ಕಾರ್ಮಿಕರ ನೆರವಿಗೆ ಕ್ರೌಡ್‌ ಫಂಡಿಂಗ್‌ ; ಪವನ್ ಕುಮಾರ್‌ ವಿನೂತನ ಐಡಿಯಾ!

Suvarna News   | Asianet News
Published : Mar 27, 2020, 04:42 PM ISTUpdated : Mar 28, 2020, 10:47 PM IST
ಕಾರ್ಮಿಕರ ನೆರವಿಗೆ ಕ್ರೌಡ್‌ ಫಂಡಿಂಗ್‌ ; ಪವನ್ ಕುಮಾರ್‌ ವಿನೂತನ ಐಡಿಯಾ!

ಸಾರಾಂಶ

ಕೊರೋನಾ ಭೀತಿಯಿಂದ ಇಡೀ ಚಿತ್ರರಂಗದ ಬಂದಾಗಿದೆ. ಈ ಉದ್ಯಮದಲ್ಲಿ ಆ ದಿನ ಕೂಲಿ ನಂಬಿಕೊಂಡೇ ಬದುಕುತ್ತಿರುವ ನೂರಾರು ಕುಟುಂಬದ ಸ್ಥಿತಿ ದಿನೇ ದಿನೇ ಚಿಂತಾಜನಕವಾಗಿದೆ. ಈ ಹೊತ್ತಿನಲ್ಲಿ ದಿನಗೂಲಿ ಸಿನಿಮಾ ಕಾರ್ಮಿಕರ ಪರವಾಗಿ ನಿಲ್ಲುವ ನಿಟ್ಟಿನಲ್ಲಿ ಈಗಾಗಲೇ ಒಂದಿಷ್ಟುಮಂದಿ ಮುಂದಾಗಿದ್ದಾರೆ.

ಆ ಸಾಲಿನಲ್ಲಿ ಈಗ ನಿರ್ದೇಶಕ ಪವನ್‌ ಕುಮಾರ್‌ ಜನರಿಂದ ಹಣ ಸಂಗ್ರಹಿಸಿ ಅದನ್ನು ದಿನಗೂಲಿ ಕಾರ್ಮಿಕರಿಗೆ ತಲುಪಿಸುವುದಕ್ಕೆ ಯೋಜನೆ ರೂಪಿಸಿದ್ದಾರೆ. ಈಗಾಗಲೇ ಅವರ ಬ್ಯಾಂಕ್‌ ಖಾತೆಗೆ 5,81,976.31 ಲಕ್ಷ ಜಮೆ ಆಗಿದೆ. ಪ್ರತಿಯೊಬ್ಬರು 2000 ಸಾವಿರ ರುಪಾಯಿ ದೇಣಿಗೆ ನೀಡುವಂತೆ ಮನವಿ ಮಾಡಿಕೊಂಡಿದ್ದು, ಯಾವುದೇ ರೀತಿಯ ಮಧ್ಯವರ್ತಿಗಳು ಇಲ್ಲದೆ ಈಗಾಗಲೇ 500ಕ್ಕೂ ಹೆಚ್ಚು ಮಂದಿ ದೇಣಿಗೆ ನೀಡಿದ್ದಾರೆ.

ಮೇಕಪ್‌, ಕಾಸ್ಟ್ಯೂಮ್‌, ಪ್ರೊಡಕ್ಷನ್‌ ಸೆಟ್‌, ಲೈಟ್‌ ಮ್ಯಾನ್‌, ಕಲಾ ನಿರ್ದೇಶಕರು, ಸ್ಟೆಂಟ್‌ ಮ್ಯಾನ್‌, ವಾಹನ ಚಾಲಕರು, ಸ್ಟಿಲ್‌ ಫೋಟೋಗ್ರಾಪರ್ಸ್‌, ಅಸಿಸ್ಟೆಂಟ್‌ ನಿರ್ದೇಶಕರು, ಪೋಷಕ ಕಲಾವಿದರು, ಡಬ್ಬಿಂಗ್‌ ಕಲಾವಿದರು, ಮ್ಯಾನೇಜರ್‌ ಸೇರಿದಂತೆ ಹೀಗೆ ವಿವಿಧ ವಿಭಾಗಗಳಲ್ಲಿ ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವವರ ಸಂಖ್ಯೆ 2699 ಮಂದಿ. ಇವರೆಲ್ಲ ಆ ದಿನ ಕೆಲಸವನ್ನು ನಂಬಿಕೊಂಡೇ ಬದುಕುತ್ತಿದ್ದಾರೆ. ಆದರೆ, ಕಳೆದ ಒಂದು ತಿಂಗಳಿಂದ ಇವರಿಗೆ ಯಾವುದೇ ರೀತಿಯ ದುಡಿಮೆ ಇಲ್ಲ. ಚಿತ್ರರಂಗದಲ್ಲಿ ಇವರಿಗೆ ಗೊತ್ತಿರುವ ದಿನಗೂಲಿ ಕೆಲಸ ಬಿಟ್ಟು ಬೇರೆ ಗೊತ್ತಿಲ್ಲ. ಹೀಗಾಗಿ ಅವರ ನೆರವಿಗೆ ಬರುವುದು ಈ ಸಂದರ್ಭದಲ್ಲಿ ಅಗತ್ಯಗತ್ಯ.

