
ಸಿನಿಮಾ ತಾರೆಯರು, ಉದ್ಯಮಿಗಳು ಹಾಗೂ ಕ್ರೀಡಾಪಟುಗಳು ಕೊರೋನಾ ವೈರಸ್ ಭೀತಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ. ಈಗ ತಮ್ಮ ಸ್ಟಾರ್ ನಟರ ಹಾದಿಯಲ್ಲೇ ಅಭಿಮಾನಿಗಳು ಸಾಗುತ್ತಿದ್ದಾರೆ.
ಸಾಮಾಜ ಸೇವೆಯಲ್ಲಿ ಹಾಗೂ ಪ್ರಾಣಿಗಳನ್ನು ದತ್ತು ಪಡೆಯುವುದರಲ್ಲಿ ಸದಾ ಮಂಚೂಣಿಯಲ್ಲಿರುವ ದರ್ಶನ್ ಅವರ ಹುಟ್ಟು ಹಬ್ಬಕ್ಕೆ ಅಭಿಮಾನಿಗಳು ನೀಡಿದ ದವಸ ಧಾನ್ಯಗಳನ್ನು ಆಶ್ರಮಕ್ಕೆ ನೀಡಿ ಸಹಾಯ ಮಾಡಿದ್ದರು. ಈಗ ಅದೇ ಅಭಿಮಾನಿಗಳು ಭಾರತ ಲಾಕ್‌ಡೌನ್ ಆಗಿರುವ ಹಿನ್ನೆಲೆಯಲ್ಲಿ ದಿನಗೂಲಿ ನೌಕರರು ಹಾಗೂ ಕಷ್ಟದಲ್ಲಿರುವ ನಿರ್ಗತಿಕರ ನೆರವಿಗೆ ಧಾವಿಸಿದ್ದಾರೆ.
ಪಂಚೆ ಆ್ಯಡಲ್ಲಿ ದರ್ಶನ್; ಮರೆಯಾಗದ ಸಾಮಾಜಿಕ ಕಾಳಜಿ!
ಹೌದು! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿಮಾನಿ ಸಂಘ 'ಕರುನಾಡ ಏಕಚಕ್ರಾಧಿಪತಿ ದರ್ಶನ್ ಬಾಸ್ ಅಭಿಮಾನಿಗಳ ಸಂಘ ಮೈಸೂರು' ಇವರ ವತಿಯಿಂದ ಮೈಸೂರಿನ ಕೋವಿಡ್-19 ಲಾಕ್‌ಡೌನ್‌ನಿಂದ ಕೂಲಿ ಇಲ್ಲದೆ ಕಷ್ಟದಲ್ಲಿರುವ ಜನರಿಗೆ ಆಹಾರ ವಿತರಿಸಿದ್ದಾರೆ. ಟೋಮ್ಯಾಟೋ ಬಾತ್, ಮೊಸರನ್ನ ಹಾಗೂ ಕುಡಿಯುವ ನೀರನ್ನೂ ಪೂರೈಸಿದ್ದಾರೆ. ಮತ್ತೊಂದು ತಂಡವಾದ ಅಖಿಲ ಕರ್ನಾಟಕ ದರ್ಶನ್ ತೂಗುದೀಪ ಅಭಿಮಾನಿಗಳು ಚೆಲುವಾಂಬ ಆಸ್ಪತ್ರೆ ಮುಂಭಾಗದಲ್ಲಿ ಸುಮಾರು 500ಕ್ಕೂ ಹೆಚ್ಚು ಜನರಿಗೆ ಉಚಿತ ಮಾಸ್ಕ್ ಹಾಗೂ ನೀರು ವಿತರಿಸಿದ್ದಾರೆ.
ಕೆಲವು ದಿನಗಳ ಹಿಂದೆ ಚಿತ್ರರಂಗದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕಾಲಿವುಡ್ ನಟ ಸೂರ್ಯ ಹಾಗೂ ಕಾರ್ತಿ 10 ಲಕ್ಷ ರೂ ನೀಡುವ ಮೂಲಕ ಸಹಾಯ ಮಾಡಿದ್ದರು. ಅಲ್ಲದೇ ಟಾಲಿವುಡ್‌ನಲ್ಲಿ ಅನೇಕ ಸ್ಟಾರ್ ನಟರು ತಮ್ಮ ಕೈಲದಾ ಆರ್ಥಿಕ ಸಹಾಯ ಮಾಡಿ, ಈ ಸಾಂಕ್ರಾಮಿಕ ರೋಗವನ್ನು ಹೊಡೆದೋಡಿಸಲು ಮುಂದಾಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.