Master Anand ಕಮ್‌ಬ್ಯಾಕ್: ಪ್ರೀತಿಯಷ್ಟೇ ಸ್ನೇಹಾನೂ ಮುಖ್ಯ ಎಂದ ನಟ

By Suvarna News  |  First Published Nov 4, 2021, 5:05 PM IST

ಪ್ರೇಮಂ ಪೂಜ್ಯಂ ಚಿತ್ರದ ಮೂಲಕ ಎರಡು ವರ್ಷಗಳ ನಂತರ ಕಮ್‌ ಬ್ಯಾಕ್ ಮಾಡುತ್ತಿರುವ ನಟ ಮಾಸ್ಟರ್ ಆನಂದ್...


ನೆನಪಿರಲಿ ಪ್ರೇಮ್‌ ನಟಿಸಿರುವ ಪ್ರೇಮಂ ಪೂಜ್ಯಂ (Premam Poojayam) ಚಿತ್ರದ ಇದೇ ನವೆಂಬರ್ 12ರಂದು ಬಿಡುಗಡೆಗೆ ಸಿದ್ಧವಾಗುತ್ತಿದೆ. ರಾಘವೇಂದ್ರ ಬಿಎಸ್ ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ಪ್ರೇಮ್‌ಗೆ (Prem Nenapirali) ಜೋಡಿಯಾಗಿ ಬೃಂದಾ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಪ್ರೇಮ್ ಸ್ನೇಹಿತನಾಗಿ ಮಾಸ್ಟರ್ ಆನಂದ್‌ (Master Anand) ಕೂಡ ನಟಿಸಿದ್ದಾರೆ. ಎರಡು ವರ್ಷಗಳ ನಂತರ ಪ್ರೇಮ್ ಕಮ್‌ಬ್ಯಾಕ್ ಮಾಡುತ್ತಿರುವುದಕ್ಕೆ ಸಂತಸ ವ್ಯಕ್ತ ಪಡಿಸಿದ್ದಾರೆ.

'ಹಾಸ್ಯ ಪಾತ್ರಗಳಿಗೆ (Comedian) ಮಾತ್ರ ನನ್ನ ವೃತ್ತಿ ಜೀವನ ಮೀಸಲಾಗಿತ್ತು. ವಿಭಿನ್ನ ಪ್ರಯತ್ನ ಮಾಡಬೇಕು ಎಂದು ನಾನು ಬರುತ್ತಿದ್ದ ಸಿನಿಮಾ ಕತೆಗಳನ್ನು ರಿಜೆಕ್ಟ್ ಮಾಡುತ್ತಿದ್ದೆ. ಕಿರುತೆರೆಯಲ್ಲಿ ಕೆಲಸ ಮಾಡುವುದು ಸಂತೋಷ ಕೊಡುತ್ತಿತ್ತು. ಹೀಗಾಗಿ ಅದನ್ನು ಮುಂದುವರೆಸಿಕೊಂಡು ಹೋಗುವುದು ನನ್ನ ಉದ್ದೇಶವಾಗಿತ್ತು. ಒಬ್ಬ ನಟನಾಗಿ ಚಾಲೆಂಜಿಂಗ್ (Challenge) ಪಾತ್ರ ಮಾಡಲೇ ಬೇಕು. ಹೀಗಾಗಿ ಪ್ರೇಮಂ ಪೂಜ್ಯಂ ಆಫರ್‌ ಬಂದಾಗ ನಾನು ಒಪ್ಪಿಕೊಂಡೆ,' ಎಂದು ಟೈಮ್ಸ್ ಆಫ್ ಇಂಡಿಯಾ ಜೊತೆ ಆನಂದ್ ಮಾತನಾಡಿದ್ದಾರೆ.

Tap to resize

Latest Videos

'ಪ್ರೇಮಂ ಪೂಜ್ಯಂ ಚಿತ್ರದಲ್ಲಿ ನಾನು ರಂಜನ್ ಪಾತ್ರದಲ್ಲಿ ನಟಿಸುವೆ. ಪ್ರೇಮ್ ಕಾಲೇಜಿನ ಸ್ನೇಹಿತನಾಗಿ (College friend) ಕಾಣಿಸಿಕೊಂಡಿದ್ದೇನೆ. ಲವ್ ಸ್ಟೋರಿ (Love story) ಹೊರತು ಪಡಿಸಿದರೆ, ಸ್ನೇಹ ಎಷ್ಟು ಮುಖ್ಯ ಎಂದು ಈ ಚಿತ್ರ ಹೇಳುತ್ತದೆ. ಇಡೀ ಚಿತ್ರ ಸ್ನೇಹಿತರ ಮನೋರಂಜನೆ ಇರುತ್ತದೆ. ಸ್ನೇಹದ ಮಹತ್ವ ತಿಳಿಸುತ್ತದೆ,' ಎಂದಿದ್ದಾರೆ. 

