ಕೇವಲ 20 ದಿನಗಳಲ್ಲಿ 'ಕಸ್ತೂರಿ ಮಹಲ್' ಚಿತ್ರೀಕರಣ ಕಂಪ್ಲೀಟ್ ಮಾಡಿದ ಶಾನ್ವಿ!

Suvarna News   | Asianet News
Published : Oct 29, 2020, 01:00 PM ISTUpdated : Oct 29, 2020, 01:14 PM IST
ಕೇವಲ 20 ದಿನಗಳಲ್ಲಿ 'ಕಸ್ತೂರಿ ಮಹಲ್' ಚಿತ್ರೀಕರಣ ಕಂಪ್ಲೀಟ್ ಮಾಡಿದ ಶಾನ್ವಿ!

ಸಾರಾಂಶ

ದಿನೇಶ್‌ ಬಾಬು ನಿರ್ದೇಶನ ಕಸ್ತೂರಿ ಮಹಲ್ ಚಿತ್ರೀಕರಣ ಕಂಪ್ಲೀಟ್ ಮಾಡಿದ ನಟಿ ಶಾನ್ವಿ. ಮ್ಯಾಜಿಕಲ್‌ ಮೊಮೆಂಟ್ಸ್‌ ಹೇಗಿತ್ತು?

ಬಹುಭಾಷಾ ನಟಿ ಶಾನ್ವಿ ಅಭಿನಯಿಸುತ್ತಿರುವ 'ಕಸ್ತೂರಿ ಮಹಲ್' ಚಿತ್ರ ತಂಡದಿಂದ ಸಿಹಿ ಸುದ್ದಿಯೊಂದು ಹೊರ ಬಂದಿದೆ. ಅದುವೇ ಕೇವಲ 20 ದಿನಗಳಲ್ಲಿ ಚಿತ್ರೀಕರಣ ಪೂರ್ಣಗೊಳಿಸಿ, ಮತ್ತೊಂದು ಹಿಸ್ಟರಿ ಕ್ರಿಯೇಟ್ ಮಾಡಿದ್ದಾರೆ. ಅತಿ ಕಡಿಮೆ ಅವಧಿಯಲ್ಲಿ ಬಹು ಬೇಗ ಚಿತ್ರೀಕರಣ ಮುಗಿಸುವುದರಲ್ಲಿ ಕನ್ನಡ ನಿರ್ದೇಶಕ ದಿನೇಶ್‌ ಬಾಬು ಫೇಮಸ್. ಆಯುಧ ಪೂಜೆ ದಿನವೇ ತಮ್ಮ ಚಿತ್ರಕ್ಕೂ ಕುಂಬಳಕಾಯಿ ಒಡೆದಿದ್ದಾರೆ.

ದಿನೇಶ್‌ ಬಾಬು ಚಿತ್ರಕ್ಕೆ ನಾಯಕಿ ಆಗಿದ್ದಕ್ಕೆ ಹೆಮ್ಮೆ ಇದೆ: ಶಾನ್ವಿ ಶ್ರೀವಾಸ್ತವ್‌ 

ಅಕ್ಟೋಬರ್ ಪ್ರಾರಂಭದಲ್ಲಿ ಚಿತ್ರೀಕರಣ ಪ್ರಾರಂಭಿಸಿದ ತಂಡ ಅಕ್ಟೋಬರ್‌ ಅಂತ್ಯವಾಗುವುದರೊಳಗೆ ಚಿತ್ರೀಕರಣ ಪೂರ್ಣಗೊಳಿಸಿದೆ. ಕೊಟ್ಟಿಗೆ ಹಾರ, ಬಾಲೂರು ಸುತ್ತಮುತ್ತಲಿನ ಸುಂದರ ಪರಿಸರದ ತಾಣಗಳಲ್ಲಿ ಚಿತ್ರೀಕರಣ ಮಾಡಲಾಗಿತ್ತು.  ಆಯುಧ ಪೂಜೆ ಶುಭ ದಿನವಾದ ಕಾರಣ ಅದೇ ಸ್ಥಳದಲ್ಲಿ ಚಿತ್ರೀಕರಣ ಪೂರ್ಣಗೊಳಿಸಿ ಕುಂಬಳಕಾಯಿ ಒಡೆದು, ಚಿತ್ರಕ್ಕೆ ಯಾವದೇ ವಿಘ್ನಗಳು ಕಾಡದಂತೆ ದೇವರನ್ನು ಪ್ರಾರ್ಥಿಸಿದ್ದಾರೆ.

