
ವಯಸ್ಸು, ಜಾತಿ ಹಾಗೂ ವರ್ಗ ಬೇಧವಿಲ್ಲದೇ ಎಲ್ಲರನ್ನೂ ನಡುಗಿಸುತ್ತಿರವ ಮಹಾಮಾರಿ ಕೊರೋನಾ ವೈರಸ್ ಭಾರತದಲ್ಲಿ ಮೂರನೇ ಹಂತ ತಲುಪಿದೆ. ಲಾಕ್‌ಡೌನ್ ಮಾಡಿದರೂ ಈ ರೋಗ ಹಬ್ಬುತ್ತಿರುವ ಪ್ರಮಾಣ ಕಡಿಮೆಯಾಗಿಲ್ಲ. ದಿನದ ಅಗತ್ಯ ವಸ್ತುಗಳನ್ನು ಹೊರತು ಪಡಿಸಿ ಎಲ್ಲ ರೀತಿಯ ಅಂಗಡಿಗಳನ್ನೂ ಮುಚ್ಚಲಾಗಿದೆ.
ಇನ್ನು ಚಿತ್ರೀಕರಣಕ್ಕೆಂದು ವಿದೇಶಕ್ಕೆ ತೆರಳಿದ ಸಿನಿಮಾ ತಾರೆಯರು ಭಾರತಕ್ಕೆ ಹಿಂದಿರುಗುತ್ತಿದ್ದಾರೆ. ಅವರ ಪೈಕಿ 14 ದಿನ ಹೋಂ ಕಾರಂಟೈನ್ ಪಡೆದುಕೊಂಡವರು ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಗೂಗ್ಲಿ' ಚಿತ್ರದ ನಟಿ ಕೃತಿ ಕರಬಂಧ.
ಮಾಸ್ಕ್ ಧರಿಸಿ ರೇಷನ್ ತರಲು ಹೊರಟ ನಟನ ಫೋಟೋ ವೈರಲ್!
ಹೌದು! ಇತ್ತೀಚಿಗೆ ವಿದೇಶಕ್ಕೆ ತರಿದೆ ಕೃತಿ, ಭಾರತಕ್ಕೆ ಹಿಂದಿರುಗಿದ್ದಾರೆ. ಕರೋನಾ ಸ್ಕ್ರೀನಿಂಗ್ ಮಾಡಿಸಿಕೊಂಡಿದ್ದಾರೆ. ಆದರೆ ಅದಾದ ಕೆಲವು ದಿನಗಳ ನಂತರ ಕೆಮ್ಮು ಹಾಗೂ ನೆಗಡಿ ಕಾಣಿಸಿಕೊಂಡ ಕಾರಣ ವೈದ್ಯರನ್ನು ಸಂಪರ್ಕಿಸಿದ್ದಾರೆ.
ತಪಾಸಣೆ ನಂತರ ಕೊರೋನಾ ಸಮಸ್ಯೆ ಇಲ್ಲವೆಂದು ತಿಳಿದರೂ, ಕೃತಿ ಕರಬಂಧ ಸ್ವಯಂಪ್ರೇರಿತರಾಗಿ 14 ದಿನಗಳ ಹೋಂ ಕ್ವಾರಂಟೈನ್‌ನಲ್ಲಿದ್ದರು. ಮಾರ್ಚ್ 12ರಿಂದ ಮಾರ್ಚ್ 26ರವರೆಗೂ ಗೃಹ ಬಂಧನಕ್ಕೊಳಗಾಗಿದ್ದರು. ಈ ಅವಧಿಯಲ್ಲಿ ಸೆರೆ ಹಿಡಿದ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಬಾಲಿವುಡ್ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ಕೃತಿ ಹೆಸರು ನಟ ಸಾಮ್ರಾಟ್ ಜೊತೆ ಕೇಳಿಬರುತ್ತಿದ್ದು, ಈ ಬಗ್ಗೆ ಎಲ್ಲಿಯೂ ಬಹಿರಂಗವಾಗಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.