ಹುಟ್ಟು ಹಾಸ್ಯ ನಟ ಮಾಸ್ಟರ್ ಆನಂದ್ ಅಧ್ಯಾತ್ಮದ ಬಗ್ಗೆ ಮಾತನಾಡಿದರೆ!?

'ಕೆಲವೊಂದು ಸಿನಿಮಾ ಕಾರ್ಯಕ್ರಮಗಳಲ್ಲಿ ನಾನು ಪ್ರೇಮ್ ಅವರನ್ನು ಭೇಟಿಯಾಗಿದ್ದೆ. ಆದರೆ ಈ ಸಿನಿಮಾ ನಮ್ಮನ್ನು ತುಂಬಾನೇ ಕ್ಲೋಸ್ ಮಾಡಿದೆ. Ootyನಲ್ಲಿ ನಾವು ಒಂದು ಎಮೋಷನಲ್‌ ಸನ್ನಿವೇಶ (Emotional Scene) ಚಿತ್ರೀಕರಣ ಮಾಡಬೇಕಿತ್ತು ಆದರೆ ನಾನು ಅವರಿಗೆ ಮೊದಲು ಕಾಲೇಜ್ ಸೀಕ್ವೆನ್ಸ್ ಚಿತ್ರೀಕರಣ ಮುಗಿಸಿಕೊಳ್ಳೋಣವೆಂದೆ. ಏಕೆಂದರೆ ನಮ್ಮ ನಡುವೆ ಸ್ನೇಹ ಗಟ್ಟಿಯಾಗಬೇಕಿತ್ತು .ಯಾವುದೇ ಗ್ಯಾಪ್ ಫೀಲ್ ಆಗದೇ ಚಿತ್ರೀಕರಣ ಮಾಡಬೇಕಿತ್ತು. ನಾವು ಹೇಳಿದ್ದಕ್ಕೆ ನಿರ್ದೇಶಕರು ಒಪ್ಪಿಕೊಂಡರು. 6 ತಿಂಗಳು ಕಳೆದ ನಂತರ ನಾನು ಊಟಿಯಲ್ಲಿ ಚಿತ್ರೀಕರಣ ಮಾಡಿದ್ವಿ, ಚಿತ್ರದ ಪ್ರಮುಖ ಸನ್ನಿವೇಶವೇ ಅದು. ತೆರೆ ಮೇಲೆ ನೀವು ಆ ದೃಶ್ಯನ ಫೀಲ್ ಮಾಡಬಹುದು,' ಎಂದು ಕಿರುತೆರೆಯ ಜನಪ್ರಿಯ ನಿರೂಪಕ ಆನಂದ್ ಮಾತನಾಡಿದ್ದಾರೆ.

ನಟ, ನಿರ್ದೇಶಕ ಹಾಗೂ ನಿರೂಪಕ ಮಾಸ್ಟರ್ ಆನಂದ್ ಫ್ಯಾಮಿಲಿ ಫೋಟೋ ನೋಡಿ!

'ಒಬ್ಬ ಕಲಾವಿದನಾಗಿ ಟಿವಿ ನನಗೆ ವಿವಿಧ ಪಾತ್ರಗಳನ್ನು ಪ್ರಯತ್ನ ಮಾಡಲು ಅವಕಾಶ ನೀಡಿದೆ. ನಟಿಸಿ ನಿರ್ದೇಶನ (direction) ಕೂಡ ಮಾಡಿರುವೆ. ಇದರ ಜೊತೆಗೆ ಕಾಮಿಡಿ ಕಿಲಾಡಿಗಳು, ಡ್ರಾಮ ಜ್ಯೂನಿಯರ್ಸ್ ಹಾಗೂ ಅವಾರ್ಡ್ ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿದೆ,' ಎಂದಿದ್ದಾರೆ.

click me!