ಲೈಲಾ ವೆಬ್‌ ಸೀರೀಸಿನ 2 ಎಪಿಸೋಡು ನಿರ್ದೇಶಿಸಿದ ಯೂಟರ್ನ್‌ ನಿರ್ದೇಶಕ!

ಈಗ ಚಿತ್ರರಂಗದಲ್ಲಿ ಯಾವುದೇ ರೀತಿಯ ಚಟುವಟಿಕೆಗಳು ನಡೆಯುತ್ತಿಲ್ಲ. ಹೀಗಾಗಿ ಈ ದಿನಗೂಲಿ ಕಾರ್ಮಿಕರ ಸ್ಥಿತಿ ತೀರಾ ಚಿಂತಾಜನಕವಾಗಿದೆ. ಪ್ರತಿಯೊಬ್ಬರಿಗೂ ಕನಿಷ್ಠ 2000 ಸಾವಿರ ರುಪಾಯಿ ಆರ್ಥಿಕವಾಗಿ ನೆರವು ನೀಡಿದರೆ ಅವರ ಜೀವನಕ್ಕೆ ಒಂದಿಷ್ಟುದಿನ ಅನುಕೂಲವಾಗುತ್ತದೆ ಎನ್ನುವ ಕಾರಣಕ್ಕೆ ನಿರ್ದೇಶಕ ಪವನ್‌ ಕುಮಾರ್‌ ಅವರು ನೇರವಾಗಿಯೇ ದಾನಿಗಳಿಂದ ಹಣ ಸಂಗ್ರಹಿಸಿ ದಿನಗೂಲಿ ಕಾರ್ಮಿಕರಿಗೇ ನೇರವಾಗಿ ತಲುಪಿಸುವ ಕಾರ್ಯ ಮಾಡುತ್ತಿದ್ದಾರೆ.

ಆ ದಿನಗಳು ಚೇತನ್‌ ನೀಡಿರುವ ಮಾಹಿತಿ ಹಾಗೂ ಸಲಹೆಗಳನ್ನೂ ಗಮನದಲ್ಲಿಟ್ಟುಕೊಂಡು ನಿರ್ದೇಶಕ ಪವನ್‌ ಕುಮಾರ್‌ ಹಾಕಿಕೊಂಡಿರುವ ಈ ನೆರವಿನ ಅಭಿಯಾನಕ್ಕೆ ಮತ್ತಷ್ಟುದೇಣಿಗೆ ನೀಡುವ ಅಗತ್ಯವಿದೆ. ಹೀಗಾಗಿ ಅವರ ಟ್ವಿಟ್ಟರ್‌ ಹಾಗೂ ಫೇಸ್‌ಬುಕ್‌ ಪೇಜ್‌ನಲ್ಲಿ ಅವರ ವೈಯಕ್ತಿಕ ಬ್ಯಾಂಕ್‌ ಖಾತೆಯ ವಿವರಣೆಗಳನ್ನು ಹಂಚಿಕೊಂಡಿದ್ದಾರೆ. ಈ ಖಾತೆಗೆ ದೇಣಿಗೆ ನೀಡಬಹುದು. ಹಾಗೆ ದೇಣಿಗೆಯಿಂದ ಬಂದ ಹಣ ಎಷ್ಟು, ಯಾರಿಗೆ ಸಹಯಾ ಮಾಡಲಾಗುತ್ತಿದೆ, ಎಷ್ಟುಮಂದಿಗೆ ಮತ್ತು ಅವರ ಹೆಸರುಗಳ ಸಮೇತವಾಗಿ ಅದೇ ಸಾಮಾಜಿಕ ಜಾಲತಾಣದ ಮೂಲಕವೇ ಮಾಹಿತಿ ಹಂಚಿಕೊಳ್ಳುತ್ತಿದ್ದು, ತುಂಬಾ ಪಾರದರ್ಶಕವಾಗಿ ಈ ಯೋಜನೆ ರೂಪಿಸಿದ್ದಾರೆ.