ಚಿತ್ರೀಕರಣ ನಂತರದ ಪ್ರೀ ಪ್ರೊಡಕ್ಷನ್ ಕೆಲಸಗಳು ಕೆಲವೇ ಕೆಲವು ದಿನಗಳಲ್ಲಿ ಪ್ರಾರಂಭವಾಗಲಿದೆ. ಚಿತ್ರದಲ್ಲಿ ಶಾನ್ವಿಗೆ ಜೊತೆಯಾಗಿ ಸ್ಕಂದ ಅಶೋಕ್, ರಂಗಾಯಣ ರಘು, ಶೃತಿ ಪ್ರಕಾಶ್, ನೀನಾಸಂ ಅಶ್ವಥ್ , ಅಕ್ಷರ್ ಮುಂತಾದವರಿದ್ದಾರೆ. ಸ್ವತಃ ದಿನೇಶ್ ಬಾಬು ಅವರೇ ಚಿತ್ರಕಥೆ , ಸಂಭಾಷಣೆ ಬರೆದಿರುವ ಕಾರಣ ಸಿನಿ ಪ್ರೇಮಿಗಳಲ್ಲಿ ಈ ಚಿತ್ರದ ಬಗ್ಗೆ ಕುತೂಹಲ ಹೆಚ್ಚಾಗಿದೆ.  ಶ್ರೀಭವಾನಿ ಆರ್ಟ್‌ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಪಿ.ಕೆ.ಹೆಚ್ ದಾಸ್  ಛಾಯಾಗ್ರಹಣ ಹಾಗೂ ಸೌಂದರ್ಯ ರಾಜ್ ಅವರ ಸಂಕಲನ ಇರಲಿದೆ. 

ಕುಮರಿ ಖಂಡಂ ಥೀಮ್‌ನಲ್ಲಿ ಶಾನ್ವಿ; ವೈರಲ್ ಆಯ್ತು ಫೋಟೋ ಶೋಟ್

ಕಸ್ತೂರಿ ನಿವಾಸದಿಂದ ಕಸ್ತೂರಿ ಮಹಲ್‌ಗೆ ಶೀರ್ಷಿಕೆ ಬದಲಾಗಿದ್ದಲ್ಲದೆ, ನಟಿ ರಚಿತಾ ರಾಮ್ ಹೊರ ಬಂದು ಕಾರಣ ಶಾನ್ವಿ ಆಯ್ಕೆಯಾದರು. ಎಲ್ಲಾ ರೀತಿಯ ದಿಢೀರ್‌ ಬದಲಾವಣೆಗಳಿಗೆ ಹೊಂದಿಕೊಂಡ ತಂಡ, ಚಿತ್ರೀಕರಣ ಪೂರ್ಣಗೊಳಿಸಿ ಅತೀ ಶೀಘ್ರದಲ್ಲಿಯೇ ನಿಮ್ಮಲ್ಲರನ್ನು ಮನೋರಂಜಿಸಲು ಸಿದ್ಧವಾಗುತ್ತಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್
ಶಾರುಖ್ ಪುತ್ರ ಆರ್ಯನ್ ಖಾನ್ ಕನ್ನಡಿಗರ ಜೊತೆ ಅಸಭ್ಯ ವರ್ತನೆ ಮಾಡಿಲ್ಲ: ಸಚಿವ ಜಮೀರ್ ಪುತ್ರ ಹೇಳಿದ್ದೇನು?