿಯಲಿ ಎಂದ ನೆಟ್ಟಿಗರು
ಇನ್ನು ಕನ್ನಡವರೇ ಆಗಿ, ಕನ್ನಡ ಮಾತನಾಡಲು ಬಂದರೂ ಮಾತನಾಡದೇ ಇರೋ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಇವ್ರನ್ನ ನೋಡಿ ಬುದ್ದಿ ಕಲಿಯಲಿ ಅಂತಿದ್ದಾರೆ ನೆಟ್ಟಿಗರು. ಅಷ್ಟೇ ಅಲ್ಲದೇ ಕನ್ನಡದಲ್ಲಿ ಅವ್ರೇ ಅಭಿನಯಿಸಿದ ಚಿತ್ರಕ್ಕೂ ಡಬ್ಬಿಂಗ್ ಮಾಡಲು ಸಮಯ ಇಲ್ಲ ಎಂದು ಸಬೂಬು ಕೊಡೋ ನಟಿಯ ಮೇಲೆ ಮತ್ತೆ ಕನ್ನಡಿಗರು ಕೆಂಡ ಕಾರಿದ್ದಾರೆ.. ಒಟ್ಟಾರೆ ಅದೇನೆ ಇರಲಿ ಮಾತೃ ಭಾಷೆ ಮೇಲೆ ಮಾತೃವಿನ ಮೇಲಿರುವಷ್ಟೇ ಪ್ರೀತಿ ಇರಬೇಕು ಅನ್ನೋದನ್ನ ಮತ್ತೆ ಸಾಬೀತು ಮಾಡಿದ್ರು ಜ್ಯೂ ಎನ್‌ಟಿಆರ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.