ನನ್ನ actorinme-2@oksbiಹೆಸರಿನ ಯುಪಿಐ ಐಡಿಗೆ ದೇಣಿಗೆ ನೀಡುತ್ತಿದ್ದಾರೆ. ಈಗ ಸಂಗ್ರಹವಾಗಿರುವ ಹಣದಲ್ಲಿ ಒಬ್ಬರಿಗೆ 2000 ಸಾವಿರ ರೂಪಾಯಿಗಳಂತೆ ಒಟ್ಟು 300 ಜನಕ್ಕೆ ಹಂಚಬಹುದು. ಹೀಗಾಗಿ ಉಳಿದ ಕಾರ್ಮಿಕರಿಗೂ ನೆರವು ನೀಡಬೇಕು ಎನ್ನುವುದಾದರೆ ದೇಣಿಗೆ ಹೀಗೆ ಮುಂದುವರಿಯಬೇಕು. ಎಷ್ಟುಮಂದಿಗೆ ನೆರವು ನೀಡಬಹುದು ಎಂಬುದು ಎ, ಟು ಸಂಗ್ರಹವಾಗುತ್ತದೆ ಎಂಬುದನ್ನು ಆಧರಿಸಿದೆ. ಸದ್ಯಕ್ಕೆ ನಾನು ನಟ ಚೇತನ್‌ ಹಾಗೂ ಮೇಕಪ್‌ ಯೂನಿಯನ್‌ ಪುರುಷೋತ್ತಮ್‌ ಅವರ ಸಹಾಯದಿಂದ ದಿನಗೂಲಿ ಕಾರ್ಮಿಕರ ಪಟ್ಟಿಮಾಡಿಕೊಂಡಿದ್ದೇನೆ. ನಾಳೆಯಿಂದ ಯಾರಿಗೆ ಅಗತ್ಯವಿದೆ ಎಂಬುದನ್ನು ತಿಳಿದುಕೊಂಡು ಅವರಿಗೆ ನೇರವಾಗಿ ಅಕೌಂಟ್‌ ಮೂಲಕ 2000 ಸಾವಿರ ರುಪಾಯಿ ನೀಡಲಾಗುವುದು. ನೆರವಿನ ಅಗತ್ಯ ಇರುವವರು ಆಯಾ ಯೂನಿಯನ್‌ಗಳ ಮುಖ್ಯಸ್ಥರು ಅಥವಾ ಮೇಕಪ್‌ ಯೂನಿಯನ್‌ ಪುರುಷೋತ್ತಮ್‌ ಅವರನ್ನು ಸಂಪರ್ಕಿಸಬಹುದು. ಅವರು ಎಲ್ಲ ರೀತಿಯಲ್ಲೂ ಪರಿಶೀಲನೆ ಮಾಡಿ ನಮಗೆ ಮಾಹಿತಿ ನೀಡುತ್ತಾರೆ. ನಾನು ಅವರಿಗೆ ನೇರವಾಗಿ ಫೋನ್‌ ಅಥವಾ ಅಕೌಂಟ್‌ ಮೂಲಕ ಹಣ ತಲುಪಿಸುತ್ತೇನೆ. -ಪವನ್‌ ಕುಮಾರ್‌, ನಿರ್ದೇಶಕ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಆರ್ಯನ್ ಖಾನ್‌ಗೆ ಝೈದ್ ಖಾನ್ ಸಪೋರ್ಟ್; ಆದ್ರೂ ಪಬ್ಲಿಕ್‌ ಪ್ಲೇಸ್‌ನಲ್ಲಿ 'ಮಿಡ್ಲ್ ಫಿಂಗರ್' ಎತ್ತಿದ್ದು ತಪ್ಪು ಅಂತಿರೋ ನೆಟ್ಟಿಗರು!
ರಿಷಬ್ ಶೆಟ್ಟಿ ದೈವದ ಮುಂದೆ ಅತ್ಬಿಟ್ರಾ? ಅಳಬೇಡ ಅಂತ ಸಂತೈಸಿದ್ದೇಕೆ ಪಂಜುರ್ಲಿ ದೈವ?